125 ಸಿಸಿ ಬೈಕ್ ನಿಂದ 80 ಕೀ.ಮೀ. ಮೈಲೇಜ್ ಸಾಧ್ಯವೇ?

By Nagaraja

ಪ್ರಯಾಣಿಕ ಬೈಕ್ ವಿಭಾಗದಲ್ಲಿ ಗುರುತಿಸಿಕೊಳ್ಳುವ 125 ಸಿಸಿ ದ್ವಿಚಕ್ರವಾಹನವು ನೈಜವಾಗಿಯೂ ಎಕ್ಸಿಕ್ಯೂಟಿವ್ ಅಥವಾ ಕಾರ್ಯನಿರ್ವಾಹಕ ಸ್ವಭಾವದ ದ್ವಿಚಕ್ರ ಬೈಕ್ ಗಳಾಗಿವೆ. ಎಂಟ್ರಿ ಲೆವೆಲ್ ಪ್ರಯಾಣಿಕ ಮತ್ತು ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಗಳ ನಡುವಣ ಗುರುತಿಸಿಕೊಳ್ಳುವ 125 ಸಿಸಿ ವಿಭಾಗವನ್ನು ಭಾರತದ ಮಧ್ಯಮ ಮಧ್ಯಮ ವರ್ಗದ ಜನರು ಹೆಚ್ಚು ಆಶ್ರಯಿಸಿಕೊಂಡಿದ್ದಾರೆ.

ಗ್ರಾಹಕರ ಕೈಗೆಟುಕುವ ದರಗಳಲ್ಲಿ ಒಂದೇ ಸಮಯಕ್ಕೆ ವಿನ್ಯಾಸ ಹಾಗೂ ಇಂಧನ ಕ್ಷಮತೆಯ ಮೇಲೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದು ವಿಸ್ತಾರವಾಗಿ ಹರಡಿರುವ ಭಾರತೀಯ ದ್ವಿಚಕ್ರ ಮಾರುಕಟ್ಟೆಯಲ್ಲಿ 125 ಸಿಸಿ ಬೈಕ್ ಗಳ ಯಶಸ್ಸಿಗೆ ಕಾರಣವಾಗಿದೆ. ಹಾಗಿರುವಾಗ ದೇಶದ ಮುಂಚೂಣಿಯ ಸಂಸ್ಥೆಗಳು ಕೆಲವು ಜನಪ್ರಿಯ ಮಾದರಿಗಳನ್ನು ಒದಗಿಸುತ್ತಿದೆ. ಪ್ರಸ್ತುತ ಲೇಖನದಲ್ಲಿ 2016ರಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಎಂಟು ಬೈಕ್ ಗಳ ಬಗ್ಗೆ ಚರ್ಚಿಸಲಿದ್ದೇವೆ.

08. ಹೀರೊ ಇಗ್ನಿಟರ್

08. ಹೀರೊ ಇಗ್ನಿಟರ್

125 ಸಿಸಿ ವಿಭಾಗದಲ್ಲೂ ಗುರುತಿಸಿಕೊಂಡಿರೂ ಹೀರೊ ಇಗ್ನಿಟರ್ ಬೈಕ್ ನಿರ್ಮಾಣದಲ್ಲಿ ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದೆ. ಇದರಲ್ಲಿರುವ 124.7 ಸಿಸಿ ಎಂಜಿನ್ 11 ಎನ್ ಎಂ ತಿರುಗುಬಲದಲ್ಲಿ 11ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಹೀರೊ ಇಗ್ನಿಟರ್ - 55 ಕೀ.ಮೀ. ಮೈಲೇಜ್

ಹೀರೊ ಇಗ್ನಿಟರ್ - 55 ಕೀ.ಮೀ. ಮೈಲೇಜ್

ಡ್ರಮ್ ಮತ್ತು ಡಿಸ್ಕ್ ಗಳೆಂಬ ಎರಡು ವೆರಿಯಂಟ್ ಗಳಲ್ಲಿ ಹೀರೊ ಇಗ್ನಿಟರ್ ಲಭ್ಯವಿರುತ್ತದೆ. ಇದು ಅನುಕ್ರಮವಾಗಿ 61,576 ಹಾಗೂ 63,713 ರು.ಗಳಷ್ಟು (ಬೆಂಗಳೂರು ಎಕ್ಸ್ ಶೋ ರೂಂ) ದುಬಾರಿಯೆನಿಸುತ್ತದೆ.

07. ಬಜಾಜ್ ಡಿಸ್ಕವರ್

07. ಬಜಾಜ್ ಡಿಸ್ಕವರ್

ಪಲ್ಸರ್ ಬಳಿಕ ನೆಚ್ಚಿನ ಡಿಸ್ಕವರ್ ಶ್ರೇಣಿಯ ಬೈಕ್ ಗಳನ್ನು ಒದಗಿಸುತ್ತಿರುವ ಬಜಾಜ್ ಬಿಡುಗಡೆ ಮಾಡಿರುವ ಅತ್ಯುತ್ತಮ ಬೈಕ್ ಗಳಲ್ಲಿ ಇದೂ ಒಂದಾಗಿದೆ. ಇದರಲ್ಲಿರುವ 124.6 ಸಿಸಿ ಎಂಜಿನ್ 10.8 ಎನ್ ಎಂ ತಿರುಗುಬಲದಲ್ಲಿ 13 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬಜಾಜ್ ಡಿಸ್ಕವರ್ - ಮೈಲೇಜ್ 55 ಕೀ.ಮೀ.

ಬಜಾಜ್ ಡಿಸ್ಕವರ್ - ಮೈಲೇಜ್ 55 ಕೀ.ಮೀ.

ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಸೌಲಭ್ಯಗಳಲ್ಲಿ ದೊರಕುವ ಬಜಾಜ್ ಡಿಸ್ಕವರ್ ಅನುಕ್ರಮವಾಗಿ 53,935 ಮತ್ತು 51,799 ರು.ಗಳಷ್ಟು (ಬೆಂಗಳೂರು ಎಕ್ಸ್ ಶೋ ರೂಂ) ದುಬಾರಿಯೆನಿಸುತ್ತದೆ. ಅಲ್ಲದೆ ಪ್ರತಿ ಲೀಟರ್ ಗೆ 55 ಕೀ.ಮೀ. ಮೈಲೇಜ್ ನೀಡಲಿದೆ.

06. ಸುಜುಕಿ ಸ್ಲಿಂಗ್ ಶಾಟ್ ಪ್ಲಸ್

06. ಸುಜುಕಿ ಸ್ಲಿಂಗ್ ಶಾಟ್ ಪ್ಲಸ್

ಗ್ರಾಫಿಕ್ಸ್ ಗಳಿಂದ ಹೊಳಪು ಮೂಡಿಸಿರುವ ಸುಜುಕಿ ಸ್ಲಿಂಗ್ ಶಾಟ್ ಪ್ಲಸ್ ಅತ್ಯುತ್ತಮ ಬಣ್ಣಗಳ ಮಿಶ್ರಣವಾಗಿದೆ. ಭಾರತದಲ್ಲಿ ಹೆಚ್ಚು ಜನಪ್ರಿಯತೆ ಸಾಧಿಸದಿದ್ದರೂ ಇದರಲ್ಲಿರುವ 124 ಸಿಸಿ ಎಂಜಿನ್ 10 ಎನ್ ಎಂ ತಿರುಗುಬಲದಲ್ಲಿ 8.5 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಸುಜುಕಿ ಸ್ಲಿಂಗ್ ಶಾಟ್ ಪ್ಲಸ್ - ಮೈಲೇಜ್ 59 ಕೀ.ಮೀ.

ಸುಜುಕಿ ಸ್ಲಿಂಗ್ ಶಾಟ್ ಪ್ಲಸ್ - ಮೈಲೇಜ್ 59 ಕೀ.ಮೀ.

ಸುಜುಕಿ ಸ್ಲಿಂಗ್ ಶಾಟ್ ಪ್ಲಸ್ ಬೆಂಗಳೂರು ಆನ್ ರೋಡ್ ಬೆಲೆ 64469 ರು.ಗಳಾಗಿದೆ. ಅಂತೆಯೇ ಪ್ರತಿ ಲೀಟರ್ ಗೆ ಪರಿಣಾಮಕಾರಿ 59 ಕೀ.ಮೀ. ಮೈಲೇಜ್ ನೀಡುವಷ್ಟು ಸಾಮರ್ಥ್ಯ ಹೊಂದಿದೆ.

05. ಹೋಂಡಾ ಸಿಬಿ ಶೈನ್

05. ಹೋಂಡಾ ಸಿಬಿ ಶೈನ್

ದೇಶದ ನಂ.1 ಕಾರ್ಯನಿರ್ವಾಹಕ ಅಥವಾ 125 ಸಿಸಿ ಬೈಕ್ ಆಗಿರುವ ಹೋಂಡಾ ಸಿಬಿ ಶೈನ್ ಗರಿಷ್ಠ ಮಾರಾಟವನ್ನು ಗಿಟ್ಟಿಸಿಕೊಳ್ಳುತ್ತಿದೆ. ಅತ್ಯುತ್ತಮ ವಿನ್ಯಾಸ, ನಿರ್ವಹಣೆ, ಎಂಜಿನ್ ಕ್ಷಮತೆ ಹೀಗೆ ಎಲ್ಲ ವಿಭಾಗದಲ್ಲೂ ಹೋಂಡಾ ಸಿಬಿ ಶೈನ್ ಎದುರಾಳಿಗಳಿಲ್ಲದೆ ರಾರಾಜಿಸುತ್ತಿದೆ. ಇದರಲ್ಲಿರುವ 124.7 ಸಿಸಿ ಎಂಜಿನ್ 10.30 ಎನ್ ಎಂ ತಿರುಗುಬಲದಲ್ಲಿ 10.57 ಅಶ್ವಶಕ್ತಿ ಉತ್ಪಾದಿಸಲಿದೆ.

ಹೋಂಡಾ ಸಿಬಿ ಶೈನ್ - 65 ಕೀ.ಮೀ. ಮೈಲೇಜ್

ಹೋಂಡಾ ಸಿಬಿ ಶೈನ್ - 65 ಕೀ.ಮೀ. ಮೈಲೇಜ್

ಹೋಂಡಾ ಸಿಬಿ ಶೈನ್ ಸೆಲ್ಪ್ ಡ್ರಮ್, ಸೆಲ್ಪ್ ಡಿಸ್ಕ್ ಮತ್ತು ಸೆಲ್ಪ್ ಡಿಸ್ಕ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಇವುಗಳು ಬೆಂಗಳೂರು ಆನ್ ರೋಡ್ 67,955, 70,663 ಮತ್ತು 74,067 ರು.ಗಳಷ್ಟು ದುಬಾರಿಯೆನಿಸುತ್ತದೆ. ಅಂತೆಯೇ ಪ್ರತಿ ಲೀಟರ್ ಗೆ 65 ಕೀ.ಮೀ. ಗಳ ಅಮೋಘ ಮೈಲೇಜ್ ಕಾಯ್ದುಕೊಂಡಿದೆ.

04. ಹೀರೊ ಗ್ಲಾಮರ್ ಎಫ್ ಐ

04. ಹೀರೊ ಗ್ಲಾಮರ್ ಎಫ್ ಐ

ಹೆಸರಲ್ಲೇ ಸೂಚಿಸಿರುವಂತೆಯೇ ಹೀರೊ ಗ್ಲಾಮರ್ ಎಫ್ಐ, ತನ್ನ ಅಂದತೆಯಿಂದಲೇ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಇದರಲ್ಲಿರುವ 124.8 ಸಿಸಿ ಎಂಜಿನ್ 10.35 ಎನ್ ಎಂ ತಿರುಗುಬಲದಲ್ಲಿ 9 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

 ಹೀರೊ ಗ್ಲಾಮರ್ - 72 ಕೀ.ಮೀ. ಮೈಲೇಜ್

ಹೀರೊ ಗ್ಲಾಮರ್ - 72 ಕೀ.ಮೀ. ಮೈಲೇಜ್

ಹೀರೊ ಗ್ಲಾಮರ್ ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಆವೃತ್ತಿಯು ಅನುಕ್ರಮವಾಗಿ 56,725 ಮತ್ತು 58,825 ರು.ಗಳಷ್ಟು (ಬೆಂಗಳೂರು ಎಕ್ಸ್ ಶೋ ರೂಂ) ದುಬಾರಿಯೆನಿಸಲಿದೆ. ಅಲ್ಲದೆ ಪ್ರತಿ ಲೀಟರ್ ಗೆ 72 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

03. ಟಿವಿಎಸ್ ಫಿನಿಕ್ಸ್

03. ಟಿವಿಎಸ್ ಫಿನಿಕ್ಸ್

ದೇಶದ ಮಾರುಕಟ್ಟೆಯಲ್ಲಿ ಅತ್ಯುತ್ತಮ ಸ್ಕೂಟರ್ ಗಳನ್ನು ಒದಗಿಸುತ್ತಿರುವ ಟಿವಿಎಸ್ ಜನಪ್ರಿಯ ಬೈಕ್ ಗಳಲ್ಲಿ ಫಿನಿಕ್ಸ್ ಒಂದಾಗಿದೆ. ಇದರಲ್ಲಿರುವ 124.5 ಸಿಸಿ ಎಂಜಿನ್ 10.8 ಎನ್ ಎಂ ತಿರುಗುಬಲದಲ್ಲಿ 11 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಟಿವಿಎಸ್ ಫಿನಿಕ್ಸ್ - 77 ಕೀ.ಮೀ. ಮೈಲೇಜ್

ಟಿವಿಎಸ್ ಫಿನಿಕ್ಸ್ - 77 ಕೀ.ಮೀ. ಮೈಲೇಜ್

ಟಿವಿಎಸ್ ಫಿನಿಕ್ಸ್ ಪ್ರತಿ ಲೀಟರ್ ಗೆ 77 ಕೀ.ಮೀ. ಮೈಲೇಜ್ ನೀಡುವಷ್ಟು ಸಕ್ಷಮವಾಗಿದೆ. ಇದರ ಡಿಸ್ಕ್ ಮತ್ತು ಡ್ರಮ್ ಬ್ರೇಕ್ ಆವೃತ್ತಿಯು ಅನುಕ್ರಮವಾಗಿ 55619 ಮತ್ತು 53531 ರು.ಗಳಷ್ಟು (ಬೆಂಗಳೂರು ಎಕ್ಸ್ ಶೋ ರೂಂ) ದುಬಾರಿಯೆನಿಸಲಿದೆ.

02. ಯಮಹಾ ಸೆಲ್ಯೂಟೊ

02. ಯಮಹಾ ಸೆಲ್ಯೂಟೊ

ಮಾರುಕಟ್ಟೆಯಲ್ಲಿ ವೈಫಲ್ಯ ಅನುಭವಿಸಿರುವ ಮಗದೊಂದು ಬೈಕ್ ಇದಾಗಿದೆ. ಆದರೂ ಮೈಲೇಜ್ ವಿಚಾರದಲ್ಲಿ ಮಾತ್ರ ಯಾವುದೇ ರಾಜಿಗೂ ತಯಾರಾಗಿಲ್ಲ. ಯಮಹಾ ಸೆಲ್ಯೂಟೊದಲ್ಲಿರುವ 125 ಸಿಸಿ ಎಂಜಿನ್ 10.1 ಎನ್ ಎಂ ತಿರುಗುಬಲದಲ್ಲಿ 8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಯಮಹಾ ಸೆಲ್ಯೂಟೊ

ಯಮಹಾ ಸೆಲ್ಯೂಟೊ

ಯಮಹಾ ಸೆಲ್ಯೂಟೊ 52,600 ರು.ಗಳಷ್ಟು (ದೆಹಲಿ ಎಕ್ಸ್ ಶೋ ರೂಂ) ದುಬಾರಿಯೆನಿಸಲಿದ್ದು, ಪ್ರತಿ ಲೀಟರ್ ಗೆ 78 ಕೀ.ಮೀ. ಮೈಲೇಜ್ ನೀಡುವಷ್ಟು ಸಾಮರ್ಥ್ಯ ಹೊಂದಿರಲಿದೆ.

 01. ಹೀರೊ ಸೂಪರ್ ಸ್ಪ್ಲೆಂಡರ್

01. ಹೀರೊ ಸೂಪರ್ ಸ್ಪ್ಲೆಂಡರ್

ನಿಮಗಿದೂ ಗೊತ್ತೆ? ದೇಶದ ಸರ್ವಕಾಲಿಕ ಶ್ರೇಷ್ಠ ಬೈಕ್ ಸ್ಪ್ಲೆಂಡರ್ 125 ಸಿಸಿ ವಿಭಾಗದಲ್ಲೂ ಗರಿಷ್ಠ ಮೈಲೇಜ್ ಬೈಕ್ ಒದಗಿಸುತ್ತಿದೆ. ಇದು ಸೂಪರ್ ಸ್ಪ್ಲೆಂಡರ್ ಎಂದು ಹೆಸರಿಸಿಕೊಂಡಿದೆ. ಸೂಪರ್ ಸ್ಪ್ಲೆಂಡರ್ ನಲ್ಲಿರುವ 124.7 ಸಿಸಿ ಎಂಜಿನ್ 10.35 ಎನ್ ಎಂ ತಿರುಗುಬಲದಲ್ಲಿ 9 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೀರೊ ಸೂಪರ್ ಸ್ಪ್ಲೆಂಡರ್

ಹೀರೊ ಸೂಪರ್ ಸ್ಪ್ಲೆಂಡರ್

25 ಸಿಸಿ ವಿಭಾಗದಲ್ಲೂ ದೇಶದ ನಂ.1 ಮೈಲೇಜ್ ಬೈಕ್ ವೆಂಬ ಗೌರವಕ್ಕೆ ಪಾತ್ರವಾಗಿರುವ ಹೀರೊ ಸೂಪರ್ ಸ್ಪ್ಲೆಂಡರ್ ಪ್ರತಿ ಲೀಟರ್ ಗೆ 83 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಡ್ರಮ್ ಬ್ರೇಕ್ ಸೌಲಭ್ಯದಲ್ಲಿ ಮಾತ್ರ ಲಭ್ಯವಿರುವ ಸೂಪರ್ ಸ್ಪ್ಲೆಂಡರ್ 54,700 ರು.ಗಳಷ್ಟು (ಬೆಂಗಳೂರು ಎಕ್ಸ್ ಶೋ ರೂಂ) ದುಬಾರಿಯೆನಿಸುತ್ತದೆ.

ದೇಶದ ಅತ್ಯುತ್ತಮ 125 ಸಿಸಿ ಮೈಲೇಜ್ ಬೈಕ್ ಗಳು

ಇಲ್ಲಿ ಪಟ್ಟಿಯಲ್ಲಿ ಕೊಟ್ಟಿರುವ ಬೈಕ್ ಗಳ ಪೈಕಿ ಯಾವುದಾದರೊಂದು ನಿಮ್ಮ ಬಳಿಯಿದ್ದಲ್ಲಿ ನೈಜ ರಸ್ತೆ ಪರಿಸ್ಥಿತಿಯಲ್ಲಿ ಅವುಗಳು ನೀಡುವ ಮೈಲೇಜ್ ವಿವರವನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಲು ಮರೆಯದಿರಿ.

Most Read Articles

Kannada
English summary
Can You Get 80 km/l On Your Bike? Top 8 Bikes In 125cc Segment
Story first published: Friday, May 6, 2016, 17:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X