ಎನ್‌ಫೀಲ್ಡ್ ಥಂಡರ್ ಬರ್ಡ್ vs ಬಜಾಜ್ ಅವೆಂಜರ್; ಗೆಲುವು ಯಾರಿಗೆ?

By Nagaraja

ಹೊಸ ಸ್ವರೂಪದೊಂದಿಗೆ ಈಗಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ಬಜಾಜ್ ಅವೆಂಜರ್ 220 ಹೆಚ್ಚಿನ ಭರವಸೆಯನ್ನು ಮೂಡಿಸಿದೆ. ಹಳೆಯ ಅವೆಂಜರ್ ಮಾದರಿಗಳಿಗೆ ಹೋಲಿಸಿದಾಗ ಹೊಸ ಅವೆಂಜರ್ ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ.

Also Read: ಬಜಾಜ್ ಅವೆಂಜರ್ ಕ್ರೂಸ್ 220, ಸ್ಟ್ರೀಟ್ 220, ಸ್ಟ್ರೀಟ್ 150 ಬಿಡುಗಡೆ ಮುಂದಕ್ಕೆ ಓದಿ

ಹಗುರ ಕ್ರೂಸರ್ ವಿಭಾಗದಲ್ಲಿ ಗುರುತಿಸಿಕೊಳ್ಳುವ ಅವೆಂಜರ್ 200 ವಿಭಾಗದಲ್ಲಿ ಅದ್ಭುತ ಚಾಲನಾ ಅನುಭವ ನೀಡಲಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗಿದ್ದರೂ ಇದು ಬಲಿಷ್ಠ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 350ಸಿಸಿ ಮಾದರಿಗೆ ಸವಾಲಾದಿತೇ ಎಂಬುದಕ್ಕೆ ಈ ಲೇಖನದ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವುದು.

ಬೆಲೆ ಹೋಲಿಕೆ

ಬೆಲೆ ಹೋಲಿಕೆ

  • ರಾಯಲ್ ಎನ್‌ಫೀಲ್ಡ್ ಥಂಡರ್ ಬರ್ಡ್ 350: 1.48 ಲಕ್ಷ ರು. (ಆನ್ ರೋಡ್ ಬೆಲೆ ದೆಹಲಿ)
  • ಬಜಾಜ್ ಅವೆಂಜರ್ ಕ್ರೂಸ್ 220: 92,000 ರು. (ಅಂದಾಜು ಆನ್ ರೋಡ್ ಬೆಲೆ ದೆಹಲಿ)
  • ವಿನ್ಯಾಸ -ಥಂಡರ್ ಬರ್ಡ್

    ವಿನ್ಯಾಸ -ಥಂಡರ್ ಬರ್ಡ್

    ಕ್ಲಾಸಿಕ್ ಟೂರಿಂಗ್ ಶೈಲಿಯನ್ನು ಹೊಂದಿರುವ ರಾಯನ್ ಎನ್ ಫೀಲ್ಡ್ ಥಂಡರ್ ಬರ್ಡ್ 350, ದೃಢವಾದ ಮೈಕಟ್ಟನ್ನು ಹೊಂದಿದೆ. ಎತ್ತರವಾದ ಹ್ಯಾಂಡಲ್ ಬಾಂರ್, ಬಾಗಿದ 20 ಲೀಟರ್ ಇಂಧನ ಟ್ಯಾಂಕ್, ವಿಭಜಿತ ಸೀಟು, ಮುಂಭಾಗದಲ್ಲಿ ಉದ್ದವಾದ ಸಸ್ಪೆನ್ಷನ್ ಇತ್ಯಾದಿ ಸೌಲಭ್ಯಗಳು ಆರಾಮದಾಯಕ ಚಾಲನೆಗೆ ನೆರವಾಗಲಿದೆ.

    ವಿನ್ಯಾಸ - ಅವೆಂಜರ್

    ವಿನ್ಯಾಸ - ಅವೆಂಜರ್

    220 ಹಗುರ ಭಾರದ ಕ್ರೂಸ್ ಶೈಲಿಯನ್ನು ಮೈಗೂಡಿಸಿ ಬಂದಿರುವ ಅವೆಂಜರ್ ತನ್ನ ಹಿಂದಿನ ಮಾದರಿಗಳಿಗೆ ಸಾಮ್ಯತೆಯನ್ನು ಹೊಂದಿದೆ. ಹಾಗಿದ್ದರೂ ಇದರಲ್ಲೂ ಎತ್ತರವಾದ ಹ್ಯಾಂಡಲ್ ಬಾರ್, ಕಡಿಮೆ ಎತ್ತರದ ಆರಾಮದ ಆಸನ, ಉದ್ದವಾದ ಫ್ರಂಟ್ ಫಾರ್ಕ್, ಬ್ಯಾಕ್ ಸೀಟ್ ರೆಸ್ಟ್ ಮುಂತಾದ ವ್ಯವಸ್ಥೆಗಳಿರಲಿದೆ.

    ವೈಶಿಷ್ಟ್ಯಗಳು - ಥಂಡರ್ ಬರ್ಡ್

    ವೈಶಿಷ್ಟ್ಯಗಳು - ಥಂಡರ್ ಬರ್ಡ್

    ಸೆಮಿ ಡಿಜಿಟಲ್ ಮೀಟರ್, ಬ್ಲ್ಯಾಕ್ ಬ್ಯಾಕ್ ಲಿಟ್ ಡಿಸ್ ಪ್ಲೇ, ಮುಂಭಾಗ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು 20 ಲೀಟರ್ ಇಂಧನ ಟ್ಯಾಂಕ್ ಸೌಲಭ್ಯಗಳು ದೊರಕಲಿದೆ.

    ವೈಶಿಷ್ಟ್ಯಗಳು - ಅವೆಂಜರ್

    ವೈಶಿಷ್ಟ್ಯಗಳು - ಅವೆಂಜರ್

    ಅವೆಂಜರ್ ಸಹ ಸೆಮಿ ಡಿಟಿಟಲ್ ಮೀಟರ್ ಸೌಲಭ್ಯದೊಂದಿಗೆ ಆಗಮನವಾಗುತ್ತಿದ್ದು, ವಾರ್ನಿಂಗ್ ಲ್ಯಾಂಪ್ ಜೊತೆ ಫ್ಲೂಯಲ್ ಗೇಜ್ ಇರಲಿದೆ. ಅಂತೆಯೇ ಮುಂಭಾಗದಲ್ಲಿ ಡಿಸ್ಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಸೌಲಭ್ಯವಿರಲಿದೆ.

    ಎಂಜಿನ್ ತಾಂತ್ರಿಕತೆ - ಥಂಡರ್ ಬರ್ಡ್

    ಎಂಜಿನ್ ತಾಂತ್ರಿಕತೆ - ಥಂಡರ್ ಬರ್ಡ್

    • 346 ಸಿಸಿ ಸಿಂಗಲ್ ಸಿಲಿಂಡರ್,
    • ಏರ್ ಕೂಲ್ಡ್,
    • 19.8 ಅಶ್ವಶಕ್ತಿ,
    • 28 ಎನ್‌ಎಂ ತಿರುಗುಬಲ
    • ಫೈವ್ ಸ್ಪೀಡ್ ಗೇರ್ ಬಾಕ್ಸ್
    • ಎಂಜಿನ್ ತಾಂತ್ರಿಕತೆ - ಅವೆಂಜರ್

      ಎಂಜಿನ್ ತಾಂತ್ರಿಕತೆ - ಅವೆಂಜರ್

      • 219.9 ಸಿಸಿ ಸಿಂಗಲ್ ಸಿಲಿಂಡರ್,
      • ಒಯಿಲ್ ಕೂಲ್ಡ್,
      • 18.7 ಅಶ್ವಶಕ್ತಿ,
      • 17.5 ಎನ್‌ಎಂ ತಿರುಗುಬಲ,
      • ಫೈವ್ ಸ್ಪೀಡ್ ಗೇರ್ ಬಾಕ್ಸ್
      • ಮೈಲೇಜ್, ಭಾರ - ಥಂಡರ್ ಬರ್ಡ್

        ಮೈಲೇಜ್, ಭಾರ - ಥಂಡರ್ ಬರ್ಡ್

        ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ 350 ಪ್ರತಿ ಲೀಟರ್ ಗೆ 51 ಕೀ.ಮೀ. ಮೈಲೇಜ್ ನೀಡಲಿದೆ. ಆದರೂ ನೈಜ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡುಬರಲಿದೆ.

        ಭಾರ: 192 ಕೆ.ಜಿ.

        ಮೈಲೇಜ್, ಭಾರ - ಅವೆಂಜರ್

        ಮೈಲೇಜ್, ಭಾರ - ಅವೆಂಜರ್

        ಬಜಾಜ್ ಅವೆಂಜರ್ 220 ಕ್ರೂಸರ್ ಬೈಕ್ ಪ್ರತಿ ಲೀಟರ್ ಗೆ ಅಂದಾಜು 40 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

        ಭಾರ: 155 ಕೆ.ಜಿ

        ಚಾಲನೆ ಮತ್ತು ಹ್ಯಾಂಡ್ಲಿಂಗ್ - ಥಂಡರ್ ಬರ್ಡ್

        ಚಾಲನೆ ಮತ್ತು ಹ್ಯಾಂಡ್ಲಿಂಗ್ - ಥಂಡರ್ ಬರ್ಡ್

        ಅವೆಂಜರ್ ಗಿಂತಲೂ ಹೆಚ್ಚು ಎತ್ತರ ಹಾಗೂ ಭಾರವನ್ನು ಹೊಂದಿರುವ ಹೊಂದಿರುವ ಥಂಡರ್ ಬರ್ಡ್ ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ. ಒಂದು ಕ್ರೂಸರ್ ಬೈಕ್ ಗೆ ಬೇಕಾದ ಎಲ್ಲ ಅಗತ್ಯ ಬೇಡಿಕೆಗಳನ್ನು ಥಂಡರ್ ಬರ್ಡ್ ಈಡೇರಿಸಿಕೊಂಡಿದೆ. ಅಲ್ಲದೆ ದೂರ ಪ್ರಯಾಣಕ್ಕೆ ಹೆಚ್ಚು ಸೂಕ್ತವಾಗಲಿದೆ.

        ಚಾಲನೆ ಮತ್ತು ಹ್ಯಾಂಡ್ಲಿಂಗ್ - ಅವೆಂಜರ್

        ಚಾಲನೆ ಮತ್ತು ಹ್ಯಾಂಡ್ಲಿಂಗ್ - ಅವೆಂಜರ್

        ಇನ್ನೊಂದೆಡೆ ಹಗುರ ಭಾರ ಹೊಂದಿರುವ ಅವೆಂಜರ್ ಸಹ ಈ ವಿಭಾಗದಲ್ಲಿ ಪರಿಣಾಮಕಾರಿ ಎನಿಸಿಕೊಳ್ಳಲಿದೆ. ಆದರೆ ಕಡಿಮೆ ಎತ್ತರದ ಚಾಲನಾ ಸ್ಥಾನ ಎಲ್ಲ ವರ್ಗದ ಜನರಿಗೂ ಇಷ್ಟವಾಗಲಾರದು. ಆದರೂ ದೈನಂದಿನ ನಗರ ಹಾಗೂ ಹೈವೇ ಚಾಲನೆಗೆ ಹೆಚ್ಚು ಸೂಕ್ತವೆನಿಸಲಿದೆ.

        ಅಂತಿಮ ತೀರ್ಪು

        ಅಂತಿಮ ತೀರ್ಪು

        ನಿಮ್ಮ ಬಜೆಟ್ ಒಂದು ಲಕ್ಷಕ್ಕೂ ಮೀರಿದ್ದಲ್ಲಿ ಕಣ್ಣು ಮುಚ್ಚಿಕೊಂಡು ಶಕ್ತಿಶಾಲಿ ಥಂಡರ್ ಬರ್ಡ್ 350 ಆಯ್ಕೆ ಮಾಡಬಹುದಾಗಿದೆ. ಇದು ಈ ಬೆಲೆಗೆ ಅತ್ಯುತ್ತಮ ಚಾಲನಾ ಅನುಭವ ಹಾಗೂ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ. ಇನ್ನೊಂದೆಡೆ ಬಜೆಟ್ ಕಡಿಮೆ ಹಾಗೂ ಹಗುರ ಭಾರದ ಕ್ರೂಸರ್ ಶೈಲಿಯನ್ನು ಆಯ್ಕೆ ಮಾಡುವುದಾದ್ದಲ್ಲಿ ಅವೆಂಜರ್ 220 ಅತ್ಯುತ್ತಮ ಆಯ್ಕೆಯಾಗಿರಲಿದೆ. ಪ್ರಸ್ತುತ ಎಲ್ಲ ವಿಭಾಗದಲ್ಲೂ ಅವೆಂಜರ್ ಹಿಂದಿಕ್ಕುವಲ್ಲಿ ಥಂಡರ್ ಬರ್ಡ್ ಯಶ ಕಂಡಿದೆ.

        ರಾಯಲ್ ಎನ್‌ಫೀಲ್ಡ್ ಥಂಡರ್ ಬರ್ಡ್ 350 vs ಬಜಾಜ್ ಅವೆಂಜರ್ 220 ಕ್ರೂಸ್

        ಬಜಾಜ್ ಅವೆಂಜರ್ ಸ್ಟ್ರೀಟ್ 150 ಖರೀದಿಗೆ ಯೋಗ್ಯವೇ? ಮುಂದಕ್ಕೆ ಓದಿ


Most Read Articles

Kannada
English summary
Royal Enfield Thunderbird vs. Bajaj Avenger: Feel Like God Or Be God?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X