2014 ಮಹೀಂದ್ರ ಗಸ್ಟೊ ಮೊದಲ ಚಾಲನಾ ಅನುಭವ

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಇದೀಗಷ್ಟೇ ಬಿಡುಗಡೆಯಾಗಿರುವ 2014 ಮಹೀಂದ್ರ ಗಸ್ಟೊ, ಅಪಾರ ಮಾರಾಟದ ನಿರೀಕ್ಷೆಯೊಂದಿಗೆ ಮಾರುಕಟ್ಟೆಗಿಳಿದಿದೆ. ಮೀಡಿಯಾ ಡ್ರೈವ್ ಅಂಗವಾಗಿ ಈ ಬಹುನಿರೀಕ್ಷಿತ ಎಂಟ್ರಿ ಲೆವೆಲ್ ಸ್ಕೂಟರ್ ಟೆಸ್ಟ್ ಡ್ರೈವ್ ಮಾಡುವಲ್ಲಿ ನಮ್ಮ ಡ್ರೈವ್‌ಸ್ಪಾರ್ಕ್ ತಂಡ ಯಶಸ್ವಿಯಾಗಿದೆ.

ಕೇವಲ ಭಾರತಕ್ಕಷ್ಟೇ ಸೀಮಿತವಲ್ಲದ ಈ ಜಾಗತಿಕ ಸ್ಕೂಟರ್ ಗಸ್ಟೊ ಅಭಿವೃದ್ಧಿಯಲ್ಲಿ ಮಹೀಂದ್ರ ತುಂಬಾ ಸಯಮ ವ್ಯಯಿಸಿತ್ತು. ಈ ಮೊದಲು 'ಜಿ101' ಕೋಡ್ ಪಡೆದುಕೊಂಡಿದ್ದ ಈ ಸ್ಕೂಟರ್ ಕೊನೆಗೂ ಬೀಸುವ ಗಾಳಿಯ ಸಂಕೇತವಾದ 'ಗಸ್ಟೊ' ಹೆಸರು ಪಡೆಯುವಲ್ಲಿ ಯಶಸ್ವಿಯಾಗಿತ್ತು.

2014 ಮಹೀಂದ್ರ ಗಸ್ಟೊ ಮೊದಲ ಚಾಲನಾ ಅನುಭವ

ಮಹೀಂದ್ರ ಎಂಜಿನಿಯರುಗಳಿಂದ ಅಭಿವೃದ್ಧಿ ಪಡೆದಿರುವ ಗಸ್ಟೊ ತನ್ನದೇ ಆದ ವಿಶಿಷ್ಟತೆ ಕಾಪಾಡುವಲ್ಲಿ ಯಶಸ್ವಿಯಾಗಿದೆ. ಅಷ್ಟಕ್ಕೂ ಗಸ್ಟೊ ಮೊದಲ ಚಾಲನಾ ಅನುಭವ ಹೇಗಿದೆ? ವಿನ್ಯಾಸ ಹೇಗಿದೆ? ಎಂಬಿತ್ಯಾದಿ ಮಹತ್ವಪೂರ್ಣ ಮಾಹಿತಿಗಳನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ.

2014 ಮಹೀಂದ್ರ ಗಸ್ಟೊ

2014 ಮಹೀಂದ್ರ ಗಸ್ಟೊ

ಈ ಮೊದಲೇ ತಿಳಿಸಿರುವಂತೆಯೇ ತನ್ನ ಹೊಸ ಆವೃತ್ತಿಯಲ್ಲಿ ಹೊಸ ಹೊಸ ತಂತ್ರಜ್ಞಾನಗಳನ್ನು ಆಳವಡಿಸುವುದರಲ್ಲಿ ಮಹೀಂದ್ರ ಮಗದೊಮ್ಮೆ ಯಶಸ್ವಿಯಾಗಿದೆ. ಡಿಎಕ್ಸ್ ಮತ್ತು ವಿಎಕ್ಸ್‌ಗಳೆಂಬ ಎರಡು ವೆರಿಯಂಟ್‌ಗಳನ್ನು ಹೊಂದಿರುವ ಗಸ್ಟೊ ಅನುಕ್ರಮವಾಗಿ 43,000 ರು. ಹಾಗೂ 47,000 ರು.ಗಳಷ್ಟು ದುಬಾರಿಯೆನಿಸಿದೆ.

ವಿನ್ಯಾಸ - ಮುಂಭಾಗ

ವಿನ್ಯಾಸ - ಮುಂಭಾಗ

ಯೂನಿಕ್ ವಿನ್ಯಾಸ ಕಾಯ್ದುಕೊಳ್ಳುವುದು ಸಂಸ್ಥೆಯ ಗುರಿಯಾಗಿತ್ತು. ಇದರಲ್ಲಿ ಮಹೀಂದ್ರ ಯಶಸ್ಸು ಕಂಡಿದೆ ಅಂದರೆ ತಪ್ಪಾಗಲಾರದು. ಆದರೆ ಪ್ರತಿಯೊಬ್ಬರ ರುಚಿ ವಿಭಿನ್ನವಾಗಿರುವುದರಿಂದ ಇದನ್ನು ಅನ್‌ಲೈಕ್ ಮಾಡುವವರು ಇರಬಹುದು.

ವಿನ್ಯಾಸ - ಬದಿ

ವಿನ್ಯಾಸ - ಬದಿ

ಬದಿಯಿಂದ ನೋಡಿದಾಗ ಮಹೀಂದ್ರ ಗಸ್ಟೊ ಹೆಚ್ಚು ಉದ್ದವಾಗಿ ಹಾಗೂ ವಿಶಾಲ ಸ್ಥಳಾವಕಾಶ ಹೊಂದಿರುವಂತೆಯೇ ಭಾಸವಾಗುತ್ತಿದೆ. ಮುಂಭಾಗದ ಏರೋ ವಿನ್ಯಾಸ ಸ್ಕೂಟರ್‌ಗೆ ವಿಶಿಷ್ಟ ನೋಟ ಕಲ್ಪಿಸುತ್ತದೆ. ದೊಡ್ಡದಾದ ಕನ್ನಡಿ ಹಿಂಭಾಗದ ಚಿತ್ರಣ ಉತ್ತಮವಾಗಿ ಕಾಣಿಸಲು ನೆರವಾಗುತ್ತದೆ. ಇನ್ನು ಮಹೀಂದ್ರದ ಬದಿಯಲ್ಲಿರುವ ಲಾಂಛನ ಅತಿ ಸೂಕ್ಷ್ಮವೆನಿಸುತ್ತದೆ.

ವಿನ್ಯಾಸ - ಹಿಂಭಾಗ

ವಿನ್ಯಾಸ - ಹಿಂಭಾಗ

ಹಿಂಭಾಗದಿಂದ ನೋಡಿದಾಗ ಮಹೀಂದ್ರದ ಯಾವ ಸ್ಕೂಟರಿದು? ಎಂಬುದನ್ನು ಅರಿತುಕೊಳ್ಳುವುದು ಕಷ್ಟ. ಇದು ತನ್ನದೇ ಆದ ವೃತ್ತಕಾರಾದ ಟೈಲ್ ಲೈಟ್ ಪಡೆದುಕೊಂಡಿದೆ. ಇದರ ಮಧ್ಯದಲ್ಲಿ ಮಹೀಂದ್ರ ಲೊಗೊ ಎದ್ದು ಕಾಣಿಸುತ್ತದೆ. ಅಂತೆಯೇ ಗ್ರಾಬ್ ಲೈನ್ ದಪ್ಪವಾಗಿದ್ದು, ಗಟ್ಟಿಯಾಗಿ ಹಿಡಿದುಕೊಳ್ಳಲು ಸಹಕಾರಿಯಾಗುತ್ತದೆ.

ಚಾಲನೆ ಮತ್ತು ಹ್ಯಾಂಡ್ಲಿಂಗ್

ಚಾಲನೆ ಮತ್ತು ಹ್ಯಾಂಡ್ಲಿಂಗ್

ಗಸ್ಟೊ ಎಂಜಿನ್ ವೃದ್ಧಿಯಲ್ಲಿ ಮಹೀಂದ್ರ ಎಂಜಿನಿಯರುಗಳು ಉತ್ತಮ ಕೆಲಸ ನಿರ್ವಹಿಸಿದ್ದಾರೆ ಅಂದರೆ ತಪ್ಪಾಗಲಾರದು. ಇದು ಸಂಸ್ಕರಿಸಿದ, ನಯವಾದ ಮತ್ತು ಕಡಿಮೆ ಎಂಜಿನ್ ಶಬ್ದವನ್ನು ಹೊಂದಿದೆ. ಟೆಲಿಸ್ಕಾಪಿಕ್ ಫ್ರಂಟ್ ಸಸ್ಪೆಷನ್ ಮತ್ತು ಎಂಆರ್‌ಎಫ್‌ನ ಟ್ಯೂಬ್‌ಲೆಸ್ 12 ಇಂಚಿನ ಟೈರ್ ಹೊಂದಿರುವ ಮಹೀಂದ್ರ ಉತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡುತ್ತದೆ.

ಆರಾಮದಾಯಕ ಮತ್ತು ಆಸನ

ಆರಾಮದಾಯಕ ಮತ್ತು ಆಸನ

ಮಹೀಂದ್ರ ಗಸ್ಟೊ ಸೀಟುಗಳು ವಿಶಾಲ ಹಾಗೂ ಮೃದುವಾಗಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಎತ್ತರ ಹೊಂದಾಣಿಸಬಹುದಾಗಿದೆ. ಇದರೊಂದಿಗೆ ಚಾಲನೆ ಕೂಡಾ ಸುಲಭವಾಗುತ್ತದೆ.

ಸೀಟು ಹೊಂದಾಣಿಕೆ

ಸೀಟು ಹೊಂದಾಣಿಕೆ

ದೇಶದ ಸ್ಕೂಟರ್ ಇತಿಹಾಸದಲ್ಲಿ ಇದೇ ಮೊದಲ ಬಾರಿಯೆಂಬಂತೆ ನೂತನ ತಂತ್ರಜ್ಞಾನಕ್ಕೆ ಎಂಟ್ರಿ ಕೊಟ್ಟಿರುವ ಮಹೀಂದ್ರ ಕಾರಿನಲ್ಲಿರುವುದಕ್ಕೆ ಸಮಾನವಾದ ಎತ್ತರ ಹೊಂದಾಣಿಸಬಹುದಾದ ಆಸನ ವ್ಯವಸ್ಥೆಯನ್ನು ಹೊಂದಿದೆ. ಇದನ್ನು ನಿರ್ವಹಿಸುವುದು ತುಂಬಾನೇ ಸರಳ. ಎರಡು ಪಾಯಿಂಟ್‌ಗಳಲ್ಲಾಗಿ ಇದನ್ನು ಮೇಲಕ್ಕೂಕೆಳಕ್ಕೂ ಹೊಂದಾಣಿಸಬಹುದಾಗಿದೆ. ಇದನ್ನು ಮೇಲಕ್ಕೆ ಮಾಡಿದ್ದಲ್ಲಿ ಉದ್ದನೆಯ ಅಂತೆಯೇ ಕೆಳಕ್ಕೆ ಸರಿಸಿದ್ದಲ್ಲಿ ಸಣ್ಣ ಪ್ರಯಾಣಿಕರಿಗೆ ಸಹಕಾರಿಯಾಗಲಿದೆ.

ಸೀಟು ಕೆಳಗಡೆ ಸ್ಟೋರೆಜ್

ಸೀಟು ಕೆಳಗಡೆ ಸ್ಟೋರೆಜ್

ಹಾಲ್ಫ್ ಫೇಸ್ ಹೆಲ್ಮೆಟ್‌ಗಳನ್ನು ಇಡುವುದಕ್ಕೆ ಮಹೀಂದ್ರ ಗಸ್ಟೊ ಸೀಟು ಕೆಳಗಡೆಯ ಸ್ಟೋರೆಜ್ ಸಾಕಾಗಬಹುದು. ಆದರೆ ದೊಡ್ಡ ಬ್ಯಾಗ್‌ಗಳನ್ನು ಅಥವಾ ಹೆಚ್ಚು ಸಾಮಾಗ್ರಿಗಳನ್ನು ಸಾಗಿಸುವುದು ಕಷ್ಟಕರು. ಹಾಗಿದ್ದರೂ ಗ್ಲೋವ್ ಬಾಕ್ಸ್‌ಗಳಂತಹ ಸೌಲಭ್ಯಗಳನ್ನು ಇದು ಒದಗಿಸುತ್ತದೆ.

ಫ್ರಂಟ್ ಕಿಕ್

ಫ್ರಂಟ್ ಕಿಕ್

ಸಾಮಾನ್ಯ ಕಿಕ್ ಸ್ಟಾರ್ಟ್‌ಗಿಂತಲೂ ವಿಭಿನ್ನವಾಗಿರುವ ಫ್ರಂಟ್ ಕಿಕ್ ಮಹೀಂದ್ರದಲ್ಲಿರುವ ಮಗದೊಂದು ವೈಶಿಷ್ಟ್ಯವಾಗಿದೆ. ಪ್ರಸ್ತುತ ತಂತ್ರಗಾರಿಕೆಯು ಮಹಿಳಾ ಚಾಲಕರಿಗೂ ಸುಲಭವಾಗಿ ನಿರ್ವಹಿಸಲು ಸಹಕಾರಿಯಾಗಲಿದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಟೋರೆಜ್

ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಸ್ಟೋರೆಜ್

ಮಹೀಂದ್ರ ಗಸ್ಟೊ ಆಲ್ ಅನಲಾಗ್ ಕನ್ಸೋಲ್ ಪಡೆದುಕೊಂಡಿದೆ. ಆದರೆ ಇತರ ಮಹೀಂದ್ರ ಸ್ಕೂಟರ್‌ಗಳಂತೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಭಾವ ಕಾಡುತ್ತಿದೆ. ಇದರ ಕೆಳಗಡೆಯಾಗಿ ಮೊಬೈಲ್ ಫೋನ್ ಹಾಗೂ ವ್ಯಾಲೆಟ್‌ಗಳನ್ನಿಡಲು ಸಣ್ಣ ಸ್ಟೋರೆಜ್ ಜಾಗ ನೀಡಿರುವುದು ನಿಜಕ್ಕೂ ಶ್ಲಾಘನೀಯ.

ಸ್ವಿಚ್ ಮತ್ತು ಪ್ಲಾಸ್ಟಿಕ್ ಗುಣಮಟ್ಟತೆ

ಸ್ವಿಚ್ ಮತ್ತು ಪ್ಲಾಸ್ಟಿಕ್ ಗುಣಮಟ್ಟತೆ

ಮಹೀಂದ್ರ ಗಸ್ಟೊ ಪ್ಲಾಸ್ಟಿಕ್ ಗುಣಮಟ್ಟತೆ ಕಳಪೆ ಮಟ್ಟದಲ್ಲಿದೆ. ಹಾಗಿದ್ದರೂ ಚಾಲಕರಿಗೆ ಸುಲಭವಾಗಿ ಕೈಗೆಟಕುವಂತೆ ಹ್ಯಾಂಡಲ್ ಬಾರ್ ಪಕ್ಕದಲ್ಲಿಯೇ ಸ್ವಿಚ್ ಬಾರ್ ಲಗತ್ತಿಸಲಾಗಿದೆ. ಪ್ರಸ್ತುತ ಸ್ಕೂಟರ್ ಪಾರ್ಕಿಂಗ್ ಲೈಟ್ ಮತ್ತು ಎಲ್‌ಇಡಿ ಪೈಲಟ್ ಲ್ಯಾಂಪ್ ಸಹ ಪಡೆದುಕೊಂಡಿದೆ.

ಎಂಜಿನ್ ಮತ್ತು ಮೈಲೇಜ್

ಎಂಜಿನ್ ಮತ್ತು ಮೈಲೇಜ್

109.9 ಸಿಸಿ ಏರ್ ಕೂಲ್ಡ್ ಎಂಜಿನ್ ಪಡೆದುಕೊಂಡಿರುವ ಮಹೀಂದ್ರ ಗಸ್ಟೊ 8 ಅಶ್ವಶಕ್ತಿ (8.5 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಪ್ರಸ್ತುತ ಸ್ಕೂಟರ್ ಗಂಟೆಗೆ 85 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಬಣ್ಣಗಳು, ವೆರಿಯಂಟ್ ಮತ್ತು ಬೆಲೆ

ಬಣ್ಣಗಳು, ವೆರಿಯಂಟ್ ಮತ್ತು ಬೆಲೆ

ನಾಲ್ಕು ಅತ್ಯಾಕರ್ಷಕ ಬಣ್ಣಗಳಲ್ಲಿ ಮಹೀಂದ್ರ ಗಸ್ಟೊ ಆಗಮನವಾಗಿದೆ - ಬ್ಲ್ಯಾಕ್, ಬರ್ಗುಂಡಿ, ರೆಡ್ ಮತ್ತು ವೈಟ್. ಅಂತೆಯೇ ಡಿಎಕ್ಸ್ ಮತ್ತು ವಿಎಕ್ಸ್‌ಗಳೆಂಬ ಎರಡು ವೆರಿಯಂಟ್‌ಗಳಲ್ಲಿ ಲಭ್ಯವಿರಲಿದೆ. ಇದು ಅನುಕ್ರಮವಾಗಿ 43,000 ರು. ಮತ್ತು 47,000 ರು.ಗಳಷ್ಟು (ಎಕ್ಸ್ ಶೋ ರೂಂ ದೆಹಲಿ) ದುಬಾರಿಯೆನಿಸಲಿದೆ. ಇವೆಲ್ಲಕ್ಕೂ ಮಿಗಿಲಾಗಿ ಬೇಸ್ ವೆರಿಯಂಟ್‌ನಲ್ಲಿ ಪ್ಲಿಪ್ ಕೀ ಮತ್ತು ಫೈಂಡ್ ಮಿ ಸೌಲಭ್ಯಗಳಿರುವುದು ಸ್ವಾಗತಾರ್ಹವಾಗಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಸದ್ಯ ಉತ್ತರ ಹಾಗೂ ಪಶ್ಚಿಮ ಭಾರತದಲ್ಲಿ ಲಭ್ಯವಿರುವ ಮಹೀಂದ್ರ ಗಸ್ಟೊ ದಕ್ಷಿಣ ಭಾರತವನ್ನು ಜನವರಿ ತಿಂಗಳಿನಲ್ಲಷ್ಟೇ ಪ್ರವೇಶ ಪಡೆಯಲಿದೆ. ನಿಜಕ್ಕೂ ಅತ್ಯಂತ ಜನಪ್ರಿಯ ಹೋಂಡಾ ಆಕ್ಟಿವಾಗೆ ಸ್ಪರ್ಧೆ ಒಡ್ಡುವುದರಲ್ಲಿ ಒಂದು ಹಂತದ ವರೆಗೆ ಮಹೀಂದ್ರ ಗಸ್ಟೊ ಯಶಸ್ವಿಯಾದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. ಯಾಕೆಂದರೆ ಹಿಂದಿನ ಮಹೀಂದ್ರ ಮಾದರಿಗಳನ್ನು ಪರಿಗಣಿಸಿದರೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮಹೀಂದ್ರ ಗಸ್ಟೊ ಹಣಕ್ಕೆ ತಕ್ಕ ಮೌಲ್ಯ ನೀಡುವುದಂತೂ ಗ್ಯಾರಂಟಿ.

Most Read Articles

Kannada
English summary
Mahindra Two Wheelers has just launched its latest Global scooter the ‘Gusto'. The Indian automobile giant has spent a lot of time in developing their new product. They are relatively new in the two wheeler segment.
Story first published: Monday, September 29, 2014, 17:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X