ಭಾರತಕ್ಕೆ ಹಾರಲು ಸಿದ್ಧವಾದ 'ಇಗ್ನಿಸ್' ಪ್ಯಾರಿಸ್ ನಲ್ಲಿ ಚಮಕ್!

By Nagaraja

ಭಾರತದಲ್ಲಿ ಬಿಡುಗಡೆಗೆ ಸಜ್ಜಾಗಿರುವ ಸುಜುಕಿ ಇಗ್ನಿಸ್, ಫ್ರಾನ್ಸ್ ನಲ್ಲಿ ನಡೆಯುತ್ತಿರುವ 2016 ಪ್ಯಾರಿಸ್ ಮೋಟಾರು ಶೋದಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ.

2017 ವರ್ಷಾರಂಭದಲ್ಲಿ ಇಗ್ನಿಸ್ ಯುರೋಪ್ ಮಾರುಕಟ್ಟೆಯನ್ನು ತಲುಪಲಿದೆ. ಇನ್ನೊಂದೆಡೆ ಭಾರತಕ್ಕೆ ಹೊರಡಲು ಸಿದ್ಧವಾಗಿರುವ ಮಾರುತಿ ಸುಜುಕಿ ಇಗ್ನಿಸ್ ಟೆಸ್ಟಿಂಗ್ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲೇ ಎಂಟ್ರಿ ಕೊಡಲಿದೆ.

ಭಾರತಕ್ಕೆ ಹಾರಲು ಸಿದ್ಧವಾದ 'ಇಗ್ನಿಸ್' ಪ್ಯಾರಿಸ್ ನಲ್ಲಿ ಚಮಕ್!

ಹಳೆಯ ಇಗ್ನಿಸ್ ಮಾದರಿಗಳಿಂದ ಸ್ಪೂರ್ತಿ ಪಡೆದುಕೊಂಡು ವಿಶಿಷ್ಟ ಸ್ವಭಾವದ ಇಗ್ನಿಸ್ ಕಾರನ್ನು ರೂಪಿಸಲಾಗಿದೆ.

ಭಾರತಕ್ಕೆ ಹಾರಲು ಸಿದ್ಧವಾದ 'ಇಗ್ನಿಸ್' ಪ್ಯಾರಿಸ್ ನಲ್ಲಿ ಚಮಕ್!

ಹೊಸ ತಲೆಮಾರಿನ ತಳಹದಿ, ಪರಿಷ್ಕೃತ ಸಸ್ಪೆನ್ಷನ್ ಸಿಸ್ಟಂ, ಹಗುರ ಭಾರ ಮತ್ತು 1.2 ಲೀಟರ್ ಡ್ಯುಯಲ್ ಜೆಟ್ ಎಂಜಿನ್ ಪ್ರಮುಖ ಆಕರ್ಷಣೆಯಾಗಲಿದೆ.

ಭಾರತಕ್ಕೆ ಹಾರಲು ಸಿದ್ಧವಾದ 'ಇಗ್ನಿಸ್' ಪ್ಯಾರಿಸ್ ನಲ್ಲಿ ಚಮಕ್!

ಸುಜುಕಿ ಸ್ಮಾರ್ಟ್ ಹೈಬ್ರಿಡ್ ವೆಹಿಕಲ್ (ಎಸ್ ಎಚ್ ವಿಎಸ್) ತಂತ್ರಜ್ಞಾನ, ಕಾಂಪಾಕ್ಟ್ ಮೈಲ್ಡ್ ಹೈಬ್ರಿಡ್ ವ್ಯವಸ್ಥೆ, ಇಂಟೇಗ್ರೇಟಡ್ ಸ್ಟ್ಯಾರ್ಟರ್ ಜನರೇಟರ್ ಮತ್ತು ಲಿಥಿಯಂ ಇಯಾನ್ ಬ್ಯಾಟರಿ ಪ್ಯಾಕ್ ಗಳಿರಲಿದೆ.

ಭಾರತಕ್ಕೆ ಹಾರಲು ಸಿದ್ಧವಾದ 'ಇಗ್ನಿಸ್' ಪ್ಯಾರಿಸ್ ನಲ್ಲಿ ಚಮಕ್!

ಇದರಲ್ಲಿರುವ 1.2 ಲೀಟರ್ ಫೋರ್ ಸಿಲಿಂಡರ್ ಡ್ಯುಯಲ್ ಜೆಟ್ ಎಂಜಿನ್ 120 ಎನ್ ಎಂ ತಿರುಗುಬಲದಲ್ಲಿ 88 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಲಭ್ಯವಾಗಲಿದೆ.

ಭಾರತಕ್ಕೆ ಹಾರಲು ಸಿದ್ಧವಾದ 'ಇಗ್ನಿಸ್' ಪ್ಯಾರಿಸ್ ನಲ್ಲಿ ಚಮಕ್!

ಆಡಿಯೋ, ನೇವಿಗೇಷನ್ ಕ್ರಿಯಾತ್ಮಕತೆ ಜೊತೆ ಸ್ಮಾರ್ಟ್ ಫೋನ್ ಸಂಪರ್ಕ (ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ), ರಿಯರ್ ವ್ಯೂ ಕ್ಯಾಮೆರಾ ಹಾಗೂ ಎಲ್ ಇಡಿ ಹೆಡ್ ಲ್ಯಾಂಪ್ ವ್ಯವಸ್ಥೆಯಿರಲಿದೆ.

ಭಾರತಕ್ಕೆ ಹಾರಲು ಸಿದ್ಧವಾದ 'ಇಗ್ನಿಸ್' ಪ್ಯಾರಿಸ್ ನಲ್ಲಿ ಚಮಕ್!

ಸುಜುಕಿಯ ಟೋಟಲ್ ಎಫೆಕ್ಟಿವ್ ಕಂಟ್ರೋಲ್ ಟೆಕ್ನಾಲಜಿ (ಟೆಕ್ಟ್) ಗರಿಷ್ಠ ಭದ್ರತೆಯನ್ನು ಕಾಪಾಡಿಕೊಳ್ಳಲಿದೆ. ಬಾಗಿಕೊಳ್ಳಬಹುದಾದ ಮತ್ತು ಪ್ರಭಾವ ಶಕ್ತಿ ಪ್ರಸರಣ ರಚನೆ, ಇಎಸ್ ಪಿ, ಏರ್ ಬ್ಯಾಗ್ ಇತ್ಯಾದಿ ಸೌಲಭ್ಯಗಳಿರಲಿದೆ.

Most Read Articles

Kannada
English summary
2016 Paris Motor Show: The 'Soon To Be Launched In India' Suzuki Ignis Debuts In Paris
Story first published: Thursday, September 29, 2016, 18:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X