125 ಸ್ಕೂಟರ್ ವಾರ್: ಸುಜುಕಿ ಆಕ್ಸೆಸ್ vs ಹೋಂಡಾ ಆಕ್ಟಿವಾ vs ಮಹೀಂದ್ರ ಗಸ್ಟೊ

By Nagaraja

ಬೈಕ್ ವಿಭಾಗಕ್ಕೆ ಹೋಲಿಸಿದಾಗ ಭಾರತೀಯ ಸ್ಕೂಟರ್ ವಿಭಾಗ ಸಾರ್ವತ್ರಿಕ ಬೆಳವಣಿಗೆ ಕಾಣಬೇಕಾಗಿದೆ. ಅದರಲ್ಲೂ 125 ಸಿಸಿ ಸ್ಕೂಟರ್ ವಿಭಾಗವು ಇನ್ನಷ್ಟೇ ಹೆಚ್ಚಿನ ಜನಪ್ರಿಯತೆ ಸಾಧಿಸಬೇಕಾಗಿದೆ.

Also Read: ಮಹೀಂದ್ರ ಗಸ್ಟೊ 125 ಸಿಸಿ ಸ್ಕೂಟರ್ ವಿಮರ್ಶೆ; ಆಕ್ಟಿವಾಗಿಂತ ಹೇಗೆ ಭಿನ್ನ?

125 ಸಿಸಿ ವಿಭಾಗದಲ್ಲಿ ಹೋಂಡಾ ಆಕ್ಟಿವಾ ಮತ್ತು ಸುಜುಕಿ ಆಕ್ಸೆಸ್ ಗಳಂತಹ ಅತ್ಯುತ್ತಮ ಸ್ಕೂಟರ್ ಗಳಿದ್ದು, ಇತ್ತೀಚೆಗಷ್ಟೇ ಮಹೀಂದ್ರ ಗಸ್ಟೊ ಸಹ ಪ್ರವೇಶ ಪಡೆದಿತ್ತು. ಇದರೊಂದಿಗೆ ಮಾರುಕಟ್ಟೆಯಲ್ಲಿ ನಿಕಟ ಪೈಪೋಟಿಯನ್ನು ನಿರೀಕ್ಷಿಸಬಹುದಾಗಿದೆ. ಪ್ರಸ್ತುತ ಲೇಖನದಲ್ಲಿ ಈ ಮೂರು ಸ್ಕೂಟರ್ ಗಳನ್ನು ಒಂದಕ್ಕೊಂದು ತುಲನೆ ಮಾಡುವ ಪ್ರಯತ್ನ ಮಾಡಲಾಗುವುದು.

ವಿನ್ಯಾಸ - ಸುಜುಕಿ ಆಕ್ಸೆಸ್ 125

ವಿನ್ಯಾಸ - ಸುಜುಕಿ ಆಕ್ಸೆಸ್ 125

ಸಾಂಪ್ರದಾಯಿಕ ವಿನ್ಯಾಸದೊಂದಿಗೆ ಮುಂದೆ ಬಂದಿರುವ ಸುಜುಕಿ ಆಕ್ಸೆಸ್ ಮುಂದುಗಡೆಯಿರುವ ಹೆಡ್ ಲ್ಯಾಂಪ್ ಸುತ್ತಲೂ ಕ್ರೋಮ್ ಸ್ಪರ್ಶತೆಯನ್ನು ಕಾಣಬಹುದಾಗಿದೆ. ಇದರೊಂದಿಗೆ ನೂತನ ಟರ್ನ್ ಇಂಡಿಕೇಟರ್ ಗಳನ್ನು ಬಳಕೆ ಮಾಡಲಾಗಿದೆ.

ವಿನ್ಯಾಸ - ಹೋಂಡಾ ಆಕ್ಟಿವಾ 125

ವಿನ್ಯಾಸ - ಹೋಂಡಾ ಆಕ್ಟಿವಾ 125

ಹೋಂಡಾ ಆಕ್ಟಿವಾ 125 ಸ್ಕೂಟರ್ ನಲ್ಲಿ ಹೆಚ್ಚು ಆಧುನಿಕ ವಿನ್ಯಾಸ ತಂತ್ರಗಾರಿಕೆಯನ್ನು ತರಲಾಗಿದೆ. ಇದು ಎಲ್ಲ ವಿಭಾಗದ ಗ್ರಾಹಕರನ್ನು ಏಕಕಾಲಕ್ಕೆ ಆಕರ್ಷಿಸುವಂತಹ ವಿನ್ಯಾಸವನ್ನು ಪಡೆದಿದೆ.

ವಿನ್ಯಾಸ - ಮಹೀಂದ್ರ ಗಸ್ಟೊ 125

ವಿನ್ಯಾಸ - ಮಹೀಂದ್ರ ಗಸ್ಟೊ 125

ಅತ್ತ ಮಹೀಂದ್ರ ಗಸ್ಟೊ 125 ಎತ್ತರದ ಆಧುನಿಕ ವಿನ್ಯಾಸವನ್ನು ಪಡೆದಿದೆ. ಇದರ ನಿಖರ ನೋಟ ಮತ್ತು ಗ್ರಾಫಿಕ್ಸ್ ಗಳು ಯುವ ಗ್ರಾಹಕರನ್ನು ಅತಿ ಹೆಚ್ಚು ಮನ ಸೆಳೆಯಲಿದೆ.

ವಿನ್ಯಾಸ ರೇಟಿಂಗ್ (ಗರಿಷ್ಠ 10ರಲ್ಲಿ)

ವಿನ್ಯಾಸ ರೇಟಿಂಗ್ (ಗರಿಷ್ಠ 10ರಲ್ಲಿ)

ಸುಜುಕಿ ಆಕ್ಸೆಸ್ 125: 8/10

ಹೋಂಡಾ ಆಕ್ಟಿವಾ 125: 8/10

ಮಹೀಂದ್ರ ಗಸ್ಟೊ 125: 8/10

ಎಂಜಿನ್ ತಾಂತ್ರಿಕತೆ - ಸುಜುಕಿ ಆಕ್ಸೆಸ್ 125

ಎಂಜಿನ್ ತಾಂತ್ರಿಕತೆ - ಸುಜುಕಿ ಆಕ್ಸೆಸ್ 125

124 ಸಿಸಿ, 4 ಸ್ಟ್ರೋಕ್ ಪೆಟ್ರೋಲ್ ಎಂಜಿನ್,

8.6 ಅಶ್ವಶಕ್ತಿ, 10.2 ಎನ್ ಎಂ ತಿರುಗುಬಲ,

ಸಿವಿಟಿ ಗೇರ್ ಬಾಕ್ಸ್

ಎಂಜಿನ್ ತಾಂತ್ರಿಕತೆ - ಹೋಂಡಾ ಆಕ್ಟಿವಾ 125

ಎಂಜಿನ್ ತಾಂತ್ರಿಕತೆ - ಹೋಂಡಾ ಆಕ್ಟಿವಾ 125

124.9 ಸಿಸಿ, ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಪೆಟ್ರೋಲ್ ಎಂಜಿನ್,

8.6 ಅಶ್ವಶಕ್ತಿ, 10.12 ಎನ್ ಎಂ ತಿರುಗುಬಲ,

ವಿಮ್ಯಾಟಿಕ್ ಗೇರ್ ಬಾಕ್ಸ್

ಎಂಜಿನ್ ತಾಂತ್ರಿಕತೆ - ಮಹೀಂದ್ರ ಗಸ್ಟೊ 125

ಎಂಜಿನ್ ತಾಂತ್ರಿಕತೆ - ಮಹೀಂದ್ರ ಗಸ್ಟೊ 125

124.6 ಸಿಸಿ, ಸಿಂಗಲ್ ಸಿಲಿಂಡರ್ 4 ಸ್ಟ್ರೋಕ್ ಪೆಟ್ರೋಲ್ ಎಂಜಿನ್,

8.5 ಅಶ್ವಶಕ್ತಿ, 10 ಎನ್ ಎಂ ತಿರುಗುಬಲ,

ಸಿವಿಟಿ ಗೇರ್ ಬಾಕ್ಸ್

ಎಂಜಿನ್ ರೇಟಿಂಗ್ (ಗರಿಷ್ಠ 10ರಲ್ಲಿ)

ಎಂಜಿನ್ ರೇಟಿಂಗ್ (ಗರಿಷ್ಠ 10ರಲ್ಲಿ)

ಸುಜುಕಿ ಆಕ್ಸೆಸ್ 125: 7.5/10

ಹೋಂಡಾ ಆಕ್ಟಿವಾ 125: 8/10

ಮಹೀಂದ್ರ ಗಸ್ಟೊ 125: 7.5/10

ವೈಶಿಷ್ಟ್ಯಗಳು - ಸುಜುಕಿ ಆಕ್ಸೆಸ್ 125

ವೈಶಿಷ್ಟ್ಯಗಳು - ಸುಜುಕಿ ಆಕ್ಸೆಸ್ 125

ನೂತನ ಸುಜುಕಿ ಆಕ್ಸೆಸ್ 125 ಸ್ಕೂಟರ್ ನಲ್ಲಿ ಟ್ರಿಪ್ ಮೀಟರ್ ಜೊತೆ ಸರ್ವಿಸ್ ಇಂಡಿಕೇಟರ್, ಫ್ರಂಟ್ ಪಾಕೆಟ್, ಮೊಬೈಲ್ ಚಾರ್ಜರ್ ಸಾಕೆಟ್ ಮತ್ತು ಡ್ಯುಯಲ್ ಲಗ್ಗೇಜ್ ಹುಕ್ಸ್ ಮುಂತಾದ ಸೌಲಭ್ಯಗಳಿರಲಿದೆ.

ವೈಶಿಷ್ಟ್ಯಗಳು - ಹೋಂಡಾ ಆಕ್ಟಿವಾ 125

ವೈಶಿಷ್ಟ್ಯಗಳು - ಹೋಂಡಾ ಆಕ್ಟಿವಾ 125

ಹೋಂಡಾ ಆಕ್ಟಿವಾದಲ್ಲೂ ಡಿಜಿಟಲ್ ಮೀಟರ್, ಡಿಸ್ಕ್ ಬ್ರೇಕ್ (ಐಚ್ಛಿಕ), ಕಾಂಬಿ ಬ್ರೇಕ್ ಸಿಸ್ಟಂ, ಟೆಲಿಸ್ಕಾಪಿಕ್ ಫ್ರಂಟ್ ಶಾಕ್ ಅಬ್ಸಾರ್ಬರ್ ವ್ಯವಸ್ಥೆಗಳಿರುತ್ತದೆ.

ವೈಶಿಷ್ಟ್ಯಗಳು - ಮಹೀಂದ್ರ ಗಸ್ಟೊ 125

ವೈಶಿಷ್ಟ್ಯಗಳು - ಮಹೀಂದ್ರ ಗಸ್ಟೊ 125

ಎತ್ತರ ಹೊಂದಾಣಿಸಬಹುದಾದ ಸೀಟು, ರಿಮೋಟ್ ಪ್ಲಿಪ್ ಕೀ, ಫೈಂಡ್ ಮಿ ಲ್ಯಾಂಪ್, ಗೈಡ್ ಲ್ಯಾಂಪ್, ಫ್ರಂಟ್ ಕಿಕ್ ಸ್ಟ್ಯಾರ್ಟರ್, ಫ್ರಂಟ್ ಸ್ಟೋರೆಜ್, ಎಲ್‌ಇಡಿ ಲ್ಯಾಂಪ್ ಇತ್ಯಾದಿ ಸೌಲಭ್ಯಗಳಿರಲಿದೆ.

ವೈಶಿಷ್ಟ್ಯ ರೇಟಿಂಗ್ (ಗರಿಷ್ಠ 10ರಲ್ಲಿ)

ವೈಶಿಷ್ಟ್ಯ ರೇಟಿಂಗ್ (ಗರಿಷ್ಠ 10ರಲ್ಲಿ)

ಸುಜುಕಿ ಆಕ್ಸೆಸ್ 125: 7.5/10

ಹೋಂಡಾ ಆಕ್ಟಿವಾ 125: 7.5/10

ಮಹೀಂದ್ರ ಗಸ್ಟೊ 125: 8/10

ಬೆಲೆ - ಸುಜುಕಿ ಆಕ್ಸೆಸ್ 125

ಬೆಲೆ - ಸುಜುಕಿ ಆಕ್ಸೆಸ್ 125

59,123 ರು. (ಎಕ್ಸ್ ಶೋರೂಂ ದೆಹಲಿ)

ಬೆಲೆ - ಹೋಂಡಾ ಆಕ್ಟಿವಾ 125

ಬೆಲೆ - ಹೋಂಡಾ ಆಕ್ಟಿವಾ 125

(ಎಕ್ಸ್ ಶೋ ರೂಂ ದೆಹಲಿ)

ಸ್ಟ್ಯಾಂಡರ್ಡ್ 55,689 ರು.

ಡಿಎಲ್ ಎಕ್ಸ್ 61,857 ರು.

ಬೆಲೆ - ಮಹಿಂದ್ರ ಗಸ್ಟೊ 125

ಬೆಲೆ - ಮಹಿಂದ್ರ ಗಸ್ಟೊ 125

ಎಕ್ಸ್ ಶೋ ರೂಂ ಕರ್ನಾಟಕ

ಡಿಎಕ್ಸ್ 50,680 ರು.

ವಿಎಕ್ಸ್ 53,680 ರು.

ಬೆಲೆ ರೇಟಿಂಗ್ (ಗರಿಷ್ಠ 10ರಲ್ಲಿ)

ಬೆಲೆ ರೇಟಿಂಗ್ (ಗರಿಷ್ಠ 10ರಲ್ಲಿ)

ಸುಜುಕಿ ಆಕ್ಸೆಸ್ 125: 7.5/10

ಹೋಂಡಾ ಆಕ್ಟಿವಾ 125: 7.5/10

ಮಹೀಂದ್ರ ಗಸ್ಟೊ 125: 8/10

ಅಂತಿಮ ತೀರ್ಪು

ಅಂತಿಮ ತೀರ್ಪು

ತಂತ್ರಜ್ಞಾನದ ವಿಷಯವನ್ನು ಗಮನಕ್ಕೆ ತೆಗೆದುಕೊಂಡಾಗ ನೂತನ ಮಹೀಂದ್ರ ಗಸ್ಟೊ 125 ಮುನ್ನಡೆಯನ್ನು ಕಾಯ್ದುಕೊಂಡಿದೆ. ಆದರೆ ಬ್ರಾಂಡ್ ಮೌಲ್ಯದ ವಿಚಾರದಲ್ಲಿ ಹೋಂಡಾ ಆಕ್ಟಿವಾ ಅಧಿಪತ್ಯ ಸಾಧಿಸಿದೆ. ಇನ್ನೊಂದೆಡೆ ಆಕರ್ಷಕ ವಿನ್ಯಾಸದೊಂದಿಗೆ ಸುಜುಕಿ ಆಕ್ಸೆಸ್ ನಿಕಟ ಪೈಪೋಟಿಯನ್ನು ಒಡ್ಡುತ್ತಿದೆ.

ಇವನ್ನೂ ಓದಿ

ರಾಯಲ್ ಎನ್‌ಫೀಲ್ಡ್ ಹಿರಿಮೆ; ಕ್ಲಾಸಿಕ್ 350 ಮತ್ತು ಕ್ಲಾಸಿಕ್ 500

ಅಪಾಚೆ ರಿ ಎಂಟ್ರಿ; ಡ್ಯೂಕ್ ಓವರ್ ಟೇಕ್ ಮಾಡಲು ಸಾಧ್ಯವೇ?

Most Read Articles

Kannada
English summary
Scooter War: Suzuki Access 125 vs Honda Activa 125 vs Mahindra Gusto 125
Story first published: Thursday, March 31, 2016, 15:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X