ಮಹೀಂದ್ರ ಗಸ್ಟೊ 125 ಸಿಸಿ ಸ್ಕೂಟರ್ ವಿಮರ್ಶೆ; ಆಕ್ಟಿವಾಗಿಂತ ಹೇಗೆ ಭಿನ್ನ?

By Nagaraja

ಭಾರತೀಯ ದ್ವಿಚಕ್ರ ವಾಹನ ವಿಭಾಗದಲ್ಲಿ ಕಳೆದೊಂದು ದಶಕದಿಂದಲೂ ಭಾರಿ ಬದಲಾವಣೆಗಳು ಕಂಡುಬರುತ್ತಿದೆ. ತಮ್ಮ ದೈನಂದಿನ ಸವಾರಿಗಾಗಿ ಬೈಕ್ ಆಶ್ರಯಿಸುತ್ತಿರುವ ಜನರೀಗ ನಿಧಾನವಾಗಿ ಸ್ಕೂಟರ್ ಗಳತ್ತ ವಾಲುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಸುಲಭ ಚಾಲನೆ ಹಾಗೂ ಸರಳ ನಿರ್ವಹಣೆಯೇ ಗ್ರಾಹಕರು ಸ್ಕೂಟರ್ ಗಳನ್ನು ಹೆಚ್ಚೆಚ್ಚು ಇಷ್ಟಪಡಲು ಕಾರಣವಾಗಿದೆ. ಈ ನಡುವೆ ವರ್ಷಗಳಿಂದಲೂ ಸ್ಕೂಟರ್ ವಿಭಾಗದಲ್ಲಿ ಹೋಂಡಾ ಅಕ್ಟಿವಾ ತನ್ನ ಅಧಿಪತ್ಯವನ್ನು ಸ್ಥಾಪಿಸುತ್ತಲೇ ಬಂದಿದೆ. ಕೆಲವೊಂದು ಸಾರಿ ಸ್ಪ್ಲೆಂಡರ್ ಮಾರಾಟವನ್ನು ಮೀರಿ ನಿಂತಿರುವ ಆಕ್ಟಿವಾ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿದೆ.

ಹಾಗಿರುವಾಗ ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ನೂತನ ಸ್ಕೂಟರ್ ವೊಂದರ ಪ್ರವೇಶವಾಗುತ್ತಿದೆ. ಅದುವೇ ಮಹೀಂದ್ರ ಗಸ್ಟೊ 125. ಇದಕ್ಕೂ ಮೊದಲು ಗಸ್ಟೊ 110 ಸಿಸಿ ಯಶಸ್ಸಿನ ಬಳಿಕ ಹೆಚ್ಚು ಶಕ್ತಿಶಾಲಿ ಸ್ಕೂಟರ್ ಬಿಡುಗಡೆ ಮಾಡಲು ಸಂಸ್ಥೆ ನಿರ್ಧರಿಸಿತ್ತು. ಪ್ರಸ್ತುತ ಗಸ್ಟೊ 125 ಸ್ಕೂಟರ್ ಗೆ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿಸಲು ಸಾಧ್ಯವೇ ಎಂಬುದನ್ನು ಸಮಗ್ರ ಚಾಲನಾ ವಿಮರ್ಶೆಯ ಮೂಲಕ ಹೇಳಿಕೊಡಲಾಗುವುದು.

ಮಹೀಂದ್ರ ಗಸ್ಟೊ 125 ಸಿಸಿ ಸ್ಕೂಟರ್

ಶೈಲಿ
ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ಗಸ್ಟೊ 125 ವಿನ್ಯಾಸವನ್ನು ರಚಿಸಲಾಗಿದೆ. ಇದರ ಒಟ್ಟಾರೆ ಶೈಲಿಯು ಹೆಚ್ಚು ಕ್ರೀಡಾತ್ಮಕತೆಯನ್ನು ಕಾಪಾಡಿಕೊಂಡಿದೆ. ಮುಂದುಗಡೆ ಕೊಟ್ಟಿರುವ ಏರ್ ವೆಂಟ್ಸ್ ಹಾಗೂ ಟರ್ನ್ ಸಿಗ್ನಲ್ ಗಳು ಸ್ಕೂಟರ್‌ಗೆ ಸ್ಮಾರ್ಟ್ ಲುಕ್ ನೀಡುತ್ತಿದೆ. ಅದ್ಭುತ ರಸ್ತೆ ಸಾನಿಧ್ಯದ ಜೊತೆಗೆ ಕಾಲನ್ನಿಡಲು ಬೇಕಾದಷ್ಟು ಜಾಗವನ್ನು ಕೊಡಲಾಗಿದೆ. ಇದು ಸುಲಭ ನಿರ್ವಹಣೆಗೆ ಸಹಕಾರಿಯಾಗಲಿದೆ. ಗಸ್ಟೊ 125 ನಿಕಟವಾಗಿ ವೀಕ್ಷಿಸಿದ್ದಲ್ಲಿ ಗಸ್ಟೊ 110 ಸಿಸಿ ಮಾದರಿಗೆ ಕೆಲವೊಂದು ಸಾಮತ್ಯೆಗಳನ್ನು ಕಾಣಬಹುದಾಗಿದೆ. ಈ ಎಲ್ಲದರ ನಡುವೆಯೂ ತಾಜಾತನವನ್ನುಂಟು ಮಾಡುತ್ತಿದೆ.

ಎಂಜಿನ್ ತಾಂತ್ರಿಕತೆ

  • 124.5 ಸಿಸಿ, 4 ಸ್ಟ್ರೋಕ್,
  • ಏರ್ ಕೂಲ್ಡ್, ಎಂಟೆಕ್ ಎಂಜಿನ್
  • 8.5 ಅಶ್ವಶಕ್ತಿ (@ 7000 rpm)
  • 10 ಎನ್‌ಎಂ ತಿರುಗುಬಲ (@ 5500 rpm)
  • ಸಿವಿಟಿ ಗೇರ್ ಬಾಕ್ಸ್


ಮೈಲೇಜ್
ಇಂಧನ ಕ್ಷಮತೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮಾಹಿತಿಗಳನ್ನು ಮಹೀಂದ್ರ ಬಹಿರಂಗಪಡಿಸಿಲ್ಲ. ಆದರೆ ನೈಜ ರಸ್ತೆ ಪರಿಸ್ಥಿತಿಯಲ್ಲಿ ಸರಾಸರಿ ವೇಗದಲ್ಲಿ ಚಲಿಸುವಾಗ ಗರಿಷ್ಠ 40ರಿಂದ 45 ಕೀ.ಮೀ. ವರೆಗೂ ಮೈಲೇಜ್ ನಿರೀಕ್ಷೆ ಮಾಡಬಹುದಾಗಿದೆ.

ಪವರ್
ಒಂದು 125 ಸಿಸಿ ಸ್ಕೂಟರ್ ಗೆ ಬೇಕಾದಷ್ಟು ಶಕ್ತಿಯನ್ನು ಗೆಸ್ಟೊ ಪಡೆದುಕೊಂಡಿದೆ. ಅಲ್ಲದೆ ಎಂಜಿನ್ ನಿರ್ವಹಣೆಯು ಪರಿಣಾಮಕಾರಿಯೆನಿಸಿದೆ.

ಸಸ್ಪೆನ್ಷನ್
ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಜೊತೆಗೆ ಏರ್ ಸ್ಪ್ರಿಂಗ್ ಹಾಗೂ ಹಿಂಭಾಗದಲ್ಲಿ ಕಾಯಿಲ್ ವಿಧದ ಹೈಡ್ರಾಲಿಕ್ ಸಸ್ಪೆನ್ಷನ್ ವ್ಯವಸ್ಥೆಗಳನ್ನು ಮಹೀಂದ್ರ ಪಡೆದುಕೊಂಡಿದೆ.

ಚಕ್ರಗಳು
ಗ್ರಾಹಕರು ಬಯಸಿದ್ದಲ್ಲಿ ಮುಂಭಾಗ ಹಾಗೂ ಹಿಂಭಾಗದಲ್ಲಿ ಟ್ಯೂಬ್ ಲೆಸ್ ಚಕ್ರಗಳು (90/90-12) ಲಭ್ಯವಾಗಲಿದೆ.

ಬ್ರೇಕ್
ಮುಂಭಾಗ ಹಾಗೂ ಹಿಂಭಾಗದಲ್ಲಿ 130 ಎಂಎಂ ಮೆಕ್ಯಾನಿಕಲ್ ಡ್ರಮ್ ಬ್ರೇಕ್ ಗಳನ್ನು ಲಗತ್ತಿಸಲಾಗಿದೆ.

ಆಯಾಮ

  • ಉದ್ದ: 1825 ಎಂಎಂ
  • ಅಗಲ: 711 ಎಂಎಂ
  • ಎತ್ತರ: 1188 ಎಂಎಂ
  • ಚಂಕ್ರಾಂತರ: 1275 ಎಂಎಂ

ಸೀಟು ಎತ್ತರ
ಇದೇ ಮೊದಲ ಬಾರಿಗೆ ಎತ್ತರ ಹೊಂದಾಣಿಸಬಹುದಾದ ಸೀಟುಗಳ ಆಯ್ಕೆ ನೀಡಿರುವುದು ಮಹೀಂದ್ರ ಗಸ್ಟೊ ಸ್ಕೂಟರ್‌ನ ಪ್ರಮುಖ ಆಕರ್ಷಣೆಯಾಗಿರಲಿದೆ.

  • ಮೇಲಿನ ಸ್ಥಾನದಲ್ಲಿ: 770 ಎಂಎಂ
  • ಕೆಳಗಿನ ಸ್ಥಾನದಲ್ಲಿ: 735 ಎಂಎಂ


ಗ್ರೌಂಡ್ ಕ್ಲಿಯರನ್ಸ್

ಇದೇ ಮೊದಲ ಬಾರಿಗೆ 125 ಸಿಸಿ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 165 ಎಂಎಂ ಗ್ರೌಂಡ್ ಕ್ಲಿಯರನ್ಸ್ ಅನ್ನು ಮಹೀಂದ್ರ ಗಸ್ಟೊ ನೀಡುತ್ತಿದೆ. ಇದರಿಂತ ತಿರುವುಗಳಲ್ಲೂ ಅತ್ಯುತ್ತಮ ಚಾಲನಾ ಅನುಭವ ನೀಡಲಿದೆ.

ಭಾರ
ಹೋಂಡಾ ಆಕ್ಟಿವಾಗೆ (110 ಕೆ.ಜಿ) ಹೋಲಿಕೆ ಮಾಡಿದಾಗ ಮಹೀಂದ್ರ ಗಸ್ಟೊ ಸ್ವಲ್ಪ ಹೆಚ್ಚು ಭಾರದ ಸ್ಕೂಟರ್ ಎನಿಸಿಕೊಳ್ಳಲಿದೆ. ಇದು 123 ಕೆ.ಜಿ ತೂಕವನ್ನು ಹೊಂದಿರುವದರಿಂದ ಪುರಷರ ತರಹನೇ ಮಹಿಳೆಯರಿಗೂ ಇಷ್ಟವಾಗಲಿದೆ ಎಂಬುದು ಸ್ವಲ್ಪ ಆತಂಕಕ್ಕೀಡು ಮಾಡಿದೆ.

ವೈಶಿಷ್ಟ್ಯಗಳು

  • ಶಕ್ತಿಶಾಲಿ 125 ಸಿಸಿ ಎಂ-ಟೆಕ್ ಎಂಜಿನ್,
  • ಎತ್ತರ ಹೊಂದಾಣಿಸಬಹುದಾದ ಸೀಟು,
  • ರಿಮೋಟ್ ಪ್ಲಿಪ್ ಕೀ,
  • ಫೈಂಡ್ ಮಿ ಲ್ಯಾಂಪ್,
  • ದೊಡ್ಡದಾದ ಟ್ಯೂಬ್ ಲೆಸ್ ಚಕ್ರಗಳು,
  • ಏರ್ ಸ್ಪ್ರಿಂಗ್ ಜೊತೆ ಟೆಲಿಸ್ಕಾಪಿಕ್ ಸಸ್ಪೆನ್ಷನ್,
  • ಗೈಡ್ ಲ್ಯಾಂಪ್,
  • ಈಸಿ ಫ್ರಂಟ್ ಕಿಕ್,
  • ಕ್ವಿಕ್ ಸ್ಟೋರೆಜ್,
  • ಹ್ಯಾಲಗನ್ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಲ್ಯಾಂಪ್,
  • ಸೀಟು ಕೆಳಗಡೆ ಹೆಚ್ಚು ಸ್ಟೋರೆಜ್ ಜಾಗ

ಬಣ್ಣಗಳು

  • ಆರೆಂಜ್ ರಷ್,
  • ಬೋಲ್ಟ್ ವೈಟ್,
  • ಮೊನಾರ್ಕ್ ಬ್ಲ್ಯಾಕ್,
  • ರೀಗಲ್ ರೆಡ್

ಮುನ್ನಡೆ

  • ಆರಾಮದಾಯಕ ಚಾಲನಾ ಸ್ಥಾನ
  • ಹಲವಾರು ಫಸ್ಟ್ ಇನ್ ಕ್ಲಾಸ್ ವೈಶಿಷ್ಟ್ಯಗಳು
  • ಎತ್ತರ ಹೊಂದಾಣಿಸಬಹುದಾದ ಸೀಟು
  • ಹ್ಯಾಲಗನ್ ಹೆಡ್ ಲ್ಯಾಂಪ್ ಜೊತೆ ಎಲ್‌ಇಡಿ ಲ್ಯಾಂಪ್,

ಹಿನ್ನಡೆ

  • ಅತ್ಯುತ್ತಮ ಚಾಲನೆಗಾಗಿ ವೇಗವರ್ಧನೆ ಜಾಸ್ತಿ ಮಾಡಬೇಕಾದ ಅಗತ್ಯವಿದೆ.


ಅಂತಿಮ ತೀರ್ಪು

ಶಕ್ತಿ, ನಿರ್ವಹಣೆ, ಶೈಲಿ ಹಾಗೂ ನಾವೀನ್ಯ ವೈಶಿಷ್ಟ್ಯಗಳ ವಿಚಾರದಲ್ಲಿ ತಾಜಾತನವನ್ನುಂಟು ಮಾಡುವ ಮಹೀಂದ್ರ ಗಸ್ಟೊ 125 ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ. ಹಾಗಿದ್ದರೂ ಹೋಂಡಾ ಬ್ರಾಂಡ್ ಮೌಲ್ಯವನ್ನು ಹಿಮ್ಮೆಟ್ಟಿಸುವುದು ಅಷ್ಟು ಸುಲಭದ ಮಾತಲ್ಲ.

'ಕಿಸಿ ಸೇ ಕಮ್ ನಹೀ'
ಏನೇ ಆದರೂ ಪ್ರತಿಸ್ಪರ್ಧಿಗಳ ವಿಚಾರಗಳನ್ನು ಬದಿಗಿರಿಸಿದ್ದಲ್ಲಿ ಮೊಜೊ 300 ಸಿಸಿ ಬೈಕ್ ಬಳಿಕ ನಾವೀನ್ಯ ತಂತ್ರಗಾರಿಕೆಯೊಂದಿಗೆ ಮಗದೊಂದು ಆಕರ್ಷಕ ಸ್ಕೂಟರ್ ರಂಗ ಪ್ರವೇಶ ಪಡೆದಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಇದೇ ಕಾರಣಕ್ಕಾಗಿ ಗಸ್ಟೊ 125 ಸ್ಕೂಟರ್ ನಲ್ಲೂ ಮಹೀಂದ್ರ 'ಕಿಸಿ ಸೇ ಕಮ್ ನಹೀ' ಎಂಬ ಟ್ಯಾಗ್ ಲೈನ್ ಕೂಡಾ ನೀಡಿದೆ.

Most Read Articles

Kannada
English summary
Mahindra Gusto 125cc First Ride — Scoot With Gusto
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X