ಬೆನೆಲ್ಲಿ ಬಿಎನ್‌600ಐ; ಇಟಲಿಯ ಪವರ್ ಭಾರತಕ್ಕೆ

By Nagaraja

ನೀವು ಇದೇ ಮೊದಲ ಬಾರಿಗೆ ಬೆನೆಲ್ಲಿ ಹೆಸರನ್ನು ಆಲಿಸುತ್ತಿರಬಹುದು. ನಿಮ್ಮ ಮಾಹಿತಿಗಾಗಿ, ಇಟಲಿಯ ಅತಿ ಪುರಾತನ ದ್ವಿಚಕ್ರ ವಾಹನ ತಯಾರಿಕ ಸಂಸ್ಥೆಗಳಲ್ಲಿ ಬೆನೆಲ್ಲಿ ಒಂದಾಗಿದ್ದು, 1911ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ಇವನ್ನೂ ಓದಿ: ಕಾಂಟಿನೆಂಟಲ್ ಜಿಟಿಯಲ್ಲೊಂದು ರಾಯಲ್ ಪಯಣ

ಪ್ರಸ್ತುತ ಐಕಾನಿಕ್ ಸೂಪರ್ ಬೈಕ್ ಅನ್ನು ಡಿಸ್‌ಎಸ್‌ಕೆ ಮೋಟಾರ್ಸ್ ದೇಶಕ್ಕೆ ತರುತ್ತಿದೆ. ಹೌದು, ಬೆನೆಲ್ಲಿ 600ಐ ಸೂಪರ್ ಬೈಕ್ ಮುಂದಿನ ವರ್ಷಾರಂಭದಲ್ಲಿ ಬಿಡುಗಡೆಯಾಗಲಿದೆ. ಇದರೊಂದಿಗೆ ದೇಶಕ್ಕೆ ಹೊಸ ವರುಷದಿ ಹೊಸ ಸೂಪರ್ ಬೈಕ್ ಪ್ರವೇಶವಾಗಲಿದೆ. ಇದರಂತೆ ನಮ್ಮ ಡ್ರೈವ್ ಸ್ಪಾರ್ಕ್ ವಾಹನ ತಜ್ಞರು ನಡೆಸಿರುವ ಎಕ್ಸ್‌ಕ್ಲೂಸಿವ್ ಮೊದಲ ಚಾಲನಾ ಅನುಭವವನ್ನು ನಾವಿಲ್ಲಿ ನಿಮ್ಮ ಮುಂದಿಡುತ್ತಿದ್ದೇವೆ.

ಬೆನೆಲ್ಲಿ ಬಿಎನ್‌600ಐ ಮೊದಲ ಚಾಲನಾ ಅನುಭವ

ಮುಂದಿನ ವರ್ಷಗಳಲ್ಲಿ ಭಾರತಕ್ಕೆ ಒಟ್ಟು 12 ಮಾದರಿಗಳನ್ನು ಪರಿಚಯಿಸುವ ಇರಾದೆಯನ್ನು ಡಿಎಸ್‌ಕೆ ಬೆನೆಲ್ಲಿ ಹೊಂದಿದೆ. ಇಲ್ಲಿ ಗಮನಾರ್ಹ ಸಂಗತಿಯೆಂದರೆ ಇದನ್ನು ಭಾರತದಲ್ಲೇ ಸ್ಥಳೀಯವಾಗಿ ಜೋಡಣೆ ಮಾಡಲಾಗುತ್ತಿದೆ. ಇದು ಸ್ಪರ್ಧಾತ್ಮಕ ದರ ಕಾಪಾಡಿಕೊಳ್ಳಲು ನೆರವಾಗಲಿದೆ. ಇನ್ನೊಂದೆಡೆ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಗರಿಷ್ಠ ನಿರ್ವಹಣೆಯ ಬೈಕ್‌ಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ. ಇದೀಗ ಕಂಪ್ಲೀಟ್ ನೌಕ್ಡ್ ಡೌನ್ (ಸಿಕೆಡಿ) ಸಿದ್ಧಾಂತದ ಮುಖಾಂತರ ಆಗಮವಾಗಲಿರುವ ಬೆನೆಲ್ಲಿ ಸೂಪರ್ ಬೈಕ್‌ ಮೇಲೆ ಭಾರತೀಯರು ಭಾರಿ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಅಷ್ಟಕ್ಕೂ ಇದು ಭಾರತೀಯ ರಸ್ತೆ ಪರಿಸ್ಥಿತಿಗೆ ಇದು ಸೂಕ್ತವೇ? ನಿರ್ವಹಣೆ ಹೇಗಿದೆ? ಚಾಲನಾ ಅನುಭವ ಚೆನ್ನಾಗಿದೆಯೇ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಎಕ್ಸ್‌ಕ್ಲೂಸಿವ್ ಮಾಹಿತಿಗಳನ್ನು ನಾವು ನಿಮ್ಮ ಮುಂದಿಡಲಿದ್ದೇವೆ.

ಅವಲೋಕನ

ಅವಲೋಕನ

ಪರೀಕ್ಷಾರ್ಥ ಮಾದರಿ: 2014 ಡಿಎಸ್‌ಕೆ ಬೆನೆಲ್ಲಿ ಬಿಎನ್600ಐ (ಟಿಎನ್‌ಟಿ600)

ಎಂಜಿನ್: ಇನ್-ಲೈನ್ ಫೋರ್, 600 ಸಿಸಿ,

ಗೇರ್ ಬಾಕ್ಸ್: 6 ಸ್ಪೀಡ್

ಬೆಲೆ: ಇನ್ನೂ ಪ್ರಕಟಿಸಿಲ್ಲ.

ವಿನ್ಯಾಸ

ವಿನ್ಯಾಸ

ವಿನ್ಯಾಸದ ವಿಚಾರಕ್ಕೆ ಬಂದಾಗ ವಿಭಿನ್ನತೆ ಕಾಪಾಡಿಕೊಂಡಿರುವ ಬೆನೆಲ್ಲಿ ಭಾರತೀಯರಿಗೆ ಸಂಪೂರ್ಣ ಹೊಸತನವನ್ನು ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಈ ನೆಕ್ಡ್ ಮೋಟಾರ್‌ಸೈಕಲನ್ನು ಬಹಳ ಅಚ್ಚುಕಟ್ಟಾಗಿ ವಿನ್ಯಾಸಗೊಳಿಸಲಾಗಿದೆ. ಇದು ಚೂಪಾದ ಹಾಗೂ ತೀಕ್ಷ್ಣವಾದ ಬಾಡಿ ಲೈನ್ ಪಡೆದುಕೊಂಡಿದೆ.

ವಿನ್ಯಾಸ

ವಿನ್ಯಾಸ

ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಂಡಿರುವ ಬೆನೆಲ್ಲಿ ವಿರುದ್ಧ ಸದ್ಯಕ್ಕೆ ದೇಶದ ಯಾವುದೇ ಮೋಟಾರುಸೈಕಲನ್ನು ಹೋಲಿಸುವಂತಿಲ್ಲ. ಇದು ಹಿಂಬದಿ ಸವಾರರ ಕೆಳಗಡೆಯಾಗಿ ಹಬೆ ಹೊರಕ್ಕೆ ಹೋಗುವ ಎರಡು ಎಕ್ಸಾಸ್ಟ್ ರಂಧ್ರಗಳನ್ನು ಪಡೆದುಕೊಂಡಿದೆ. ಇದರ ಮಧ್ಯಭಾಗದಲ್ಲಿ ಹಿಂಬದಿಯ ಕೆಂಪು ದೀಪ ಉರಿಯಲಿದೆ.

ಎಂಜಿನ್

ಎಂಜಿನ್

ಬೆನೆಲ್ಲಿ ಬಿಎನ್‌600ಐ ಸೂಪರ್ ಬೈಕ್ ಇನ್ ಲೈನ್ ಫೋರ್, ಲಿಕ್ವಿಡ್ ಕೂಲ್ಡ್ 600ಸಿಸಿ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಇದು 53 ತಿರುಗುಬಲದಲ್ಲಿ (ಟಾರ್ಕ್) 82 ಅಶ್ವಶಕ್ತಿ ಉತ್ಪಾದಿಸಲಿದೆ. ಜೊತೆಗೆ ಡೆಲ್ಫಿ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಟರ್ ಕೂಡಾ ಪಡೆದುಕೊಳ್ಳಲಿದೆ. ಹಾಗೆಯೇ ವೆಟ್ (wet) ಕ್ಲಚ್ ಜೊತೆಗೆ 6 ಸ್ಪೀಡ್ ಗೇರ್ ಬಾಕ್ಸ್ ಇರಲಿದೆ.

ಚಾಲನಾ ಅನುಭವ

ಚಾಲನಾ ಅನುಭವ

600ಸಿಸಿಯಂತಹ ಗರಿಷ್ಠ ನಿರ್ವಹಣಾ ಬೈಕ್‌ಗಳನ್ನು ಮೊದಲ ಬಾರಿಗೆ ಚಾಲನೆ ಮಾಡುವ ಸವಾರರಿಗೂ ಬೆನೆಲ್ಲಿ ಸೂಪರ್ ಬೈಕ್ ಅದ್ಭುತ ಚಾಲನಾ ಅನುಭವ ನೀಡಲಿದೆ. ಮುಂದಕ್ಕೆ ಸ್ವಲ್ಪ ಬಾಗಿದಂತಿರುವ ಇದರ ಚಾಲನಾ ವ್ಯವಸ್ಥೆಯು ತಿರುವಿನಲ್ಲೂ ಹೆಚ್ಚಿನ ಸ್ಥಿರತೆ ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಇದು ದೈನಂದಿನ ಚಾಲನೆಯ ಜೊತೆಗೆ ವಿಕೇಂಡ್ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ.

ಚಾಲನಾ ಅನುಭವ

ಚಾಲನಾ ಅನುಭವ

ಬೆನೆಲ್ಲಿ ಸೂಪರ್ ಬೈಕ್ ಮುಂಭಾಗ ಹಾಗೂ ಹಿಂಬದಿಯ ಶಾಕ್ಸ್ ಹೊಂದಾಣಿಸಬಹುದಾಗಿದೆ. ಇದು ಹೆಚ್ಚು ಭಾರವನ್ನು ಹೊಂದಿರುವ ಹೊರತಾಗಿಯೂ ನಿರ್ವಹಣೆಯ ವಿಚಾರದಲ್ಲಿ ಯಾವುದೇ ತೊಂದರೆಗೆ ಒಳಗಾಗುವುದಿಲ್ಲ. ಅಂತೆಯೇ ದೊಡ್ಡದಾದ ಚಕ್ರಗಳನ್ನು ಪಡೆದುಕೊಂಡಿದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಇನ್ಸ್ಟ್ರುಮೆಂಟ್ ಕ್ಲಸ್ಟರ್

ವಿಶ್ವ ದರ್ಜೆಯ ಬೈಕ್‌ಗಳಲ್ಲಿ ಕಾಣಸಿಗುವುದಕ್ಕೆ ಸಮಾನವಾದ ಇನ್ಸ್ಟ್ರುಮೆಂಟ್ ಕ್ಲಸ್ಟರನ್ನು ನೀವಿಲ್ಲಿ ನೋಡಬಹುದಾಗಿದೆ. ಇದು ವಿಭಜಿತ ಡಿಜಿಟಲ್ ಹಾಗೂ ಅನಾಲಾಗ್ ಮೀಟರ್ ಪಡೆದುಕೊಂಡಿದ್ದು, ಅಗತ್ಯ ಮಾಹಿತಿಗಳನ್ನು ಸವಾರರಿಗೆ ಒದಗಿಸುತ್ತದೆ. ಇದರಲ್ಲಿ ಎಂಜಿನ್ ತಾಪಮಾನ, ಸಮಯ, ಪ್ರವಾಸ ಮೀಟರ್, ಫ್ಯೂಯಲ್ ಗೇಜ್, ಓಡೋ ಮೀಟರ್, ಸ್ಪಿಡೋಮೀಟರ್ ಮತ್ತು ಅನಾಲಾಗ್ ಆರ್‌ಪಿಎಂ ಮೀಟರ್ ಒಳಗೊಂಡಿರಲಿದೆ. ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸರಳತೆಯು ಇನ್ನಷ್ಟು ಮೆಚ್ಚುಗೆಗೆ ಪಾತ್ರವಾಗಿದೆ.

ಸ್ವಿಚ್

ಸ್ವಿಚ್

ಡಿಎಸ್‌ಕೆ ಬೆನೆಲ್ಲಿ ಸೂಪರ್ ಬೈಕ್‌ನಲ್ಲಿ ನೀಡಿರುವ ಸ್ವಿಚ್ ಆಯ್ಕೆಯು ತುಲಾನಾತ್ಮಕವಾಗಿ ಸರಳತೆಯನ್ನು ಕಾಪಾಡಿಕೊಂಡಿದ್ದು, ಯಾವುದೇ ಜಟಿಲತೆಗೆ ಕಾರಣವಾಗುವುದಿಲ್ಲ. ಹೆಡ್ ಲೈಟ್ ಆಫ್ ಮಾಡಿಟ್ಟು ಹಜಾರ್ಡ್ ಲೈಟ್ ಆನ್ ಮಾಡುವ ಆಯ್ಕೆಯು ಇರುತ್ತದೆ. ಅದೇ ರೀತಿ ಹ್ಯಾಂಡಲ್ ಬಾರ್ ಹಿಡಿತ ಕೂಡಾ ಉತ್ತಮವಾಗಿದ್ದು, ಅನುಕೂಲವೆನಿಸಿದೆ.

ನಮಗಿಷ್ಟವಾದ ಸಂಗತಿಗಳು - ಡಿಸೈನ್

ನಮಗಿಷ್ಟವಾದ ಸಂಗತಿಗಳು - ಡಿಸೈನ್

ಇಟಲಿಯ ವಿನ್ಯಾಸ ತಂತ್ರಗಾರಿಕೆಯ ಬಗ್ಗೆ ಹೆಸರು ಕೇಳಿದಾಗಲೇ ಹೆಚ್ಚೇನು ಯೋಚನೆ ಮಾಡುವ ಅಗತ್ಯವಿಲ್ಲ. ನಿಸ್ಸಂಶಯವಾಗಿಯೂ ಎಲ್ಲ ಕೋನದಿಂದಲೂ ಇದು ಕಣ್ಮಣ ಸೆಳೆಯುವ ನೋಟವನ್ನು ಕಾಯ್ದುಕೊಂಡಿದೆ. ಸಂಪೂರ್ಣ ಎಂಜಿನ್ ಸಾಮರ್ಥ್ಯ ಹೊಂದಿರುವ ಬೆನೆಲ್ಲಿ ಶಕ್ತಿಶಾಲಿ ವಿನ್ಯಾಸವನ್ನು ಕಾಯ್ದುಕೊಂಡಿದೆ.

ನಮಗಿಷ್ಟವಾದ ಸಂಗತಿಗಳು - ಡ್ಯುಯಲ್ ಎಕ್ಸಾಸ್ಟ್

ನಮಗಿಷ್ಟವಾದ ಸಂಗತಿಗಳು - ಡ್ಯುಯಲ್ ಎಕ್ಸಾಸ್ಟ್

ಹಿಂದುಗಡೆ ಲಗತ್ತಿಸಲಾಗಿರುವ ಡ್ಯುಯಲ್ ಎಕ್ಸಾಸ್ಟ್ ಪ್ರಮುಖ ಆಕರ್ಷಣೆಯಾಗಿದೆ. ಅಲ್ಲದೆ ಸಾರ್ವಜನಿಕ ರಸ್ತೆಗಳಲ್ಲಿ ನಿಮಗೆ ರಾಯಲ್ ಸವಾರಿಯ ಅನುಭವ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಿಂಬದಿ ಸವಾರರಿಗೆ ಬಿಗಿ ಹಿಡಿತವನ್ನು ನೀಡುವ ಗ್ರಾಬ್ ರೈಲ್ ಗಮನಾರ್ಹವೆನಿಸಿದೆ. ಬೈಕ್ ವೇಗವರ್ಧನೆ ಬಗ್ಗೆ ಹೆಚ್ಚೇನೂ ಹೇಳುವಂತಿಲ್ಲ. ಒಟ್ಟಿನಲ್ಲಿ ಬೈಕ್ ಪ್ರೇಮಿಗಳಿಗೆ ಮೋಜಿನ ಸವಾರಿ ನೀಡಲಿದೆ.

ನಮಗಿಷ್ಟವಾದ ಸಂಗತಿಗಳು - ಕೀಲಿ

ನಮಗಿಷ್ಟವಾದ ಸಂಗತಿಗಳು - ಕೀಲಿ

ಖಡ್ಗ ಶೈಲಿಯ ಕೀಲಿ ನೀಡಿರುವುದು ಪುರಾತನ ಕಾಲದ ರಾಜರ ಕಾಲವನ್ನು ನೆನಪಿಸಿಕೊಳ್ಳುತ್ತದೆ. ಹಿಂದೆಲ್ಲ ರಾಜರು ಕುದುರೆ ಸವಾರಿ ಮಾಡುತ್ತಿದ್ದರೆ ಇಂದಿನ ಪೀಳಿಗೆಯ ಯುವ ಜನಾಂಗವು ಬೈಕ್ ಸವಾರಿ ಮಾಡುವುದಕ್ಕೆ ಇದು ಸಂಕೇತವಾಗಿದೆ. ಇದು ಮಡಚಿಕೊಳ್ಳುವಂತಹ ವ್ಯವಸ್ಥೆಯನ್ನು ಹೊಂದಿದ್ದು, ಪಾಕೆಟ್‌ನಲ್ಲಿಟ್ಟುಕೊಳ್ಳುವುದಕ್ಕೆ ಯಾವುದೇ ರೀತಿಯ ಕಿರಿಕಿರಿವುಂಟಾಗುವುದಿಲ್ಲ.

ನಮಗಿಷ್ಟವಾದ ಸಂಗತಿಗಳು - ಸ್ಥಳಾವಕಾಶ

ನಮಗಿಷ್ಟವಾದ ಸಂಗತಿಗಳು - ಸ್ಥಳಾವಕಾಶ

ಬೆನೆಲ್ಲಿ ಸೂಪರ್ ಬೈಕ್ ಅತ್ಯುತ್ತಮ ಆಸನ ವ್ಯವಸ್ಥೆ ಹೊಂದಿದ್ದು, ಸಣ್ಣವರಿಂದ ಹಿಡಿದು ದಪ್ಪನೆಯ ದೇಹದರಿಗೂ ಉತ್ತಮ ಚಾಲನಾ ಅನುಭವ ನೀಡಲಿದೆ. ಹಿಂಬದಿ ಸೀಟು ನೋಡಲು ಚಿಕ್ಕದು ತರಹನೇ ಇದ್ದರೂ ಬೇಕಾದಷ್ಟು ಸ್ಥಳಾವಕಾಶವನ್ನು ಪಡೆದುಕೊಂಡಿದೆ. ಸವಾರಿ ವೇಳೆ ಬೈಕ್ ನಿಮ್ಮ ನಿಯಂತ್ರಣದಲ್ಲಿರುವಂತೆಯೇ ಆತ್ಮವಿಶ್ವಾಸವನ್ನುಂಟು ಮಾಡುತ್ತದೆ.

ನಮಗಿಷ್ಟವಾಗದ ಸಂಗತಿಗಳು - ಸೈಡ್ ಸ್ಟ್ಯಾಂಡ್

ನಮಗಿಷ್ಟವಾಗದ ಸಂಗತಿಗಳು - ಸೈಡ್ ಸ್ಟ್ಯಾಂಡ್

ಸುರಕ್ಷತೆಯ ವಿಚಾರಕ್ಕೆ ಬಂದಾಗ ಸೈಡ್ ಸ್ಟ್ಯಾಂಡ್‌ಗೆ ಮಹತ್ವ ಜಾಸ್ತಿಯಿರುತ್ತದೆ. ಆದರೆ ಬೆನೆಲ್ಲಿ ಬೈಕ್‌ನಲ್ಲಿ ಕಿಕ್ ಸ್ಟ್ಯಾಂಡ್ ಕೊರತೆ ಎದ್ದು ಕಾಣಿಸುತ್ತಿದ್ದು, ಅಡಗಿ ಕೂತಂತಿರುವ ಸೈಡ್ ಸ್ಟ್ಯಾಂಡ್ ನಿರ್ವಹಣೆ ಬಹಳ ಕಷ್ಟವೆನಿಸುತ್ತದೆ. ಹಾಗಿದ್ದರೂ ಸೈಡ್ ಸ್ಟ್ಯಾಂಡ್‌ನಲ್ಲಿ ಗಾಡಿ ಸ್ಟಾರ್ಟ್ ಆಗಲಾರದು. ಇದೊಂದು ಉತ್ತಮ ಸೇಫ್ಟಿ ಫೀಚರ್ ಆಗಿರುತ್ತದೆ.

ನಮಗಿಷ್ಟವಾಗದ ಸಂಗತಿಗಳು - ಮಿರರ್

ನಮಗಿಷ್ಟವಾಗದ ಸಂಗತಿಗಳು - ಮಿರರ್

ಬೆನೆಲ್ಲಿ ಬೈಕ್‌ನ ಮೊನಚಾದ ಕನ್ನಡಿಯು ಕ್ರೀಡಾತ್ಮಕ ಲುಕ್ ಪ್ರದಾನ ಮಾಡುತ್ತದೆ. ಆದರೆ ನೈಜತೆಯ ವಿಚಾರಕ್ಕೆ ಬಂದಾಗ ಇದು ಹಿಂಬದಿಯಿಂದ ಬರುವ ವಾಹನಗಳ ಬಗ್ಗೆ ಆಳವಾದ ಗೋಚರತೆಯನ್ನುಂಟು ಮಾಡುವಲ್ಲಿ ನಿಖರತೆಯ ಕೊರತೆ ಎದುರಿಸುತ್ತಿದೆ.

ನಮಗಿಷ್ಟವಾಗದ ಸಂಗತಿಗಳು - ಅಂಡರ್ ಸೀಟ್ ಸ್ಟೋರೆಜ್

ನಮಗಿಷ್ಟವಾಗದ ಸಂಗತಿಗಳು - ಅಂಡರ್ ಸೀಟ್ ಸ್ಟೋರೆಜ್

ಬೆನೆಲ್ಲಿ ಸೂಪರ್ ಬೈಕ್‌ನಲ್ಲಿ ಅಂಡರ್ ಸೀಟು ಸ್ಟೋರೆಜ್ ಜಾಗವಿರುವುದಿಲ್ಲ. ಹಾಗಿದ್ದರೂ ಇಲ್ಲಿ ಅಗತ್ಯ ಪ್ರಮಾಣ ಪತ್ರಗಳನ್ನು ಇಡಬಹುದಾಗಿದೆ. ಅಂತೆಯೇ ಇತರ ಬೈಕ್‌ಗಳಲ್ಲಿರುವಂತೆಯೇ ಟೂಲ್ ಕಿಟ್ ಅಭಾವ ಎದುರಿಸುತ್ತಿದೆ.

ಬೆನೆಲ್ಲಿ ವಿಶೇಷತೆ

ಬೆನೆಲ್ಲಿ ವಿಶೇಷತೆ

ಬೆನೆಲ್ಲಿ ಸಂಸ್ಥೆಯು ಭಾರತದಲ್ಲಿ ಮಾರಾಟ ಮಾಡುವ ಮಾದರಿಗಳನ್ನು 'ಟಿಎನ್‌ಟಿ' ಎಂದು ಹೆಸರಿಸಿಕೊಳ್ಳಲಿದೆ. ಅಂದರೆ ನಮ್ಮ ತಜ್ಞರು ಪರೀಕ್ಷೆ ಮಾಡಿರುವ ಬಿಎನ್600ಐ ಬಿಡುಗಡೆ ವೇಳೆಯಲ್ಲಿ 'ಟಿಎನ್‌ಟಿ600ಐ' ಎಂದು ಹೆಸರಿಸಿಕೊಳ್ಳಲಿದೆ. ಸಾಮಾನ್ಯವಾಗಿ ಸಂಸ್ಥೆಯ ತ್ರಿ ಸಿಲಿಂಡರ್ ಮೋಟಾರುಸೈಕಲುಗಳನ್ನು ಟಿಎನ್‌ಟಿ ಎಂದು ಉಲ್ಲೇಖಿಸಲಾಗುತ್ತದೆ. ಇದರ ಪೂರ್ಣ ರೂಪ 'ಟೊರ್ನಡೊ ಟ್ರೆ ನೆಕ್ಡ್' ಎಂದಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಬಿಡುಗಡೆ ವೇಳೆ ಬೆನೆಲ್ಲಿ ಬಹಿರಂಗಪಡಿಸಲಿದೆ.

ಎಕ್ಸ್ ಫಾಕ್ಟರ್

ಎಕ್ಸ್ ಫಾಕ್ಟರ್

  • ಭಾರತಕ್ಕೆ ಚೊಚ್ಚಲ ಪ್ರವೇಶ
  • ಬೆಲೆ ನಿಗದಿಯಾಗಿಲ್ಲ
  • ಇದೇ ಮೊದಲ ಬಾರಿಗೆ ಡಿಎಸ್‌ಕೆ ಸಹಯೋಗದಲ್ಲಿ ಬೆನೆಲ್ಲಿ ಭಾರತಕ್ಕೆ ಎಂಟ್ರಿ ಕೊಡುತ್ತಿದೆ. ಇದು ವಾಹನ ಪ್ರಿಯರಲ್ಲಿ ಹೆಚ್ಚು ಕುತೂಹಲ ಮನೆ ಮಾಡುವಲ್ಲಿ ಕಾರಣವಾಗಿದೆ.

    ಪ್ಲಸ್ ಪಾಯಿಂಟ್

    ಪ್ಲಸ್ ಪಾಯಿಂಟ್

    • ಇಟಲಿ ಡಿಸೈನ್,
    • ಸ್ಥಳೀಯವಾಗಿ ಭಾರತದಲ್ಲಿ ಜೋಡಣೆ,
    • ಸೂಪರ್ ಸ್ಪೋರ್ಟ್ ಅನುಭವ,
    • ಡ್ಯುಯಲ್ ಎಕ್ಸಾಸ್ಟ್
    • ಅಂತಿಮ ಅಭಿಮತ

      ಅಂತಿಮ ಅಭಿಮತ

      ಏನೇ ಆದರೂ ಸ್ಮರ್ಧಾತ್ಮಕ ಬೆಲೆ ಕಾಯ್ದುಕೊಳ್ಳಬೇಕಾಗಿರುವುದು ಬೆನೆಲ್ಲಿ ದೇಶದಲ್ಲಿನ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ನಿಟ್ಟಿನಲ್ಲಿ ಸಿಕೆಡಿ ಸಿದ್ಧಾಂತವನ್ನು ಅನುಸರಿಸುವ ಮೂಲಕ ದೇಶದಲ್ಲೇ ಸ್ಥಳೀಯವಾಗಿ ನಿರ್ಮಾಣ ಪ್ರಕ್ರಿಯೆ ಆರಂಭಿಸುವುದು ಬೆನೆಲ್ಲಿಗೆ ನೆರವಾಗಲಿದೆ. ಸೂಪರ್ ಬೈಕ್ ಅಥವಾ ಹೈ ಎಂಡ್ ಬೈಕ್‌ ಪ್ರಿಯರಿಗಂತೂ ಇದು ಅದ್ಭುತ ಚಾಲನಾ ಅನುಭವ ನೀಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಾಗಿದ್ದರೂ ಮಾರಾಟದ ಬಳಿಕದ ಸೇವೆಯ ಬಗ್ಗೆಯೂ ಡಿಎಸ್‌ಕೆ ಜೊತೆ ಸೇರಿಕೊಂಡು ಬೆನೆಲ್ಲಿ ಸರಿಯಾದ ನೀತಿ ಅನುಸರಿಸಬೇಕಾಗಿದೆ. 'ಆಫ್ಟರ್ ಸೇಲ್ಸ್ ಸರ್ವೀಸ್' ಸರಿಯಾಗದಿದ್ದಲ್ಲಿ ಈ ವರೆಗಿನ ಪ್ರಯತ್ನವೆಲ್ಲವೂ ವ್ಯರ್ಥವಾದಿತು. ಒಟ್ಟಿನಲ್ಲಿ ಬೆಳೆದು ಬರುತ್ತಿರುವ ದೇಶದ ಮಾರುಕಟ್ಟೆಯಲ್ಲಿದ್ದು 'ರುಯಿಂ ರುಯಿಂ' ಸದ್ದು ಮಾಡಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಈಗ ನಾವೆಲ್ಲರೂ ಈ ಐಕಾನಿಕ್ ಬೈಕ್ ದೇಶಕ್ಕೆ ಬರಮಾಡಿಕೊಳ್ಳೋಣವೇ!

Most Read Articles

Kannada
English summary
Recently we tested Benelli BN600i bike and here is our review and analysis of the motorcycle. We believe this is the motorcycle the manufacturer is expecting a lot from. They have promised us that the pricing will be ‘explosive’ and will put it in reach of many enthusiasts.
Story first published: Tuesday, December 16, 2014, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X