ಗರಿಷ್ಠ ಮೈಲೇಜ್ ನೀಡುವ 150 ಸಿಸಿ ಬೈಕ್ ಗಳು

By Nagaraja

ಭಾರತೀಯ ವಾಹನ ಮಾರುಕಟ್ಟೆಯು ಕಾರುಗಿಂತಲೂ ಹೆಚ್ಚಾಗಿ ದ್ವಿಚಕ್ರ ವಾಹನ ವಿಭಾಗವನ್ನೇ ಹೆಚ್ಚಾಗಿ ಆಶ್ರಯಿಸಿಕೊಂಡಿದೆ. ಈಗ ಪರಿಸ್ಥಿತಿ ನಿಧಾನವಾಗಿ ಬದಲಾಗುತ್ತಿದ್ದು, ಗ್ರಾಹಕರು ಪ್ರಯಾಣಿಕ ಬೈಕ್ ಗಳ ವಿಭಾಗದಿಂದ ನಿಧಾನವಾಗಿ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ಗಳತ್ತ ವಾಲುತ್ತಿದ್ದಾರೆ.

ಇದಕ್ಕೊಂದು ಉತ್ತಮ ಉದಾಹರಣೆ ಹೆಚ್ಚು ಶಕ್ತಿಶಾಲಿ 150 ಸಿಸಿ ವಿಭಾಗವಾಗಿದೆ. ಇಲ್ಲಿ ದೇಶದ ಮುಂಚೂಣಿಯ ವಾಹನ ಸಂಸ್ಥೆಗಳು ಶ್ರೇಷ್ಠ ಬೈಕ್ ಗಳನ್ನು ಒದಗಿಸುತ್ತಿದೆ. ಸ್ವಲ್ಪ ಹೆಚ್ಚು ಶಕ್ತಿಶಾಲಿ ಎನಿಸಿಕೊಂಡರೂ ಇಲ್ಲೂ ಗ್ರಾಹಕರು ಮೈಲೇಜ್ ನತ್ತ ಹೆಚ್ಚು ಒಲವು ತೋರುತ್ತಾರೆ. ಪ್ರಸ್ತುತ ಈ ವಿಭಾಗದಲ್ಲಿ ಅತಿ ಹೆಚ್ಚು ಇಂಧನ ಕ್ಷಮತೆ ನೀಡುವ ಬೈಕ್ ಗಳ ಬಗ್ಗೆ ವಿವರಣೆ ನೀಡುವ ಪ್ರಯತ್ನ ಮಾಡಲಿದ್ದೇವೆ.

ಗರಿಷ್ಠ ಮೈಲೇಜ್ ನೀಡುವ 150 ಸಿಸಿ ಬೈಕ್ ಗಳು

ಭಾರತದ ಶ್ರೇಷ್ಠ 150 ಸಿಸಿ ಮೈಲೇಜ್ ಬೈಕ್ ಗಳನ್ನು ತಿಳಿದುಕೊಳ್ಳಲು ಚಿತ್ರಪುಟವನ್ನು ಒಂದೊಂದಾಗಿ ಕ್ಲಿಕ್ಕಿಸುತ್ತಾ ಮುಂದಕ್ಕೆ ಸಾಗಿರಿ...

ಯಮಹಾ ಎಫ್‌ಝಡ್ ಎಫ್ಐ - ವರ್ಷನ್ 2.0

ಯಮಹಾ ಎಫ್‌ಝಡ್ ಎಫ್ಐ - ವರ್ಷನ್ 2.0

149 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಎಸ್ ಒಎಚ್ ಸಿ 2 ವಾಲ್ವ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಯಮಹಾ ಎಫ್‌ಝಡ್ ಎಫ್ಐ ವರ್ಷನ್ 2.0 ಮಾದರಿಯು 12.8 ಎನ್ ಎಂ ತಿರುಗುಬಲದಲ್ಲಿ 13.1 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಯಮಹಾ ಎಫ್‌ಝಡ್ ಎಫ್ಐ - ವರ್ಷನ್ 2.0

ಯಮಹಾ ಎಫ್‌ಝಡ್ ಎಫ್ಐ - ವರ್ಷನ್ 2.0

ಯಮಹಾ ಎಫ್‌ಝಡ್ ಎಫ್ಐ - ವರ್ಷನ್ 2.0 ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 80,196 ರು.ಗಳಷ್ಟು ದುಬಾರಿಯೆನಿಸುತ್ತದೆ. ಅಲ್ಲದೆ ಫ್ರಂಟ್ ಡಿಸ್ಕ್ ಬ್ರೇಕ್ ಸೌಲಭ್ಯವೂ ಇರುತ್ತದೆ.

ಯಮಹಾ ಎಫ್‌ಝಡ್ ಎಫ್ಐ - ವರ್ಷನ್ 2.0

ಯಮಹಾ ಎಫ್‌ಝಡ್ ಎಫ್ಐ - ವರ್ಷನ್ 2.0

12 ಲೀಟರ್ ಗಳ ಇಂಧನ ಟ್ಯಾಂಕ್ ಹೊಂದಿರುವ ಯಮಹಾ ಎಫ್‌ಝಡ್ ಎಫ್ಐ - ವರ್ಷನ್ 2.0 ಮಾದರಿಯು ಪ್ರತಿ ಲೀಟರ್ ಗೆ 45 ಕೀ.ಮೀ.ಗಳಷ್ಟು ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಪ್ರಸ್ತುತ ಬೈಕ್ ನ ಒಟ್ಟಾರೆ ಭಾರ 132 ಕೆ.ಜಿಯಾಗಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್

ಹೋಂಡಾ ಸಿಬಿ ಹಾರ್ನೆಟ್ 160ಆರ್

162.71 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಎಸ್ ಐ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೋಂಡಾ ಸಿಬಿ ಹಾರ್ನೆಟ್, 14.76 ಎನ್ ಎಂ ತಿರುಗುಬಲದಲ್ಲಿ 11.68 ಕೆಡಬ್ಲ್ಯು ಪವರ್ ವಿತರಣೆ ಮಾಡಲಿದೆ.

ಹೋಂಡಾ ಸಿಬಿ ಹಾರ್ನೆಟ್ 160ಆರ್

ಹೋಂಡಾ ಸಿಬಿ ಹಾರ್ನೆಟ್ 160ಆರ್

ಡಿಸ್ಕ್ ಮತ್ತು ಕಾಂಬಿ ಬ್ರೇಕ್ ಸಿಸ್ಟಂ ಸೌಲಭ್ಯಗಳುಳ್ಳ ಹೋಂಡಾ ಸಿಬಿ ಹಾರ್ನೆಟ್ 160ಆರ್ ಬೆಂಗಳೂರು ಎಕ್ಸ್ ಶೋ ರೂಂ ಮತ್ತು ಆನ್ ರೋಡ್ ಬೆಲೆ ಇಂತಿದೆ

ಸಿಬಿ ಹಾರ್ನೆಟ್ 160ಆರ್ ಸ್ಟ್ಯಾಂಡರ್ಡ್: ಎಕ್ಸ್ ಶೋ ರೂಂ ಬೆಲೆ: 81640 ರು. ಆನ್ ರೋಡ್ ಬೆಲೆ: 94,512 ರು.

ಸಿಬಿ ಹಾರ್ನೆಟ್ 160ಆರ್ ಸಿಬಿಎಸ್: ಎಕ್ಸ್ ಶೋ ರೂಂ ಬೆಲೆ: 86140 ರು. ಆನ್ ರೋಡ್ ಬೆಲೆ: 99,664 ರು.

ಹೋಂಡಾ ಸಿಬಿ ಹಾರ್ನೆಟ್ 160ಆರ್

ಹೋಂಡಾ ಸಿಬಿ ಹಾರ್ನೆಟ್ 160ಆರ್

12.0 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯದ ಹೋಂಡಾ ಹಾರ್ನೆಟ್ ಸಿಬಿಎಸ್ ಮಾದರಿಯು 142 ಕೆ.ಜಿ ಭಾರವನ್ನು ಹೊಂದಿದ್ದು ಪ್ರತಿ ಲೀಟರ್ ಗೆ 50 ಕೀ.ಮೀ.ಗಳಷ್ಟು ಮೈಲೇಜ್ ನೀಡುವಷ್ಟು ಸಾಮರ್ಥ್ಯ ಹೊಂದಿರಲಿದೆ.

ಹೀರೊ ಹಂಕ್

ಹೀರೊ ಹಂಕ್

149.2 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೀರೊ ಹಂಕ್, 13.5 ಎನ್ ಎಂ ತಿರುಗುಬಲದಲ್ಲಿ 15.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೀರೊ ಹಂಕ್

ಹೀರೊ ಹಂಕ್

ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಹೀರೊ ಹಂಕ್ ಡಬಲ್ ಡಿಸ್ಕ್ ಬ್ರೇಕ್ ಮಾದರಿಯು 73,450 ರು. ಮತ್ತು ಡಿಸ್ಕ್ ಬ್ರೇಕ್ ಆವೃತ್ತಿಯು 70,250 ರು.ಗಳಷ್ಟು ದುಬಾರಿಯೆನಿಸಲಿದೆ.

ಹೀರೊ ಹಂಕ್

ಹೀರೊ ಹಂಕ್

145 ಕೆ.ಜಿ ಭಾರ ಮತ್ತು 12.4 ಲೀಟರ್ ಇಂಧನ ಟ್ಯಾಂಕ್ ಹೊಂದಿರುವ ಹೀರೊ ಹಂಕ್ ಪ್ರತಿ ಲೀಟರ್ ಗೆ 53 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಪಡೆದಿದೆ.

ಹೀರೊ ಇಂಪಲ್ಸ್

ಹೀರೊ ಇಂಪಲ್ಸ್

149.2 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೀರೊ ಇಂಪಲ್ಸ್ 13.4 ಎನ್ ಎಂ ತಿರುಗುಬಲದಲ್ಲಿ 13.2 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೀರೊ ಇಂಪಲ್ಸ್

ಹೀರೊ ಇಂಪಲ್ಸ್

ಸೆಲ್ಪ್ ಸ್ಟ್ಯಾರ್ಟ್ ಡಿಸ್ಕ್ ಬ್ರೇಕ್ ಸ್ಪೋಕ್ ವೀಲ್ ಸೌಲಭ್ಯದ ಹೀರೊ ಇಂಪಲ್ಸ್ ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 72,771 ರು.ಗಳಷ್ಟು ದುಬಾರಿಯೆನಿಸಲಿದೆ.

ಹೀರೊ ಇಂಪಲ್ಸ್

ಹೀರೊ ಇಂಪಲ್ಸ್

11.1 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯದ ಹೀರೊ ಇಂಪಲ್ಸ್ ಪ್ರತಿ ಲೀಟರ್ ಗೆ 55 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್

ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್

149.2 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್ 13.50 ಎನ್ ಎಂ ತಿರುಗುಬಲದಲ್ಲಿ 15.6 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್

ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್

ಡಬಲ್ ಡಿಸ್ಕ್ ಬ್ರೇಕ್ ಮತ್ತು ಡಿಸ್ಕ್ ಬ್ರೇಕ್ ಸೌಲಭ್ಯಗಳುಳ್ಳ ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್ ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 74,829 ರು. ಮತ್ತು 71,729 ರು.ಗಳಷ್ಟು ದುಬಾರಿಯೆನಿಸಲಿದೆ.

ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್

ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್

146 ಕೆ.ಜಿ ತೂಕದ ಹೀರೊ ಎಕ್ಸ್ ಟ್ರೀಮ್ ಸ್ಪೋರ್ಟ್ಸ್ 12.1 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಪಡೆದಿದ್ದು, ಪ್ರತಿ ಲೀಟರ್ ಗೆ 55 ಕೀ.ಮೀ. ವರೆಗೂ ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಸುಜುಕಿ ಜಿಎಸ್150ಆರ್

ಸುಜುಕಿ ಜಿಎಸ್150ಆರ್

149.5 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಎಸ್ ಒಎಚ್ ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸುಜುಕಿ ಜಿಎಸ್150ಆರ್ 13.4 ಎನ್ ಎಂ ತಿರುಗುಬಲದಲ್ಲಿ 13.8 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಸುಜುಕಿ ಜಿಎಸ್150ಆರ್

ಸುಜುಕಿ ಜಿಎಸ್150ಆರ್

ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಸುಜುಕಿ ಜಿಎಸ್150ಆರ್ 87627 ರು.ಗಳಷ್ಟು ದುಬಾರಿಯೆನಿಸಲಿದೆ. ಅಲ್ಲದೆ ಫ್ರಂಟ್ ಡಿಸ್ಕ್ ಬ್ರೇಕ್ ಸೌಲಭ್ಯವೂ ಇರುತ್ತದೆ.

ಸುಜುಕಿ ಜಿಎಸ್150ಆರ್

ಸುಜುಕಿ ಜಿಎಸ್150ಆರ್

149 ಕೆ.ಜಿ ಕರ್ಬ್ ಭಾರದ ಸುಜುಕಿ ಜಿಎಸ್150ಆರ್ ಪರಿಣಾಮಕಾರಿ 15.5 ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು, ಪ್ರತಿ ಲೀಟರ್ ಗೆ 56 ಕೀ.ಮೀ. ಗಳಷ್ಟು ಮೈಲೇಜ್ ನೀಡಲಿದೆ.

ಹೀರೊ ಅಚೀವರ್

ಹೀರೊ ಅಚೀವರ್

149.2 ಸಿಸಿ ಏರ್ ಕೂಲ್ಡ್ 4 ಸ್ಟ್ರೋಕ್ ಸಿಂಗಲ್ ಸಿಲಿಂಡರ್ ಒಎಚ್‌ಸಿ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಹೀರೊ ಅಚೀವರ್ 12.80 ಎನ್ ಎಂ ತಿರುಗುಬಲದಲ್ಲಿ 13.4 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಹೀರೊ ಅಚೀವರ್

ಹೀರೊ ಅಚೀವರ್

ಸೆಲ್ಪ್ ಸ್ಟ್ಯಾರ್ಟ್ ಡಿಸ್ಕ್ ಬ್ರೇಕ್ ಅಲಾಯ್ ವೀಲ್ ಸೌಲಭ್ಯದ ಹೀರೊ ಅಚೀವರ್ ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 62,517 ರು.ಗಳಷ್ಟು ದುಬಾರಿಯೆನಿಸಲಿದೆ.

ಹೀರೊ ಅಚೀವರ್

ಹೀರೊ ಅಚೀವರ್

12.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯದ ಹೀರೊ ಅಚೀವರ್ 130 ಕೆ.ಜಿ ತೂಕವನ್ನು ಹೊಂದಿದ್ದು, ಪ್ರತಿ ಲೀಟರ್ ಗೆ 58 ಕೀ.ಮೀ.ಗಳಷ್ಟು ಮೈಲೇಜ್ ನೀಡಲಿದೆ.

ಬಜಾಜ್ ಡಿಸ್ಕವರ್ 150 ಎಫ್

ಬಜಾಜ್ ಡಿಸ್ಕವರ್ 150 ಎಫ್

144.8 ಸಿಸಿ ಸಿಂಗಲ್ ಸಿಲಿಂಡರ್ 4 ವಾಲ್ವ್ ಡಿಟಿಎಸ್-ಐ ಎಕ್ಸಾಸ್ ಟೆಕ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಡಿಸ್ಕವರ್ 150 ಎಫ್ 12.75 ಎನ್ ಎಂ ತಿರುಗುಬಲದಲ್ಲಿ 14.5 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬಜಾಜ್ ಡಿಸ್ಕವರ್ 150 ಎಫ್

ಬಜಾಜ್ ಡಿಸ್ಕವರ್ 150 ಎಫ್

ಬಜಾಜ್ ಡಿಸ್ಕವರ್ 150 ಎಫ್ ಡಿಆರ್ ಮತ್ತು ಬಜಾಜ್ ಡಿಸ್ಕವರ್ 150 ಎಫ್ ಡಿಐ ಮಾದರಿಗಳು ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 59,016 ಮತ್ತು 63,093 ರು.ಗಳಷ್ಟು ದುಬಾರಿಯೆನಿಸಲಿದೆ. ಅಲ್ಲದೆ ಮುಂಭಾಗದಲ್ಲಿ ಐಚ್ಛಿಕ 240ಎಂ ಪೆಟಲ್ ಡಿಸ್ಕ್ ಬ್ರೇಕ್ ಸೌಲಭ್ಯವೂ ಇರುತ್ತದೆ.

ಬಜಾಜ್ ಡಿಸ್ಕವರ್ 150 ಎಫ್

ಬಜಾಜ್ ಡಿಸ್ಕವರ್ 150 ಎಫ್

10 ಲೀಟರ್ ಇಂಧನ ಸಾಮರ್ಥ್ಯದ ಬಜಾಜ್ ಡಿಸ್ಕವರ್ 150 ಎಫ್ 129 ಕೆ.ಜಿ ಭಾರವನ್ನು ಹೊಂದಿದ್ದು, ಪ್ರತಿ ಲೀಟರ್ ಗೆ 60 ಕೀ.ಮೀ. ಮೈಲೇಜ್ ನೀಡಲಿದೆ.

ಬಜಾಜ್ ಅವೆಂಜರ್ 150 ಸ್ಟ್ರೀಟ್

ಬಜಾಜ್ ಅವೆಂಜರ್ 150 ಸ್ಟ್ರೀಟ್

150 ಸಿಸಿ ಟ್ವಿನ್ ಸ್ಪಾರ್ಕ್, 2 ವಾಲ್ವ್ ಡಿಟಿಎಸ್ ಐ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಅವೆಂಜರ್ 150 ಸ್ಟ್ರೀಟ್ 12.5 ಎನ್ ಎಂ ತಿರುಗುಬಲದಲ್ಲಿ 14.54 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬಜಾಜ್ ಅವೆಂಜರ್ 150 ಸ್ಟ್ರೀಟ್

ಬಜಾಜ್ ಅವೆಂಜರ್ 150 ಸ್ಟ್ರೀಟ್

ಮುಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಸೌಲಭ್ಯದ ಬಜಾಜ್ ಅವೆಂಜರ್ 150 ಸ್ಟ್ರೀಟ್ ಕರ್ನಾಟಕ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 75,880 ರು.ಗಳಷ್ಟು ದುಬಾರಿಯೆನಿಸುತ್ತದೆ.

ಬಜಾಜ್ ಅವೆಂಜರ್ 150 ಸ್ಟ್ರೀಟ್

ಬಜಾಜ್ ಅವೆಂಜರ್ 150 ಸ್ಟ್ರೀಟ್

14 ಲೀಟರ್ ಗಳ ಇಂಧನ ಟ್ಯಾಂಕ್ ಸಾಮರ್ಥ್ಯದ ಬಜಾಜ್ ಅವೆಂಜರ್ 150 ಸ್ಟ್ರೀಟ್ 148 ಕೆ.ಜಿ ತೂಕವನ್ನು ಹೊಂದಿದ್ದು, ಪ್ರತಿ ಲೀಟರ್ ಗೆ 65 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಬಜಾಜ್ ಪಲ್ಸರ್ 150 ಡಿಟಿಎಸ್-ಐ

ಬಜಾಜ್ ಪಲ್ಸರ್ 150 ಡಿಟಿಎಸ್-ಐ

149 ಸಿಸಿ 4 ಸ್ಟ್ರೋಕ್ ಡಿಟಿಎಸ್-ಐ ಏರ್ ಕೂಲ್ಡ್ ಸಿಂಗಲ್ ಸಿಲಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಬಜಾಜ್ ಪಲ್ಸರ್ 150 ಮಾದರಿಯು 12.5 ಎನ್ ಎಂ ತಿರುಗುಬಲದಲ್ಲಿ 15.06 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಬಜಾಜ್ ಪಲ್ಸರ್ 150 ಡಿಟಿಎಸ್-ಐ

ಬಜಾಜ್ ಪಲ್ಸರ್ 150 ಡಿಟಿಎಸ್-ಐ

240 ಎಂಎಂ ಫ್ರಂಟ್ ಡಿಸ್ಕ್ ಬ್ರೇಕ್ ಸೌಲಭ್ಯದ ಬಜಾಜ್ ಪಲ್ಸರ್ 150 ಡಿಟಿಎಸ್-ಐ, ಕರ್ನಾಟಕ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 72,847 ರು.ಗಳಷ್ಟು ದುಬಾರಿಯೆನಿಸಲಿದೆ.

ಬಜಾಜ್ ಪಲ್ಸರ್ 150 ಡಿಟಿಎಸ್-ಐ

ಬಜಾಜ್ ಪಲ್ಸರ್ 150 ಡಿಟಿಎಸ್-ಐ

15 ಲೀಟರ್ ಇಂಧನ ಟ್ಯಾಂಕ್ ಮತ್ತು 144 ಕೆ.ಜಿ ತೂಕದ ಬಜಾಜ್ ಪಲ್ಸರ್ 150 ಡಿಟಿಎಸ್-ಐ ಮಾದರಿಯು ಪ್ರತಿ ಲೀಟರ್ ಗೆ 65 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಗರಿಷ್ಠ ಮೈಲೇಜ್ ನೀಡುವ 150 ಸಿಸಿ ಬೈಕ್ ಗಳು

ಅಷ್ಟಕ್ಕೂ ನಿಮ್ಮ ಬಳಿಯಿರುವ 150 ಸಿಸಿ ಬೈಕ್ ನೈಜ ರಸ್ತೆ ಪರಿಸ್ಥಿತಿಯಲ್ಲಿ ಎಷ್ಟು ಇಂಧನ ಕ್ಷಮತೆಯನ್ನು ನೀಡುತ್ತಿದೆ ಎಂಬುದನ್ನು ಕಾಮೆಂಟ್ ಬಾಕ್ಸ್ ಮುಖಾಂತರ ತಿಳಿಸಿರಿ.


Most Read Articles

Kannada
English summary
Top 10 Mileage Bikes in India 150cc Segment
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X