ಪ್ಯಾರಿಸ್‌ನಲ್ಲಿ ಟೊಯೊಟಾ ಸಿ-ಎಚ್‌ಆರ್ ಕಾರಿಗೆ ಹೈಬ್ರಿಡ್ ಬಲ

By Nagaraja

ಫ್ರಾನ್ಸ್ ನಲ್ಲಿ ನಡೆಯುತ್ತಿರುವ 2016 ಪ್ಯಾರಿಸ್ ಮೋಟಾರು ಶೋದಲ್ಲಿ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಟೊಯೊಟಾ ಅತಿ ನೂತನ ಸಿ-ಎಚ್ ಆರ್ ಹೈಬ್ರಿಡ್ ಕ್ರಾಸೋವರ್ ಕ್ರೀಡಾ ಬಳಕೆಯ ವಾಹನವನ್ನು ಅನಾವರಣಗೊಳಿಸಿದೆ.

ಇಲ್ಲಿ ಟೊಯೊಟಾ ಸಿ-ಎಚ್ ಆರ್ ಹೈಬ್ರಿಡ್ ಕ್ರಾಸೋವರ್ ಎಸ್ ಯುವಿ ಕಾರು ಕೂಪೆ ಶೈಲಿಯ ವಿನ್ಯಾಸವನ್ನು ಮೈಗೂಡಿಸಿರುವುದು ಗಮನಾರ್ಹವೆನಿಸುತ್ತದೆ. ಇದು ಮುಂದಿನ ವರ್ಷದಲ್ಲಿ ಬ್ರಿಟನ್ ಮಾರಾಟವನ್ನು ತಲುಪಲಿದೆ.

ಪ್ಯಾರಿಸ್‌ನಲ್ಲಿ ಟೊಯೊಟಾ ಸಿ-ಎಚ್‌ಆರ್ ಕಾರಿಗೆ ಹೈಬ್ರಿಡ್ ಬಲ

ನೂತನ ಟೊಯೊಟಾ ಸಿ-ಎಚ್ ಆರ್ ಹೈಬ್ರಿಡ್ ಕ್ರಾಸೋವರ್ ಎಸ್ ಯುವಿ 1.2 ಲೀಟರ್ ಟರ್ಬೊ ಚಾರ್ಜ್ಡ್ ಪೆಟ್ರೋಲ್ ಮತ್ತು 1.8 ಲೀಟರ್ ಹೈಬ್ರಿಡ್ ವ್ಯವಸ್ಥೆಯೊಂದಿಗೆ ಲಭ್ಯವಾಗಲಿದೆ.

ಪ್ಯಾರಿಸ್‌ನಲ್ಲಿ ಟೊಯೊಟಾ ಸಿ-ಎಚ್‌ಆರ್ ಕಾರಿಗೆ ಹೈಬ್ರಿಡ್ ಬಲ

ಇಲ್ಲಿ ಸಿ-ಎಚ್ ಆರ್ ಎಂಬುದರ ಪೂರ್ಣ ರೂಪ ಕೂಪೆ ಹೈ ರೈಡರ್ ಎಂದಾಗಿದೆ. ಎತ್ತರದ ಚಾಲನಾ ಸ್ಥಾನ, ಸುಲಭ ಚಾಲನೆ ಮತ್ತು ಕಡಿಮೆ ಚಾಲನೆ ವೆಚ್ಚ ಪ್ರಮುಖ ವೈಶಿಷ್ಟ್ಯಗಳಾಗಿವೆ.

ಪ್ಯಾರಿಸ್‌ನಲ್ಲಿ ಟೊಯೊಟಾ ಸಿ-ಎಚ್‌ಆರ್ ಕಾರಿಗೆ ಹೈಬ್ರಿಡ್ ಬಲ

ಮುಂಭಾಗದಲ್ಲಿ ಧೃಡವಾದ ಗ್ರಿಲ್, ಸ್ಲಿಮ್ ಹೆಡ್ ಲ್ಯಾಂಪ್, ಶಕ್ತಿಯುತ ವೀಲ್ ಆರ್ಚ್, ಬಾಗಿದ ರೂಫ್ ಲೈನ್ ಒಟ್ಟಾರೆ ಚಲನಶೀಲತೆಗೆ ಸಾಕ್ಷಿಯಾಗಿದೆ.

ಪ್ಯಾರಿಸ್‌ನಲ್ಲಿ ಟೊಯೊಟಾ ಸಿ-ಎಚ್‌ಆರ್ ಕಾರಿಗೆ ಹೈಬ್ರಿಡ್ ಬಲ

ಹಿಂದುಗಡೆಯೂ ಬಾಗಿದ ವಿಂಡೋ, ಎಲ್ ಇಡಿ ಲೈಟ್ ಸಿ-ಎಚ್ ಆರ್ ಒಟ್ಟಾರೆ ಆಕರ್ಷಣೆಯನ್ನು ಇಮ್ಮಡಿಗೊಳಿಸಲಿದೆ.

ಪ್ಯಾರಿಸ್‌ನಲ್ಲಿ ಟೊಯೊಟಾ ಸಿ-ಎಚ್‌ಆರ್ ಕಾರಿಗೆ ಹೈಬ್ರಿಡ್ ಬಲ

ಕಾರಿನೊಳಗೆ ಟಚ್ 2 ಇನ್ಪೋಟೈನ್ಮೆಂಟ್ ಸಿಸ್ಟಂ, ಎಂಟು ಇಂಚುಗಳ ಟಚ್ ಸ್ಕ್ರೀನ್, ನೀಲಿ ಬೆಳಕಿನ ಚಿತ್ತಾರ ಸೇರಿದಂತೆ ಇನ್ನಿತರ ಅತ್ಯಾಕರ್ಷಕ ಸೌಲಭ್ಯಗಳು ಲಭ್ಯವಾಗಲಿದೆ.

ಪ್ಯಾರಿಸ್‌ನಲ್ಲಿ ಟೊಯೊಟಾ ಸಿ-ಎಚ್‌ಆರ್ ಕಾರಿಗೆ ಹೈಬ್ರಿಡ್ ಬಲ

ಟೊಯೊಟಾದ 'ಸೇಫ್ಟಿ ಸೆನ್ಸ್' ಪ್ಯಾಕೇಜ್ ಸುರಕ್ಷತೆಯನ್ನು ಹೆಚ್ಚಿಸಲಿದೆ. ಲೇನ್ ನಿರ್ಗಮನ ವಾರ್ನಿಂಗ್ ಸಿಸ್ಟಂ ಜೊತೆ ಸ್ಟೀರಿಂಗ್ ಕಂಟ್ರೋಲ್, ರಸ್ತೆ ಚಿಹ್ನೆ ಗ್ರಹಿಕೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಪಾದಚಾರಿ ಮತ್ತು ಢಿಕ್ಕಿ ಎಚ್ಚರಿಕೆ ವ್ಯವಸ್ಥೆಗಳಿರಲಿದೆ.

ಪ್ಯಾರಿಸ್‌ನಲ್ಲಿ ಟೊಯೊಟಾ ಸಿ-ಎಚ್‌ಆರ್ ಕಾರಿಗೆ ಹೈಬ್ರಿಡ್ ಬಲ

ಸೆಲ್ಪ್ ಪಾರ್ಕಿಂಗ್ ಸಿಸ್ಟಂ, ಕೀಲೆಸ್ ಎಂಟ್ರಿ, ಹೀಟಡ್ ಸೀಟು, ಒಂಬತ್ತು ಸ್ಪೀಕರ್ ಗಳ ಸ್ಟೀರಿಯೊ ಸಿಸ್ಟಂ ಇತರ ಪ್ರಮುಖ ಆಕರ್ಷಣೆಯಾಗಿದೆ.

ಪ್ಯಾರಿಸ್‌ನಲ್ಲಿ ಟೊಯೊಟಾ ಸಿ-ಎಚ್‌ಆರ್ ಕಾರಿಗೆ ಹೈಬ್ರಿಡ್ ಬಲ

ಇದರಲ್ಲಿ ಟೊಯೊಟಾದ ತಾಜಾ ಹೈಬ್ರಿಡ್ ತಂತ್ರಜ್ಞಾನವನ್ನು ಆಳವಡಿಸಲಾಗಿದೆ. ಇದು ಪ್ರಯಸ್ ನಲ್ಲಿರುವುದಕ್ಕೆ ಸಮಾನವಾದ 1.8 ಪೆಟ್ರೋಲ್ ಎಂಜಿನ್ ಜೊತೆಗೆ ಎಲೆಕ್ಟ್ರಿಕ್ ಮೋಟಾರನ್ನು ಪಡೆಯಲಿದೆ. ಇನ್ನುಳಿದಂತೆ 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯು ಲಭ್ಯವಿರುತ್ತದೆ.

Most Read Articles

Kannada
English summary
Toyota Unveils Crossover Hybrid C-HR At 2016 Paris Motor Show
Story first published: Friday, September 30, 2016, 13:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X