ರೆನೊ ಕ್ವಿಡ್ ಚಾಲನಾ ವಿಮರ್ಶೆ; ಪುಟ್ಟ ಕಾರಿನ ಹಿರಿಮೆ!

By Nagaraja

ನಿಜ. ಭಾರತೀಯ ವಾಹನ ಮಾರುಕಟ್ಟೆ ಬದಲಾವಣೆಯ ಪರ್ವದಲ್ಲಿದ್ದು, ಸದಾ ಗ್ರಾಹಕರು ಹೊಸತನವನ್ನು ಬಯಸುತ್ತಿದ್ದಾರೆ. ಈ ಎಲ್ಲ ಬೇಡಿಕೆಗಳನ್ನು ನಿಖರವಾಗಿ ಪರಿಶೀಲಿಸಿರುವ ಫ್ರಾನ್ಸ್ ಮೂಲದ ರೆನೊ ಸಂಸ್ಥೆಯು, ಎಂಟ್ರಿ ಲೆವೆಲ್ ವಿಭಾಗದಲ್ಲಿ ಅತಿ ಆಕರ್ಷಕ ಸಣ್ಣ ಕಾರೊಂದನ್ನು ಪರಿಚಯಿಸಿದೆ.

ಅದುವೇ, ರೆನೊ ಕ್ವಿಡ್ [ರೆನೊ ಕ್ವಿಡ್ ಲಾಂಚ್; ಆಲ್ಟೊ ಸದ್ದಡಗಿತೇ? ಮುಂದಕ್ಕೆ ಓದಲು ಕ್ಲಿಕ್ಕಿಸಿ ]

ಹಲವಾರು ಕಾರಣಗಳಿಂದಾಗಿ 'ಎ' ಸೆಗ್ಮೆಂಟ್ ಎಂದು ಕರೆಯಲ್ಪಡುವ ಮಿನಿ ಕಾರುಗಳ ವಿಭಾಗಕ್ಕೆ ರೆನೊ ಕ್ವಿಡ್ ಪ್ರವೇಶವು ಅತಿ ಮಹತ್ವದೆನಿಸುತ್ತದೆ. ಯಾಕೆಂದರೆ ಈಗಲೂ ದೇಶದ ಮಧ್ಯಮ ವರ್ಗದ ಗ್ರಾಹಕರೂ ಅತಿ ಹೆಚ್ಚು ನೆಚ್ಚಿಕೊಂಡಿರುವ ಕಾರು ವಿಭಾಗ ಇದಾಗಿದೆ. ದೇಶದೆಲ್ಲೆಡೆ ಸಾಕಷ್ಟು ಜನಪ್ರಿಯತೆಯನ್ನು ಸಾಧಿಸಿರುವ ಈ ವಿಭಾಗವನ್ನು ಮಾರುತಿ ಸುಜುಕಿ ಆಲ್ಟೊ ಮುನ್ನಡೆಸುತ್ತಿದೆ. ಇದೇ ಕಾರಣಕ್ಕಾಗಿ ಸಂಪೂರ್ಣ ಪೂರ್ವ ತಯಾರಿಯೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ರೆನೊ ಕ್ವಿಡ್ ಸಣ್ಣ ಕಾರನ್ನು ಅಷ್ಟು ಬೇಗ ತಳ್ಳಿ ಹಾಕುವಂತಿಲ್ಲ.

ಹೊಸ ಕಾರು ಪುಟ: ರೆನೊ ಕ್ವಿಡ್ ವೀಕ್ಷಿಸಿ

2.56 ಲಕ್ಷ ರು.ಗಳ ಪ್ರಾರಂಭಿಕ ಬೆಲೆಯನ್ನು (ದೆಹಲಿ ಎಕ್ಸ್ ಶೋ ರೂಂ)ಹೊಂದಿರುವ ರೆನೊ ಕ್ವಿಡ್, ಈ ವಿಭಾಗದಲ್ಲಿ ಮೊದಲ ಬಾರಿಗೆ ಹಲವಾರು ವೈಶಿಷ್ಟ್ಯಗಳೊಂದಿಗೆ ಮುಂದೆ ಬಂದಿದೆ. ತನ್ನ ನಿರ್ಮಾಣವನ್ನು ಶೇಕಡಾ 98ರಷ್ಟನ್ನು ಸ್ಥಳೀಯವಾಗಿಸಿರುವುದು ರೆನೊ ಸ್ಪರ್ಧಾತ್ಮಕ ಬೆಲೆ ಕಾಪಾಡಲು ನೆರವಾಗಿದೆ. ನಿಸ್ಸಾನ್ ಸಹಭಾಗಿತ್ವದಲ್ಲಿ ಬರೋಬ್ಬರಿ 3,000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಿರುವ ರೆನೊ ತನ್ನ ಚೆನ್ನೈ ಘಟಕದಲ್ಲಿ ಕ್ವಿಡ್ ನಿರ್ಮಾಣ ಪ್ರಕ್ರಿಯೆಯನ್ನು ಮುಂದುವರಿಸಲಿದೆ. ಈಗಾಗಲೇ ವಾಹನ ತಜ್ಞರಿಂದ ಮೆಚ್ಚುಗೆಗೆ ಪಾತ್ರವಾಗಿರುವ ರೆನೊ ಕ್ವಿಡ್ ಸೆಗ್ಮೆಂಟ್ ಲೀಡರ್ ಮಾರುತಿ ಆಲ್ಟೊ, ಹ್ಯುಂಡೈ ಇಯಾನ್, ಟಾಟಾ ನ್ಯಾನೋ ಹಾಗೂ ಷೆವರ್ಲೆ ಸ್ಪಾರ್ಕ್ ಮಾದರಿಗಳನ್ನು ಹೇಗೆ ಮೀರಿ ನಿಲ್ಲಲಿದೆ ಎಂಬುದಕ್ಕೆ ಸಂಪೂರ್ಣ ಚಾಲನಾ ವಿಮರ್ಶೆಯೊಂದಿಗೆ ಇಲ್ಲಿ ಉತ್ತರ ಕಂಡು ಹುಡುಕುವ ಪ್ರಯತ್ನ ಮಾಡಲಾಗುವುದು.

ವಿನ್ಯಾಸ

ವಿನ್ಯಾಸ

ಕ್ವಿಡ್ ಒಂದು ಪರಿಪೂರ್ಣ ಸಿಟಿ ಕಾರಾಗಿದ್ದು, ರೆನೊ-ನಿಸ್ಸಾನ್ ಸಿಎಂಎಫ್-ಎ ತಳಹದಿಯಲ್ಲಿ ಅಭಿವೃದ್ಧಿಗೊಂಡಿದೆ. ಇಲ್ಲಿ ಸಿಎಂಎಂಫ್ ಎಂಬುದು ಕಾಮನ್ ಮೊಡ್ಯುಲ್ ಫ್ಯಾಮಿಲಿ ಎಂಬ ಅರ್ಥವನ್ನು ನೀಡುತ್ತಿದ್ದು, ಮುಂಬರುವ ರೆನೊ-ನಿಸ್ಸಾನ್ ಬಜೆಟ್ ಕಾರುಗಳಿಗೆ ವೇದಿಕೆಯಾಗಲಿದೆ. ಇಲ್ಲಿ ರೆನೊದ ಜನಪ್ರಿಯ ಡಸ್ಟರ್ ಕ್ರೀಡಾ ಬಳಕೆಯ ವಾಹನದಿಂದ ಸ್ಪೂರ್ತಿ ಪಡೆದ ವಿನ್ಯಾಸವು ಪ್ರಮುಖ ಆಕರ್ಷಣೆಯಾಗಿದೆ. ಈ ಮೂಲಕ ಹೆಚ್ಚೆಚ್ಚು ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡಿದೆ.

ವಿನ್ಯಾಸ - ಹೊರಮೈ ಹದ್ದುನೋಟ

ವಿನ್ಯಾಸ - ಹೊರಮೈ ಹದ್ದುನೋಟ

  • ದಿಟ್ಟವಾದ ಫ್ರಂಟ್ ಗ್ರಿಲ್,
  • ಸಿ ಆಕಾರದ ಹೆಡ್ ಲ್ಯಾಂಪ್,
  • ಬ್ಲ್ಯಾಕ್ ಬಂಪರ್, ದೇಹ ಬಣ್ಣದ ಬಂಪರ್,
  • ವೀಲ್ ಆರ್ಚ್ ಕ್ಲಾಡಿಂಗ್,
  • ಫ್ರಂಟ್ ಫಾಗ್ ಲ್ಯಾಂಪ್,
  • ಪ್ರಯಾಣಿಕ ಬದಿಯಲ್ಲಿ ಓಆರ್‌ವಿಎಂ,
  • ಡೋರ್ ನಲ್ಲಿ ಬ್ಲ್ಯಾಕ್ ಡಿಕಾಲ್ಸ್, ಸ್ಟೀಲ್ ವೀಲ್ಸ್,
  • ಇಂಟೇಗ್ರೇಟಡ್ ರೂಫ್ ಸ್ಪಾಯ್ಲರ್
  • ವಿನ್ಯಾಸ

    ವಿನ್ಯಾಸ

    ರೆನೊ ಕ್ವಿಡ್ ವಿನ್ಯಾಸವು ಹೆಚ್ಚಿನ ಗೋಚರತೆಯೊಂದಿಗೆ ಅತ್ಯುತ್ತಮ ಚಾಲನಾ ಸ್ಥಾನವನ್ನು ನಿಮ್ಮದಾಗಿಸುತ್ತದೆ. ಅತಿಯಾದ ವಾಹನ ದಟ್ಟಣೆಯಲ್ಲೂ ಇದು ನಿಮಗೆ ಆತ್ಮವಿಶ್ವಾಸದ ಪಯಣವನ್ನು ಖಾತ್ರಿಪಡಿಸಲಿದೆ. ಆಕರ್ಷಕ ಫ್ರಂಟ್ ಗ್ರಿಲ್, ಹೆಡ್ ಲ್ಯಾಂಪ್, ಟರ್ನ್ ಇಂಡಿಕೇಟರ್, ಸ್ಟೈಲಿಷ್ ಫಾಗ್ ಲ್ಯಾಂಪ್ ಮತ್ತು ಇಂಟೇಗ್ರೇಟಡ್ ರೂಫ್ ಸ್ಪಾಯ್ಲರ್ ಪ್ರಮುಖ ಆಕರ್ಷಣೆಯಾಗಿರಲಿದೆ.

    ಒಳಮೈ

    ಒಳಮೈ

    ಸಾಮಾನ್ಯವಾಗಿ ಈ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ಕಾರುಗಳಲ್ಲಿ ಅನೇಕ ವೈಶಿಷ್ಟ್ಯಗಳಿಗೆ ಕತ್ತರಿ ಪ್ರಯೋಗ ಮಾಡಲಾಗುತ್ತದೆ. ಆದರೆ ಇವೆಲ್ಲಕ್ಕಿಂತ ಮಿಗಿಲಾಗಿ ಕ್ವಿಡ್ ಒಳಮೈ ಪರಿಣಾಮಕಾರಿ ಹಾಗೂ ಪ್ರಭಾವಿ ಎನಿಸಿಕೊಂಡಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

    ಒಳಮೈ

    ಒಳಮೈ

    ನಿಮ್ಮ ದೈನಂದಿನ ಪಯಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಒಳಮೈ ವಿನ್ಯಾಸಗೊಳಿಸಲಾಗಿದ್ದು, ನಾಲ್ಕು ವಿಧಗಳಲ್ಲಿ ಹೊಂದಾಣಿಸಬಹುದಾದ ಚಾಲಕ ಸೀಟು, ಸ್ಮಾರ್ಟ್ ಸ್ಟೋರೆಜ್ ಜಾಗ (ಸೆಂಟ್ರಲ್ ಕನ್ಸಾಲ್ ಜೊತೆ ಬಾಟಲಿ ಹೋಲ್ಡರ್, ಮೂರು ಶ್ರೇಣೀಕೃತ ಗ್ಲೋವ್ ಬಾಕ್ಸ್ ಮತ್ತು ಫೋನ್ ಚಾರ್ಜ್ ಮಾಡಲು ಪವರ್ ಸಾಕೆಟ್) ಇದರಲ್ಲಿರಲಿದೆ.

    ಒಳಮೈ

    ಒಳಮೈ

    ವಿಶೇಷ ವಿನ್ಯಾಸಿತ ಮುಂಭಾಗದ ಸೀಟುಗಳು (ಚಿತ್ರದಲ್ಲಿ ತೋರಿಸಿರುವಂತೆಯೇ) ಒರೆಗಿ ಕುಳಿತುಕೊಳ್ಳಲು ಸಹಕಾರಿಯಾಗಲಿದ್ದು, ಬೇಕಾದಷ್ಟು ಲೆಗ್ ರೂಂ ಹಾಗೂ ಹೆಡ್ ರೂಂ ಒದಗಿಸಿದೆ.

    ಒಳಮೈ

    ಒಳಮೈ

    ಕ್ವಿಡ್ ಕಾರಿನಲ್ಲಿ ಎಲ್ಲ ವೈಶಿಷ್ಟ್ಯಗಳನ್ನು ಅಚ್ಚುಕಟ್ಟಾಗಿ ಜೋಡಣೆ ಮಾಡಿರುವುದು ಮೆಚ್ಚುಗೆಗೆ ಪಾತ್ರವಾಗುತ್ತದೆ. ಇದೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಏಳು ಇಂಚುಗಳ ಟಚ್ ಸ್ಕ್ರೀನ್ ಮೀಡಿಯಾನೇವ್ ಸಿಸ್ಟಂ ನಿಮಗೆ ಪ್ರೀಮಿಯಂ ಕಾರಿನಂತೆ ಭಾಸವಾಗಲಿದೆ. ಹಾಗಿದ್ದರೂ ಬೆಲೆ ಕಡಿತ ಮಾಡುವ ನಿಟ್ಟಿನಲ್ಲಿ ಹಿಂಬದಿಯ ಪವರ್ ವಿಂಡೋಗೆ ಕತ್ತರಿ ಪ್ರಯೋಗ ಮಾಡಿದ್ದರೂ ಒಟ್ಟಾರೆಯಾಗಿ ಆರಾಮದಾಯಕ ಹಾಗೂ ಅನುಕೂಲಕರ ಒಳಾಂಗಣದ ಅನುಭವ ಪಡೆಯಬಹುದಾಗಿದೆ.

    ಒಳಮೈ - ಒಂದು ಪುಟ್ಟ ರೌಂಡಪ್

    ಒಳಮೈ - ಒಂದು ಪುಟ್ಟ ರೌಂಡಪ್

    • ಮೊನೊ ಟೋನ್ ಡ್ಯಾಶ್ ಬೋರ್ಡ್,
    • ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್,
    • ಸ್ಪೋರ್ಟಿ ಸ್ಟೀರಿಂಗ್ ವೀಲ್ ಜೊತೆ ಪಿಯಾನೊ ಬ್ಲ್ಯಾಕ್ ಆಸೆಂಟ್,
    • ಸ್ಟೀರಿಂಗ್ ವೀಲ್ ಲೆಥರ್ ಹೋದಿಕೆ,
    • ಪಿಯಾನೊ ಬ್ಲ್ಯಾಕ್ ಸೆಂಟ್ರಲ್ ಫಾಸಿಯಾ,
    • ಸೆಂಟ್ರಲ್ ಏರ್ ವೆಂಟ್ಸ್
    • ಎಂಜಿನ್ ಮತ್ತು ಗೇರ್ ಬಾಕ್ಸ್

      ಎಂಜಿನ್ ಮತ್ತು ಗೇರ್ ಬಾಕ್ಸ್

      ಇದರ 800 ಸಿಸಿ ತ್ರಿ ಸಿಲಿಂಡರ್ 12 ವಾಲ್ವ್ ಆಲ್ ಅಲ್ಯೂಮಿನಿಯಂ ಪೆಟ್ರೋಲ್ ಎಂಜಿನ್ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದೆ. ಇದರ ಎಸ್‌ಸಿಇ (Smart Control Efficiency) ಎಂಜಿನ್ ಅನ್ನು ಪ್ರಮುಖವಾಗಿಯೂ ರೆನೊ ಕ್ವಿಡ್ ಗಾಗಿ ಅಭಿವೃದ್ಧಿಪಡಿಸಲಾಗಿದೆ. ನಿಕಟ ಭವಿಷ್ಯದಲ್ಲೇ ರೆನೊ ಆಟೋಮ್ಯಾಟಿಕ್ ಬರುವ ಬಗ್ಗೆಯೂ ಮಾಹಿತಿಯಿದೆ.

      54 ಅಶ್ವಶಕ್ತಿ 72 ಎನ್‌ಎಂ ತಿಗುರುಬಲ

      ಆರಾಮ ಮತ್ತು ಅನುಕೂಲತೆ

      ಆರಾಮ ಮತ್ತು ಅನುಕೂಲತೆ

      • ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್,
      • ಫ್ರಂಟ್ ಪವರ್ ವಿಂಡೋ, ಹೀಟರ್,
      • ಎಸಿ ಆನ್ ಬೋರ್ಡ್ ಟ್ರಿಪ್ ಕಂಪ್ಯೂಟರ್,
      • ಬಾಟಲಿ ಹೋಲ್ಡರ್,
      • ಓಪನ್ ಸ್ಟೋರೆಜ್, ಗ್ಲೋವ್ ಬಾಕ್ಸ್,
      • ರಿಯರ್ ಪಾರ್ಸೆಲ್ ಟ್ರೇ,
      • ಗೇರ್ ಶಿಫ್ಟ್ ಇಂಡಿಕೇಟರ್
      • ಆಯಾಮ

        ಆಯಾಮ

        669 ಕೆ.ಜಿ ತೂಕದ ರೆನೊ ಕ್ವಿಡ್ 3,679ಎಂಎಂ ಉದ್ದ, 1,579 ಎಂಎಂ ಅಗಲ ಮತ್ತು 1,478ಎಂಎಂ ಎತ್ತರವನ್ನು ಹೊಂದಿದೆ. ಅಂದರೆ ಆಯಾಮದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿದೆ. ನಯವಾದ ಸ್ಟೀರಿಂಗ್ ಹ್ಯಾಂಡ್ಲಿಂಗ್, ಎತ್ತರದ ಚಾಲನಾ ಸ್ಥಾನ, 13 ಇಂಚುಗಳ ಅಲಾಯ್ ವೀಲ್ ಗಳು ನಿಯಂತ್ರಿತ ಚಾಲನೆಗೆ ಹೇತುವಾಗಿದೆ.

        ಮೈಲೇಜ್, ಚಾಲನಾ ಅನುಭವ

        ಮೈಲೇಜ್, ಚಾಲನಾ ಅನುಭವ

        ನಗರ ಪ್ರದೇಶದಲ್ಲಿ ಹ್ಯಾಂಡ್ಲಿಂಗ್ ಪರಿಣಾಮಕಾರಿ ಎನಿಸಿಕೊಂಡರೂ ಹೆದ್ದಾರಿಯಲ್ಲಿ ಆವೇಗದ ಕೊರತೆ ಅನುಭವಿಸುತ್ತದೆ. ಕ್ಲಚ್ ಪೆಡಲ್ ಹಗುರವಾಗಿದ್ದು, ಕಡಿಮೆ ವೇಗದಲ್ಲೂ ಗೇರ್ ಬಾಕ್ಸ್ ಸರಾಗವಾಗಿ ಕೆಲಸ ಮಾಡುತ್ತೆದ. ಫ್ರಂಟ್ ಡಿಸ್ಕ್ ರಿಯರ್ ಡ್ರಮ್ ಬ್ರೇಕ್ ಮತ್ತು ಸಸ್ಫೆನ್ಷನ್ ವ್ಯವಸ್ಥೆಯು ತೃಪ್ತಿದಾಯಕವಾಗಿದ್ದು, ವಾಹನ ಅಧ್ಯಯನ ಸಂಸ್ಥೆಯ ಪ್ರಕಾರ ಪ್ರತಿ ಲೀಟರ್ ಗೆ 25.17 ಕೀ.ಮೀ. ನೀಡುವ ಸಾಮರ್ಥ್ಯ ಹೊಂದಿರುತ್ತದೆ.

        ಮಲ್ಟಿಮೀಡಿಯಾ

        ಮಲ್ಟಿಮೀಡಿಯಾ

        • ಸಿಂಗಲ್ ಡಿನ್ ಸ್ಟೀರಿಯೋ ಜೊತೆ ರೇಡಿಯೋ ಎಎಂ/ಎಫ್‌ಎಂ,
        • ಎಂಪಿ3, ಬ್ಲೂಟೂತ್ ಆಡಿಯೋ ಸ್ಟ್ರೀಮಿಂಗ್,
        • ಹ್ಯಾಂಡ್ಸ್ ಫ್ರಿ ಟೆಲಿಫೋನ್,
        • ಮೀಡಿಯಾ ನೇವ್,
        • ರೂಫ್ ಮೈಕ್,
        • ಯುಎಸ್‌ಬಿ ಪೋರ್ಟ್, ಆಕ್ಸ್ ಇನ್ ಪೋರ್ಟ್,
        • ಫ್ರಂಟ್ ಸ್ಪೀಕರ್, ಆ್ಯಂಟಿನಾ, 12 ವಾಟ್ ಪವರ್ ಸಾಕೆಟ್
        • ಭದ್ರತೆ

          ಭದ್ರತೆ

          ಆಧುನಿಕ ಕಾರು ಖರೀದಿಗಾರರಲ್ಲಿ ಸುರಕ್ಷತೆಯೂ ಪ್ರಮುಖ ಮಾನದಂಡವಾಗಿ ಬಿಟ್ಟಿದೆ. ರೆನೊ ಕೂಡಾ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಟಾಪ್ ಎಂಡ್ ವೆರಿಯಂಟ್ ನಲ್ಲಿ (ಆರ್‌ಎಕ್ಸ್‌ಟಿ) ಐಚ್ಛಿಕ ಚಾಲಕಾ ಏರ್ ಬ್ಯಾಗ್ ಸೌಲಭ್ಯವನ್ನು ನೀಡುತ್ತಿದೆ. ಭಾರತದಲ್ಲಿ ನಿರ್ಮಾಣವಾಗಲಿರುವ ರೆನೊ ಕ್ವಿಡ್ ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿರಿಸಿಕೊಳ್ಳಲಿದ್ದು, ಈಗಿನ ಮತ್ತು ಭವಿಷ್ಯದ ಭಾರತೀಯ ಭದ್ರತಾ ಮಾನದಂಡಗಳನ್ನು ಖಾತ್ರಿಪಡಿಸಿದೆ.

          ವೆರಿಯಂಟ್, ಬೆಲೆ, ಬಣ್ಣ

          ವೆರಿಯಂಟ್, ಬೆಲೆ, ಬಣ್ಣ

          ರೆನೊ ಕ್ವಿಡ್ ದೆಹಲಿ ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 2.56 ಲಕ್ಷ ರು.ಗಳಾಗಿದ್ದು, ನಾಲ್ಕು ವೆರಿಯಂಟ್ ಗಳಲ್ಲಿ ಮಾರಾಟವಾಗಲಿದೆ. ಅಲ್ಲದೆ ಐದು ಬಣ್ಣಗಳ ಆಯ್ಕೆಯೂ ಇರುತ್ತದೆ.

          ವೆರಿಯಂಟ್: ಸ್ಟ್ಯಾಂಡರ್ಡ್, ಆರ್‌ಎಕ್ಸ್‌ಇ, ಆರ್‌ಎಕ್ಸ್‌ಎಲ್ ಮತ್ತು ಆರ್‌ಎಕ್ಸ್‌ಟಿ

          ಬಣ್ಣಗಳು: ಫಿಯರಿ ರೆಡ್, ಐಸ್ ಕೂಲ್ ವೈಟ್, ಪ್ಲಾನೆಟ್ ಗ್ರೇ, ಮೂನ್ ಲೈಟ್ ಸಿಲ್ವರ್ ಮತ್ತು ಔಟ್ ಬ್ಯಾಗ್ ಬ್ರೋನ್ಸ್.

          ರೆನೊ ಕ್ವಿಡ್ ಆನ್ ರೋಡ್ ಬೆಲೆಗಾಗಿ ಕ್ಲಿಕ್ಕಿಸಿರಿ

          ಪ್ಲಸ್ ಪಾಯಿಂಟ್

          ಪ್ಲಸ್ ಪಾಯಿಂಟ್

          • ಇದೇ ಮೊದಲ ಬಾರಿಗೆ ಈ ವಿಭಾಗದಲ್ಲಿ ಏಳು ಇಂಚುಗಳ ಟಚ್ ಸ್ಕ್ರೀನ್ ಡಿಸ್ ಪ್ಲೇ,
          • ಹೆಚ್ಚು ಸ್ಥಳಾವಕಾಶ,
          • ಪರಿಣಾಮಕಾರಿ ಎಂಜಿನ್
          • ರಿಮೋಟ್ ಕೀಲೆಸ್ ಎಂಟ್ರಿ,
          • ಅತ್ಯುತ್ತಮ ರಸ್ತೆ ಸಾನಿಧ್ಯ,
          • ಚಾಲಕ ಏರ್ ಬ್ಯಾಗ್ (ಆರ್‌ಎಕ್ಸ್‌ಟಿ ವೆರಿಯಂಟ್)
          • ಅತ್ಯುತ್ತಮ ಒಳಮೈ/ಹೊರಮೈ ವಿನ್ಯಾಸ,
          • ಆನ್ ಬೋರ್ಡ್ ಟ್ರಿಪ್ ಕಂಪ್ಯೂಟರ್
          • ಪ್ಲಸ್ ಪಾಯಿಂಟ್

            ಪ್ಲಸ್ ಪಾಯಿಂಟ್

            • ಬೆಸ್ಟ್ ಇನ್ ಕ್ಲಾಸ್ ಮೈಲೇಜ್: 25 kmpl
            • ಬೆಸ್ಟ್ ಇನ್ ಕ್ಲಾಸ್ ರೈಡಿಂಗ್ ಮತ್ತು ಹ್ಯಾಂಡ್ಲಿಂಗ್,
            • ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ 300 ಲೀಟರ್,
            • ಬೆಸ್ಟ್ ಇನ್ ಕ್ಲಾಸ್ ಗ್ರೌಂಡ್ ಕ್ಲಿಯರನ್ಸ್ 180 ಎಂಎಂ
            • ವಾರಂಟಿ 2 ವರ್ಷ/50,000 ಕೀ.ಮೀ.
            • ವಾರಂಟಿ 3 ವರ್ಷ/60,000 ಅಥವಾ 4 ವರ್ಷ/80,000 ಕೀ.ಮೀ.ಗಳಿಗೆ ವಿಸ್ತರಿಸುವ ಅವಕಾಶ
            • ಹಿನ್ನಡೆ

              ಹಿನ್ನಡೆ

              • ಪ್ಲಾಸ್ಟಿಕ್ ವಿಂಗ್ ಮಿರರ್
              • ಟ್ಯಾಕೋಮೀಟರ್ ಕೊರತೆ (ಆರ್‌ಪಿಎಂ)
              • ಕಡಿಮೆ ಗೇರ್ ನಲ್ಲೂ ನಾಯ್ಸ್, ವೈಬ್ರೇಷನ್ ಮತ್ತು ಹಾರ್ಚ್ ನೆಶ್ (ಎನ್‌ವಿಎಚ್) ಮಟ್ಟ ಜಾಸ್ತಿ,
              • ಸ್ಟೀರಿಂಗ್ ವೀಲ್ ನಲ್ಲಿ ಸ್ವಿಚ್ ನಿಯಂತ್ರಣದ ಕೊರತೆ
              • ಅಂತಿಮ ತೀರ್ಪು

                ಅಂತಿಮ ತೀರ್ಪು

                ಕನ್ನಡದಲ್ಲೊಂದು ಮಾತಿದೆ. 'ಹಳೆಯ ಬಾಟಲಿಯಲ್ಲಿ ಹೊಸ ಮದ್ಯ'. ನಿಮಗಂತೂ ಹಳೆಯ ಬಾಟಲಿಯಲ್ಲಿ ಮತ್ತದೇ ಮದ್ಯವನ್ನು ಕುಡಿದು ಸಾಕಾಗಿ ಹೋಗಿದ್ದರೆ ಹೊಸ ಬಾಟಲಿಯಲ್ಲಿ ಹೊಸ ಮದ್ಯದೊಂದಿಗೆ ರೆನೊ ಕ್ವಿಡ್ ಕಾರನ್ನು ಕಣ್ಣು ಮುಚ್ಚಿಕೊಂಡು ಆಯ್ಕೆ ಮಾಡಬಹುದಾಗಿದೆ. ಸಹಜವಾಗಿಯೇ ಸಮಕಾಲೀನ ಪರಿಸ್ಥಿತಿಯಲ್ಲಿ ಸರ್ವೀಸ್ ಮತ್ತು ಡೀಲರ್ ಶಿಪ್ ಜಾಲ ರೆನೊ ಸಂಸ್ಥೆಗೆ ಸಮಸ್ಯೆಯಾಗಿ ಕಾಡಲಿದೆ. ಇದಕ್ಕೂ ರೆನೊ ಕ್ವಿಡ್ ಆಪ್ ನಲ್ಲೇ ಬುಕ್ಕಿಂಗ್ ಮಾಡಿಕೊಳ್ಳುವ ಹಾಗೂ ವರ್ಚುವಲ್ ವೆಬ್ ಸೈಟ್ ತೆರೆಯುವ ಮೂಲಕ ಸಮಸ್ಯೆಗೆ ಪರಿಹಾರ ಕಂಡು ಹುಡುಕುವ ಪ್ರಯತ್ನ ಮಾಡಿದೆ. ಒಟ್ಟಾರೆಯಾಗಿ ಆಲ್ಟೊ 800 ಜೊತೆ ಹೋಲಿಕೆ ಮಾಡಿದಾಗ ಆಧುನಿಕ ವಿನ್ಯಾಸದಿಂದ ಹಿಡಿದು, ನಾವೀನ್ಯ ತಂತ್ರಗಾರಿಕೆ, ಕೈಗೆಟುಕುವ ದರ, ವೈಶಿಷ್ಟ್ಯ ಹಾಗೂ ನಿರ್ವಹಣೆಯ ವಿಚಾರದಲ್ಲಿ ಮೀರಿ ನಿಂತಿದೆ. ಯಾವುದಕ್ಕೂ ಒಮ್ಮೆ ಟೆಸ್ಟ್ ಡ್ರೈವ್ ಮಾಡಲು ಮರೆಯದಿರಿ. ಹ್ಯಾಪಿ ರೈಡಿಂಗ್!

                ಇವನ್ನೂ ಓದಿ

                ನಂ.1 ಸ್ಥಾನಕ್ಕೆ ರೇಸ್; ಆಲ್ಟೊ vs ಕ್ವಿಡ್ ವಿಜೇತರು ಯಾರು? ಮುಂದಕ್ಕೆ ಓದಿ

Most Read Articles

Kannada
English summary
2015 Renault Kwid Review: Drive The Change
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X