ಅಪಾಚೆ ರಿ ಎಂಟ್ರಿ; ಡ್ಯೂಕ್ ಓವರ್ ಟೇಕ್ ಮಾಡಲು ಸಾಧ್ಯವೇ?

By Nagaraja

ದೇಶದ ರಸ್ತೆದೆಲ್ಲೆಡೆ ಡ್ಯೂಕ್ ಬೈಕ್ ಗಳ ಪರಾಕ್ರಮ ಮುಂದುವರಿಯುತ್ತಿದೆ. ಇದರಿಂದಾಗಿ ಒಂದು ಕಾಲದಲ್ಲಿ ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿದ್ದ ಅಪಾಚೆ ಹಿನ್ನೆಡೆ ಅನುಭವಿಸಿದೆ. ಇವೆಲ್ಲದರಿಂದ ಎಚ್ಚೆತ್ತುಕೊಂಡಿರುವ ದೇಶದ ಮುಂಚೂಣಿಯ ಟಿವಿಎಸ್ ಸಂಸ್ಥೆಯು ಗಮನಾರ್ಹ ಬದಲಾವಣೆಯೊಂದಿಗೆ ಅಪಾಚೆ ಮರು ಪರಿಚಯಿಸಿದೆ.

Also Read: ಹೋಂಡಾ ಸಿಬಿ ಹಾರ್ನೆಟ್ 160ಆರ್ vs ಸುಜುಕಿ ಜಿಕ್ಸರ್ ಮುಂದಕ್ಕೆ ಓದಿ

ನೂತನ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಯುವ ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸಲಿದ್ದು, ನೇರವಾಗಿ ಕೆಟಿಎಂ ಡ್ಯೂಕ್ 200 ಮಾದರಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ. ಇದರೊಂದಿಗೆ ಎಂಟ್ರಿ ಲೆವೆಲ್ ಕ್ರೀಡಾ ಬೈಕ್ ವಿಭಾಗದಲ್ಲಿ ಜಿದ್ದಾಜಿದ್ದಿನ ಪೈಪೋಣಿಗೆ ವೇದಿಕೆ ಸಿದ್ಧಗೊಂಡಿದೆ. ಪ್ರಸ್ತುತ ಲೇಖನದಲ್ಲಿ ಕೆಟಿಎಂ ಓವರ್ ಟೇಕ್ ಮಾಡಲು ಅಪಾಚೆಗೆ ಸಾಧ್ಯವಾಗುವುದೇ ಎಂಬುದನ್ನು ಚರ್ಚಿಸಲಿದ್ದೇವೆ.

ಬೈಕ್ ವಿಮರ್ಶೆ

ಅಂದಾಜು ಆನ್ ರೋಡ್ ಬೆಲೆ (ದೆಹಲಿ)
  • ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ: 98,000 ರು.
  • ಕೆಟಿಎಂ ಡ್ಯೂಕ್ 200: 1.50 ಲಕ್ಷ ರು.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ
ವಿನ್ಯಾಸ - ಅಪಾಚೆ
ಟಿವಿಎಸ್ ಅಪಾಚೆ ಬೈಕ್‌ನಲ್ಲಿ ಆಕ್ರಮಣಕಾರಿ ವಿನ್ಯಾಸವನ್ನು ಮೈಗೂಡಿಸಲಾಗಿದೆ. ಇದು ಮೊದಲ ನೋಟದಲ್ಲೇ ಯುವ ಪೀಳಿಗೆಯನ್ನು ತನ್ನತ್ತ ಸೆಳೆಯುವಷ್ಟು ಆಕರ್ಷಣೆಯನ್ನು ಪಡೆದುಕೊಂಡಿದೆ. ಟಿವಿಎಸ್ ಡ್ರೇಕನ್ ಕಾನ್ಸೆಪ್ಟ್ ಬೈಕ್ ನಿಂದ ಸ್ಪೂರ್ತಿ ಪಡೆದುಕೊಂಡು ಇದನ್ನು ರಚಿಸಲಾಗಿದೆ.

ಇವನ್ನೂ ಓದಿ: ಧೋನಿ ಪ್ರಭು ಲುಂಗಿ ಡ್ಯಾನ್ಸ್

ಕೆಟಿಎಂ ಡ್ಯೂಕ್ 200
ವಿನ್ಯಾಸ - ಡ್ಯೂಕ್
ಯಾರೇ ಆದರೂ ಡ್ಯೂಕ್ ವಿನ್ಯಾಸದ ಬಗ್ಗೆ ತಕರಾರು ಎತ್ತುವ ಸಾಧ್ಯತೆ ಕಡಿಮೆಯಾಗಿದೆ. ಕ್ರೀಡಾ ಬೈಕ್ ಸವಾರಿಯ ಕನಸನ್ನು ನನಸಾಗಿಸಲು ಡ್ಯೂಕ್ ಪರಿಪೂರ್ಣ ಆಯ್ಕೆಯಾಗಲಿದೆ. ಇಲ್ಲಿ ಹೆಚ್ಚು ಕ್ರೀಡಾತ್ಮಕ ವಿನ್ಯಾಸ ನೀತಿಯನ್ನು ಇಲ್ಲಿ ಅನುಸರಿಸಲಾಗಿದೆ.

ಎಂಜಿನ್ ಮತ್ತು ಗೇರ್ ಬಾಕ್ಸ್

ಟಿವಿಎಸ್ ಅಪಾಚೆ

  • 197 ಸಿಸಿ, ಒಯಿಲ್ ಕೂಲ್ಡ್,
  • ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್
  • 21 ಅಶ್ವಶಕ್ತಿ, 18 ಎನ್‌ಎಂ ತಿರುಗುಬಲ
  • 5 ಸ್ಪೀಡ್ ಗೇರ್ ಬಾಕ್ಸ್,
  • 3.9 ಸೆಕೆಂಡುಗಳಲ್ಲಿ ಗಂಟೆಗೆ 0-60 ಕೀ.ಮೀ.

ಕೆಟಿಎಂ ಡ್ಯೂಕ್

  • 199 ಸಿಸಿ, ಲಿಕ್ವಿಡ್ ಕೂಲ್ಡ್,
  • ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್ ಎಂಜಿನ್,
  • 24.6 ಅಶ್ವಶಕ್ತಿ, 19 ಎನ್‌ಎಂ ತಿರುಗುಬಲ
  • 6 ಸ್ಪೀಡ್ ಗೇರ್ ಬಾಕ್ಸ್

ಚಿತ್ರಗಳಲ್ಲಿ: ಕೆಟಿಎಂ ಡ್ಯೂಕ್ 200


ವೈಶಿಷ್ಟ್ಯಗಳು

ಟಿವಿಎಸ್ ಅಪಾಚೆ: ಮುಂಭಾಗದಲ್ಲಿ ಟೆಲಿಸ್ಕಾಪಿಕ್ ಫ್ರಂಟ್ ಫಾರ್ಕ್ ಹಾಗೂ ಹಿಂಭಾಗದಲ್ಲಿ ಮೊನೊಶಾಕ್ ಪಡೆದುಕೊಳ್ಳಲಿದೆ. ಇದಲ್ಲದೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸರ್ವಿಸ್ ವಾರ್ನಿಂಗ್ ಲ್ಯಾಂಪ್, ಅಲಾಯ್ ವೀಲ್, ಡಿಸ್ಕ್ ಬ್ರೇಕ್, ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಐಚ್ಛಿಕ ಪೈರಲ್ಲಿ ಚಕ್ರಗಳು ಇದರಲ್ಲಿರಲಿದೆ.

Also Read: ಕೆಟಿಎಂಗೆ ಸೆಡ್ಡು ನೀಡಿದ ಬೆನೆಲ್ಲಿ

ಡ್ಯೂಕ್: ಇನ್ನೊಂದೆಡೆ ಡ್ಯೂಕ್ ಮುಂಭಾಗದಲ್ಲಿ ಅಪ್ ಸೈಡ್ ಡೌನ್ ಫ್ರಂಟ್ ಫಾರ್ಕ್, ಹಿಂಭಾಗದಲ್ಲಿ ಮೊನೊಶಾಕ್, ಡಿಜಿಟಲ್ ಮೀಟರ್ ಕನ್ಸೋಲ್, ಮುಂಭಾಗದಲ್ಲಿ ಅಲಾಯ್ ವೀಲ್ ಹಾಗೂ ಹಿಂಭಾದಲ್ಲಿ ಡಿಸ್ಕ್ ಬ್ರೇಕ್ ಮುಂತಾದ ಸೌಲಭ್ಯಗಳಿರಲಿದೆ.

ಚಿತ್ರಗಳಲ್ಲಿ: ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ


ಅಂತಿಮ ತೀರ್ಪು

ವೈಶಿಷ್ಟ್ಯ ಹಾಗೂ ಎಂಜಿನ್ ನಿರ್ವಹಣೆಯನ್ನು ಗಮನಕ್ಕೆ ತೆಗೆದುಕೊಂಡಾಗ ಕೆಟಿಎಂ ಡ್ಯೂಕ್ ಗುಣಮಟ್ಟತೆಯನ್ನು ಕಾಯ್ದುಕೊಂಡಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ಭಾರತೀಯ ಗ್ರಾಹಕರ ವಿಚಾರಕ್ಕೆ ಬಂದಾಗ ಬೆಲೆ ಅತಿ ಮುಖ್ಯ ಘಟಕವೆನಿಸುತ್ತದೆ. ಇದರ ಹೊರತಾಗಿ ಅಪಾಚೆಯಲ್ಲಿ ಎಬಿಎಸ್ ತಂತ್ರಗಾರಿಕೆಯೂ ಅತಿ ಶೀಘ್ರದಲ್ಲೇ ಜೋಡಣೆಯಾಗಲಿದೆ. ಹಾಗಾಗಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಗರಿಷ್ಠ ಸೌಲಭ್ಯಗಳನ್ನು ಒದಗಿಸುವಲ್ಲಿ ಇಲ್ಲಿ ಅಪಾಚೆ ಯಶಸ್ವಿಯಾಗಿರುವುದಂತೂ ನಿಜ.

Most Read Articles

Kannada
English summary
TVS Apache RTR 200 vs KTM Duke 200 Comparison
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X