ನೆಟ್, ಬೋಲ್ಟ್ ಕಳಚಿಟ್ಟ ಟಾಟಾ; ಹಣೆಬರಹ ಬದಲಾದಿತೇ?

By Nagaraja

ಒಂದೆಡೆ ಟಾಟಾ ಕಾರುಗಳೆಂದರೆ ದೇಶೀಯ ತಯಾರಕ ಸಂಸ್ಥೆಯೆಂಬ ಮಮತೆ. ಇನ್ನೊಂದೆಡೆ ಪದೇ ಪದೇ ಗುಣಮಟ್ಟತೆ ಕಾಪಾಡಿಕೊಳ್ಳಲು ವೈಫಲ್ಯವಾಗಿರುವುದು ಟಾಟಾ ಕಾರನ್ನು ಖರೀದಿಸಬೇಕೇ ಎಂಬ ಗೊಂದಲ. ಈ ಎಲ್ಲದರ ನಡುವೆ ಕಳೆದ ಅನೇಕ ವರ್ಷಗಳಲ್ಲಿ ಟ್ಯಾಕ್ಸಿ ಕಾರೆಂಬ ಕಪ್ಪು ಪಟ್ಟಿ ಕಟ್ಟಿಕೊಂಡಿದೆ.

ಇವನ್ನೂ ಓದಿ: ಕೊನೆಗೂ ಬಂತು ಒಂದು ಉತ್ತಮ ಟಾಟಾ ಕಾರು

ಹಣಕ್ಕೆ ತಕ್ಕ ಮೌಲ್ಯವನ್ನು ನೀಡುತ್ತಿದ್ದರೂ ಟಾಟಾ ಕಾರುಗಳ 'ಫಿಟ್ ಆಂಡ್ ಫಿನಿಶ್' ಬಗ್ಗೆ ಪ್ರಶ್ನೆಗಳು ವರ್ಧಿಸುತ್ತಲೇ ಇವೆ. ಹಾಗಿರುವಾಗ ಗ್ರಾಹಕರ ಮನೋಸ್ಥಿತಿಯನ್ನು ಬದಲಾಯಿಸುವುದೇ ದೊಡ್ಡ ಸವಾಲಾಗಿತ್ತು. ಹೀಗೆ ಟಾಟಾ ಸಂಸ್ಥೆಯ ನಿರಂತರ ಅಧ್ಯಯನದ ಬಳಿಕ ಕಳೆದ ಆಗಸ್ಟ್ ತಿಂಗಳಲ್ಲಿ ಜೆಸ್ಟ್ ಕಾಂಪಾಕ್ಟ್ ಕಾರು ಪರಿಚಯಿಸಲಾಗಿತ್ತು. ಇದು ಟಾಟಾ ಪಾಲಿಗೆ ಗೇಮ್ ಚೇಂಜರ್ ಎಂದೇ ಪರಿಗಣಿಸಲ್ಪಟ್ಟಿತ್ತು.

ಇವನ್ನೂ ಓದಿ: ಸಿಯಾಝ್ ಸವಾಲು ಎದುರಿಸಲು ಫಿಯೆಸ್ಟಾ ಶಕ್ತವೇ?

ಎಲ್ಲೆಡೆಗಳಿಂದ ಜೆಸ್ಟ್ ಕಾರಿಗೆ ಉತ್ತಮ ಪ್ರತಿಕ್ರಿಯೆಯನ್ನು ಗಿಟ್ಟಿಸಿಕೊಂಡಿರುವ ಟಾಟಾ ಸಂಸ್ಥೆಯು ನೆಟ್, ಬೋಲ್ಟ್ ಇನ್ನಷ್ಟು ಬಿಗಿಯಾಗಿಸುವ ತವಕದಲ್ಲಿದೆ. ಹೌದು, ಟಾಟಾ ನಾವೀನ್ಯತೆಯ ತಂತ್ರಗಾರಿಕೆಗೆ ಕಾರಣವಾಗಿರುವ ಟಾಟಾ ಬೋಲ್ಟ್ ಹ್ಯಾಚ್‌ಬ್ಯಾಕ್ ಕಾರು ಇದೇ ವರ್ಷಾಂತ್ಯದಲ್ಲಿ ಬಿಡುಗಡೆಯಾಗುತ್ತಿದೆ.

ಬೋಲ್ಟ್ ಅಂದಾಜು ಬೆಲೆ: 4.2 ಲಕ್ಷ ರು. (ಎಕ್ಸ್ ಶೋ ರೂಂ)

ಟಾಟಾ ಬೋಲ್ಟ್ ಟೆಸ್ಟ್ ಡ್ರೈವ್ ವಿಮರ್ಶೆ

ಆದರೆ ಪ್ರಶ್ನೆ ಮಾತ್ರ ಇನ್ನು ಹಾಗೆಯೇ ಉಳಿದಿದೆ. ಟಾಟಾ ಇಂಡಿಕಾ ವಿಸ್ಟಾ ಬದಲಿ ಕಾರಾಗಿ ಗುರುತಿಸಿಕೊಂಡಿರುವ ಬೋಲ್ಟ್ ನಿಜಕ್ಕೂ ವಾಹನ ಪ್ರೇಮಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಲಿದೆಯೇ? ಪ್ರಾಯೋಗಿಕವಾಗಿಯೂ ಇದು ಮಾರುತಿ ಸ್ವಿಫ್ಟ್ ಹಾಗೂ ಹ್ಯುಂಡೈ ಐ10 ಕಾರಿನ ಸವಾಲನ್ನು ಎದುರಿಸಲು ಎಷ್ಟು ಸಮರ್ಥವಾಗಿದೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗೋಣವೇ ನಮ್ಮ ವಾಹನ ತಜ್ಞರು ನಡೆಸಿರುವ ಟಾಟಾ ಬೋಲ್ಟ್ ಮೀಡಿಯಾ ಡ್ರೈವ್‌ ರಿಪೋರ್ಟ್‌ನತ್ತ...

ಅವಲೋಕನ

ಅವಲೋಕನ

ಪರೀಕ್ಷೆ ಮಾಡಿದ ಮಾದರಿ: ಟಾಟಾ ಬೋಲ್ಟ್ (ಎಕ್ಸ್‌ಟಿ, ಟಾಪ್ ಎಂಡ್)

ಇಂಧನ ವಿಧ: ಪೆಟ್ರೋಲ್

ರಸ್ತೆ ಪರೀಕ್ಷೆ: ಉದಯ್‌ಪುರ್ (ರಾಜಸ್ತಾನ)

ಪ್ರಮುಖಾಂಶಗಳು

ಪ್ರಮುಖಾಂಶಗಳು

ಟಾಟಾ ಬೋಲ್ಟ್ ಪೆಟ್ರೋಲ್ (ಎಕ್ಸ್‌ಟಿ)

ಎಂಜಿನ್: ರೆವೊಟ್ರಾನ್ 1.2 ಟಿ, 4 ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಪಿಎಫ್‌ಐ (MPFi)

ಟ್ರಾನ್ಸ್‌ಮಿಷನ್: 5 ಸ್ಪೀಡ್ ಮ್ಯಾನುವಲ್

ಎಂಜಿನ್ ಸಾಮರ್ಥ್ಯ: 1193 ಸಿಸಿ

ಗರಿಷ್ಠ ಪವರ್: 88.8 ಬಿಎಚ್‌ಪಿ (5000 ಆರ್‌ಪಿಎಂ)

ಗರಿಷ್ಠ ಟಾರ್ಕ್: 140 ಎನ್‌ಎಂ (4000 ಆರ್‌ಪಿಎಂ)

ಚಾಲನಾ ವಿಧ: ಫ್ರಂಟ್ ವೀಲ್ ಡ್ರೈವ್

ಸುರಕ್ಷತೆ

ಏರ್ ಬ್ಯಾಗ್: ಚಾಲಕ ಹಾಗೂ ಮುಂಬದಿಯ ಪ್ರಯಾಣಿಕರಿಗೆ

ಸೆಂಟ್ರಲ್ ಲಾಕಿಂಗ್: ಇದೆ ರಿಮೋಟ್ ಜೊತೆಗೆ

ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್: ಇದೆ

ವಿನ್ಯಾಸ - ಮುಂಭಾಗ

ವಿನ್ಯಾಸ - ಮುಂಭಾಗ

ಹೊಸ ಟಾಟಾ ಬೋಲ್ಟ್ ಮುಂಭಾಗದಲ್ಲಿ ಹೆಚ್ಚುವರಿ ಎತ್ತರವು ಪಕ್ವತೆಯನ್ನು ಪ್ರತಿಬಿಂಬಿಸುತ್ತದೆ. ಇದು ಒಟ್ಟಾರೆ ಆಯಾಮವನ್ನು ಸಂಯೋಜಿಸುವುದರ ಜೊತೆಗೆ ಈ ಹ್ಯಾಚ್‌ಬ್ಯಾಕ್ ಕಾರಿಗೆ ಇನ್ನಷ್ಟು ಸಮತೋಲನ ನೀಡುತ್ತದೆ. ಅಂದವಾಗಿ ಕೆತ್ತನೆ ಮಾಡಿದಂತಿರುವ ಇದರ ಬೊನೆಟ್ ಮೇಲ್ಗಡೆಯಾಗಿ ಶಕ್ತಿಯ ಉಬ್ಬರದ ಸಂಕೇತವಿದೆ. ಇವೆಲ್ಲದರ ಜೊತೆಗೆ ಹನಿಕಾಂಬ್ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಹಾಗೂ ಫಾಗ್ ಲ್ಯಾಂಪ್ ಬಿಜಲ್ ಕಾರಿಗೆ ಇನ್ನಷ್ಟು ತೀಕ್ಷ್ಣತೆಯನ್ನು ನೀಡುತ್ತದೆ.

ನೋಡಲು ಸುಂದರವಾಗಿರುವ ಬೋಲ್ಟ್ ಕಳೆಗುಂದಿರುವ ವಿಸ್ಟಾಗೆ ಸ್ಪಷ್ಟ ಬದಲಿ ಆಯ್ಕೆ ಎಂದೇ ಹೇಳಬಹುದು. ಇದು ವಿಸ್ಟಾದ ಪ್ರೀಮಿಯಂ ವರ್ಷನ್ ಕೊರತೆಯನ್ನು ನೀಗಿಸಲಿದೆ.

ವಿನ್ಯಾಸ - ಬದಿ

ವಿನ್ಯಾಸ - ಬದಿ

ಬದಿಯಿಂದ ವೀಕ್ಷಿಸಿದಾಗ ಕಪ್ಪು ವರ್ಣದ 'ಸಿ' ಪಿಲ್ಲರ್ ಕಾರಿಗೆ ಹೆಚ್ಚು ದಿಟ್ಟ ನೋಟ ಪ್ರದಾನ ಮಾಡುತ್ತದೆ. ಇದು ಮೇಲೆ ಹಾಗೂ ಕೆಳಕ್ಕೆ ಎರಡು ಡೋರ್ ಲೈನ್‌ಗಳನ್ನು ಪಡೆದುಕೊಂಡಿದ್ದು, ಕ್ರೀಡಾತ್ಮಕ ವಿನ್ಯಾಸಕ್ಕೆ ಕಾರಣವಾಗಿದೆ. ಹಾಗೆಯೇ ತೇಲುವಂತಹ ರೂಫ್ ಸ್ಪಾಯ್ಲರ್ ಏರೋಡೈನಾಮಿಕ್ ವಿನ್ಯಾಸಕ್ಕೆ ಕಾರಣವಾಗಿದೆ. ಇವೆಲ್ಲವೂ ಉತ್ತಮ ರೀತಿಯಲ್ಲಿ ಸಂಯೋಜನೆ ಮಾಡುವಲ್ಲಿ ಸಂಸ್ಥೆ ಯಶ ಕಂಡಿದೆ.

ವಿನ್ಯಾಸ - ಹಿಂಭಾಗ

ವಿನ್ಯಾಸ - ಹಿಂಭಾಗ

ಹಿಂಭಾಗದಲ್ಲೂ ಕ್ರೀಡಾತ್ಮಕ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ದೊಡ್ಡದಾದ ನಂಬರ್ ಪ್ಲೇಟ್ ಮೇಲ್ಗಡೆ ಕ್ರೋಮ್ ಸ್ಪರ್ಶ ಕಾಣಬಹುದಾಗಿದೆ. ಇದರ ಟೈಲ್ ಲ್ಯಾಂಪ್‌ಗಳು ಚೊಕ್ಕಟವಾಗಿದ್ದು, ಕೆಳಗಡೆ ಸ್ಕಿಡ್ ಪ್ಲೇಟ್ ಶೈಲಿಯ ಬಂಪರ್‌ನ ಮೇಲೆ ರೆಡ್ ರಿಫ್ಲೆಕ್ಟರ್ ನೋಡಬಹುದಾಗಿದೆ. ಇವೆಲ್ಲವೂ ಟಾಟಾದ ಪುಣೆ (ಭಾರತ), ಬ್ರಿಟನ್ (ಕೊವೆಂಟ್ರಿ) ಹಾಗೂ ಇಟಲಿಯ (ಟ್ಯುರಿನ್) ಡಿಸೈನ್ ಸೆಂಟರ್ ಪರಿಶ್ರಮದ ಫಲವಾಗಿದೆ.

ಆಯಾಮ (ಹೊರಗಡೆ)

(ಉದ್ದ xಅಗಲ xಎತ್ತರ): 3825 ಎಂಎಂ x 1695 ಎಂಎಂ x 1562 ಎಂಎಂ

ಪ್ರತಿಸ್ಪರ್ಧಿ ಮಾರುತಿ ಸ್ವಿಫ್ಟ್ ಆಯಾಮ

(ಉದ್ದ xಅಗಲ xಎತ್ತರ): 3850 ಎಂಎಂ x 1695 ಎಂಎಂ x 1530 ಎಂಎಂ

ಒಳಮೈ

ಒಳಮೈ

ಟಾಟಾ ಕಾರಿನಲ್ಲಿ ಹಿಂದೆಂದೂ ಕಾಣದ ಗುಣಮಟ್ಟತೆಯನ್ನು ಕಾಯ್ದುಕೊಂಡಿರುವುದು ನಮ್ಮಲ್ಲಿ ಅಚ್ಚರಿಗೆ ಕಾರಣವಾಗಿದೆ. ಇದು ಟಾಟಾ ಭವಿಷ್ಯವನ್ನೇ ಬದಲಾಯಿಸಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಒಟ್ಟಾರೆ ಲೇಔಟ್ ತೃಪ್ತಿದಾಯಕವಾಗಿದ್ದು, ಸರಳ ಹಾಗೂ ಸ್ಟೈಲಿಶ್ ಎನಿಸಿಕೊಂಡಿದೆ. ಇನ್ಸ್ರುಮೆಂಟ್ ಪ್ಯಾನೆಲ್ ಹಾಗೂ ಮಾಹಿತಿ ಮನರಂಜನಾ ವ್ಯವಸ್ಥೆಯನ್ನು ಬಹಳ ಅಚ್ಚುಕಟ್ಟಾಗಿ ಜೋಡಣೆ ಮಾಡಲಾಗಿದೆ.

ಆಸನ

ಆಸನ

ಬಹುತೇಕ ಚಾಲಕರಿಗೆ ಡ್ರೈವಿಂಗ್ ಸ್ಥಾನವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇಲ್ಲಿ ಬೋಲ್ಟ್ ಬಗ್ಗೆ ಮಾತನಾಡುವುದಾದ್ದಲ್ಲಿ ಡ್ರೈವಿಂಗ್ ಸ್ಥಾನ ಉತ್ತಮವಾಗಿದ್ದು ಪರಿಣಾಮಕಾರಿ ಗೋಚರತೆಯನ್ನು ನೀಡುತ್ತದೆ. ಹೊಂದಾಣಿಸಬಹುದಾದ ಸ್ಟೀರಿಂಗ್ ವೀಲ್ ಹಾಗೂ ಸೀಟು ಎತ್ತರದ ಮೂಲಕ ಪರಿಪೂರ್ಣ ಚಾಲನಾ ವ್ಯವಸ್ಥೆಯನ್ನು ಕಾಪಾಡಿಕೊಳ್ಳಬಹುದಾಗಿದೆ.

ಕ್ಯಾಬಿನ್

ಕ್ಯಾಬಿನ್

ಕ್ಯಾಬಿನ್ ಸ್ಥಳಾವಕಾಶದ ವಿಚಾರದಲ್ಲಿ ಟಾಟಾ ಸದಾ ಮೆಚ್ಚುಗೆಗೆ ಪಾತ್ರವಾಗಿದೆ. ಬೋಲ್ಟ್ ಕೂಡಾ ಇದಕ್ಕೆ ಹೊರತಾಗಿಲ್ಲ. ಹೆಡ್ ರೂಂ ಹಾಗೂ ಹಿಂಭಾಗದ ಸೀಟು ಲೆಗ್ ರೂಂಗಳು ಚೈರ್ ರೀತಿಯ ಸಿಟ್ಟಿಂಗ್ ವ್ಯವಸ್ಥೆಯ ಅನುಭವ ನೀಡುತ್ತಿದ್ದು ಮೂರು ಮಂದಿ ಪ್ರಯಾಣಿಕರಿಗೆ ಆರಾಮವಾಗಿ ಕುಳಿತುಕೊಳ್ಳಬಹುದಾಗಿದೆ.

ಸುರಕ್ಷತೆ ದೃಷ್ಟಿಯಲ್ಲಿ ಬೋಲ್ಟ್ ತ್ರಿ ಪಾಯಿಂಟ್ ಬೆಲ್ಟ್ ಹಾಗೂ ಸೆಂಟರ್ ಲ್ಯಾಪ್ ಬೆಲ್ಟ್ ಒದಗಿಸುತ್ತಿದೆ. ಇನ್ನು ಹೆಚ್ಚುವರಿಯಾಗಿ ಹಿಂಭಾಗದಲ್ಲಿ ಎತ್ತರ ಹೊಂದಾಣಿಸಬಹುದಾದ ಹೆಡ್ ರೆಸ್ಟ್ ಕೂಡಾ ಲಗತ್ತಿಸಲಾಗಿದ್ದು, ಹೆಚ್ಚು ಅನುಕೂಲವೆನಿಸಿದೆ.

ಬೂಟ್ ಸ್ಪೇಸ್

ಬೂಟ್ ಸ್ಪೇಸ್

ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲತೆ ನೀಡುವ ನಿಟ್ಟಿನಲ್ಲಿ ಲಗ್ಗೇಜ್ ಜಾಗಕ್ಕೆ ಸ್ವಲ್ಪ ಕತ್ತರಿ ಪ್ರಯೋಗ ಮಾಡಲಾಗಿದೆ. ಹಾಗಿದ್ದರೂ ಹಿಂಭಾಗದ ಸೀಟನ್ನು ವಿಭಜನೆ ಅಥವಾ ಮಡಚುವ ಮೂಲಕ ಹೆಚ್ಚು ಬೂಟ್ ಸ್ಪೇಸ್ ಪಡೆಯಬಹುದಾಗಿದೆ.

ಟಾಟಾ ಬೋಲ್ಟ್: 210 ಲೀಟರ್

ಮಾರುತಿ ಸ್ವಿಫ್ಟ್: 205 ಲೀಟರ್

ಹ್ಯುಂಡೈ ಗ್ರಾಂಡ್ ಐ10: 256 ಲೀಟರ್

ಎಂಜಿನ್ ಹಾಗೂ ಟ್ರಾನ್ಸ್‌ಮಿಷನ್

ಎಂಜಿನ್ ಹಾಗೂ ಟ್ರಾನ್ಸ್‌ಮಿಷನ್

ಹೊಚ್ಚ ಹೊಸ ಟಾಟಾ ಬೋಲ್ಟ್ ಮುಂದಿನ ಪೀಳಿಗೆಯ ರೆವೂಟ್ರಾನ್ (Revotron) 88.8 ಬಿಎಚ್‌ಪಿ, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರಲಿದೆ.

ಭಾರತದ ಫಾರ್ಮುಲಾ ಒನ್ ಚಾಲಕ ನರೈನ್ ಕಾರ್ತಿಕೇಯನ್ ಸಹ ಎಂಜಿನ್ ಅಭಿವೃದ್ಧಿಯಲ್ಲಿ ಭಾಗಿಯಾಗಿದ್ದಾರೆ. ಇದು ಇಂಡಿಕಾದಲ್ಲಿರುವ 1.2 ಲೀಟರ್ ಕ್ಸೆಟಾ ಎಂಜಿನ್ ತಳಹದಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಎಂಜಿನ್ ವಿಧ

  • ಪೆಟ್ರೋಲ್ (1193 ಸಿಸಿ): 4 ಸಿಲಿಂಡರ್, ಟರ್ಬೋಚಾರ್ಜ್ಡ್ ಎಂಪಿಎಫ್‌ಐ
  • ಡೀಸೆಲ್ (1248 ಸಿಸಿ): 4 ಸಿಲಿಂಡರ್, ಟರ್ಬೊ ಇಂಟರ್ ಕೂಲ್ಡ್
  • ಚಾಲನೆ

    ಚಾಲನೆ

    ಪ್ರಾಯೋಗಿಕವಾಗಿಯೂ ಹೊಸ ಬೋಲ್ಟ್ ಕಾರು ಚಾಲನೆ ವೇಳೆ ಉತ್ತಮ ಸಮತೋಲನ ಕಾಪಾಡಿಕೊಂಡಿದೆ. ಖಂಡಿತವಾಗಿಯೂ ಇದು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಒರಟಾದ ರಸ್ತೆಯಲ್ಲೂ ಚಾಲನಾ ಅನುಭವ ಅದ್ಭುತವಾಗಿದ್ದು, ಇದರಲ್ಲಿರುವ ಡೈರಕ್ಟ್ ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್, ಮಲ್ಟಿ ಡ್ರೈವ್ ಸಿಸ್ಟಂ, ಕಾರ್ನರ್ ಸ್ಟೆಬಿಲಿಟಿ ಕಂಟ್ರೋಲ್ ಹೆಚ್ಚು ಕ್ರೀಡಾತ್ಮಕ ಅನುಭವ ನೀಡುತ್ತದೆ.

    ಇನ್ನು ಮೊದಲನೇ ಹಾಗೂ ಎರಡನೇ ಗೇರ್ ಸ್ವಲ್ಪ ಒರಟಾದಂತೆ ಭಾಸವಾದರೂ 3,4 ಹಾಗೂ 5ನೇ ಗೇರ್ ಬದಲಾವಣೆ ನಯವಾಗಿದೆ. ಹಾಗಿದ್ದರೂ 'ಎ' ಪಿಲ್ಲರ್ ದಪ್ಪವಾಗಿರುವುದು ತಿರುವಿನ ಗೋಚರತೆಗೆ ಸಮಸ್ಯೆ ಉಂಟು ಮಾಡುವ ಆತಂಕವಿದೆ.

    ಚಾಲನೆ

    ಚಾಲನೆ

    ಟಾಟಾ ಬೋಲ್ಟ್‌ನಲ್ಲಿರುವ ಹೊಸ ಮಲ್ಟಿ ಡ್ರೈವ್ ಸಿಸ್ಟಂ ಬದಲಾಯಿಸಬಲ್ಲ ಚಾಲನಾ ವಿಧಗಳನ್ನು ಪಡೆದುಕೊಂಡಿದೆ. ಇದು ಚಾಲನೆ ಪರಿಸ್ಥಿತಿಗೆ ಅನುಗುಣವಾಗಿ ಬದಲಾಯಿಸಬಹುದಾಗಿದೆ.

    ಚಾಲನಾ ವಿಧಗಳು: ಸಿಟಿ, ಇಕೊ ಮತ್ತು ಸ್ಪೋರ್ಟ್

    ಹೇಗೆ ಕಾರ್ಯನಿರ್ವಹಿಸುತ್ತದೆ?

    ಇಕೊ ಮೋಡ್: ಇಂಧನ ಉಳಿಸಲು ನಿಮ್ಮ ಎಂಜಿನ್ ಕಾರ್ಯಕ್ಷಮತೆ ಕಾಪಾಡಲು ಸಹಕಾರಿಯಾಗುತ್ತದೆ.

    ಸ್ಪೋರ್ಟ್ ಮೋಡ್: ವೇಗವರ್ಧನೆ ಹೆಚ್ಚಿಸುವ ನಿಟ್ಟಿನಲ್ಲಿ ಥ್ರಾಟಲ್ ಪ್ರತಿಕ್ರಿಯೆ ವೇಗವಾಗಿ ಹೆಚ್ಚಿಸುತ್ತದೆ.

    ಸಿಟಿ ಮೋಡ್: ಇಕೊ ಹಾಗೂ ಸ್ಪೋರ್ಟ್ ನಡುವೆ ಸಮತೋಲನ ಕಾಪಾಡಿಕೊಳ್ಳುತ್ತದೆ. ಇದು ಡಿಫಾಲ್ಟ್ ಆಗಿರುತ್ತದೆ.

    ನಿರ್ವಹಣೆ

    ನಿರ್ವಹಣೆ

    ಎಂಜಿನ್ ನಿರ್ವಹಣೆ ಎಂದರೆ ಯಾವತ್ತೂ ಗರಿಷ್ಠ ವೇಗವಾಗಿರುವುದಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು. ಎಲ್ಲಿಯೂ ಟಾಟಾದ ಹೊಸ ಎಂಜಿನ್ ನಮ್ಮನ್ನು ನಿರಾಸೆಗೊಳಿಸಿಲ್ಲ. ಐಡ್ಲಿಂಗ್‌ನಲ್ಲಿ ಕ್ಲಚ್ ಬಿಡುವಾಗ ವೇಗವರ್ಧನೆ ರಹತವಾಗಿ ಕಾರು ನಿಧಾನವಾಗಿ ಮುಂದಕ್ಕೆ ಚಲಿಸುವುದು ನಮ್ಮ ಗಮನಕ್ಕೆ ಬಂದಿದೆ. ಇಲ್ಲಿ ಆರ್‌ಪಿಎಂನಲ್ಲಿ ಕಂಡುಬರುತ್ತಿರುವ ವರ್ಧನೆ ಇದಕ್ಕೆ ಕಾರಣವಾಗಿದ್ದು, ನಗರ ಪ್ರದೇಶದ ಚಾಲನೆಗೆ ಹೆಚ್ಚು ಸೂಕ್ತವೆನಿಸಲಿದೆ. ಹಿಂದಿನ ಟಾಟಾ ಕಾರುಗಳಿಗೆ ಹೋಲಿಸಿದರೆ ಈ ಕಾರು ಹೆಚ್ಚು ಸ್ಥಿರತೆಯನ್ನು ಕಾಪಾಡಿಕೊಂಡಿದೆ.

    ಹೋಲಿಕೆ

    ಟಾಟಾ ಬೋಲ್ಟ್

    ಗರಿಷ್ಠ ಪವರ್: 88.8 bhp @ 5000 RPM

    ಗರಿಷ್ಠ ಟಾರ್ಕ್: 140 Nm @ 1500 - 4000 RPM

    ಗರಿಷ್ಠ ವೇಗ: ಗಂಟೆಗೆ 160 ಕೀ.ಮೀ.

    ಮಾರುತಿ ಸ್ವಿಫ್ಟ್ (ಪ್ರತಿಸ್ಪರ್ಧಿ)

    ಗರಿಷ್ಠ ಪವರ್: 83 bhp @ 6000 RPM

    ಗರಿಷ್ಠ ಟಾರ್ಕ್: 115 Nm @ 4000 RPM

    ಇಂಧನ ಕ್ಷಮತೆ

    ಇಂಧನ ಕ್ಷಮತೆ

    ಭಾರತದ ಕಾರು ಖರೀದಿಗಾರರ ಮನೋಸ್ಥಿತಿಯನ್ನು ಗಮನಿಸಿದಾಗ ಇಂಧನ ಕ್ಷಮತೆ ಮುಖ್ಯ ಪಾತ್ರ ವಹಿಸುತ್ತದೆ. ನಿರ್ವಹಣೆ ವಿಚಾರದಲ್ಲಿ ರೆವೊಟ್ರಾನ್ ಎಂಜಿನ್ ಮೆಚ್ಚುಗೆಗೆ ಪಾತ್ರವಾದರೂ ಮೈಲೇಜ್ ನಮಗೆ ತೃಪ್ತಿ ತಂದಿಲ್ಲ. ನಮ್ಮ ಪರೀಕ್ಷೆ ವೇಳೆ ಟಾಟಾ ಬೋಲ್ಟ್ ಪ್ರತಿ ಕೀ.ಮೀ. 10.7 ಕೀ.ಮೀ. ಮೈಲೇಜ್ ನೀಡುವಲ್ಲಿ ಸಕ್ಷಮವಾಗಿದೆ. ಆದರೆ ನಾವಿಲ್ಲಿ ರಾಜಸ್ತಾನದ ಉದಯ್‌ಪುರ್-ಅಬು ಹೆದ್ದಾರಿಯಲ್ಲಿ ಪದೇ ಪದೇ ಎಸಿ ಬಳಕೆ ಮಾಡುತ್ತಾ ಗಂಟೆಗೆ 100-140 ಕೀ.ಮೀ. ವೇಗದಲ್ಲಿ ಸಾಗಿರುವುದನ್ನು ನೆನಪಿಸಿಕೊಳ್ಳಲು ಬಯಸುತ್ತಿದ್ದೇವೆ.

    ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಬೋಲ್ಟ್ ಅಧಿಕೃತ ಮೈಲೇಜ್ ಪ್ರಮಾಣ ಇನ್ನಷ್ಟೇ ಬಿಡುಗಡೆಯಾಗಬೇಕಾಗಿದೆ. ಇದರ ಇಕೊ ಮೋಡ್‌ನಲ್ಲಿ ಚಲಿಸಿದ್ದಲ್ಲಿ ಕನಿಷ್ಠ 13 ಕೀ.ಮೀ. ಇಂಧನ ಕ್ಷಮತೆ ಸಿಗುವ ಭರವಸೆ ನಮ್ಮದ್ದು.

    ಇಂಧನ ಟ್ಯಾಂಕ್ ಸಾಮರ್ಥ್ಯ: 44 ಲೀಟರ್

    ವ್ಯಾಪ್ತಿ: ಅಂದಾಜು 550 ಕೀ.ಮೀ.

    ಗಮನ ಸಳೆಯುವ ವೈಶಿಷ್ಟ್ಯಗಳು - ಸ್ಟೀರಿಂಗ್ ವೀಲ್

    ಗಮನ ಸಳೆಯುವ ವೈಶಿಷ್ಟ್ಯಗಳು - ಸ್ಟೀರಿಂಗ್ ವೀಲ್

    ಹೊಸ ಟಾಟಾ ಬೋಲ್ಟ್ ಮೌಲ್ಡಡ್, ಸಣ್ಣ ವ್ಯಾಸದ 3 ಸ್ಪೋಕ್ ಬಹು ಕ್ರಿಯಾತ್ಮಕ ಲೋಹದ ಸ್ಟೀರಿಂಗ್ ವೀಲ್ ಪಡೆದುಕೊಂಡಿದ್ದು, ಹೆಚ್ಚಿನ ಗ್ರಿಪ್ ಪ್ರದಾನ ಮಾಡುತ್ತಿದೆ. ಇನ್ನು ಸ್ಟೀರಿಂಗ್ ವೀಲ್‌ನಲ್ಲೇ ಮ್ಯೂಸಿಕ್, ಧ್ವನಿ ಹೆಚ್ಚು ಕಡಿಮೆ ಮಾಡುವ ನಿಯಂತ್ರಣ ವ್ಯವಸ್ಥೆಯು ಇದೆ. ಇದು ಒತ್ತಡ ರಹಿತ ಪಯಣವನ್ನು ಖಾತ್ರಿಪಡಿಸುತ್ತದೆ.

    ಹಾರ್ನ್ ಸಮಸ್ಯೆ

    ಹಾಗಿದ್ದರೂ ಹಾರ್ನ್ ಪ್ಯಾಡ್ ಬಳಕೆ ಕಷ್ಟಕರವೆನಿಸುತ್ತಿದ್ದು, ಮೃದುತ್ವವನ್ನು ಕಳೆದುಕೊಂಡಿದೆ.

    ಸ್ಟೀರಿಂಗ್ ವೀಲ್ ವ್ಯಾಸ: 14.17 ಇಂಚು

    ಟರ್ನಿಂಗ್ ಸರ್ಕಲ್ ರೇಡಿಯಸ್: 5.1 ಮೀಟರ್

    ಗಮನ ಸಳೆಯುವ ವೈಶಿಷ್ಟ್ಯಗಳು - ಅಲಾಯ್ ವೀಲ್

    ಗಮನ ಸಳೆಯುವ ವೈಶಿಷ್ಟ್ಯಗಳು - ಅಲಾಯ್ ವೀಲ್

    ಟಾಟಾ ಬೋಲ್ಟ್ 15 ಇಂಚಿನ 8 ಸ್ಪೋಕ್ ಅಲಾಯ್ ವೀಲ್ ಪಡೆದುಕೊಂಡಿದೆ. ಇದರ ವಿನ್ಯಾಸ ಸರಳವಾಗಿದ್ದು, ಕ್ರೀಡಾತ್ಮಕತೆಯನ್ನು ಕಾಯ್ದುಕೊಂಡಿದೆ.

    ಚಕ್ರ: 15 ಇಂಚು

    ವಿಧ: ಅಲಾಯ್

    ಆಕಾರ: 175/65 ಆರ್15

    ನಿರ್ಮಾಣ: ಗುಡ್ ಇಯರ್

    ವಿಧ: ಟ್ಯೂಬ್‌ಲೆಸ್

    ಫ್ರಂಟ್ ಬ್ರೇಕ್: ಡಿಸ್ಕ್

    ರಿಯರ್ ಬ್ರೇಕ್: ಡ್ರಮ್

    ಗಮನ ಸಳೆಯುವ ವೈಶಿಷ್ಟ್ಯಗಳು - ಮಾಹಿತಿ ಮನರಂಜನಾ ಸಿಸ್ಟಂ

    ಗಮನ ಸಳೆಯುವ ವೈಶಿಷ್ಟ್ಯಗಳು - ಮಾಹಿತಿ ಮನರಂಜನಾ ಸಿಸ್ಟಂ

    ಬೋಲ್ಟ್‌ನಲ್ಲಿರುವ ಮಾಹಿತಿ ಮನರಂಜನಾ ವ್ಯವಸ್ಥೆಯು ಟಾಟಾ ಕಾರನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಇದರಲ್ಲಿ ಹಾರ್ಮಾನ್ (HARMAN) ಇನ್ಫೋಟೈನ್ಮೆಂಟ್/ಆಡಿಯೋ ಅಕೌಸ್ಟಿಕ್ ಸಿಸ್ಟಂ ಮತ್ತು ಮ್ಯಾಪ್ ಮೈ ಇಂಡಿಯಾ ನೆಕ್ಸ್ಟ್ ಜನರೇಷನ್ ನೇವಿಗೇಷನ್ ವ್ಯವಸ್ಥೆಯಿದೆ.

    ಸೌಲಭ್ಯಗಳು:

    • 5 ಇಂಚು ಟಚ್ ಸ್ಕ್ರೀನ್, ಮಲ್ಟಿಮೀಡಿಯಾ ಅನುಭವ
    • ವೀಡಿಯೋ ಪ್ಲೇಬ್ಯಾಕ್,
    • ಸ್ಮಾರ್ಟ್ ಫೋನ್ ಆಧಾರಿತ ನೇವಿಗೇಷನ್,
    • ಮುಂದುವರಿದ ಬ್ಲೂಟೂತ್ ತಂತ್ರಗಾರಿಕೆ,
    • ಸ್ಮಾರ್ಟ್ ಧ್ವನಿ ಗುರುತಿಸುವಿಕೆ,
    • ಮುಂದುವರಿದ ಸ್ಮಾರ್ಟ್ ಫೋನ್ ಏಕೀಕರಣ,
    • ಇನ್ ಕಮಿಂಗ್ ಎಸ್‌ಎಂಎಸ್ ನೋಟಿಫಿಕೇಷನ್ ಆಂಡ್ ರಿಡೌಟ್
    • ವಿ.ಸೂ:

      *ಆಂಡ್ರಾಯ್ಡ್ ಫೋನುಗಳಿಗೆ ಮಾತ್ರ

      * ಬ್ಲೂಟೂತ್ ಪ್ರೊಫೈಲ್ ಮೇಲೆ ಅವಲಂಬನೆ

      ಗಮನ ಸಳೆಯುವ ವೈಶಿಷ್ಟ್ಯಗಳು - ಮಾಹಿತಿ ಮನರಂಜನಾ ವ್ಯವಸ್ಥೆ

      ಗಮನ ಸಳೆಯುವ ವೈಶಿಷ್ಟ್ಯಗಳು - ಮಾಹಿತಿ ಮನರಂಜನಾ ವ್ಯವಸ್ಥೆ

      ಮ್ಯಾಪ್ ಮೈ ಇಂಡಿಯಾ ವ್ಯವಸ್ಥೆ ಪಡೆಯುವ ನಿಟ್ಟಿನಲ್ಲಿ ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಕೆಳಗಿನ ಅಪ್ಲಿಕೇಷನ್ ಡೌನ್ ಲೌಡ್ ಮಾಡಬೇಕಾಗುತ್ತದೆ.

      ಕಾರ್ಯ ನಿರ್ವಹಿಸುವ ವಿಧ

      *ಮ್ಯಾಪ್ ಮೈ ಇಂಡಿಯಾ ಆಪ್ ಡೌನ್ ಮೋಡ್ ಮಾಡಿ

      *ಇಸ್ಟಾಲ್ ಆದ ಬಳಿಕ ನಿಮ್ಮ ಸ್ಮಾರ್ಟ್ ಫೋನ್ ಅನ್ನು ಯುಎಸ್‌ಬಿ ಪೋರ್ಟ್ ಮುಖಾಂತರ ಇನ್ಫೋಟೈನ್ಮೆಂಟ್ ವ್ಯವಸ್ಥೆಗೆ ಕನೆಕ್ಟ್ ಮಾಡಿ

      *ನಿಮ್ಮ ಸ್ಮಾರ್ಟ್ ಫೋನ್‌ನಲ್ಲಿ ಮೈ ಮ್ಯಾಪ್ ಇಂಡಿಯಾ ಅಪ್ಲಿಕೇಷನ್ ಓಪನ್ ಮಾಡಿದ ಕೆಲವೇ ಸೆಕಂಡುಗಳಲ್ಲಿ ಅದೇ ಮ್ಯಾಪ್ 5 ಇಂಚಿನ ಟಚ್ ಸ್ಕ್ರೀನ್ ಪರದೆ ಮೇಲೆ ಕಾಣಿಸಿಕೊಳ್ಳಲಿದೆ. ಇದು ನಿಮ್ಮ ಪ್ರಯಾಣವನ್ನು ಇನ್ನಷ್ಟು ಆನಂದದಾಯಕವಾಗಿಸಲಿದೆ.

      ಹಾಗಿದ್ದರೂ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಪ್ರತಿಕ್ರಿಯೆ ತುಂಬಾನೇ ನಿಧಾನವಾಗಿದ್ದು, ಚಾಲನೆ ವೇಳೆ ಅನಾನುಕೂಲತೆಗೆ ಕಾರಣವಾಗುತ್ತದೆ.

      ಗಮನ ಸಳೆಯುವ ವೈಶಿಷ್ಟ್ಯಗಳು - ಇನ್ಸ್ರುಮೆಂಟ್ ಕ್ಲಸ್ಟರ್

      ಗಮನ ಸಳೆಯುವ ವೈಶಿಷ್ಟ್ಯಗಳು - ಇನ್ಸ್ರುಮೆಂಟ್ ಕ್ಲಸ್ಟರ್

      ಇತರ ಕಾರುಗಳಂತೆ ಬೋಲ್ಟ್ ಕೂಡಾ ಎರಡು ವೃತ್ತಕಾರದ ಅನಾಲಾಗ್ ಮೀಟರ್ ಪಡೆದುಕೊಂಡಿದ್ದು, ರೀಡ್ ಮಾಡುವುದು ಸುಲಭವೆನಿಸಿದೆ. ಇದರ ಮಧ್ಯದಲ್ಲಿ ಕಾಣಿಸುತ್ತಿರುವ ಮಲ್ಟಿ ಮಾಹಿತಿ ಪರದೆಯು ನಿಮಗೆ ಬೇಕಾಗಿರುವ ಅಗತ್ಯ ಮಾಹಿತಿಗಳಾಗಿರುವ ಸಮಯ, ಟ್ರಿಪ್ ಲಾಪ್, ಹೊರಗಿನ ತಾಪಮಾನ, ಡಿಸ್ಟಾನ್ಸ್ ಟು ಎಮ್ಟಿ, ಇಂಧನ ಕ್ಷಮತೆ ಮತ್ತು ಚಾಲನಾ ವಿಧಗಳ (ಸಿಟಿ, ಇಕೊ ಅಥವಾ ಸ್ಪೋರ್ಟ್) ಬಗ್ಗೆ ಮಾಹಿತಿ ನೀಡುತ್ತದೆ.

      ಗಮನ ಸಳೆಯುವ ವೈಶಿಷ್ಟ್ಯಗಳು - ಮುಂಭಾಗದ ಸೀಟು

      ಗಮನ ಸಳೆಯುವ ವೈಶಿಷ್ಟ್ಯಗಳು - ಮುಂಭಾಗದ ಸೀಟು

      ಸಂಪೂರ್ಣ ಫ್ಯಾಬ್ರಿಕ್ ಮುಂಭಾಗದ ಸೀಟುಗಳು ಹೆಚ್ಚು ಸ್ಟೈಲಿಷ್ ಹಾಗೂ ಬೆಂಬಲವಾಗಿದೆ. ಇದು ಚಾಲಕ ಸೇರಿದಂತೆ ಪ್ರಯಾಣಿಕರಿಗೂ ಆರಾಮದಾಯಕ ಪಯಣ ಖಾತ್ರಿಪಡಿಸುತ್ತದೆ.

      ಗಮನ ಸಳೆಯುವ ವೈಶಿಷ್ಟ್ಯಗಳು - ಬಹು ಮಾಹಿತಿ ಪರದೆ

      ಗಮನ ಸಳೆಯುವ ವೈಶಿಷ್ಟ್ಯಗಳು - ಬಹು ಮಾಹಿತಿ ಪರದೆ

      ಇಲ್ಲಿ ಕೊಟ್ಟಿರುವ ಚಿತ್ರದಿಂದಲೇ ಬಹು ಮಾಹಿತಿ ಪರದೆಯು ಬೋಲ್ಟ್ ಸಂಚಾರದ ವೇಳೆ ಹೇಗೆ ಚಾಲಕರಿಗೆ ನೆರವಾಗಲಿದೆ ಎಂಬುದನ್ನು ತೋರಿಸಿ ಕೊಡುತ್ತಿದೆ.

      ಸೌಲಭ್ಯ:

      • ಹೊರಗಿನ ತಾಪಮಾನ,
      • ತತ್ ಕ್ಷಣದ ಇಂಧನ ಬಳಕೆ,
      • ಡಿಸ್ಟಾನ್ಸ್ ಟು ಎಮ್ಟಿ,
      • ಸರಾಸರಿ ಇಂಧನ ಬಳಕೆ,
      • ಟ್ರಿಪ್ ಲಾಗ್,
      • ಸಮಯ,
      • ಚಾಲನಾ ವಿಧ ಸೂಚನೆ (ಸ್ಪೋರ್ಟ್ ಹಾಗೂ ಇಕೊ)
      • ಹಿನ್ನೆಡೆ - ಒವಿಆರ್‌ಎಂ

        ಹಿನ್ನೆಡೆ - ಒವಿಆರ್‌ಎಂ

        ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್ ಸೈಡ್ ರಿಯರ್ ವ್ಯೂ ಮಿರರ್ (ಒವಿಆರ್‌ಎಂ), ಸ್ಟೈಲಿಷ್ ಹಾಗಿರುವ ಹೊರತಾಗಿಯೂ ಗೋಚರತೆಯ ವಿಚಾರದಲ್ಲಿ ಅಷ್ಟೊಂದು ಆಳವಾಗಿ ಕೆಲಸ ಮಾಡುತ್ತಿಲ್ಲ.

        ಹಿನ್ನೆಡೆ - ಹ್ಯಾಂಡ್ ಬ್ರೇಕ್

        ಹಿನ್ನೆಡೆ - ಹ್ಯಾಂಡ್ ಬ್ರೇಕ್

        ಹ್ಯಾಂಡ್ ಬ್ರೇಕ್ ಬಳಕೆ ಕೂಡಾ ಸರಾಸರಿಯಾಗಿ ಉತ್ತಮವಾಗಿದ್ದರೂ ಕೆಲವೊಂದು ಕಡೆ ನೈಜತೆಯ ಭಾವನೆಯನ್ನು ಕಳೆದುಕೊಳ್ಳುತ್ತಿದೆ.

        ಹಿನ್ನೆಡೆ - ಸ್ಟೋರೆಜ್

        ಹಿನ್ನೆಡೆ - ಸ್ಟೋರೆಜ್

        ಸ್ಟೋರೆಜ್ ಜಾಗ ಬೋಲ್ಟ್ ಪಾಲಿಗೆ ಹಿನ್ನೆಡೆಯನ್ನುಂಟು ಮಾಡಿದ್ದು, ಡೋರ್ ಪ್ಯಾನೆಲ್ ಕಿರಿದಾಗಿದ್ದು, ಬಾಟಲಿಗಳನ್ನು ಇಡಲು ಕಷ್ಟಕರವಾಗುತ್ತದೆ. ಚಿತ್ರದಲ್ಲಿ ತೋರಿಸಿರುವ ಸೆಂಟ್ರಲ್ ಬಾಟಲಿ ಹೋಲ್ಡರ್ ಅನ್ನು ಸ್ಮಾರ್ಟ್ ಫೋನ್ ಇಡಲು ಬಳಕೆ ಮಾಡಬಹುದಾಗಿದೆ.

        ಪ್ರತಿಸ್ಪರ್ಧಿಗಳು

        ಪ್ರತಿಸ್ಪರ್ಧಿಗಳು

        ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಜನರು ಹ್ಯಾಚ್ ಬ್ಯಾಕ್ ಕಾರನ್ನು ಅತಿ ಹೆಚ್ಚು ಅವಲಂಬಿಸಿರುವುದರಿಂದ ಬೋಲ್ಟ್‌ಗೆ ಮಾರುಕಟ್ಟೆಯಲ್ಲಿ ಎದುರಾಗುವ ಪೈಪೋಟಿ ಅಷ್ಟಿಷ್ಟಲ್ಲ. ಇದು ಮಾರುಕಟ್ಟೆಯಲ್ಲಿ ಈಗಾಗಲೇ ಭದ್ರ ಬುನಾದಿ ಸ್ಥಾಪಿಸಿರುವ ದೇಶದ ಅಗ್ರ ವಾಹನ ತಯಾರಿಕ ಸಂಸ್ಥೆಗಳಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಹಾಗೂ ಹ್ಯುಂಡೈ ಗ್ರಾಂಡ್ ಐ10 ಸವಾಲನ್ನು ಎದುರಿಸಬೇಕಾಗುತ್ತದೆ.

        ಅಂದ ಹಾಗೆ ಬೋಲ್ಟ್ ಹ್ಯಾಚ್‌ಬ್ಯಾಕ್ ಅಂದಾಜು ಎಕ್ಸ್ ಶೋ ರೂಂ ಬೆಲೆ 4.2 ಲಕ್ಷ ರು.ಗಳಿಷ್ಟಿರಲಿದೆ. ಇದು ನಿಮ್ಮ ಕೈಗೆಟುಕಲಿದೆಯೇ ? ಬನ್ನಿ ಹೋಲಿಕೆ ಮಾಡೋಣವೇ...

        ಹ್ಯುಂಡೈ ಗ್ರಾಂಡ್ ಐ10 (1.2 ಲೀಟರ್ ಪೆಟ್ರೋಲ್)

        ಬೆಲೆ: 4.3 ಲಕ್ಷ ರು.ಗಳಿಂದ 5.8 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

        ಮಾರುತಿ ಸ್ವಿಫ್ಟ್ (1.2 ಲೀಟರ್ ಪೆಟ್ರೋಲ್)

        ಬೆಲೆ: 4.4 ಲಕ್ಷ ರು.ಗಳಿಂದ 5.9 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

        ಅಂತಿಮ ತೀರ್ಪು

        ಅಂತಿಮ ತೀರ್ಪು

        ಮುನ್ನಡೆ:

        • ಹೆಚ್ಚು ಸ್ಥಳಾವಕಾಶ,
        • ಚಾಲನಾ ಗುಣಮಟ್ಟತೆ,
        • ಆರಾಮದಾಯಕ ಆಸನ,
        • ನಿರ್ಮಾಣ ಗುಣಮಟ್ಟ, ಫಿಟ್ ಆಂಡ್ ಫಿನಿಶ್,
        • ಎಲೆಕ್ಟ್ರಾನಿಕ್ ಪವರ್ ಸ್ಟೀರಿಂಗ್ (ಇಪಿಎಸ್),
        • ಮಲ್ಟಿ ಡ್ರೈವಿಂಗ್ ಸಿಸ್ಟಂ (ಸಿಟಿ, ಇಕೊ ಮತ್ತು ಸ್ಪೋರ್ಟ್),
        • ಹರ್ಮಾನ್ ಇನ್ಪೋಟೈನ್‌ಮೆಂಟ್/ ಆಡಿಯೋ ಅಕೌಸ್ಟಿಂಕ್ ಸಿಸ್ಟಂ
        • ಹಿನ್ನೆಡೆ

          • ಕಳಪೆ ಕ್ಯಾಬಿನ್ ಸ್ಟೋರೆಜ್,
          • ಇನ್ಪೋಟೈನ್ಮೆಂಟ್ ಟಚ್ ಸ್ಕ್ರೀನ್ ಪ್ರತಿಕ್ರಿಯೆ ಉತ್ತಮವಲ್ಲ,
          • ದಪ್ಪವಾದ ಎ ಪಿಲ್ಲರ್,
          • ಒಆರ್‌ವಿಎಂ ಗಾಢತೆ ಕಡಿಮೆ (ಬ್ಲೈಂಡ್ ಸ್ಪಾಟ್),
          • ಮಿಡ್ ರೇಂಜ್ ಪವರ್ ಕೊರತೆ
          • ಎಕ್ಸ್-ಫಾಕ್ಟರ್

            ಹಾಗೊಂದು ವೇಳೆ ಸ್ಪರ್ಧಾತ್ಮಕ ಬೆಲೆ ಕಾಪಾಡುವಲ್ಲಿ ಟಾಟಾ ಯಶ ಸಾಧಿಸಿದ್ದಲ್ಲಿ ಬೋಲ್ಟ್ ಖಂಡಿತ ಹಣಕ್ಕೆ ತಕ್ಕ ಮೌಲ್ಯ ನೀಡಲಿದೆ.

            ಎಲ್ಲಿ ಸುಧಾರಣೆ ಅಗತ್ಯ?

            ಮಾರುತಿ ಹಾಗೂ ಹ್ಯುಂಡೈ ಸಂಸ್ಥೆಗಳನ್ನು ಹೋಲಿಸಿದಾಗ ಆಫ್ಟರ್ ಸೇಲ್ಸ್ ಗುಣಮಟ್ಟತೆಯನ್ನು ಟಾಟಾ ಹೆಚ್ಚಿಸಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ.

            ಟಾಟಾ ಬಗ್ಗೆ ಒಂದಿಷ್ಟು

            ಟಾಟಾ ಬಗ್ಗೆ ಒಂದಿಷ್ಟು

            ಮುಖ್ಯ ಕಚೇರಿ: Bombay House 24, Homi Mody Street Mumbai 400 001 India

            ಸ್ಥಾಪನೆ 1868ರಲ್ಲಿ: ಜಮ್ಷೇಟ್ಜಿ ನಸ್ಸೆರ್‌ವಾಂಜಿಯವರಿಂದ ಟಾಟಾ ಸನ್ಸ್ ಸ್ಥಾಪನೆ

            ಪ್ರೊಮೊಟರ್ ಹೋಲ್ಡಿಂಗ್ ಕಂಪನಿ: ಟಾಟಾ ಸನ್ಸ್, ಟಾಟಾ ಇಂಡಸ್ಟ್ರೀಸ್

            ಯಾವ ಯಾವ ರಂಗಗಳಲ್ಲಿ: ಮಾಹಿತಿ ವ್ಯವಸ್ಥೆಗಳು, ಸಂವಹನ, ಎಂಜಿನಿಯರಿಂಗ್, ಉಪಕರಣ, ಸರ್ವೀಸ್, ಎನರ್ಜಿ, ರಾಸಾಯನಿಕ ಮತ್ತು ಗ್ರಾಹಕ ಉತ್ಪನ್ನಗಳು.

            ಸಂಸ್ಥೆಯ ಆದಾಯ 2013-14: 103. 27 ಬಿಲಿಯಂನ್ ಅಮೆರಿಕನ್ ಡಾಲರ್ (ಅಂದಾಜು 624,757 ಕೋಟಿ ರು.)

            ಶೇರ್ ಹೋಲ್ಡರ್ ಬೇಸ್: 3.9 ಮಿಲಿಯನ್

            ಒಟ್ಟು ಸಂಸ್ಥೆಗಳು: 100ಕ್ಕೂ ಹೆಚ್ಚು ಓಪರೇಟಿಂಗ್ ಕಂಪನಿಗಳು

            ಲಿಸ್ಟಡ್ ಕಂಪನಿ: 32 ಆನ್ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್,

            ಉದ್ಯೋಗಿಗಳು: 581,470

            ಜಾಗತಿಕ ಉಪಸ್ಥಿತಿ: 80 ರಾಷ್ಟ್ರಗಳಿಗೂ ಹೆಚ್ಚು

            ಜಾಗತಿಕ ಆದಾಯ 2013-14: 69.4 ಬಿಲಿಯನ್ (ಗ್ರೂಪ್ ಆದಾಯದ ಶೇಕಡಾ 67.2ರಷ್ಟು)

            ಕಂಪನಿ ಲಿಸ್ಟಡ್ ಆನ್ ಎನ್‌ವೈಎಸ್‌ಇ: ಟಾಟಾ ಮೋಟಾರ್ಸ್



Most Read Articles

Kannada
English summary
Tata Bolt review: Our experts test drive the Tata Bolt petrol hatchback. The first drive impression report on Tata Bolt petrol highlights pros, cons, specs, features, price, mileage, & more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X