ದಿಲ್ಲಿಯಲ್ಲಿ ಕಾರುಗಳ ಹಬ್ಬ; ನಿಮ್ಮ ನಿರೀಕ್ಷೆ ಏನು?

By Nagaraja

ಬಹುನಿರೀಕ್ಷಿತ 2014 ಇಂಡಿಯಾ ಆಟೋ ಎಕ್ಸ್ ಪೋ ಆರಂಭಕ್ಕೆ ಕ್ಷಣಗಣನೆ ಆರಂಭಗೊಂಡಿದೆ. ರಾಷ್ಟ್ರ ರಾಜಧಾನಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್ ಪೋ ಈಗಾಗಲೇ ಜಾಗತಿಕ ಆಕರ್ಷಣೆ ಪಡೆದುಕೊಂಡಿದೆ.

ಅಂದ ಹಾಗೆ ಈ ಬಾರಿ ದೆಹಲಿ ಆಟೋ ಎಕ್ಸ್ ಪೋದಲ್ಲಿ 70ಕ್ಕೂ ಹೆಚ್ಚು ಹೊಸ ಮಾದರಿಗಳು ಅನಾವರಣಗೊಳ್ಳಲಿದೆ. ಇದರಲ್ಲಿ ನಿರ್ಮಾಣ ಸಿದ್ಧ ಸೇರಿದಂತೆ ಕಾನ್ಸೆಪ್ಟ್ ಮಾದರಿಗಳು ಒಳಗೊಂಡಿರಲಿದೆ. ಬೆಳೆದು ಬರುತ್ತಿರುವ ಭಾರತೀಯ ವಾಹನ ಮಾರುಕಟ್ಟೆಗೆ ಹಿಂದೆಂದೂ ಕಾಣಸಿಗದಂತಹ ಬೇಡಿಕೆ ಕಂಡುಬರುತ್ತಿದೆ. ಅಷ್ಟಕ್ಕೂ ದೆಹಲಿಯಲ್ಲಿ ಪ್ರದರ್ಶನಗೊಳ್ಳಲಿರುವ ಕಾರುಗಳು ಯಾವುವು? ಒಂದು ಸಂಕ್ಷಿಪ್ತ ನೋಟ ಇಲ್ಲಿದೆ...

ಮಾರುತಿ ಸುಜುಕಿ

ಮಾರುತಿ ಸುಜುಕಿ

ಪ್ರತಿ ಬಾರಿಯಂತೆಯೂ ಈ ಸಲವೂ ದೆಹಲಿ ಆಟೋ ಎಕ್ಸ್ ಪೋದಲ್ಲಿ ದೇಶದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಪ್ರಮುಖ ಆಕರ್ಷಣೆಯಾಗಿರಲಿದೆ. ಮಾರುತಿಯಿಂದ ಪರಿಷ್ಕೃತ ಎಸ್‌ಎಕ್ಸ್4, ಸೆಲೆರಿಯೊ ಮತ್ತು ಸಬ್ ಫೋರ್ ಮೀಟರ್ ಕಾಂಪಾಕ್ಟ್ ಎಸ್‌ಯುವಿ ಕಾರುಗಳು ಪ್ರದರ್ಶನಗೊಳ್ಳಲಿದೆ.

ಟಾಟಾ ಮೋಟಾರ್ಸ್

ಟಾಟಾ ಮೋಟಾರ್ಸ್

ಈ ಮೊದಲೇ ತಿಳಿಸಿರುವಂತೆಯೇ ನವೀಕರಣಗೊಳ್ಳಲಿರುವ ಟಾಟಾ ಮೋಟಾರ್ಸ್ ಕಾರುಗಳು ಹೊಸ ರೂಪದಲ್ಲಿ ಪ್ರತ್ಯಕ್ಷವಾಗಲಿದೆ. ಈ ಪೈಕಿ ಇಂಡಿಕಾ ಬದಲಿ ಮಾಡೆಲ್ ಆಗಿರುವ ಫಾಲ್ಕನ್ ಮತ್ತು ಡಾಲ್ಫಿನ್ ಈಗಾಗಲೇ ಹೆಚ್ಚಿನ ಗಮನ ಗಿಟ್ಟಿಸಿಕೊಂಡಿದೆ. ಇದರಲ್ಲಿ ಪಾಲ್ಕನ್ ಸರಣಿಯಲ್ಲಿ 1.2 ಟರ್ಬೊ ಪೆಟ್ರೋಲ್ ಎಂಜಿನ್ ಆಳವಡಿಕೆಯಾಗುವ ಸಾಧ್ಯತೆಯಿದೆ. ಇನ್ನುಳಿದಂತೆ ಟಾಟಾ ಅಧೀನತೆಯಲ್ಲಿ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್‌ನಿಂದಲೂ ಎರಡು ಹೊಸ ಮಾದರಿಗಳನ್ನು ನಿರೀಕ್ಷಿಸಬಹುದು.

ಫೋರ್ಡ್

ಫೋರ್ಡ್

ಫೋರ್ಡ್ ಫಿಗೊ ನೂತನ ಕಾರಿನ ಜಾಗತಿಕ ಅನಾವರಣ ಸಹ ಮುಂಬರುವ ದೆಹಲಿ ಆಟೋ ಎಕ್ಸ್ ಪೋದಲ್ಲೇ ನಡೆಯಲಿದೆ. ಇದರ ಜತೆಗೆ ಕಾಂಪಾಕ್ಟ್ ಸೆಡಾನ್ ಘೋಷಣೆಯಾಗುವ ಸಾಧ್ಯತೆಯಿದೆ.

ಹ್ಯುಂಡೈ

ಹ್ಯುಂಡೈ

ಮಾರುತಿ ಬಳಿಕ ದೇಶದ ಸಣ್ಣ ಕಾರು ಮಾರುಕಟ್ಟೆಯಲ್ಲಿ ಹೆಚ್ಚಿನ ಮಾರಾಟ ಗಿಟ್ಟಿಸಿಕೊಂಡಿರುವ ಹ್ಯುಂಡೈ, ಗ್ರಾಂಡ್ ಐ10 ತಲಹದಿಯಲ್ಲಿ ಹೊಸತಾದ ಸಬ್ ಫೋರ್ ಮೀಟರ್ ಸೆಡಾನ್ ಮತ್ತು ಸಾಂಟಾಫೆ ಕಾರನ್ನು ಅನಾವರಣಗೊಳಿಸುವ ಸಾಧ್ಯತೆಗಳಿದೆ.

ಹೋಂಡಾ

ಹೋಂಡಾ

ಮೇಲೆ ತಿಳಿಸಲಾದ ಎಲ್ಲ ಬ್ರಾಂಡ್‌ಗಿಂತಲೂ ಕಳೆದ ವರ್ಷ ದೇಶದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಹೋಂಡಾ ಮುಂಬರುವ ಕಾರುಗಳು ಅತಿ ಹೆಚ್ಚು ಪ್ರಾಧಾನ್ಯತೆ ಗಿಟ್ಟಿಸಿಕೊಂಡಿದೆ. ಈ ಪೈಕಿ ನ್ಯೂ ಜನರೇಷನ್ ಜಾಝ್, ಮೊಬಿಲಿಯೊ ಎಂಪಿವಿ ಮೇಲೆ ವಾಹನ ಪ್ರಿಯರ ಕುತೂಹಲ ಹೆಚ್ಚಿದೆ.

ಟೊಯೊಟಾ

ಟೊಯೊಟಾ

ಅದೇ ರೀತಿ ಟೊಯೊಟಾದ ಹೊಸ ತಲೆಮಾರಿನ ಕರೊಲ್ಲಾ ಆಲ್ಟಿಸ್ ಮೇಲೂ ಗ್ರಾಹಕರ ನಿರೀಕ್ಷೆ ಅತಿಯಾಗಿದೆ. ಇದು ಈ ಸೆಗ್ಮೆಂಟ್‌ನ ಬೆಸ್ಟ್ ಗಾಡಿ ಎಂಬ ಮನ್ನಣೆಗೆ ಪಾತ್ರವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ದಟ್ಸನ್

ದಟ್ಸನ್

ನಿಸ್ಸಾನ್ ಸಣ್ಣ ಕಾರು ಬ್ರಾಂಡ್ ಆಗಿರುವ ದಟ್ಸನ್ ಈ ಮೊದಲೇ ತಿಳಿಸಿರುವಂತೆಯೇ ತನ್ನ ಚೊಚ್ಚಲ ಗೊ ಹ್ಯಾಚ್‌ಬ್ಯಾಕ್ ಕಾರನ್ನು ದೆಹಲಿ ಆಟೋ ಎಕ್ಸ್ ಪೋದಲ್ಲಿ ಲಾಂಚ್ ಮಾಡಲಿದೆ. ಇದರ ಜತೆಗೆ ಗೊ ಪ್ಲಸ್ ಎಂಪಿವಿ ಕಾರನ್ನು ಸಹ ಅನಾವರಣಗೊಳಿಸಲಿದೆ. ಇವೆಡರ ಜತೆಗೆ ಹೊಸತಾದ ಫೇಸ್‌ಲಿಫ್ಟ್ ಕಾರನ್ನು ನಿಸ್ಸಾನ್ ಘೋಷಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಫಿಯೆಟ್

ಫಿಯೆಟ್

ಫಿಯೆಟ್ ಪಾಲಿಗಿದು ಮಹತ್ವದ ವರ್ಷವಾಗಿರಲಿದೆ. ತನ್ನದೇ ಆದ ವಿತರಕ ಜಾಲವನ್ನು ತೆರೆದುಕೊಂಡಿರುವ ಫಿಯೆಟ್‌ನ ಫೇಸ್‌ಲಿಫ್ಟ್ ಲಿನಿಯಾ ಮತ್ತು ಜಿ ಐಷಾರಾಮಿ ಬ್ರಾಂಡ್ ದೆಹಲಿ ಆಟೋ ಎಕ್ಸ್ ಪೋದ ಕೇಂದ್ರ ಬಿಂದುವಾಗಿರಲಿದೆ.

 ಇತರ ಕಂಪನಿಗಳು

ಇತರ ಕಂಪನಿಗಳು

ಇಸುಝು, ಸ್ಕೋಡಾ, ಫೋಕ್ಸ್ ವ್ಯಾಗನ್, ಜನರಲ್ ಮೋಟಾರ್ಸ್, ರೆನೊ, ಷೆವರ್ಲೆ ಸೇರಿದಂತೆ ಒಟ್ಟು 41 ವಾಹನ ತಯಾರಿಕ ಸಂಸ್ಥೆಗಳು ತನ್ನ ನೂತನ ಅವರಣಿಕೆಯೊಂದಿಗೆ ದೆಹಲಿ ಆಟೋ ಎಕ್ಸ್ ಪೋವನ್ನು ಬರಮಾಡಿಕೊಳ್ಳಲಿದೆ.

ಎಸ್‌ಯುವಿ ಕಾರುಗಳು.

ಎಸ್‌ಯುವಿ ಕಾರುಗಳು.

ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯಲ್ಲಿ ಎಸ್‌ಯುವಿ ಕಾರುಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಲೇ ಇದೆ. ಈ ನಿಟ್ಟಿನಲ್ಲಿ ಬೆಂಝ್ ಕಾಂಪಾಕ್ಟ್, ಆಡಿ ಕ್ಯೂ7, ನ್ಯೂ ರೇಂಜ್ ರೋವರ್ ಸೇರಿದಂತೆ ಹ್ಯುಂಡೈ ಮತ್ತು ಹೋಂಡಾ ಕಾಂಪಾಕ್ಟ್ ಎಸ್‌ಯುವಿ ಕಾರುಗಳ ಘೋಷಣೆ ಕೂಡಾ ಆಗುವ ಸಂಭವವಿದೆ.

ಕಾನ್ಸೆಪ್ಟ್ ಮಾಡೆಲ್

ಕಾನ್ಸೆಪ್ಟ್ ಮಾಡೆಲ್

ಇವೆಲ್ಲದರ ಜತೆಗೆ 20ಕ್ಕೂ ಹೆಚ್ಚು ಕಾನ್ಸೆಪ್ಟ್ ಮಾದರಿಗಳು ಪ್ರದರ್ಶನಗೊಳ್ಳಲಿದೆ. ಭವಿಷ್ಯದಲ್ಲಿ ದೇಶಕ್ಕೆ ಪರಿಚಯವಾಗಲಿರುವ ಕಾರುಗಳು ಇದನ್ನೇ ಅವಲಂಬಿಸಿರಲಿದೆ ಎಂಬುದು ಸಹ ಇನ್ನೊಂದು ಮುಖ್ಯ ಅಂಶವಾಗಿದೆ.

Most Read Articles
 
English summary
70 New Car Models To Be Displayed At 2014 Delhi Auto Expo
Please Wait while comments are loading...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X