ಪ್ಯಾರಿಸ್‌ನಲ್ಲಿ ಅರಳಿದ ಎಸ್-ಕ್ರಾಸ್‌ಗೆ ಮರುಜೀವ

By Nagaraja

ಫ್ರಾನ್ಸ್ ನಲ್ಲಿ ಜರಗುತ್ತಿರುವ 2016 ಪ್ಯಾರಿಸ್ ಮೋಟಾರು ಶೋದಲ್ಲಿ ಜಪಾನ್ ಮೂಲದ ಮುಂಚೂಣಿಯ ವಾಹನ ಸಂಸ್ಥೆ ಸುಜುಕಿ, ಅತಿ ನೂತನ ಎಸ್-ಕ್ರಾಸ್ ಪರಿಷ್ಕೃತ ಆವೃತ್ತಿಯನ್ನು ಪರಿಚಯಿಸಿದೆ. ಭಾರತದಲ್ಲಿ ಬಿಡುಗಡೆಯಾದ ಮಾರುತಿ ಎಸ್-ಕ್ರಾಸ್ ಕಳಪೆ ಮಾರಾಟದ ಭೀತಿಗೆ ಒಳಗಾಗಿತ್ತು ಎಂಬುದನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ನಿಮ್ಮ ಮಾಹಿತಿಗಾಗಿ 2015ನೇ ಸಾಲಿನಲ್ಲಿ ಭಾರತದಲ್ಲಿ ಬಿಡುಗಡೆಗೊಂಡ ಮಾರುತಿ ಎಸ್-ಕ್ರಾಸ್ ಆವೃತ್ತಿಯು ಪ್ರೀಮಿಯಂ ನೆಕ್ಸಾ ಡೀಲರುಗಳ ಮುಖಾಂತರ ಮಾರಾಟಕ್ಕೆ ಲಭ್ಯವಾಗಿತ್ತು. ಪ್ರಸ್ತುತ ನೂತನ ಎಸ್ ಕ್ರಾಸ್ ಆವೃತ್ತಿಯು 2017ರಲ್ಲಿ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

ಪ್ಯಾರಿಸ್‌ನಲ್ಲಿ ಅರಳಿದ ಎಸ್-ಕ್ರಾಸ್‌ಗೆ ಮರುಜೀವ

ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿ ನೂತನ ಎಸ್ ಕ್ರಾಸ್ ಮಾದರಿಯಲ್ಲಿ ಬದಲಾವಣೆಯನ್ನು ತರಲಾಗಿದೆ. ಇದು ಮುಂಭಾಗದಲ್ಲಿ ಎದ್ದು ಕಾಣಿಸುವಂತಹ ಗ್ರಿಲ್ ಲಂಬವಾದ ರೇಖೆಗಳನ್ನು ಪಡೆಯಲಿದೆ.

ಪ್ಯಾರಿಸ್‌ನಲ್ಲಿ ಅರಳಿದ ಎಸ್-ಕ್ರಾಸ್‌ಗೆ ಮರುಜೀವ

ಕ್ರೋಮ್ ಸ್ಪರ್ಶದೊಂದಿಗೆ ಎಶ್ ಕ್ರಾಸ್ ಪರಿಷ್ಕೃತ ಆವೃತ್ತಿಯು ಹೆಚ್ಚು ಪ್ರೀಮಿಯಂ ಎನಿಸಿಕೊಳ್ಳಲಿದೆ. ಬದಿಯಲ್ಲಿ ಸ್ವಭಾವ ರೇಖೆಯು ಹಾದು ಹೋಗುತ್ತಿದೆ.

ಪ್ಯಾರಿಸ್‌ನಲ್ಲಿ ಅರಳಿದ ಎಸ್-ಕ್ರಾಸ್‌ಗೆ ಮರುಜೀವ

ಆಧುನಿಕತೆ ತಕ್ಕಂತೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ ಹಾಗೂ ಟೈಲ್ ಲೈಟ್ ಗಳು ಮತ್ತಷ್ಟು ಮೆರಗು ತುಂಬಲಿದೆ.

ಪ್ಯಾರಿಸ್‌ನಲ್ಲಿ ಅರಳಿದ ಎಸ್-ಕ್ರಾಸ್‌ಗೆ ಮರುಜೀವ

ಕಾರಿನೊಳಗೆ ಹೊಸತಾದ ಫ್ಯಾಬ್ರಿಕ್ ಮತ್ತು ಪ್ಯಾನರಾಮಿಕ್ ಗ್ಲಾಸ್ ಸನ್ ರೂಫ್ ಪ್ರಮುಖ ಆಕರ್ಷಣೆ ಎನಿಸಿಕೊಳ್ಳಲಿದೆ.

ಪ್ಯಾರಿಸ್‌ನಲ್ಲಿ ಅರಳಿದ ಎಸ್-ಕ್ರಾಸ್‌ಗೆ ಮರುಜೀವ

ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ, ರಿಯರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್, ಡ್ಯುಯಲ್ ಆಟೋಮ್ಯಾಟಿಕ್ ಮತ್ತು ಕ್ಲೈಮೇಟ್ ಕಂಟ್ರೋಲ್ ಇರಲಿದೆ.

ಪ್ಯಾರಿಸ್‌ನಲ್ಲಿ ಅರಳಿದ ಎಸ್-ಕ್ರಾಸ್‌ಗೆ ಮರುಜೀವ

ಕಾರಿನಡಿಯಲ್ಲಿ ಬೂಸ್ಟರ್ ಜೆಸ್ಟ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದರ 1.0 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ 170 ಎನ್ ಎಂ ತಿರುಗುಬಲದಲ್ಲಿ 111 ಅಶ್ವಶಕ್ತಿಯನ್ನು ನೀಡಲಿದೆ. ಹಾಗೆಯೇ 1.4 ಲೀಟರ್ ಬೂಸ್ಟರ್ ಜೆಟ್ ಎಂಜಿನ್ 220 ಎನ್ ಎಂ ತಿರುಗುಬಲದಲ್ಲಿ 138 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಪ್ಯಾರಿಸ್‌ನಲ್ಲಿ ಅರಳಿದ ಎಸ್-ಕ್ರಾಸ್‌ಗೆ ಮರುಜೀವ

ಅತ್ತ 2017 ಎಸ್ ಕ್ರಾಸ್ ಕಾರಿನಲ್ಲಿರುವ 1.6 ಲೀಟರ್ ಡೀಸೆಲ್ ಎಂಜಿನ್ 320 ಎನ್ ಎಂ ತಿರುಗುಬಲದಲ್ಲಿ 118 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 89 ಅಶ್ವಶಕ್ತಿ ಉತ್ಪಾದಿಸಬಲ್ಲ 1.3 ಲೀಟರ್ ಡೀಸೆಲ್ ಎಂಜಿನ್ ಭಾರತ ಪ್ರವೇಶಿಸುವ ಸಾಧ್ಯತೆಯಿದೆ.

Most Read Articles

Kannada
English summary
2016 Paris Motor Show: Suzuki Unveils India-Bound S-Cross Facelift
Story first published: Friday, September 30, 2016, 16:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X