ಟೆಸ್ಟ್ ಡ್ರೈವ್ - ಸೊಗಸಾದ ಹಾಗೂ ಕ್ರಿಯಾತ್ಮಕ ಆಡಿ ಎ3

By Nagaraja

ಬೆಳೆದು ಬರುತ್ತಿರುವ ಭಾರತ ವಾಹನ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳ ಬೇಡಿಕೆ ದಿನಂದಿನ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಪೈಕಿ ನಾಲ್ಕು ಉಂಗುರಗಳ ಮಾದರಿಯ ಲಾಂಛನ ಹೊಂದಿರುವ ಆಡಿ ಕಾರುಗಳನ್ನು ತಮ್ಮದಾಗಿಸಿಕೊಳ್ಳುವುದು ಪ್ರತಿಯೊಬ್ಬರ ಕನಸಾಗಿರುತ್ತದೆ.

ಇವನ್ನೂ ಓದಿ: ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

ಹಾಗಿರುವಾಗ ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಸೊಗಸಾದ ಹಾಗೂ ಕ್ರಿಯಾತ್ಮಕ ಆಡಿ ಎ3 ನಾಲ್ಕು ಬಾಗಿಲುಗಳ ಕಾಂಪಾಕ್ಟ್ ಲಗ್ಷುರಿ ಸೆಡಾನ್ ಕಾರು ಎಲ್ಲರ ಗಮನ ಸಳೆಯುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಯಾಕೆ '2014 ವರ್ಷದ ಕಾರು' ಪ್ರಶಸ್ತಿಗೂ ಭಾಜನವಾಗಿರುವ ಆಡಿ ಎ3, ಸಂಸ್ಥೆಯ ಪ್ರತಿಷ್ಠೆಯನ್ನು ಎತ್ತಿ ಹಿಡಿಯಲು ಸಾಧ್ಯವಾಗಿದೆ. ಅಷ್ಟಕ್ಕೂ ಈ ಕಾರಿನಲ್ಲಿರುವ ಘಟಕಗಳೇನು? ಇಷ್ಟೊಂದು ಮನ್ನಣೆಗೆ ಪಾತ್ರವಾಗಿರುವ ಕಾರಿನ ಹಿಂದಿರುವ ಗುಟ್ಟೇನು? ಇವೆಲ್ಲಕ್ಕೂ ನಮ್ಮ ಇಂದಿನ ಟೆಸ್ಟ್ ಡ್ರೈವ್ ಲೇಖನ ಉತ್ತರ ನೀಡಲಿದೆ.

ಇವನ್ನೂ ಓದಿ: ಅಂಡಮಾನ್‌ ಸಮುದ್ರ ಅಲೆಯ ನಡುವೆ ಮುಗ್ಧ ಕಾರಿನ ಮುಗ್ಧತೆ

ಇತ್ತೀಚೆಗಷ್ಟೇ ನಮ್ಮ ಪ್ರದಾನ ಸಂಪಾದಕರಾದ ಜೊಬೊ ಕುರುವಿಲಾ, ಈ ಆಕರ್ಷಕ ಚೆಲುವೆಯೊಂದಿಗೆ ಡೇಟಿಂಗ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೆ ರಾಜಸ್ತಾನದ ಐತಿಹಾಸಿಕ ಉದಯ್‌ಪುರ್‌ ಪ್ರದೇಶದಲ್ಲಿ 200 ಕೀ.ಮೀ. ಸುತ್ತಾಡಿಕೊಂಡು ಬಂದಿದ್ದರು.

ಟೆಸ್ಟ್ ಡ್ರೈವ್ - ಸೊಗಸಾದ ಹಾಗೂ ಕ್ರಿಯಾತ್ಮಕ ಆಡಿ ಎ3

ನಿಸ್ಸಂಶಯವಾಗಿಯೂ ಜರ್ಮನಿಯ ಇತರ ವಾಹನ ತಯಾರಕ ಸಂಸ್ಥೆಗಳಾಗಿರುವ ಮರ್ಸಿಡಿಸ್ ಬೆಂಝ್ ಹಾಗೂ ಬಿಎಂಡಬ್ಲ್ಯುಗಳಿಗೆ ನಿದ್ರೆಯಿಲ್ಲದ ರಾತ್ರಿಗಳನ್ನು ಸನ್ಮಾನಿಸಿರುವ ಆಡಿ ಎ3, ದೇಶದಲ್ಲಿ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಿದೆ. ಆಡಿಯಿಂದ ಸ್ಥಳೀಯವಾಗಿ ನಿರ್ಮಾಣವಾಗಿರುವ ಎ3 ಆನ್ ರೋಡ್ ದರ 30 ಲಕ್ಷ ರು.ಗಳ ಅಸುಪಾಸಿನಲ್ಲಿದೆ.

ಮುಖ್ಯಾಂಶಗಳು

ಮುಖ್ಯಾಂಶಗಳು

ಮಾದರಿ - ಆಡಿ ಎ3 35 ಟಿಡಿಐ ಟ್ರಾನಿಕ್

ಇಂಧನ ವಿಧ - ಡೀಸೆಲ್

ದೇಹ ಶೈಲಿ - ಸೆಡಾನ್

ಸೀಟಿಂಗ್ - ಐದು ಪ್ರಯಾಣಿಕರಿಗೆ

ಎಂಜಿನ್ - ಇನ್‌ಲೈನ್ ಫೋರ್ ಸಿಲಿಂಡರ್

ಮೈಲೇಜ್ - 20.38 kmpl (ಎಆರ್‌ಎಐ ಮಾನ್ಯತೆ)

ಟ್ರಾನ್ಸ್‌ಮಿಷನ್ - 6 ಸ್ಪೀಡ್ ಡ್ಯುಯಲ್ ಕ್ಲಚ್

ಡ್ರೈವ್ ಟೈಪ್ - ಫ್ರಂಟ್ ವೀಲ್ ಡ್ರೈವ್

ಎಕ್ಸ್‌ಟೀರಿಯರ್ ಮತ್ತು ಸ್ಟೈಲಿಂಗ್

ಎಕ್ಸ್‌ಟೀರಿಯರ್ ಮತ್ತು ಸ್ಟೈಲಿಂಗ್

ಚೆಂದವಾದ ಆಡಿ ಎ3 ವಿನ್ಯಾಸದಲ್ಲಿ ಫ್ರಾನ್ಸ್-ಕನೆಡಾ ಮೂದಲ ಡ್ಯಾನಿ ಗ್ಯಾರಂಡ್ ಸೂತ್ರಧಾರಿಯೆನಿಸಿದ್ದಾರೆ. ನಿಮಗೆ ತಿಳಿದಿರುವಂತೆಯೇ ಆಡಿ ಯಾವತ್ತೂ ಪ್ರೀಮಿಯಂ ವಿನ್ಯಾಸ ಕಲ್ಪಿಸಿಕೊಡುವುದರಲ್ಲಿ ಹೆಸರು ಮಾಡಿದೆ. ಇದು ನಿಜಕ್ಕೂ ಆಕರ್ಷಕ, ಭವ್ಯ, ಆತ್ಮವಿಶ್ವಾಸ ಭರಿತ ವಿನ್ಯಾಸ ಕಾಪಾಡಿಕೊಂಡಿದೆ. ಇದರ ಸಿಂಗಲ್ ಫ್ರೇಮ್ ರೇಡಿಯೇಟರ್ ಗ್ರಿಲ್, ವೆಡ್ಜ್ ಆಕಾರದ ಹೆಡ್ ಲೈಟ್, ಕೆಳಗಡೆ ತರಂಗ ರೀತಿಯ ಎಡ್ಜ್ ಹೆಚ್ಚು ಗಮನ ಸೆಳೆಯುತ್ತದೆ.

ಸೈಡ್ ಪ್ರೊಫೈಲ್

ಸೈಡ್ ಪ್ರೊಫೈಲ್

ಬದಿಯಿಂದ ವೀಕ್ಷಿಸಿದಾಗ ಚೂಪಾದ, ಗರಿಗರಿಯಾದ ನಡತೆ ರೇಖೆ ಕಂಡುಬರುತ್ತದೆ. ಇದನ್ನು ಸಂಸ್ಥೆಯು 'ಟೊರ್ನಡೊ ಲೈನ್' ಎಂದು ಹೆಸರಿಸಿಕೊಂಡಿದೆ. ಆಡಿ ಎ3 ಸೆಡಾನ್ ಕಾರಿಗೆ ತಕ್ಕ ನೈಜ ಮೂರು ವಿಧದ ವಿನ್ಯಾಸ ಹೊಂದಿದೆ. ಇದು ಬೊನೆಟ್, ಕ್ಯಾಬಿನ್, ರಿಯರ್ ಲಗ್ಗೇಜ್ ಹೊಂದಿರುತ್ತದೆ. ಅಲ್ಲದೆ ಕ್ರೀಡಾತ್ಮಕ ವಿನ್ಯಾಸ ಕಾಪಾಡಿಕೊಂಡಿದೆ.

ರಿಯರ್ ಪ್ರೊಫೈಲ್

ರಿಯರ್ ಪ್ರೊಫೈಲ್

ಹಿಂದುಗಡೆಯು ಸ್ಫೋರ್ಟಿ ವಿನ್ಯಾಸ ಕಾಣಸಿಗುತ್ತದೆ. ಎತ್ತರದಲ್ಲಿರುವ ಟೈಲ್ ಲೈಟ್, ಬೂಟ್‌ಲಿಡ್‌ನಲ್ಲಿ ಏಕೀಕೃತ ಸ್ಪಾಯ್ಲರ್, ಎಲ್‌ಇಡಿ ಟೈಲ್‌ಲೈಟ್‌ಗಳ ಮೂಲಕ ಆಡಿ ಎ3 ಕಾರನ್ನು ವಿಶೇಷವಾಗಿ ಗುರುತಿಸಿಕೊಳ್ಳಬಹುದಾಗಿದೆ. ಒಟ್ಟಾರೆಯಾಗಿ ಪ್ರಭಾವತ್ಮಾಕ ಮೈಬಣ್ಣವನ್ನು ಪಡೆದುಕೊಂಡಿದೆ.

ಇಂಟಿರಿಯರ್

ಇಂಟಿರಿಯರ್

ಕಾರಿನ ಒಳಗಡೆಗೂ ಅಚ್ಚುಕಟ್ಟಾದ ವಿನ್ಯಾಸ ಕಲ್ಪಿಸಿಕೊಡಲಾಗಿದೆ. ಇದು ಆರಾಮದಾಯಕ ಆಸನ ವ್ಯವಸ್ಥೆ ಹೊಂದಿದ್ದು, ನಿಮ್ಮ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಸಬಹುದಾಗಿದೆ. ಆಡಿ ಎ3, ಮಲ್ಟಿ ಮೀಡಿಯಾ ಇಂಟರ್‌ಫೇಸ್ ಅಥವಾ ಎಂಎಂಐ ಎಂಬ ಸರಳವಾದ ಮೆನು ಸಿಸ್ಟಂ ಹೊಂದಿದೆ. ಇಲ್ಲಿ ಕೂಲಿಂಗ್/ಹೀಟಿಂಗ್ ನಿಯಂತ್ರಿಸುವುದು ಬಹಳ ಸುಲಭವಾಗಿದ್ದು, ಕಪ್, ಬಾಟಲಿ, ವ್ಯಾಲೆಟ್ ಮತ್ತು ಐಫೋನ್ ಬಳಕೆಗೆ ಬೇಕಾದಷ್ಟು ಸ್ಥಳಾವಕಾಶ ಹೊಂದಿದೆ. ಒಟ್ಟಾರೆಯಾಗಿ ಹೆಚ್ಚು ಪ್ರೀಮಿಯಂ ಸ್ಪರ್ಶದೊಂದಿಗೆ ಹೆಚ್ಚು ಕ್ಯಾಬಿನ್ ಸ್ಥಳಾವಕಾಶ ಹೊಂದಿದೆ.

ಟೆಸ್ಟ್ ಡ್ರೈವ್ - ಸೊಗಸಾದ ಹಾಗೂ ಕ್ರಿಯಾತ್ಮಕ ಆಡಿ ಎ3

ಸೀಟು ವಿನ್ಯಾಸ ಗಮನಿಸಿದರೆ ಆಡಿ ಎ3 ನೈಜ ಫ್ಯಾಮಿಲಿ ಕಾರೆನಿಸಲಿದೆ. ಯಾಕೆಂದರೆ ಹಿಂದುಗಡೆ ಮೂರು ಪ್ರಯಾಣಿಕರಿಗೆ ಆರಾಮವಾಗಿ ಪ್ರಯಾಣಿಸಬಹುದಾಗಿದೆ. ಹಾಗಿದ್ದರೂ ಕೂಪೆ ಶೈಲಿಯ ರೂಫ್ ಲೈನ್‌ನಿಂದಾಗಿ ಹಿಂದುಗಡೆ ಕುಳಿತುಕೊಳ್ಳುವ ನೀಳ ಕಾಯದ ಪ್ರಯಾಣಿಕರು ಸ್ವಲ್ಪ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಲಿದೆ.

ಲಗ್ಗೇಜ್ ಸ್ಪೇಸ್

ಲಗ್ಗೇಜ್ ಸ್ಪೇಸ್

ಆಡಿ ಎ3 425 ಲೀಟರ್ ಲಗ್ಗೇಜ್ ಸ್ಪೇಸ್ ಹೊಂದಿರುತ್ತದೆ. ಆದರೆ ಹಿಂದುಗಡೆ ಸೀಟನ್ನು ಮಡಚುವ ಮೂಲಕ ಲಗ್ಗೇಜ್ ಸ್ಪೇಸ್ ಅನ್ನು 880 ಲೀಟರ್ ವರೆಗೂ ವರ್ಧಿಸಬಹುದಾಗಿದೆ.

ಎಂಜಿನ್

ಎಂಜಿನ್

ಇದರ ಇನ್ ಲೈನ್ ಫೋರ್ ಸಿಲಿಂಡರ್, 1968 ಸಿಸಿ ಡೀಸೆಲ್ ಜೊತೆಗಿನ ವೆರಿಯಬಲ್ ಟರ್ಬೈನ್ ಜಿಯೋಮೆಟ್ರಿ (ವಿಟಿಜಿ) ಟರ್ಬೊಚಾರ್ಜರ್ ಗರಿಷ್ಠ 143 ಅಶ್ವಶಕ್ತಿ (320 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತದೆ.

ಅದೇ ರೀತಿ 40 ಟಿಎಫ್‌ಎಸ್‌ಐ ಎಶ್ ಟ್ರಾನಿಕ್ ಪೆಟ್ರೋಲ್, ಇನ್‌ಲೈನ್ ಫೋರ್ ಸಿಲಿಂಡರ್ 1798 ಸಿಸಿ ಸ್ಪಾರ್ಕ್ ಇಗ್ನಿಷನ್ ಎಂಜಿನ್ 180 ಅಶ್ವಶಕ್ತಿ (250 ಎನ್‌ಎಂ ಟಾರ್ಕ್) ಉತ್ಪಾದಿಸಲಿದೆ.

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಇದರ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ (ಡಿಸಿಟಿ) ನಯವಾದ ಚಾಲನೆ ಪ್ರದಾನ ಮಾಡಲಿದೆ. ಹಾಗಿದ್ದರೂ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇಷ್ಟಪಡುವ ಗ್ರಾಹಕರು ಇದನ್ನು ಮಿಸ್ ಮಾಡಿಕೊಳ್ಳಲಿದ್ದಾರೆ.

ನಿರ್ವಹಣೆ

ನಿರ್ವಹಣೆ

ನಿರ್ವಹಣೆಯ ವಿಚಾರದಲ್ಲೂ ಆಡಿ ಎ3 ತೃಪ್ತಿದಾಯಕವಾಗಿದೆ. ಇದು 9 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ಅಂತೆಯೇ ಗರಿಷ್ಠ ಗಂಟೆಗೆ 180 ಕೀ.ಮೀ. ವೇಗದಲ್ಲಿ ಚಲಿಸಲಿದೆ. ಆದರೆ ಟಾಪ್ ಸ್ಪೀಡ್ ಗಂಟೆಗೆ 224 ಕೀ.ಮೀ.ಗಳಿಗೆ ವಿದ್ಯುನ್ಮಾನವಾಗಿ ನಿಯಂತ್ರಿಸಲಾಗಿದೆ.

ಟೆಸ್ಟ್ ಡ್ರೈವ್ - ಸೊಗಸಾದ ಹಾಗೂ ಕ್ರಿಯಾತ್ಮಕ ಆಡಿ ಎ3

ಇಂಧನ ಟ್ಯಾಂಕ್ - 50 ಲೀಟರ್

ಮೈಲೇಜ್ - 20.39 kpl (ಎಆರ್‌ಎಐ ಮಾನ್ಯತೆ)

ಮೈಲೇಜ್ (ಟೆಸ್ಟ್ ಡ್ರೈವ್ ವೇಳೆ) - 16 kpl

ಗಮನ ಸೆಳೆವ 5 ವೈಶಿಷ್ಟ್ಯಗಳು

ಗಮನ ಸೆಳೆವ 5 ವೈಶಿಷ್ಟ್ಯಗಳು

ನಿಸ್ಸಂಶವಾಗಿಯೂ ಆಡಿ ಎ3 ಕಾರಿನಲ್ಲಿರುವ ಐದು ಗಮನ ಸೆಳೆವ ವೈಶಿಷ್ಟ್ಯಗಳಲ್ಲಿ ಮಲ್ಟಿ ಮೀಡಿಯಾ ಇಂಟರ್‌ಫೇಸ್ (ಎಂಎಂಐ) ಮಾಹಿತಿ ಮನರಂಜನಾ ವ್ಯವಸ್ಥೆಯು ಪ್ರಮುಖವಾಗಿದೆ. ಇದು ಡ್ಯಾಶ್ ಬೋರ್ಡ್‌ನ ಮೇಲ್ಗಡೆಯಾಗಿ ಲಗತ್ತಿಸಲಾಗಿದ್ದು, ಚಾಲಕರಿಗೆ ನೆರವಾಗುತ್ತದೆ.

ಇದರಲ್ಲಿ ವಾಯ್ಸ್ ಕಂಟ್ರೋಲ್, ಮೀಡಿಯಾ ನೇವಿಗೇಷನ್, ಟೆಲಿಫೋನ್ ನಿರ್ವಹಣೆ ಜೊತೆಗೆ ಇನ್ನಿತರ ಹಲವಾರು ಸೌಲಭ್ಯಗಳಿವೆ. ಇದನ್ನು ಗೇರ್ ಸ್ಟಿಕ್ ಹಿಂದುಗಡೆಯಿರುವ ವೃತ್ತಕಾರಾದ ನಾಬ್‌ನಿಂದ ನಿಯಂತ್ರಿಸಬಹುದಾಗಿದೆ. ಅಂದ ಹಾಗೆ ನಿವಿಡಾದ ಟೆಗ್ರಾ 2 ಪ್ರೊಸಸರ್‌ನಿಂದ ಆಡಿ ಎ3 ಎಂಎಂಐ ನಿಯಂತ್ರಿಸಲ್ಪಡುತ್ತದೆ.

ಎಚ್‌ವಿಎಸಿ ವೆಂಟ್

ಎಚ್‌ವಿಎಸಿ ವೆಂಟ್

ಎಲ್ಲ ಐಷಾರಾಮಿ ಕಾರುಗಳಂತೆಯೇ ಆಡಿಯ ಎಚ್‌ವಿಎಸಿ ವ್ಯವಸ್ಥೆಯು ಹೆಚ್ಚು ಪ್ರಭಾವಿ ಎನಿಸಿಕೊಳ್ಳುತ್ತದೆ. ಇದರಲ್ಲಿ ಹೀಟಿಂಗ್, ವೆಂಟಿಲೇಷನ್ ಮತ್ತು ಎಸಿ ನಿಯಂತ್ರಣ ಘಟಕ ಅಡಗಿರುತ್ತದೆ.

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಇನ್ಸ್ಟ್ರುಮೆಂಟ್ ಕ್ಲಸ್ಟರ್

ಆಡಿಯ ಸಾಂಪ್ರದಾಯಿಕ ನೀತಿಯನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಅನುಸರಿಸಲಾಗಿದೆ. ಇದು ಡಿಜಿಟಲ್ ಸ್ಪೀಡೋಮೀಟರ್ ಜೊತೆಗೆ ಆರ್‌ಪಿಎಂ, ಎಂಜಿನ್ ತಾಪಮಾನ ಮತ್ತು ಇಂಧನ ಮಟ್ಟವನ್ನು ಸುಲಭವಾಗಿ ಅರಿಯಲು ಸಾಧ್ಯವಾಗುತ್ತದೆ.

ಸನ್‌ರೂಫ್

ಸನ್‌ರೂಫ್

ಆಡಿಯ ಆಕರ್ಷಕ ವಿನ್ಯಾಸದ ಸನ್‌ರೂಫ್ ಮಗದೊಂದು ಗಮನ ಸಳೆಯುವ ಘಟಕವಾಗಿದೆ. ಆಡಿ ಟಾಪ್ ಎಂಡ್ ಎ3 ಮಾದರಿಯಲ್ಲಿ ಪ್ಯಾನರೋಮಿಕ್ ಗ್ಲಾಸ್ ಸನ್‌ರೂಫ್ ಸೌಲಭ್ಯವಿರುತ್ತದೆ.

ಅಲಾಯ್ ವೀಲ್ಸ್

ಅಲಾಯ್ ವೀಲ್ಸ್

ಆಡಿ ಎ3 ವ್ಯಕ್ತಿತ್ವವನ್ನು ಅದರ ಅಲಾಯ್ ವೀಲ್‌ಗಳೇ ಸಾರುತ್ತದೆ. ಇದರ 16 ಇಂಚಿನ ಐಸಿ ಸಿಲ್ವರ್ ಮೆಟ್ಯಾಲಿಕ್ ವೀಲ್‌ಗಳು ಇದರ ಮಲ್ಟಿ ಸ್ಪೋಕ್ ವಿನ್ಯಾಸಕ್ಕೆ ಸಾಕ್ಷಿಯಾಗಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಮುನ್ನಡೆ

ಗಮನಾರ್ಹ ವಿನ್ಯಾಸ

ಸಮರ್ಥ ಎಂಜಿನ್

ದೈನಂದಿನ ಕಾರು ಚಾಲನೆ

ಹಿನ್ನಡೆ

ಮ್ಯಾನುವಲ್ ಟ್ರಾನ್ಸ್‌ಮಿಷನ್ ಕೊರತೆ

ಹಿಂದುಗಡೆ ಸೀಟಿನ ಹೆಡ್ ರೂಂ

ಸ್ಟೀರಿಂಗ್ ವಿಮರ್ಶೆ

ಹದ್ದು ನೋಟ - ವಿನ್ಯಾಸ, ಚಾಲನಾ ಅನುಭವದ ವಿಚಾರಕ್ಕೆ ಬಂದಾಗ ಗರಿಷ್ಠ ಗುಣಮಟ್ಟ ಕಾಪಾಡಿಕೊಂಡಿದೆ.

ಹಣಕ್ಕೆ ತಕ್ಕ ಮೌಲ್ಯ - 4/5

ನಿಮಗದು ಗೊತ್ತೇ ?

ನಿಮಗದು ಗೊತ್ತೇ ?

ಆಡಿ ಸಂಸ್ಥೆಯು 1909ನೇ ಇಸವಿಯ ಜುಲೈ 16ರಂದು ಆಗಸ್ಟ್ ಹಾರ್ಚ್ ಅವರಿಂದ ಸ್ಥಾಪಿತವಾಗಿತ್ತು. ಇದಕ್ಕೆ ಸ್ಥಾಪಕರ ಲ್ಯಾಟಿನ್ ಉಪನಾಮವಾದ 'ಆಡಿ' ಎಂಬ ಹೆಸರನ್ನಿಡಲಾಗಿದೆ. ಜರ್ಮನಿಯಲ್ಲಿ ಹಾರ್ಚ್ ಅಂದರೆ 'ಆಲಿಸು' ಎಂದಾಗಿದೆ. ಇದನ್ನು ಲ್ಯಾಟಿನ್‌ಗೆ ತರ್ಜುಮೆ ಮಾಡಿದಾಗ 'ಆಡಿ' ಎಂದಾಗುತ್ತದೆ.

Most Read Articles

Kannada
English summary
2015 Audi A3 35 TDI—reviewed by Jobo Kuruvilla. Read on the article to continue with the review.
Story first published: Wednesday, August 13, 2014, 12:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X