ಚಾಲನಾ ವಿಮರ್ಶೆ- ಹೊಸ ಲುಕ್‌ನೊಂದಿಗೆ ಎಂಟ್ರಿ ಕೊಟ್ಟ 2016 ಟ್ರಯಂಪ್ ಬೊನೆವಿಲ್ಲೆ ಟಿ100

Written By:

ಬ್ರಿಟನ್ ಮೂಲದ ಐಕಾನಿಕ್ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆ ಟ್ರಯಂಪ್ ಬೊನೆವಿಲ್ಲೆ ತನ್ನ ವಿನೂತನ ಟಿ100 ಬೈಕ್ ಬಿಡುಗಡೆಗೊಳಿಸಿದ್ದು, ಹತ್ತಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ.

1960ರಿಂದಲೇ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟ್ರಯಂಪ್ ಬೊನೆವಿಲ್ಲೆ ಸಂಸ್ಥೆಯು ಇದುವರೆಗೆ ಹತ್ತಾರು ಬೈಕ್ ಮಾದರಿಗಳನ್ನು ಉತ್ಪಾದನೆ ಮಾಡಿ ಎಲ್ಲರಿಂದಲೂ ಸೈ ಎನ್ನಿಸಿಕೊಂಡಿದೆ.

ಸದ್ಯ ಹೊಸ ಮಾದರಿ ಟಿ100 ಬೈಕ್ ಬಿಡುಗಡೆಗಡೆಗೊಳಿಸಿರುವ ಟ್ರಯಂಪ್ ಬೊನೊವಿಲ್ಲೆ, ಈ ಹಿಂದಿನ ಸ್ಟ್ರೀಟ್ ಟ್ವಿನ್ ಟಿ120 ಮಾದರಿಯನ್ನು ಹೋಲುವ ಮತ್ತೊಂದು ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಮೊದಲ ನೋಟದಲ್ಲಿ ಆಪ್ ರೋಡಿಂಗ್ ಪ್ರಿಯರನ್ನು ಸೆಳೆಯುವ ಟ್ರಯಂಪ್ ಬೊನೆವಿಲ್ಲೆ ಟಿ100 ಬೈಕ್, ವಿಶೇಷ ವಿನ್ಯಾಸದ ಡ್ಯುಯಲ್ ಟೋನ್ ಬಣ್ಣ ಹೊಂದಿದೆ.

ಸುಧಾರಿತ ರೇಟ್ರೋ ಲುಕ್ ಪಡೆದಿರುವ ಟ್ರಯಂಪ್ ಬೊನೆವಿಲ್ಲೆ ಟಿ100 ಬೈಕ್, ತಿಳಿ ನೀಲಿ ಹಾಗೂ ಬಳಿ ಬಣ್ಣಗಳ ವಿನ್ಯಾಸ ಹೊಂದಿದೆ.

ಎಂಜಿನ್ ಸಾಮರ್ಥ್ಯ

900ಸಿಸಿ ಸಾಮರ್ಥ್ಯದ ಲಿಕ್ವಿಡ್ ಕೂಲ್ಡ್ ಪ್ಯಾರಾಲೆಲ್ ಟ್ವಿನ್ ಎಂಜಿನ್ ಹೊಂದಿದ್ದು, 54ಬಿಎಚ್‌ಪಿ ಮತ್ತು 80ಎಂಎನ್ ಉತ್ಪಾದಿಸುವ ಶಕ್ತಿ ಹೊಂದಿದೆ.

5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ಟ್ರಾಫಿಕ್ ಮತ್ತು ಹೈವೆ ಮೂಡ್ ವ್ಯವಸ್ಥೆ ಕೂಡಾ ಇರಿಸಲಾಗಿದೆ. ಇದರಿಂದ ನಿಮ್ಮ ಪ್ರಯಾಣಕ್ಕೆ ಅನುಕೂಲಕರವಾಗಲಿದೆ.

ಪ್ರತಿಗಂಟೆಗೆ 100 ರಿಂದ 120ಕಿಲೋ ಮೀಟರ್ ಪ್ರಯಾಣ ಮಾಡಬಹುದಾಗಿದ್ದು, 0 ಟು 6 ಸೆಕೇಂಡುಗಳಲ್ಲಿ 100 ಕಿಲೋ ಮೀಟರ್ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ.

ಕಳೆದ ಮಾದರಿಗಳಿಂತ ತೂಕದಲ್ಲಿ ಕಡಿತ ಮಾಡಲಾಗಿದ್ದು, ಪ್ರಸ್ತುತ ಮಾದರಿಯೂ 215 ಕೆ.ಜಿ ತೂಕ ಹೊಂದಿದೆ.

ಸೀಟುಗಳು ಮತ್ತು ಹಿಂಬದಿಯ ಸವಾರರಿಗೆ ಅನುಕೂಲವಾಗುವ ರೀತಿಯ ವಿನ್ಯಾಸ ಗಮನಸೆಳೆಯುತ್ತಿದ್ದು, 790 ಎಂಎಂ ಎತ್ತರ ಹೊಂದಿದೆ.

ಹಿಂಭಾಗ ಮತ್ತು ಮುಂಭಾಗದಲ್ಲೂ ಡಿಸ್ಕ್‌ಬ್ರೇಕ್ ವ್ಯವಸ್ಥೆ ಹೊಂದಿರುವ ಬೊನೊವಿಲ್ಲೆ ಟಿ100 ಬೈಕ್, ಎಬಿಎಸ್ ವ್ಯವಸ್ಥೆ ಹೊಂದಿದೆ.

ಪ್ರತಿಲೀಟರ್‌ಗೆ 20 ಕಿಲೋ ಮೀಟರ್ ಮೈಲೇಜ್ ಸಾಮರ್ಥ್ಯ ಹೊಂದಿದ್ದು, ಹೈವೆಗಳಲ್ಲಿ ಪ್ರತಿ ಲೀಟರ್‌ಗೆ 26 ಕಿಲೋ ಮೀಟರ್ ಮೈಲೇಜ್ ನೀಡುತ್ತದೆ.

ಬೆಲೆ
ರೂ. 8.55 ಲಕ್ಷ(ಮುಂಬೈ ಎಕ್ಸ್‌ಶೋರಂ ಪ್ರಕಾರ)

ಒಟ್ಟಿನಲ್ಲಿ ಈ ಹಿಂದಿನ ಟಿ120 ಮಾದರಿಗಿಂತಲೂ ಹೆಚ್ಚಿನ ಗುಣಮಟ್ಟ ಹೊಂದಿರುವ ಟಿ100, ಆಪ್ ರೋಡಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಬೈಕ್ ಮಾದರಿಯಾಗಿದೆ.

 

Click to compare, buy, and renew Car Insurance online

Buy InsuranceBuy Now

English summary
The Bonneville T100 is a modern day classic cruiser that sits perfectly between the Street Twin and the T120.
Please Wait while comments are loading...

Latest Photos