ಪಲ್ಸರ್ vs ಕೆಟಿಎಂ: ಯಾವ ಬೈಕ್ ಬೆಸ್ಟ್?

By Nagaraja

ಕಳೆದ ದಿನವಷ್ಟೇ ಬಜಾಜ್ ಪಲ್ಸರ್ ಆರ್ ಎಸ್200 ಭಾರತೀಯ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿತ್ತು. ಪ್ರಸ್ತುತ ಬೈಕ್ ಈಗಾಗಲೇ ಮಾರುಕಟ್ಟೆಯಲ್ಲಿರುವ ಕೆಟಿಎಂ ಆರ್ ಸಿ200 ಮಾದರಿಗೆ ಪ್ರತಿಸ್ಪರ್ಧಿಯಾಗಲಿದೆ. ಇಲ್ಲಿ ಗಮನಾರ್ಹ ವಿಷಯವೆಂದರೆ ಬಜಾಜ್ ನ ಎಕ್ಸ್ ಕ್ಲೂಸಿವ್ ಶೋ ರೂಂಗಳಿಂದಲೇ ಕೆಟಿಎಂ ಬೈಕ್ ಮಾರಾಟವಾಗುತ್ತಿದೆ.

ಪ್ರಸ್ತುತ ಕ್ರೀಡಾ ಬೈಕ್ ಅಭಿಮಾನಿಗಳ ಪಾಲಿಗಂತೂ ಅತಿ ವೇಗದ ಪಲ್ಸರ್ ಆಗಮನದೊಂದಿಗೆ ಹೆಚ್ಚಿನ ಆಯ್ಕೆ ಲಭಿಸಿದಂತಾಗಿದೆ. ಹಾಗಿದ್ದರೂ ಈ ಎರಡು ಬೈಕ್ ಗಳಲ್ಲಿ ಶ್ರೇಷ್ಠವಾದದು ಯಾವುದು? ಈ ಬಗ್ಗೆ ವಿಸೃತವಾದ ಲೇಖನವನ್ನು ನಾವಿಲ್ಲಿ ಪ್ರಕಟಿಸಲಿದ್ದೇವೆ.

ಪಲ್ಸರ್ vs ಕೆಟಿಎಂ ಬೈಕ್: ಯಾವುದು ಬೆಸ್ಟ್?

ಪಲ್ಸರ್ vs ಕೆಟಿಎಂ ಬೈಕ್: ಯಾವುದು ಬೆಸ್ಟ್?

ಪಲ್ಸರ್ ಆರ್ ಎಸ್ 200 ಸ್ಟ್ಯಾಂಡರ್ಡ್: 1.18 ಲಕ್ಷ ರು.

ಪಲ್ಸರ್ ಆರ್ ಎಸ್ 200 ಎಬಿಎಸ್: 1.30 ಲಕ್ಷ ರು.

ಕೆಟಿಎಂ ಆರ್ ಸಿ 200: 1.66 ಲಕ್ಷ ರು.

ವಿನ್ಯಾಸ - ಪಲ್ಸರ್ ಆರ್ ಎಸ್ 200

ವಿನ್ಯಾಸ - ಪಲ್ಸರ್ ಆರ್ ಎಸ್ 200

ಹಿಂದೆಂದಿಗಿಂತಲೂ ಅಮೋಘವಾದ ವಿನ್ಯಾಸವನ್ನು ಹೊಸ ಪಲ್ಸರ್ ಕಾಪಾಡಿಕೊಂಡಿದೆ. ಈ ಫುಲ್ ಫೇರ್ಡ್ ವರ್ಷನ್ ಪಲ್ಸರ್ ಮೊದಲ ನೋಟದಲ್ಲೇ ಬೈಕ್ ಪ್ರೇಮಿಗಳನ್ನು ತನ್ನತ್ತ ಸೆಳೆಯುತ್ತಿದೆ.

ವಿನ್ಸಾಸ - ಕೆಟಿಎಂ ಆರ್ ಸಿ 200

ವಿನ್ಸಾಸ - ಕೆಟಿಎಂ ಆರ್ ಸಿ 200

ಪಲ್ಸರ್ ಗೆ ಹೋಲಿಸಿದರೆ ಈ ಆಸ್ಟ್ರೀಯಾ ಬ್ರಾಂಡ್ ಕೆಟಿಎಂ ಬೈಕ್ ಸ್ವಲ್ಪ ಪ್ರೀಮಿಯಂ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಅಂತೆಯೇ ಹೊಸತನವನ್ನು ಬಯಸುವ ಗ್ರಾಹಕರ ಪಾಲಿಗಂತೂ ನೆಚ್ಚಿನ ಬೈಕ್ ಎನಿಸಿಕೊಳ್ಳಲಿದೆ.

ಮುಖ್ಯ ವೈಶಿಷ್ಟ್ಯಗಳು - ಪಲ್ಸರ್ ಆರ್ ಎಸ್ 200

ಮುಖ್ಯ ವೈಶಿಷ್ಟ್ಯಗಳು - ಪಲ್ಸರ್ ಆರ್ ಎಸ್ 200

  • ಕ್ರೈಸ್ಟಲ್ ಎಲ್ ಇಡಿ ಟೈಲ್ ಲ್ಯಾಂಪ್,
  • ಟ್ವಿನ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
  • ಆಕ್ರಮಣಕಾರಿ ಮಸಲರ್ ಶೈಲಿ,
  • ಅತಿ ವೇಗದ ಪಲ್ಸರ್ ಬೈಕ್,
  • ಫುಲ್ ಫೇರ್ಡ್ ವರ್ಷನ್,
  • ಸೆಮಿ ಡಿಜಿಟಲ್ ಮೀಟರ್,
  • ಮುಖ್ಯ ವೈಶಿಷ್ಟ್ಯಗಳು - ಕೆಟಿಎಂ ಆರ್ ಸಿ 200

    ಮುಖ್ಯ ವೈಶಿಷ್ಟ್ಯಗಳು - ಕೆಟಿಎಂ ಆರ್ ಸಿ 200

    • ಡ್ಯುಯಲ್ ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
    • ಡೇ ಟೈಮ್ ರನ್ನಿಂಗ್ ಲೈಟ್ಸ್,
    • ಎಲ್ ಇಡಿ ಟೈಲ್ ಲ್ಯಾಂಪ್,
    • ಏರೋಡೈನಾಮಿಕ್ ವಿಂಡ್ ಶಿಲ್ಡ್,
    • ಡಿಸ್ಕ್ ಬ್ರೇಕ್,
    • ಬಹು ಕ್ರಿಯಾತ್ಮಕ ಸಂಪೂರ್ಣ ಡಿಜಿಟಲ್ ಕನ್ಸೋಲ್.
    • ಎಂಜಿನ್ ತಾಂತ್ರಿಕತೆ - ಪಲ್ಸರ್ ಆರ್ ಎಸ್ 200

      ಎಂಜಿನ್ ತಾಂತ್ರಿಕತೆ - ಪಲ್ಸರ್ ಆರ್ ಎಸ್ 200

      ನೂತನ ಪಲ್ಸರ್ ಆರ್ ಎಸ್200 ಡಿಟಿಎಸ್-ಐ 199.5 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದುಕೊಂಡಿದ್ದು, 24 ಅಶ್ವಶಕ್ತಿ (18.6 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಆರು ಸ್ಪೀಡ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

      ಭಾರ - 165 ಕೆ.ಜಿ

      ಇಂಧನ ಟ್ಯಾಂಕ್ ಸಾಮರ್ಥ್ಯ - 13 ಲೀಟರ್

       ಎಂಜಿನ್ ತಾಂತ್ರಿಕತೆ - ಕೆಟಿಎಂ ಆರ್ ಸಿ 200

      ಎಂಜಿನ್ ತಾಂತ್ರಿಕತೆ - ಕೆಟಿಎಂ ಆರ್ ಸಿ 200

      ಇನ್ನೊಂದೆಡೆ 199.5 ಸಿಸಿ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಸ್ಪಡುವ ಕೆಟಿಎಂ ಆರ್ ಸಿ 200 19 ತಿರುಗುಬಲದಲ್ಲಿ 25 ಅಶ್ವಶಕ್ತಿ ಉತ್ಪಾದಿಸುತ್ತದೆ. ಇದು ಕೂಡಾ ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್ ಪಡೆದುಕೊಂಡಿದೆ.

      ಭಾರ - 137.5 ಕೆ.ಜಿ

      ಇಂಧನ ಟ್ಯಾಂಕ್ ಸಾಮರ್ಥ್ಯ - 10 ಲೀಟರ್

      ಸುರಕ್ಷತೆ - ಪಲ್ಸರ್ ಆರ್ ಎಸ್ 200

      ಸುರಕ್ಷತೆ - ಪಲ್ಸರ್ ಆರ್ ಎಸ್ 200

      ನೂತನ ಪಲ್ಸರ್ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡುತ್ತಿದ್ದು, ಎಬಿಎಸ್ ವೆರಿಯಂಟ್ ಕೂಡಾ ಪರಿಚಯಿಸಿದೆ. ಇನ್ನು ಮುಂದುಗಡೆ 300 ಎಂಎಂ ಬಟರ್ ಫ್ಲೈ ಡಿಸ್ಕ್ ಬ್ರೇಕ್ ಹಾಗೂ ಹಿಂದುಗಡೆ 230 ಎಂಎಂ ಡಿಸ್ಕ್ ಬ್ರೇಕ್ ಇರಲಿದೆ.

      ಸುರಕ್ಷತೆ - ಕೆಟಿಎಂ ಆರ್ ಸಿ 200

      ಸುರಕ್ಷತೆ - ಕೆಟಿಎಂ ಆರ್ ಸಿ 200

      ಪಲ್ಸರ್ ಗೆ ಸಮಾನವಾದ ರೀತಿಯಲ್ಲಿ ಕೆಟಿಎಂ ಆರ್ ಸಿ 200 ಬೈಕ್ ಕೂಡಾ ಮುಂದುಗಡೆ 300 ಎಂಎಂ ಡಿಸ್ಕ್ ಹಾಗೂ ಹಿಂದುಗಡೆ 230 ಎಂಎಂ ಡಿಸ್ಕ್ ಬ್ರೇಕ್ ಪಡೆಯಲಿದೆ. ಆದರೆ ಎಬಿಎಸ್ ಕೊರತೆ ಕಾಡುತ್ತಿದೆ. ಇಲ್ಲಿ ಬಜಾಜ್ ಪಲ್ಸರ್ ಸ್ವಲ್ಪ ಮುನ್ನಡೆಯನ್ನು ಕಾಯ್ದುಕೊಂಡಿದೆ.

      ಅಂತಿಮ ತೀರ್ಪು

      ಅಂತಿಮ ತೀರ್ಪು

      ಬೆಲೆ ಪರಿಗಣಿಸಿದಾಗ ಎರಡು ಮಾದರಿಗಳು ವಿಭಿನ್ನ ಗುಂಪಿನಲ್ಲಿ ಗುರುತಿಸಿಕೊಳ್ಳುತ್ತಿದೆ. ಆದರೆ ಸಮಾನವಾದ ಎಂಜಿನ್ ಸಾಮರ್ಥ್ಯ ಪಡೆದುಕೊಂಡಿರುವ ಹೊರತಾಗಿಯೂ ಕೆಟಿಎಂ ಆರ್ ಸಿ 200 ಹೆಚ್ಚು ಪವರ್ ಫುಲ್ ಎನಿಸಿಕೊಂಡಿದೆ. ಹಾಗೆಯೇ ಹಗುರ ಭಾರ ಕೂಡಾ ಹೊಂದಿದೆ. ವೈಶಿಷ್ಟ್ಯ ಹಾಗೂ ವಿನ್ಯಾಸದ ದೃಷ್ಟಿಕೋನದಲ್ಲಿ ಎರಡೂ ಬೈಕ್ ಗಳು ಒಂದಕ್ಕೊಂದು ಪೈಪೋಟಿಯನ್ನು ನೀಡುತ್ತಿದ್ದರೂ ನಾವು ಈ ಮೊದಲೇ ತಿಳಿಸಿರುವಂತೆಯೇ ಹೊಸತನದ ಬ್ರಾಂಡ್ ಬಯಸುವವರಿಗೆ ಕೆಟಿಎಂ ಉತ್ತಮ ಆಯ್ಕೆಯಾಗಿರಲಿದೆ. ಇನ್ನೊಂದೆಡೆ ಅಪ್ಪಟ ಪಲ್ಸರ್ ಪ್ರೇಮಿಗಳಿಗೆ ಅತಿ ವೇಗದ ಪಲ್ಸರ್ ನೆಚ್ಚಿನ ಬೈಕ್ ಎನಿಸಿಕೊಳ್ಳಲಿದೆ.

      ಬಜಾಜ್ ಪಲ್ಸರ್ ಆರ್ ಎಸ್ 200 vs ಕೆಟಿಎಂ ಆರ್ ಸಿ 200

      ಈಗ ಪಲ್ಸರ್ ಹಾಗೂ ಕೆಟಿಎಂ ಗಳಲ್ಲಿ ನಿಮ್ಮ ನೆಚ್ಚಿನ ಬೈಕ್ ಯಾವುದು ? ಎಂಬುದರ ಬಗ್ಗೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಪ್ರತಿಕ್ರಿಯಿಸಿರಿ...

Most Read Articles

Kannada
English summary
will Bajaj's three-plug RS 200 stand a chance against the KTMs single plug RC 200? or does the Bajaj Pulsar RS 200 have a little too much spark but not enough to do the business? Let's take a look.
Story first published: Friday, March 27, 2015, 10:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X