ಕೆಟಿಎಂ vs ಬೆನೆಲ್ಲಿ: ಶಕ್ತಿಶಾಲಿ ಬೈಕ್ ಗಳ ಮಹಾ ಸಮರ

By Nagaraja

ವಿಸ್ತಾರವಾಗಿ ಹರಡಿರುವ ಭಾರತ ವಾಹನ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ನಿರ್ವಹಣಾ ಮೋಟಾರು ಸೈಕಲ್ ಗಳಿಗೆ ಅತಿ ಹೆಚ್ಚಿನ ಬೇಡಿಕೆಯಿದೆ. ಪ್ರಸ್ತುತ ಈ ವಿಭಾಗದಲ್ಲಿ ಕೆಟಿಎಂ ಡ್ಯೂಕ್ ಅಧಿಪತ್ಯ ಸ್ಥಾಪಿಸಿದರೂ ಹೊಸ ಹೊಸ ಉತ್ಪನ್ನಗಳ ಆಗಮನದೊಂದಿಗೆ ಪೈಪೋಟಿಗೆ ಇನ್ನಷ್ಟು ಚುರುಕು ಮುಟ್ಟಿಸಿದೆ.

ಪ್ರಸ್ತುತ ಈ ಲೇಖನದಲ್ಲಿ ಕೆಟಿಎಂ ಡ್ಯೂಕ್ 390 ಹಾಗೂ ಬೆನೆಲ್ಲಿ ಟಿಎನ್ ಟಿ 300 ಬೈಕ್ ಗಳ ಹೋಲಿಕೆ ಮಾಡುವ ಪ್ರಯತ್ನ ಮಾಡಲಿದ್ದೇವೆ. ಹಾಗಿದ್ದರೆ 300 ಸಿಸಿ ಅಥವಾ ಮೇಲ್ಪಟ್ಟ ವಿಭಾಗದಲ್ಲಿ ರೇಸ್ ಗೆ ಸಿದ್ಧಗೊಂಡಿರುವ ಆಸ್ಟ್ರೀಯಾ ಹಾಗೂ ಇಟಲಿಯ ಈ ಐಕಾನಿಕ್ ಬೈಕ್ ಗಳ ನಡುವಣ ವಿಜೇತರು ಯಾರು?

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)

ಕೆಟಿಎಂ ಡ್ಯೂಕ್ 390: 1.92 ಲಕ್ಷ ರು.

ಬೆನೆಲ್ಲಿ ಟಿಎನ್ ಟಿ 300: 2.88 ಲಕ್ಷ ರು.

ವಿನ್ಯಾಸ - ಕೆಟಿಎಂ ಡ್ಯೂಕ್ 390

ವಿನ್ಯಾಸ - ಕೆಟಿಎಂ ಡ್ಯೂಕ್ 390

ಮೂಲತ: ಕೆಟಿಎಂ ಡ್ಯೂಕ್ 390 ನೆಕ್ಡ್ ಸ್ಟ್ರೀಟ್ ಫೈಟರ್ ಬೈಕಾಗಿದೆ. ಕಪ್ಪು, ಬೂದು ಹಾಗೂ ಕೇಸರಿ ಬಣ್ಣಗಳ ವಿುಶ್ರಣವು ಹೆಚ್ಚಿನ ಆಕರ್ಷಣೆಯನ್ನು ಪ್ರದಾನ ಮಾಡುತ್ತದೆ.

ವಿನ್ಯಾಸ - ಬೆನೆಲ್ಲಿ ಟಿಎನ್ ಟಿ 300

ವಿನ್ಯಾಸ - ಬೆನೆಲ್ಲಿ ಟಿಎನ್ ಟಿ 300

ಕೆಟಿಎಂಗಿಂತಲೂ ಪ್ರೀಮಿಯ ವಿನ್ಯಾಸವನ್ನು ಬೆನೆಲ್ಲಿ ಕಾಯ್ದುಕೊಂಡಿದೆ. ಆಧುನಿಕತೆಗೆ ತಕ್ಕ ವಿನ್ಯಾಸವು ಈ ಇಟಲಿ ಸಂಸ್ಥೆಯನ್ನು ಗ್ರಾಹಕರತ್ತ ಹೆಚ್ಚೆಚ್ಚು ಸೆಳೆಯುತ್ತಿದೆ.

ವಿಶೇಷತೆ- ಕೆಟಿಎಂ ಡ್ಯೂಕ್ 390

ವಿಶೇಷತೆ- ಕೆಟಿಎಂ ಡ್ಯೂಕ್ 390

ಕೆಟಿಎಂ ಡ್ಯೂಕ್ 390 ಬೈಕ್, ಡಬ್ಲ್ಯುಪಿ ಅಪ್ ಸೈಡ್ ಡೌನ್ ಫ್ರಂಟ್ ಫಾರ್ಕ್ ಹಾಗೂ ಹಿಂದುಗಡೆ ಮೊನೊಶಾಕ್ ಪಡೆದುಕೊಂಡಿದೆ. ಇನ್ನು ಸಂಪೂರ್ಣವಾದ ಡಿಜಿಟಲ್ ಮೀಟರ್, 17 ಇಂಚಿನ ಅಲಾಯ್ ವೀಲ್ ಮತ್ತು 11 ಲೀಟರ್ ಇಂಧನ ಟ್ಯಾಂಕ್ ಕಾಣಬಹುದಾಗಿದೆ.

ವಿಶೇಷತೆ - ಬೆನೆಲ್ಲಿ ಟಿಎನ್ ಟಿ 300

ವಿಶೇಷತೆ - ಬೆನೆಲ್ಲಿ ಟಿಎನ್ ಟಿ 300

ಇನ್ನೊಂದೆಡೆ ಬೆನೆಲ್ಲಿ ಟಿಎನ್ ಟಿ 300 ಬೈಕ್, ಫ್ರಂಟ್ ಶಾಕ್ಸ್ ಜೊತೆ ಹೊರಿಝೋಂಡಲ್ ಆಫ್ ಸೆಟ್ ಮೊನೊಶಾಕ್ಸ್ ಇದರಲ್ಲಿರಲಿದೆ. ಇನ್ನು ಅನಾಲಾಗ್ ಜೊತೆ ಡಿಜಿಟಲ್ ಮೀಟರ್ ಅನುಭವವನ್ನು ನೀವು ಸವಿಯಬಹುದಾಗಿದೆ. ಅಂತೆಯೇ 17 ಇಂಚಿನ ಅಲಾಯ್ ವೀಲ್ ಹಾಗೂ 16 ಲೀಟರ್ ಇಂಧನ ಟ್ಯಾಂಕ್ ಇದರಲ್ಲಿರಲಿದೆ.

ಎಂಜಿನ್ ತಾಂತ್ರಿಕತೆ - ಕೆಟಿಎಂ ಡ್ಯೂಕ್ 390

ಎಂಜಿನ್ ತಾಂತ್ರಿಕತೆ - ಕೆಟಿಎಂ ಡ್ಯೂಕ್ 390

373 ಸಿಸಿ, ಸಿಂಗಲ್ ಸಿಲಿಂಡರ್, ವಾಟರ್ ಕೂಲ್ಡ್

44 ಅಶ್ವಶಕ್ತಿ, 35 ತಿರುಗುಬಲ

ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್

139 ಕೆ.ಜಿ

ಎಂಜಿನ್ ತಾಂತ್ರಿಕತೆ - ಬೆನೆಲ್ಲಿ ಟಿಎನ್ ಟಿ 300

ಎಂಜಿನ್ ತಾಂತ್ರಿಕತೆ - ಬೆನೆಲ್ಲಿ ಟಿಎನ್ ಟಿ 300

300 ಸಿಸಿ, ಲಿಕ್ವಿಡ್ ಕೂಲ್ಡ್, ಪ್ಯಾರಲಲ್ ಟ್ವಿನ್ ಸಿಲಿಂಡರ್ ಎಂಜಿನ್

38 ಅಶ್ವಶಕ್ತಿ, 27 ತಿರುಗುಬಲ

ಸಿಕ್ಸ್ ಸ್ಪೀಡ್ ಗೇರ್ ಬಾಕ್ಸ್

196 ಕೆ.ಜಿ.

ಸುರಕ್ಷತೆ - ಕೆಟಿಎಂ ಡ್ಯೂಕ್ 390

ಸುರಕ್ಷತೆ - ಕೆಟಿಎಂ ಡ್ಯೂಕ್ 390

ಸಿಂಗಲ್ ಡಿಸ್ಕ್ ಬ್ರೇಕ್,

ಸ್ಟ್ಯಾಂಡರ್ಡ್ ಎಬಿಎಸ್

ಸುರಕ್ಷತೆ - ಬೆನೆಲ್ಲಿ ಟಿಎನ್ ಟಿ 300

ಸುರಕ್ಷತೆ - ಬೆನೆಲ್ಲಿ ಟಿಎನ್ ಟಿ 300

ಡ್ಯುಯಲ್ ಫ್ರಂಟ್ ಡಿಸ್ಕ್ ಬ್ರೇಕ್,

ಹಿಂದುಗಡೆ ಸಿಂಗಲ್ ಡಿಸ್ಕ್ ಬ್ರೇಕ್

ಅಂತಿಮ ತೀರ್ಪು

ಅಂತಿಮ ತೀರ್ಪು

ಕೆಟಿಎಂ ಡ್ಯೂಕ್ 300 ಮಾದರಿಗೆ ಹೋಲಿಸಿದಾಗ ಬೆನೆಲ್ಲಿ ಟಿಎನ್ ಟಿ 300 ಪ್ರೀಮಿಯಂ ವಿಭಾಗದಲ್ಲಿ ಗುರುತಿಸಿಕೊಳ್ಳುತ್ತಿದೆ. 300 ಸಿಸಿ ಅಥವಾ ಮೇಲ್ಪಟ್ಟ ವಿಭಾಗದಲ್ಲಿ ಸೆಗ್ಮೆಂಟ್ ಲೀಡರ್ ಆಗಿರುವ ಕೆಟಿಎಂ ಈಗಾಗಲೇ ಕ್ರೀಡಾ ಪ್ರಿಯರ ಮನದಲ್ಲಿ ಹೆಚ್ಚಿನ ಶ್ರೇಯಸ್ಸನ್ನು ಗಿಟ್ಟಿಸಿಕೊಂಡಿದೆ. ಒಟ್ಟಿನಲ್ಲಿ ಈ ಎರಡು ನಿರ್ವಹಣಾ ಬೈಕ್ ಗಳು ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ವಿಶಿಷ್ಟವಾಗಿ ಗುರುತಿಸಿಕೊಳ್ಳುತ್ತಿದೆ.

ಕೆಟಿಎಂ ಡ್ಯೂಕ್ 390 Vs ಬೆನೆಲ್ಲಿ ಟಿಎನ್ ಟಿ 300

ಈಗ ನಿಮ್ಮ ಪ್ರಕಾರ ಕೆಟಿಎಂ ಹಾಗೂ ಬೆನೆಲ್ಲಿಗಳ ಪೈಕಿ ಸ್ಟೈಲಿಷ್ ಆಗಿರುವ ಬೈಕ್ ಯಾವುದು? ಯಾಕೆ? ಎಂಬುದರ ಕುರಿತಾಗಿ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಚರ್ಚಿಸಿರಿ.


Most Read Articles

Kannada
English summary
This is a quick comparo between the KTM Duke 390 and the Benelli TNT 300. 
Story first published: Tuesday, March 31, 2015, 12:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X