ಸಂಪೂರ್ಣ ಪ್ಯಾಕೇಜ್ ನೊಂದಿಗೆ ಆಡಿ ಎ4 ಐಷಾರಾಮಿ ಸೆಡಾನ್ ಕಾರು

Written By:

2008ನೇ ಇಸವಿಯಲ್ಲಿ ಮೊದಲ ಬಾರಿಗೆ ಭಾರತಕ್ಕೆ ಪಾದಾರ್ಪಣೆಗೈದಿರುವ ಆಡಿ4 ಅತ್ಯಂತ ಯಶಸ್ಸಿನ ಐಷಾರಾಮಿ ಸೆಡಾನ್ ಕಾರು ಎಂಬುದರಲ್ಲಿ ಸಂಶಯವೇ ಇಲ್ಲ. ಜರ್ಮನಿಯದ್ದೇ ಆಗಿರುವ ಬಿಎಂಡಬ್ಲ್ಯು 3 ಸಿರೀಸ್ ಹಾಗೂ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ ಕಾರುಗಳಿಂದ ನಿಕಟ ಪೈಪೋಟಿಯನ್ನು ಎದುರಿಸುತ್ತಿದ್ದರೂ ಆಡಿ ಎ4 ತನ್ನದೇ ಆದ ಛಾಪು ಮೂಡಿಸುವಲ್ಲಿ ಯಶ ಕಂಡಿದೆ.

ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಒಂಬತ್ತನೇ ತಲೆಮಾರಿನ ಆಡಿ ಎ4 ಹಿಂದೆಂದಿಗಿಂತಲೂ ಶ್ರೇಷ್ಠ ಮಾದರಿ ಎನಿಸಿಕೊಂಡಿದೆ. ತಂತ್ರಜ್ಞಾನದಿಂದ ಹಿಡಿದು ವೈಶಿಷ್ಟ್ಯಗಳ ವರೆಗೆ ಆಡಿ ಸಂಪೂರ್ಣ ಪ್ಯಾಕೇಜನ್ನು ಒದಗಿಸಲಿದೆ.ಮೊದಲ ನೋಟದಲ್ಲಿ ಆಡಿ ಎ4 ತನ್ನ ಹಿಂದಿನ ಮಾದರಿಗೆ (2008-2016) ಹೋಲುವಂತಿದೆ. ಇಲ್ಲಿ ಕಂಡುಬಂದಿರುವ ಪ್ರಮುಖ ಬದಲಾವಣೆಯೆಂದರೆ ಹೊಸತಾದ ಕೋನೀಯ ಎಲ್ ಇಡಿ ಹೆಡ್ ಲ್ಯಾಂಪ್, ಟೈಲ್ ಲ್ಯಾಂಪ್, ಸಮತಲವಾದ ಬೆಲ್ಟ್ ಲೈನ್ ಇತ್ಯಾದಿ ವೈಶಿಷ್ಟ್ಯಗಳು ಕಂಡುಬರಲಿದೆ.

ಹಿಂದಿನ ಮಾದರಿಗೆ ಹೋಲಿಸಿದಾಗ ನೂತನ ಎ4 120 ಕೆ.ಜಿಗಳಷ್ಟು ಭಾರ ಕಡಿತಗೊಂಡಿದೆ. ಇದು ಹೆಚ್ಚು ಇಂಧನ ಕ್ಷಮತೆ ನೀಡುವಲ್ಲಿ ಸಹಕಾರಿಯಾಗಲಿದೆ. ಅಂತೆಯೇ 0.5 ಇಂಚುಗಳಷ್ಟು ವರ್ಧಿ ಚಕ್ರಾಂತರ, 0.6 ಇಂಚುಗಳಷ್ಟು ಹೆಚ್ಚು ಅಗಲ ಮತ್ತು ಒಟ್ಟಾರೆ 1.0 ಇಂಚುಗಳಷ್ಟು ಉದ್ದವನ್ನು ಕಾಪಾಡಿಕೊಂಡಿದೆ.

ಆಯಾಮ (ಎಂಎಂ) ಉದ್ದ: 4,726, ಅಗಲ: 1,842, ಎತ್ತರ: 1,427, ಚಕ್ರಾಂತರ: 2,820


ಕಾರಿನೊಳಗೆ ಮತ್ತಷ್ಟು ಐಷಾರಾಮಿ ಸೌಲಭ್ಯಗಳಿಗೆ ಆದ್ಯತೆ ಕೊಡಲಾಗಿದೆ. ಹೆಚ್ಚಿನ ಸ್ಥಳಾವಕಾಶದ ಜೊತೆಗೆ ಒಳಮೈಯಲ್ಲಿ ಅನುಕೂಲತೆಯನ್ನು ಕಾಪಾಡಿಕೊಳ್ಳಲಾಗಿದೆ. ಹೊಸ ಡ್ಯಾಶ್ ಬೋರ್ಡ್ ನಲ್ಲಿರುವ ಏರ್ ವೆಂಟ್ಸ್ ಹೆಚ್ಚು ಆಕರ್ಷಣೀಯವೆನಿಸುತ್ತದೆ.

ವರ್ಚ್ಯೂವಲ್ ಕಾಕ್ ಪೀಟ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೆಂಟ್ರಲ್ ಕನ್ಸಾಲ್ ಸ್ಟಾಕ್, ತ್ರಿ ಸ್ಪೋಕ್ ಬಹು ಕ್ರಿಯಾತ್ಮಕ ಫ್ಲ್ಯಾಟ್ ಬಾಟಮ್ ಸ್ಟೀರಿಂಗ್ ವೀಲಿ ಜೊತೆ ಶಿಫ್ಟ್ ಪೆಡಲ್, ಫಿಕ್ಸಡ್, 8.3 ಇಂಚುಗಳ ಎಂಎಂಐ ಡ್ಯಾಶ್ ಟಾಪ್ ಸ್ಕ್ರೀನ್, ಇಂಟೇಗ್ರೇಟಡ್ ಟಚ್ ಪ್ಯಾಡ್ ಎಂಎಂಐ ಕಂಟ್ರೋಲರ್, ಫೋನ್ ಬಾಕ್ಸ್ ಜೊತೆ ಕ್ಯೂಐ ವೈರ್ ಲೆಸ್ ಚಾರ್ಜಿಂಗ್ ಮತ್ತು ಆಪಲ್ ಕಾರ್ ಪ್ಲೇ/ಆಂಡ್ರಾಯ್ಡ್ ಆಟೋ ಕ್ರಿಯಾತ್ಮಕತೆ ವ್ಯವಸ್ಥೆಯಿರಲಿದೆ.


ನೂತನ ಆಡಿ ಎ4 1.4 ಲೀಟರ್ ಟಿಎಫ್ ಎಸ್ ಐ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 250 ಎನ್ ಎಂ ತಿರುಗುಬಲದಲ್ಲಿ 150 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ವೇಗವರ್ಧನೆ: 8.5 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗ: ಗಂಟೆಗೆ 210 ಕೀ.ಮೀ.

ಮೈಲೇಜ್: ಪ್ರತಿ ಲೀಟರ್ ಗೆ 17 ಕೀ.ಮೀ.


ಹಾಗಿದ್ದರೂ ಆಲ್ ವೀಲ್ ಡ್ರೈವ್ ಕ್ವಾಟ್ರೊ ತಂತ್ರಜ್ಞಾನದ ಅಭಾವ ಕಾಡಲಿದೆ. ಇದು ಫ್ರಂಟ್ ವೀಲ್ ಚಾಲನಾ ವ್ಯವಸ್ಥೆಯೊಂದಿಗೆ ಲಭ್ಯವಾಗಲಿದ್ದು, ನಿಖರ ಹ್ಯಾಂಡ್ಲಿಂಗ್ ನೊಂದಿಗೆ ಅದ್ಭುತ ಚಾಲನಾ ಅನುಭವ ನೀಡಲಿದೆ.

ಸುರಕ್ಷತೆಯ ವಿಚಾರದಲ್ಲಿ ಆಡಿ ನಿಸ್ಸೀಮವೆನಿಸಿಕೊಂಡಿದ್ದು, ಎಂಟು ಏರ್ ಬ್ಯಾಗ್, ಪೂರ್ ಢಿಕ್ಕಿ ಬ್ರೇಕಿಂಗ್, ಲೇನ್ ಕೀಪಿಂಗ್ ಅಸಿಸ್ಟ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಜೊತೆ ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್, ಆಕ್ಟಿವ್ ಕ್ರೂಸ್ ಕಂಟ್ರೋಲ್, ಆಂಟೆಕ್ಷನ್ ವಾರ್ನಿಂಗ್ ಇತ್ಯಾದಿ ವ್ಯವಸ್ಥೆಯಿರಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)
ಪ್ಲಸ್: 38,10,000 ರು.
ಟೆಕ್ನಾಲಜಿ: 41,20,000 ರು.


ಅಂತಿಮ ತೀರ್ಪು
ಆಡಿ ಧ್ಯೇಯ ವಾಕ್ಯದಂತೆ ತಂತ್ರಜ್ಞಾನದ ಮೂಲಕ ಮುನ್ನುಗುವ ನೀತಿಯು ನೂತನ ಆಡಿ ಎ4 ಕಾರಿಗೆ ಪರಿಪೂರ್ಣವೆನಿಸುತ್ತದೆ. ಇಲ್ಲಿ ತಂತ್ರಜ್ಞಾನ, ವಿನ್ಯಾಸ ಹಾಗೂ ಅದ್ಬುತ ಚಾಲನಾ ಅನುಭವಗಳ ಮಿಶ್ರಣವನ್ನು ಕಾಣಬಹುದಾಗಿದೆ. ಈ ಹಿಂದಿನೆಲ್ಲ ಮಾದರಿಗಳನ್ನು ಹೋಲಿಸಿದಾಗ ಆಡಿ ಎ4 ಭರ್ಜರಿ ಕಮ್ ಬ್ಯಾಕ್ ಮಾಡಲಿದೆ ಎಂಬುದು ಸ್ಪಷ್ಟ.

Click to compare, buy, and renew Car Insurance online

Buy InsuranceBuy Now

Story first published: Friday, September 23, 2016, 11:32 [IST]
English summary
First Drive: The 2017 Audi A4 Back In Form — The Best A4 — After 9 Generations
Please Wait while comments are loading...

Latest Photos

X