ಆಡಿ ಕ್ಯೂ3 35 ಟಿಡಿಐ ಕ್ವಾಟ್ರೋ ಡೈನಾಮಿಕ್ ಮೊದಲ ಸವಾರಿ

By Nagaraja

ಕ್ಲಾಸ್ ಹಾಗೂ ಸ್ಟೈಲಿಷ್ ಕಾರುಗಳ ನಿರ್ಮಾಣಕ್ಕೆ ಆಡಿ ಸದಾ ಹೆಸರು ಗಿಟ್ಟಿಸುತ್ತಲೇ ಬಂದಿದೆ. ಗ್ರಾಹಕರು ಈ ಪ್ರೀಮಿಯಂ ಕಾರಿನ ಮೇಲೆ ಇಟ್ಟಿರುವ ನಂಬಿಕೆಗೆ ತಕ್ಕಂತೆ ಆಡಿ ಸಂಸ್ಥೆಯು ಹೊಸತಾದ ಕ್ಯೂ3 35 ಟಿಡಿಐ ಕ್ವಾಟ್ರೋ ಮಾದರಿಯನ್ನು ಪರಿಚಯಿಸಿದೆ.

ಮರ್ಸಿಡಿಸ್ ಬೆಂಝ್‌ನ ಜಿಎಲ್‌ಎ ಕ್ಲಾಸ್ ಮಾದರಿಗೆ ಪ್ರತಿಸ್ಪರ್ಧಿಯಾಗಿರುವ ಅತ್ಯಂತ ಸ್ಟೈಲಿಷ್ ಆಡಿ ಕ್ಯೂ3 ಕಾಂಪಾಕ್ಟ್ ಪ್ರೀಮಿಯಂ ಎಸ್‌ಯುವಿ, ಆಡಿ ಡ್ರೈವ್ ಸೆಲೆಕ್ಟ್ (ಎಡಿಎಸ್) ತಂತ್ರಜ್ಞಾನವನ್ನು ಹೊಂದಿದೆ. ಅಷ್ಟಕ್ಕೂ ನೈಜ ರಸ್ತೆ ಪರಿಸ್ಥಿತಿಯಲ್ಲಿ ಇದು ಎಷ್ಟು ಪ್ರಾಯೋಗಿಕವಾಗಿ ಕೆಲಸ ಮಾಡಲಿದೆ ಹಾಗೂ ಮೊದಲ ಚಾಲನೆಯ ಮಹತ್ವಪೂರ್ಣ ಮಾಹಿತಿಗಳಿಗಾಗಿ ಚಿತ್ರ ಸಂಪುಟದತ್ತ ಮುಂದುವರಿಯಿರಿ...

ಮಾಹಿತಿ

ಮಾಹಿತಿ

ಮಾದರಿ: ಆಡಿ ಕ್ಯೂ3 35 ಟಿಡಿಐ ಕ್ವಾಟ್ರೋ ಡೈನಾಮಿಕ್

ಇಂಧನ ವಿಧ : ಡೀಸೆಲ್

ಚಾಲನಾ ವಿಧ: ಶಾಶ್ವತ ಆಲ್ ವೀಲ್ ಡ್ರೈವ್

ರಸ್ತೆ ಪರೀಕ್ಷೆ: ಕರಿ ಮೋಟಾರ್ ಸ್ಪೇಡ್‌ವೇ (ಕೊಯಂಬತ್ತೂರು)

ಬೆಲೆ: 38 ಲಕ್ಷ ರು. (ಎಕ್ಸ್ ಶೋ ರೂಂ)

ಅವಲೋಕನ

ಅವಲೋಕನ

ಎಂಜಿನ್ ಆಯ್ಕೆ: ಪೆಟ್ರೋಲ್ ಮತ್ತು ಡೀಸೆಲ್

ಆಡಿ ಕ್ಯೂ3 ಡೀಸೆಲ್

ಎಂಜಿನ್, ಟ್ರಾನ್ಸ್‌ಮಿಷನ್ ಮತ್ತು ಚಾಲನಾ ವಿಧ:

2.0 ಲೀಟರ್, 138 ಅಶ್ವಶಕ್ತಿ, 6 ಸ್ಪೀಡ್ ಮ್ಯಾನುವಲ್ (ಫ್ರಂಟ್ ವೀಲ್ ಡ್ರೈವ್)

2.0 ಲೀಟರ್, 175 ಅಶ್ವಶಕ್ತಿ, ಡೈನಾಮಿಕ್ 7 ಸ್ಪೀಡ್ ಟ್ರಾನಿಕ್ ಟ್ರಾನ್ಸ್‌ಮಿಷನ್ (ಶಾಶ್ವತ ಆಲ್ ವೀಲ್ ಡ್ರೈವ್)

ಆಡಿ ಕ್ಯೂ3 ಪೆಟ್ರೋಲ್

ಎಂಜಿನ್, ಟ್ರಾನ್ಸ್‌ಮಿಷನ್, ಚಾಲನಾ ವಿಧ:

2.0 ಲೀಟರ್, 211 ಅಶ್ವಶಕ್ತಿ, ಡೈನಾಮಿಕ್ 7 ಸ್ಪೀಡ್ ಟ್ರಾನಿಕ್ ಟ್ರಾನ್ಸ್‌ಮಿಷನ್ (ಶಾಶ್ವತ ಆಲ್ ವೀಲ್ ಡ್ರೈವ್)

ಶೈಲಿ - ಮುಂಭಾಗ

ಶೈಲಿ - ಮುಂಭಾಗ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದೃಶ್ಯ ಉಪಸ್ಥಿತಿಗೆ ಆಡಿ ಹೆಸರುವಾಸಿಯಾಗಿದೆ. ಮುಂದುಗಡೆ ಇದು ಶುಭ್ರ, ಸ್ಪಷ್ಟ ವಿನ್ಯಾಸ ಹೊಂದಿದೆ. ಮುಂದುಗಡೆ ಹೆಚ್ಚು ಕ್ರೋಮ್ ಸ್ಪರ್ಶ ನೀವಿಲ್ಲಿ ಗಮನಿಸಬಹುದು.

ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಮತ್ತು ಕ್ರೋಮ್ ಸುತ್ತುವರಿದ ಫಾಗ್ ಲ್ಯಾಂಪ್ ಹೆಚ್ಚು ಗಮನ ಕೇಂದ್ರಿತ ಹಾಗೂ ಖಚಿತ ನೋಟ ನೀಡುತ್ತದೆ. ಒಟ್ಟಾರೆಯಾಗಿ ಅತ್ಯಂತ ಸ್ಟೈಲಿಷ್ ಕಾಂಪಾಕ್ಟ್ ಪ್ರೀಮಿಯಂ ಎಸ್‌ಯುವಿಗಳಲ್ಲಿ ಆಡಿ ಕೂಡಾ ಒಂದಾಗಿದೆ.

ಶೈಲಿ - ಬದಿ

ಶೈಲಿ - ಬದಿ

ಬದಿಯಿಂದ ನೋಡಿದಾಗ, ಆಡಿ ಕ್ಯೂ3 ಅತ್ಯಂತ ಶಕ್ತಿಶಾಲಿ ಮತ್ತು ಪ್ರಬಲ ಶೈಲಿಯನ್ನು ಹೊಂದಿದೆ. ನಿಸ್ಸಂಶಯವಾಗಿಯೂ ಇದು ಶಿಲ್ಪಕಲೆಯ ಭಾವನೆಯನ್ನು ನೀಡುತ್ತದೆ.

ಸೊಗಸಾಗ ಕಣ್ಮಣ ಸೆಳೆಯುವ ಬಾಹ್ಯ ರೇಖೆ, ಚೂಪಾಗಿ ಬಾಗಿದ ಡಿ ಪಿಲ್ಲರ್, ವಿಂಡ್ ಸ್ಕ್ರೀನ್ ಇವೆಲ್ಲವೂ ಕಾರಿಗೆ ಪ್ರೀಮಿಯಂ ಲುಕ್ ನೀಡುತ್ತದೆ.

ಆದರೆ ಇಲ್ಲಿ ನಮ್ಮ ಗಮನ ಸೆಳೆದಿರುವುದು ಇದರ ಡೈನಾಮಿಕ್ ರೂಫ್ ರೈಲ್. ಇದು ಈ ಎಸ್‌ಯುವಿಗೆ ಕ್ರೀಡಾತ್ಮಕ ಕೂಪೆ ಶೈಲಿಯ ವ್ಯಕ್ತಿತ್ವ ಪ್ರತಿಪಾದಿಸುತ್ತದೆ.

ಶೈಲಿ - ಹಿಂದುಗಡೆ

ಶೈಲಿ - ಹಿಂದುಗಡೆ

ಇನ್ನು ಹಿಂದುಗಡೆ ಎಲ್‌ಇಡಿ ಟೈಲ್ ಲ್ಯಾಂಪ್ ವಿಶೇಷವಾಗಿ ಎದ್ದು ಕಾಣಿಸುತ್ತದೆ. ಜೊತೆಗೆ ಸಿಲ್ವರ್ ಸ್ಕಿಡ್ ಪ್ಲೇಟ್ ನೀವು ಕಾಣಬಹುದು. ಹಾಗೆಯೇ ಡ್ಯುಯಲ್ ಎಕ್ಸಾಸ್ಟ್ ಕೂಡಾ ಇರಲಿದೆ.

ಖಂಡಿತವಾಗಿಯೂ ಆಡಿ ಕ್ಯೂ3 ಡೈನಾಮಿಕ್ ವಿನ್ಯಾಸ ನಿಮ್ಮ ಹೃದಯ ಗೆಲ್ಲಲಿದೆ.

ಶೈಲಿ - ಒಳಮೈ

ಶೈಲಿ - ಒಳಮೈ

ಕಾರಿನ ಒಳಮೈ ಬಗ್ಗೆ ಮಾತನಾಡುವುದಾದ್ದಲ್ಲಿ ಆಲ್ ನ್ಯೂ ಆಡಿ ಕ್ಯೂ 3 ಡೈನಾಮಿಕ್, ಪ್ರೀಮಿಯಂ ಕ್ಯೂ ಮಾದರಿಗೆ ಸಾಮ್ಯತೆಯನ್ನು ಪಡೆದುಕೊಂಡಿದೆ.

ಗರಿಷ್ಠ ಗುಣಮಟ್ಟತೆಯ ಪರಿಕರಗಳ ಬಳಕೆ, ಸೋಬರ್ ಟೋನ್ ಇಂಟಿರಿಯರ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಮುಂಭಾಗದ ಸೀಟು, ರಿಯರ್ ಎಸಿ ವೆಂಟ್ಸ್ ಮತ್ತು ಪ್ಯಾನರೋಮಿಕ್ ಸನ್ ರೂಫ್ ಎಲ್ಲವೂ ಪ್ರೀಮಿಯಂ ಅನುಭವ ನೀಡಲಿದೆ.

ಅದೇ ರೀತಿ ಡ್ರೈವ್ ಸೆಲೆಕ್ಟ್ ಕಂಟ್ರೋಲರ್ ಮತ್ತಷ್ಟು ವಿಶಿಷ್ಟವಾಗಿಸಲಿದೆ.

ಚಾಲನೆ ಹಾಗೂ ಮೈಲೇಜ್

ಚಾಲನೆ ಹಾಗೂ ಮೈಲೇಜ್

ಆಡಿ ಕ್ವಾಟ್ರೋ ಡ್ರೈವ್ ಟೆಕ್ನಾಲಜಿ (ಶಾಶ್ವತ ಆಲ್ ವೀಲ್ ಡ್ರೈವ್) ಹೊಂದಿರುವ ಆಡಿ ಕ್ಯೂ3 ಆಫ್ ರೋಡ್ ಸವಾಲನ್ನು ಸ್ವಿಕರಿಸುತ್ತದೆ. ಇದು ಎಲ್ಲ ವಿಧದ ರಸ್ತೆ ಪರಿಸ್ಥಿತಿಯಲ್ಲೂ ಅದ್ಭುತ ಚಾಲನಾ ಅನುಭವ ನೀಡುವಲ್ಲಿ ಬದ್ಧವಾಗಿದೆ.

ಎಂಜಿನ್: 2.0-ಲೀಟರ್ ಟಿಡಿಐ

ಗರಿಷ್ಠ ಪವರ್: 175 ಬಿಎಚ್‌ಪಿ

ಇಂಧನ ವಿಧ: ಡೀಸೆಲ್

ಮೈಲೇಜ್: 15.73 kmpl [ಎಆರ್‌ಎಐ ಮಾನ್ಯತೆ ಪ್ರಕಾರ]

ಟ್ರಾನ್ಸ್‌ಮಿಷನ್: 7 ಸ್ಪೀಡ್ ಟ್ರಾನಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಡ್ರೈವ್ ಸೆಲೆಕ್ಟ್ ಮೋಡ್ (ಕಂಫರ್ಟ್, ಆಟೋ ಮತ್ತು ಡೈನಾಮಿಕ್)

ವಿ. ಸೂ: ನಮ್ಮ ಪರೀಕ್ಷಾರ್ಥ ಚಾಲನೆಯು ಕೊಯಂಬತ್ತೂರಿನ ಕರಿ ಮೋಟಾರ್ ಸ್ಪೀಡ್‌ವೇ ರೇಸ್ ಟ್ರ್ಯಾಕ್ ಹಾಗೂ ವಿಶೇಷವಾಗಿ ಸಿದ್ಧಪಡಿಸಲಾದ ಆಫ್ ರೋಡ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಆಡಿ ಕ್ಯೂ3 ಡ್ರೈವ್ ಕ್ವಾಟ್ರೋ ಸಿಸ್ಟಂನ ಸಂಪೂರ್ಣ ಪರೀಕ್ಷೆ ನಡೆದಿತ್ತು.

ಎದ್ದು ಕಾಣಿಸುವ ವೈಶಿಷ್ಟ್ಯಗಳು

ಎದ್ದು ಕಾಣಿಸುವ ವೈಶಿಷ್ಟ್ಯಗಳು

ಆಡಿ ಡ್ರೈವ್ ಸೆಲೆಕ್ಟ್ (ಎಡಿಎಸ್) ಇದರ ಪ್ರಮುಖ ವೈಶಿಷ್ಟ್ಯವಾಗಿದ್ದು, ಚಾಲನಾ ಪರಿಸ್ಥಿತಿಗೆ ಅನುಸಾರವಾಗಿ ಬದಲಾಯಿಸಬಹುದಾಗಿದೆ. ಅಷ್ಟೇ ಯಾಕೆ ಇದನ್ನು ಆಟೋ ಮೋಡ್‌ನಲ್ಲಿರಿಸಿದರೆ ತನ್ನಿಂದ ತಾನೇ ಚಾಲನೆಗೆ ಹೊಂದಿಕೊಳ್ಳಲಿದೆ.

ಮೂರು ಚಾಲನಾ ವಿಧಗಳು

ಕಂಫರ್ಟ್: ಹೆಸರಲ್ಲೇ ಸೂಚಿಸಿರುವಂತೆಯೇ ವಾಹನ ದಟ್ಟಣೆಯ ಪ್ರದೇಶಗಳಲ್ಲೂ ನಯವಾದ ಚಾಲನೆ ಪ್ರದಾನ ಮಾಡಲಿದೆ. ಕಡಿಮೆ ಹಾಗೂ ಗರಿಷ್ಠ ವೇಗದಲ್ಲೂ ಇದು ಸಹಕಾರಿಯಾಗಲಿದೆ.

ಆಟೋ: ಇದು ನಿಮ್ಮ ಚಾಲನಾ ಶೈಲಿಯ ಮೇಲೆ ಗಮನ ಹಾಯಿಸಲಿದ್ದು, ಚಾಲನಾ ಪರಿಸ್ಥಿತಿಗೆ ಅನುಸಾರವಾಗಿ ನಿರಂತರವಾಗಿ ಹೊಂದಾಣಿಕೆಯಾಗಲಿದೆ.

ಡೈನಾಮಿಕ್ ಮೋಡ್: ನೀವು ಗರಿಷ್ಠ ನಿರ್ವಹಣೆ ಸ್ನೇಹಿಯಾದ್ದಲ್ಲಿ ಇದನ್ನು ಆಯ್ಕೆ ಮಾಡಬಹುದಾಗಿದೆ. ಇದು ಗರಿಷ್ಠ ನಿರ್ವಹಣೆಯಲ್ಲೂ ಅತ್ಯುತ್ತಮ ಹ್ಯಾಂಡ್ಲಿಂಗ್ ಹಾಗೂ ಪವರ್ ನೀಡುತ್ತದೆ. (ಮುಂದುವರಿಯುವುದು)

ಆಡಿ ಕ್ಯೂ3 35 ಟಿಡಿಐ ಕ್ವಾಟ್ರೋ ಡೈನಾಮಿಕ್ ಮೊದಲ ಸವಾರಿ

ಆಡಿ ಡ್ರೈವ್ ಸೆಲೆಕ್ಟ್‌ನ ಪ್ರತಿಯೊಂದು ಚಾಲನಾ ವಿಧಗಳು ಪ್ರತ್ಯೇಕ ಚಾಲನಾ ಸಂರಚನೆಗಳನ್ನು ಹೊಂದಿರುತ್ತದೆ.

ಡೈನಾಮಿಕ್ ಸ್ಟೀರಿಂಗ್: ಕಡಿಮೆ ಹಾಗೂ ಹೆಚ್ಚಿನ ವೇಗದಲ್ಲೂ ಸುಗಮ ಚಾಲನೆ

ಸಸ್ಪೆಷನ್ ಡ್ಯಾಪಿಂಗ್: ಯಾವುದೇ ಮೋಡ್ ಸೆಟ್ಟಿಂಗ್‌ನಲ್ಲಿ ಕಾರಿನ ಸಮತೋಲನ ಕಾಪಾಡುತ್ತದೆ.

ಟ್ರಾನ್ಸ್‌ಮಿಷನ್: ನಿಮ್ಮ ಡ್ರೈವಿಂಗ್ ಮೋಡ್‌ಗೆ ಅನುಗುಣವಾಗಿ ಗೇರ್ ಶಿಫ್ಟ್ ಕಾರ್ಯನಿರ್ವಹಿಸಲಿದೆ. ಕಂಫರ್ಟ್ ಮೋಡ್‌ನಲ್ಲಿ ಗೇರ್ ಶಿಫ್ಟ್ ಸಲೀಸಾಗಿ ನಿರ್ವಹಿಸಲಿದೆ. ಅದೇ ಹೊತ್ತಿಗೆ ಡೈನಾಮಿಕ್ ಮೋಡ್‌ನಲ್ಲಿ ಎಂಜಿನ್‌ನ ಸಂಪೂರ್ಣ ಶಕ್ತಿ ಬಳಕೆಗಾಗಿ ತ್ವರಿತ ಗತಿಯಲ್ಲಿ ಬದಲಾವಣೆಯಾಗುತ್ತದೆ.

ವೇಗವರ್ಧನೆ ಮ್ಯಾಪಿಂಗ್: ಅದೇ ರೀತಿ ವೇಗವರ್ಧನೆಗೆ ಅನುಸಾರವಾಗಿ ಇದು ಕೆಲಸ ಮಾಡಲಿದೆ.

ಎಲ್‌ಇಡಿ ಟೈಲ್ ಲ್ಯಾಂಪ್

ಎಲ್‌ಇಡಿ ಟೈಲ್ ಲ್ಯಾಂಪ್

ಆಡಿ ಕ್ಯೂ3 ಡೈನಾಮಿಕ್ ಸ್ಪಷ್ಟವಾದ ಎಲ್‌ಇಡಿ ಟೈಲ್ ಲ್ಯಾಂಪ್ ಲೆನ್ಸ್ ಪಡೆದುಕೊಂಡಿದ್ದು, ತೀಕ್ಷ್ಣವಾದ ಪ್ರಕಾಶವನ್ನು ಹೊರಸೂಸುತ್ತದೆ.

ಆಡಿ ಕ್ಯೂ3 ಕಲಾತ್ಮಕ ಶೈಲಿ ಸಹ ಹೊಂದಿದ್ದು, ದಿನ ಹಾಗೂ ರಾತ್ರಿಯಲ್ಲೂ ಗುರುತಿಸಬಹುದಾಗಿದೆ. ಆಧುನಿಕ ಕಾರುಗಳ ಶೈಲಿಯಲ್ಲಿ ಎಲ್‌ಇಡಿ ಲೈಟ್‌ಗಳ ಪಾತ್ರ ಬಹುಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಆಡಿ ಸಂಪೂರ್ಣ ಪ್ರಯೋಜನ ಪಡೆದುಕೊಂಡಿದೆ.

ಅಲಾಯ್ ವೀಲ್

ಅಲಾಯ್ ವೀಲ್

ಅಲಾಯ್ ಚಕ್ರಗಳು ವಾಹನದ ನೋಟ ಹಾಗೂ ನಿಲುವನ್ನು ಸುಧಾರಿಸಲು ಸಹಕಾರಿಯಾಗುತ್ತದೆ. ಇಲ್ಲಿ ಆಡಿಯ 17 ಇಂಚಿನ 5 ಸ್ಪೋಕ್ ಅಲಾಯ್ ವೀಲ್ ಕೂಡಾ ತನ್ನ ಛಾಪು ಮೂಡಿಸುವಲ್ಲಿ ಯಶ ಕಂಡಿದೆ.

ಎಲ್‌ಇಡಿ ಹೆಡ್‌ಲ್ಯಾಂಪ್

ಎಲ್‌ಇಡಿ ಹೆಡ್‌ಲ್ಯಾಂಪ್

ಆಡಿ ಕ್ಯೂ3 ಡೈನಾಮಿಕ್ ಹೆಡ್‌ಲೈಟ್‌ ಸೊಗಸಾಗಿದ್ದು, ಡೇ ಟೈಮ್ ರನ್ನಿಂಗ್ ಲೈಟ್ಸ್, ಆಟೋಮ್ಯಾಟಿಕ್ ಡೈನಾಮಿಕ್ ಹೆಡ್‌ಲೈಟ್ ರೇಂಜ್ ನಿಯಂತ್ರಣ ಮತ್ತು ಮುಂದುಗಡೆ ಟ್ರಾಫಿಕ್ ನಿಯಂತ್ರಣ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿದೆ.

ಇದರಿಂದ ನೋಟದ ವಿಚಾರದಲ್ಲಿ ಮಾತ್ರವಲ್ಲದೆ ಗರಿಷ್ಠ ಸುರಕ್ಷತೆಯನ್ನು ಕಾಯ್ದುಕೊಳ್ಳುವಲ್ಲಿ ಸಂಸ್ಥೆ ಯಶ ಕಂಡಿದೆ.

ಪ್ಯಾನರೋಮಿಕ್ ಸನ್‌ರೂಫ್

ಪ್ಯಾನರೋಮಿಕ್ ಸನ್‌ರೂಫ್

ಆಡಿ ಕ್ಯೂ3 ಪ್ಯಾನರೋಮಿಕ್ ಸನ್‌ರೂಫ್, ವಿಸ್ತಾರವಾಗಿದ್ದು, ಕಾರಿನ ಮೇಲ್ಫಾಗದ ಶೇಕಡಾ 70ರಷ್ಟು ಪ್ರದೇಶವನ್ನು ಆವರಿಸಿಕೊಂಡಿದೆ. ಇದು ಗಾಜುಗಳನ್ನು ತೆರೆದುಕೊಳ್ಳದೆಯೇ ಕಾರಿನೊಳಗೆ ಮತ್ತಷ್ಟು ತಾಜಾ ಗಾಳಿ, ಬೆಳಕು ಬೀಳುವಂತೆ ಸಹಕರಿಸಲಿದೆ.

ಮಾಹಿತಿ: ಪ್ಯಾನರೋಮಿಕ್ ಸನ್‌ರೂಫ್‌ಗಳು ಸಾಂಪ್ರಾದಾಯಿಕ ಸನ್‌ರೂಫ್‌ಗಿಂತ ದೊಡ್ಡದಾಗಿದ್ದು, ಕಾರಿನ ಮೇಲ್ಬಾಗದ ಬುಹುತೇಕ ಪ್ರದೇಶವನ್ನು ಆವರಿಸುತ್ತದೆ. ಟಾಪ್ ಎಂಡ್ ಗಾಡಿಗಳಲ್ಲಿ ಇದು ಸಾಮಾನ್ಯವಾಗಿದೆ.

 ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ಆಧುನಿಕ ಮಾರುಕಟ್ಟೆಯಲ್ಲಿ ಪ್ರತಿಯೊಂದು ಕಾರುಗಳಿಗೂ ನಿಕಟ ಸ್ಪರ್ಧೆ ಎದುರಾಗುತ್ತದೆ. ಅಂತೆಯೇ ಆಡಿ ಕ್ಯೂ3 ಡೈನಾಮಿಕ್ ಪ್ರಮುಖವಾಗಿಯೂ ಮರ್ಸಿಡಿಸ್ ಬೆಂಝ್ ಜಿಎಲ್‌ಎ ಸವಾಲನ್ನು ಎದುರಿಸಲಿದೆ. ನಿಸ್ಸಂಶಯವಾಗಿಯೂ ಜಿಎಲ್‌ಎ ಫ್ರಂಟ್ ವೀಲ್ ಡ್ರೈವ್‌ನಲ್ಲಿ ಮಾತ್ರ ಲಭ್ಯವಿರುವುದರಿಂದ ಆಡಿ ಮುನ್ನಡೆಯನ್ನು ಕಾಯ್ದುಕೊಂಡಿದೆ ಎಂದೇ ಹೇಳಬಹುದು. ಅಲ್ಲದೆ ಆಡಿ ಶಾಶ್ವತ ಆಲ್ ವೀಲ್ ಡ್ರೈವ್‌ನೊಂದಿಗೆ ಕ್ವಾಟ್ರೋ ಡ್ರೈವ್ ಸಿಸ್ಟಂ ಪಡೆದಿದೆ.

ಬೆಲೆ ಹೋಲಿಕೆ

ಆಡಿ ಕ್ಯೂ3 ಡೈನಾಮಿಕ್ 35 ಟಿಡಿಐ ಕ್ವಾಟ್ರೋ - 44.94 ಲಕ್ಷ ರು. (ಆನ್ ರೋಡ್ ದೆಹಲಿ)

ಮರ್ಸಿಡಿಸ್ ಬೆಂಝ್ ಜಿಎಲ್‌ಎ 200 ಸಿಡಿಐ - 42.57 ಲಕ್ಷ (ಆನ್ ರೋಡ್ ದೆಹಲಿ)

ಅಂತಿಮ ತೀರ್ಪು

ಅಂತಿಮ ತೀರ್ಪು

ಮುನ್ನಡೆ

ಪ್ರೀಮಿಯಂ ಅನುಭೂತಿ ನೀಡುವ ಒಳಮೈ,

ನಗರದಲ್ಲೂ ಸುಲಭ ಚಾಲನೆ,

ಕ್ವಾಟ್ರೋ ತಂತ್ರಜ್ಞಾನದ ಮೂಲಕ ಆಫ್ ರೋಡ್ ಚಾಲನೆ ಸುಲಭವಾಗಿ ನಿಭಾಯಿಸುತ್ತದೆ.

ಡ್ಯುಯಲ್ ಕ್ಲಚ್ 7 ಸ್ಪೀಡ್ ಬಾಕ್ಸ್‌ನೊಂದಿಗೆ ತ್ವರಿತ ಹಾಗೂ ನಯವಾದ ಗೇರ್ ಶಿಫ್ಟ್,

ವೈಶಿಷ್ಟ್ಯ ಹಾಗೂ ಸುರಕ್ಷತೆ

ಹಿನ್ನಡೆ

ಹಿಂದುಗಡೆ ಸೀಮಿತ ಜಾಗ,

ಅಸಮ ರಸ್ತೆಯಲ್ಲಿ ನಿಶ್ಚಲ ಚಾಲನೆ,

ಸ್ಟೀರಿಂಗ್ ಭಾವನೆಯ ಕೊರತೆ,

ಸಸ್ಪೆಷನ್ ಡ್ಯಾಪಿಂಗ್ ವಿಚಾರಕ್ಕೆ ಬಂದಾಗ ಆಡಿ ಡ್ರೈವ್ ಸೆಲೆಕ್ಟ್ ಸೀಮಿತವಾಗಿದೆ.

ಎಕ್ಸ್ ಫಾಕ್ಟರ್

ಆಲ್ ವೀಲ್ ಡ್ರೈವ್ ವ್ಯವಸ್ಥೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಏಕಮಾತ್ರ ಪ್ರೀಮಿಯಂ ಕಾಂಪಾಕ್ಟ್ ಎಸ್‌ಯುವಿ.

ಹಣಕ್ಕೆ ತಕ್ಕ ಮೌಲ್ಯ: 4/5 (ಗರಿಷ್ಠ 5ರಲ್ಲಿ)

ನಿಮಗಿದು ಗೊತ್ತೇ?

ನಿಮಗಿದು ಗೊತ್ತೇ?

ಆಡಿ ಲಾಂಛನದಲ್ಲಿರುವ ಉಂಗುರ ಶೈಲಿಯ ನಾಲ್ಕು ವೃತ್ತಕಾರದ ರಿಂಗ್‌ಗಳು ನಾಲ್ಕು ಸಂಸ್ಥೆಗಳನ್ನು ಸೂಚಿಸುತ್ತದೆ. ಇವೆಲ್ಲವೂ ಜೊತೆಯಾಗಿ ಸೇರಿಕೊಂಡು ಆಟೋ ಯೂನಿಯನ್ ಎಂಬ ಸಂಸ್ಥೆಗೆ ರೂಪು ನೀಡಿತ್ತು.

1932ರಲ್ಲಿ ಮಿಲನವಾದ ಬಳಿಕ ಆಟೋ ಯೂನಿಯನ್, ಜರ್ಮನಿಯಲ್ಲಿ ಮರ್ಸಿಡಿಸ್ ಬೆಂಝ್ ಬಳಿಕ ಎರಡನೇ ಅತಿ ದೊಡ್ಡ ಕಾರು ಸಂಸ್ಥೆಯಾಗಿ ಬೆಳೆದು ಬಂದಿತ್ತು. ಈ ಪೈಕಿ ಹಾರ್ಕ್ ಹೈ ಎಂಡ್ ಕಾರುಗಳನ್ನು ಉತ್ಪಾದಿಸಿದರೆ ಆಡಿ ಡಿಲಕ್ಸ್ ಮಿಡ್ ಸೈಜ್ ಕಾರುಗಳನ್ನು ನಿರ್ಮಿಸುವುದರಲ್ಲಿ ಗಮನ ಕೇಂದ್ರಿತವಾಗಿತ್ತು. ಅದೇ ರೀತಿ ವ್ಯಾಂಡರರ್ ಸ್ಟಾಂಡರ್ಡ್ ಮಿಡ್ ಸೈಜ್ ಕಾರುಗಳನ್ನು ಹಾಗೆಯೇ ಡಿಕೆಡಬ್ಲ್ಯು ಸಣ್ಣ ಕಾರು ಹಾಗೂ ಮೋಟಾರ್‌ಸೈಕಲ್‌ಗಳನ್ನು ಉತ್ಪಾದಿಸುತ್ತಿದ್ದವು.

ಬಳಿಕ 1985ನೇ ಇಸವಿಯಲ್ಲಿ ಆಟೋ ಯೂನಿಯನ್‌, ಅಧಿಕೃತವಾಗಿ 'ಆಡಿ ಎಜಿ' ಎಂದು ಘೋಷಣೆಯಾಗಿತ್ತು. ಸದ್ಯ ಫೋಕ್ಸ್‌ವ್ಯಾಗನ್ ಅಂಗಸಂಸ್ಥೆಯಾಗಿ ಆಡಿ ಕಾರ್ಯಾಚರಿಸುತ್ತಿದೆ.

Most Read Articles

Kannada
English summary
Click through the slides for Audi Q3 35 TDI Quattro Dynamic first drive impression, design, performance, pricing, specifications, and verdict.
Story first published: Saturday, October 25, 2014, 17:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X