2014 ಫಿಯೆಟ್ ಪುಂಟೊ ಇವೊ ಡೀಸೆಲ್ ಟೆಸ್ಟ್ ಡ್ರೈವ್ ವಿಮರ್ಶೆ

By Nagaraja

ಕೊಟ್ಟ ಮಾತನ್ನು ಪಾಲಿಸಿರುವ ಇಟಲಿ ಮೂಲದ ಐಕಾನಿಕ್ ವಾಹನ ತಯಾರಕ ಸಂಸ್ಥೆಯಾಗಿರುವ ಫಿಯೆಟ್, ಇತ್ತೀಚೆಗಷ್ಟೇ ಮಗದೊಂದು ಅತ್ಯಾಕರ್ಷಕ 2014 ಪುಂಟೊ ಇವೊ ಡೀಸೆಲ್ ಕಾರನ್ನು ಪರಿಚಯಿಸಿತ್ತು.

ಇವನ್ನೂ ಓದಿ: ಹ್ಯುಂಡೈ ಎಕ್ಸ್‌ಸೆಂಟ್ ವಿಮರ್ಶೆ

ಇದರಂತೆ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ವಿಶೇಷ ಟೆಸ್ಟ್ ಡ್ರೈವ್ ವಿಮರ್ಶೆಯನ್ನು ನಿಮ್ಮ ಮುಂದಿಡಲಿದ್ದೇವೆ. ಇತರ ಪ್ರತಿಸ್ಪರ್ಧಿಗಳನ್ನು ಗಮನಿಸಿದಾಗ ಮೊದಲ ನೋಟದಲ್ಲೇ ತನ್ನದೇ ಆದ ವಿಶಿಷ್ಟತೆ ಪಡೆದುಕೊಂಡಿರುವ 2015 ಫಿಯೆಟ್ ಪುಂಟೊ ಬಗ್ಗೆ ಅನೇಕ ವಿಚಾರಗಳನ್ನು ನಮ್ಮ ಚಾಲನಾ ಪರೀಕ್ಷಾ ವರದಿಯಲ್ಲಿ ನಿಮ್ಮ ಮುಂದಿಡಲಿದ್ದೇವೆ. ಇದಕ್ಕಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ...

2014 ಫಿಯೆಟ್ ಪುಂಟೊ ಇವೊ ಡೀಸೆಲ್ ಟೆಸ್ಟ್ ಡ್ರೈವ್ ವಿಮರ್ಶೆ

2014 ಫಿಯೆಟ್ ಪುಂಟೊ ಪ್ರಮುಖವಾಗಿಯೂ ಫೋಕ್ಸ್‌ವ್ಯಾಗನ್ ಪೊಲೊ, ಸ್ಕೋಡಾ ಫ್ಯಾಬಿಯಾ, ಹೋಂಡಾ ಜಾಝ್ ಮತ್ತು ಹ್ಯುಂಡೈ ಐ20 ಮಾದರಿಗಳಿಗೆ ಪ್ರತಿಸ್ಪರ್ಧಿ ಒಡ್ಡಲಿದೆ.

90 ಅಶ್ವಶಕ್ತಿ

90 ಅಶ್ವಶಕ್ತಿ

ಮೊದಲು 2014 ಫಿಯೆಟ್ ಪುಂಟೊ ಡೀಸೆಲ್ ಇದರ ಶಕ್ತಿ ಬಗ್ಗೆ ಮೊದಲು ಚರ್ಚಿಸಬೇಕಾಗುತ್ತದೆ. 2014 ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾಗಿರುವ ಫಿಯೆಟ್ ಪುಂಟೊ 90 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಚಾಲನಾ ಪರೀಕ್ಷೆ ಕೈಗೊಂಡವರು: ಅಜಿಂಕ್ಯಾ ಪ್ಯಾರಾಲಿಕರ್, ಉಪ-ಸಂಪಾದಕರು, ಡ್ರೈವ್‌ಸ್ಪಾರ್ಕ್

ಚಾಲನಾ ಪರೀಕ್ಷೆ ನಡೆಸಿರುವ ಮಾರ್ಗ: ಮುಂಬೈನಿಂದ ಲೊನಾವಾಲಾ.

ಮುಂಭಾಗದ ವಿನ್ಯಾಸ

ಮುಂಭಾಗದ ವಿನ್ಯಾಸ

ಹೊಸ ಮಾದರಿಗೆ ಹಾದಿ ಬಿಟ್ಟು ಕೊಟ್ಟಿರುವ ಹಳೆಯ ಮಾದರಿಗೆ ಹೋಲಿಸಿದಾಗ 2014 ಫಿಯೆಟ್ ಪುಂಟೊ ಇವೊ, ಸರಳ ಹಾಗೂ ಸೊಗಸಾದ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಇಲ್ಲಿ ಫ್ರಂಟ್ ಗ್ರಿಲ್‌ ಮೇಲಿದ್ದ ಫಿಯೆಟ್ ಲಾಂಛನ ಇನ್ನು ಸ್ವಲ್ಪ ಮೇಲ್ಗಡೆಗೆ ಸ್ಥಳಾಂತರಿಸುವುದನ್ನು ನೀವು ಗಮನಿಸಬಹುದು. ಇನ್ನು ಫಾಗ್ ಲ್ಯಾಂಪ್ ಸುತ್ತಲೂ ಕೋರ್ಮ್ ಸ್ಪರ್ಶವನ್ನು ಕಾಣಬಹುದು. ಅಂತೆಯೇ ಹೆಡ್‌ಲೈಟ್ ಕಾರಿಗೆ ಕ್ರೀಡಾತ್ಮಕ ವಿನ್ಯಾಸ ಪ್ರದಾನ ಮಾಡಿದೆ.

ಸೈಡ್ ಪ್ರೊಫೈಲ್

ಸೈಡ್ ಪ್ರೊಫೈಲ್

ಬದಿಯಿಂದ ನೋಡಿದಾಗ ಹಳೆಯ ಮಾದರಿಗೆ ಸಾಮತ್ಯೆಯನ್ನು ಪಡೆದುಕೊಂಡಿದೆ. ಹಾಗಿದ್ದರೂ ಸ್ವಲ್ಪ ಹೆಚ್ಚು ಗ್ರೌಂಡ್ ಕ್ಲಿಯರನ್ಸ್ ನೀಡಿರುವುದನ್ನು (16 ಇಂಚಿನ ಅಲಾಯ್ ವೀಲ್) ನೀವು ಗಮನಿಸಬಹುದು. ಅಂತೆಯೇ ಔಟ್‌ಸೈಡ್ ರಿಯರ್ ವ್ಯೂ ಮಿರರ್‌ನಲ್ಲಿ ಜೋಡಣೆಯಾಗಿರುವ ಟರ್ನ್ ಲೈಟ್ಸ್ ಮುಂತಾದ ವಿಶಿಷ್ಟತೆಗಳು ಕಾರಿಗೆ ಆಧುನಿಕ ಸ್ಪರ್ಶ ನೀಡಲಿದೆ.

ರಿಯರ್ ಪ್ರೊಫೈಲ್

ರಿಯರ್ ಪ್ರೊಫೈಲ್

ಟೈಲ್ ಲ್ಯಾಂಪ್ ಪರಿಷ್ಕೃತಗೊಳಿಸಲಾಗಿದ್ದು ತನ್ನದೇ ಆದ ಯೂನಿಕ್ ವಿನ್ಯಾಸ ಕಾಪಾಡಿಕೊಂಡಿದೆ. ಹಿಂದುಗಡೆಯೂ ಕ್ರೋಮ್ ಟಚ್ ನೀಡಲಾಗಿದೆ. ಇದರಲ್ಲಿ ರಿಯರ್ ವೈಪರ್, ಡಿಫಾಗರ್ ಮುಂತಾದ ಸೌಲಭ್ಯಗಳಿದ್ದರೂ ಪಾರ್ಕಿಂಗ್ ಸೆನ್ಸಾರ್ ಕೊರತೆ ಅನುಭವಿಸಲಿದೆ.

ಒಳಮೈ

ಒಳಮೈ

ಎರಡು ಛಾಯೆಗಳಲ್ಲಿ 2014 ಫಿಯೆಟ್ ಪುಂಟೊ ಇವೊ ಲಭ್ಯವಾಗಲಿದೆ. ಮೊದಲನೆಯದ್ದು (ಚಿತ್ರದಲ್ಲಿರುವಂತೆಯೇ) ಸಂಪೂರ್ಣ ಕಪ್ಪು ವರ್ಣ ಹಾಗೂ ಕಪ್ಪು ಜೊತೆ ಬೀಜ್ ಸ್ಪರ್ಶದ ಇಂಟಿರಿಯರ್ ಲಭ್ಯವಾಗಲಿದೆ. ಇದು ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತದೆ.

ಮುಂಭಾಗದ ಸೀಟುಗಳು

ಮುಂಭಾಗದ ಸೀಟುಗಳು

ಮುಂಭಾಗದಲ್ಲಿ ತುಂಬಾನೇ ಅಚ್ಚುಕಟ್ಟಾಗಿ ಸೀಟಿನ ವಿನ್ಯಾಸ ರಚಿಸಲಾಗಿದೆ. ಇದರಲ್ಲಿ ಕುಳಿತುಕೊಳ್ಳುವಾಗ ಸೊಂಟದ ಭಾಗಕ್ಕೂ ಹೆಚ್ಚಿನ ಆರಾಮದಾಯಕತೆಗೆ ಆದ್ಯತೆ ಕೊಡಲಾಗಿದೆ.

ಹಿಂದುಗಡೆ ಸೀಟುಗಳು

ಹಿಂದುಗಡೆ ಸೀಟುಗಳು

ಹಿಂದುಗಡೆ ಸೀಟಿನಲ್ಲಿ ಆರ್ಮ್ ರೆಸ್ಟ್ ಕೊರತೆ ಅನುಭವಿಸಲಿದೆ. ಇದರಲ್ಲಿ ಮೂವರಿಗೆ ಕುಳಿತುಕೊಳ್ಳಬಹುದಾದರೂ ಇಕ್ಕಟ್ಟಿನ ಅನುಭವನ್ನುಂಟು ಮಾಡಲಿದೆ. ಹಾಗಾಗಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಹೆಚ್ಚು ಅನುಕೂಲವಾಗಲಿದೆ.

ಎಂಜಿನ್, ಮೈಲೇಜ್

ಎಂಜಿನ್, ಮೈಲೇಜ್

ಹೊಸ ಫಿಯೆಟ್ ಪುಂಟೂ ಇವೊ ಕಾರಿನಲ್ಲಿ 1.3 ಲೀಟರ್ ಡೀಸೆಲ್ ಮಲ್ಟಿಜೆಟ್ ಎಂಜಿನ್ ಆಳವಡಿಸಲಾಗಿದೆ. ಈ ಮೊದಲೇ ತಿಳಿಸಿದಂತೆಯೇ ಇದು 90 ಅಶ್ವಶಕ್ತಿ ಉತ್ಪಾದಿಸಲಿದ್ದು, 209 ಎನ್‌ಎಂ ಟಾರ್ಕ್ ಹೊಂದಿರಲಿದೆ. ಅಂತೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರಲಿದೆ. ಇನ್ನು ಭಾರತ ವಾಹನ ಅಧ್ಯಯನ ಸಂಸ್ಥಯ ಮಾನ್ಯತೆಯ ಪ್ರಕಾರ ಫಿಯೆಟ್ ಪುಂಟೊ ಇವೊ ಡೀಸೆಲ್ ಕಾರು ಪ್ರತಿ ಲೀಟರ್‌ಗೆ 20.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಹಳೆಯ ಹಾಗೂ ಹೊಸ ಮಾದರಿ ಹೋಲಿಕೆ

ಹಳೆಯ ಹಾಗೂ ಹೊಸ ಮಾದರಿ ಹೋಲಿಕೆ

ಅದೃಷ್ಟವಶಾತ್ ಹಳೆಯ ಮಾದರಿಯ ಫಿಯೆಟ್ ಪುಂಟೊ ಜೊತೆಗೂ ಹೋಲಿಕೆ ಮಾಡುವ ಸದಾವಕಾಶವೂ ನಮಗೆ ದೊರಕಿದೆ. ಚಿತ್ರದಲ್ಲೇ ನೀವು ನೋಡುತ್ತಿರುವಂತೆಯೇ ಹಳೆಯ ಮಾದರಿಗಿಂತಲೂ 2014 ಫಿಯೆಟ್ ಪುಂಟೊ ಇವೊ ದೊಡ್ಡದಾಗಿರಲಿದ್ದು, ಆಕ್ರಮಣಕಾರಿ ಹಾಗೂ ಕ್ರೀಡಾತ್ಮಕ ವಿನ್ಯಾಸ ಕಾಪಾಡಿಕೊಂಡಿದೆ.

ಬಣ್ಣಗಳು

ಬಣ್ಣಗಳು

ಅಂದ ಹಾಗೆ ಏಳು ಬಣ್ಣಗಳ ಆಯ್ಕೆಗಳಲ್ಲಿ 2014 ಫಿಯೆಟ್ ಪುಂಟೊ ಆಗಮನವಾಗಿದೆ. ಅವುಗಳೆಂದರೆ ಎಕ್ಸಾಟಿಕಾ ರೆಡ್, ಗ್ಲಿಟೆರಟಿ ಗೋಲ್ಡ್, ಹಿಪ್ ಪಾಪ್ ಬ್ಲ್ಯಾಕ್, ಮ್ಯಾಗ್ನಿಸೊ ಗ್ರೇ, ಮಿನಿಮಲ್ ಗ್ರೇ, ಟಸ್ಕನ್ ವೈನ್ ಮತ್ತು ವೋಕಲ್ ವೈಟ್.

ಇದೀಗ 2014 ಫಿಯೆಟ್ ಪುಂಟೊ ಇವೊ ಡೀಸೆಲ್ ಕಾರಿನ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ.

Most Read Articles

Kannada
English summary
Today we are going to talk about the 2014 Fiat Punto Evo driven by us. The Punto that was launched first had unique and flamboyant Italian styling and stood apart from the competition. The hatchback competes in a highly competitive segment against the Volkswagen Polo, Skoda Fabia, Honda Jazz and Hyundai i20.
Story first published: Saturday, September 13, 2014, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X