ಎಂಟ್ರಿ ಲೆವೆಲ್ ಲಗ್ಷುರಿ ಎಸ್‌ಯುವಿ ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

By Nagaraja

ಸಾಮಾನ್ಯವಾಗಿ ಆಡಿ, ಬೆಂಝ್ ಅಥವಾ ಬಿಎಂಡಬ್ಲ್ಯು ಹೆಸರು ಕೇಳಿದಾಕ್ಷಣ ಇದು ನಮ್ಮ ರೇಂಜ್‌ಗೆ ಒಳಪಡುವ ವಿಷಯವಲ್ಲ ಎಂದು ತೆಪ್ಪಗಾಗುತ್ತೇವೆ. ಆದರೆ ಬೆಳೆಯುತ್ತಿರುವ ಭಾರತ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ಐಷಾರಾಮಿ ಕಾರುಗಳಿಗೂ ಬೇಡಿಕೆ ಕಾಯ್ದುಕೊಂಡಿದೆ ಎಂಬುದು ಸಹ ಅಷ್ಟೇ ಸತ್ಯ.

ಸಣ್ಣ ಕಾರಿನ ದೊಡ್ಡ ಕನಸು ದಟ್ಸನ್ ಗೊ

ಆಡಿ ಎಸ್‌ಯುವಿಗಳು 'ಕ್ಯೂ' ಸಾಲಿನಲ್ಲಿ ಗುರುತಿಸಿಕೊಂಡಿದೆ. ಇದೀಗ ಈ ಸಾಲಿಗೆ ಕ್ಯೂ3 ಎಂಟ್ರಿ ಲೆವೆಲ್ ಪ್ರವೇಶ ಪಡೆದಿವೆ. ಸಂಚಾರ ವೆಚ್ಚವನ್ನು ಕಡಿತಗೊಳಿಸುವ ನಿಟ್ಟಿನಲ್ಲಿ ಭಾರತದಲ್ಲಿ ಬಹುತೇಕ ಐಷಾರಾಮಿ ಕಾರುಗಳು ಡೀಸೆಲ್ ಎಂಜಿನ್‌ಗಳಲ್ಲೇ ಓಡಾಡುತ್ತವೆ.

ಸ್ಕೂಟರ್ ಪ್ರೇಮಿಗಳ ಆನಂದ ವೆಸ್ಪಾ ಎಸ್125

ಆದರೆ ಇವೆಲ್ಲದಕ್ಕಿಂತಲೂ ವ್ಯತಿರಿಕ್ತವಾಗಿರುವ ಆಡಿ ಕ್ಯೂ3 ಎಸ್‌ಯುವಿ ಕಾರಲ್ಲಿ, 2.0 ಲೀಟರ್ ಟಿಡಿಐಕ್ಯೂ ಡೀಸೆಲ್ ಹಾಗೂ 2.0 ಲೀಟರ್ ಟಿಎಫ್‌ಎಸ್ಐಕ್ಯೂ ಪೆಟ್ರೋಲ್ ಎಂಜಿನ್ ಆಳವಡಿಸಲಾಗಿದೆ. ಇವೆರಡು ಅನುಕ್ರಮವಾಗಿ 177 ಹಾಗೂ 211 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಆಡಿ ಕ್ಯೂ3 2.0 ಟಿಎಫ್‌ಎಸ್‌ಐಕ್ಯೂ (TFSIq)

ಆಡಿ ಕ್ಯೂ3 2.0 ಟಿಎಫ್‌ಎಸ್‌ಐಕ್ಯೂ (TFSIq)

ಬೇಬಿ ಎಸ್‌ಯುವಿ ಎಂದೇ ಗುರುತಿಸಿಕೊಂಡಿರುವ ಆಡಿ ಕ್ಯೂ3, 2013ರಲ್ಲಿ ಭಾರತದಲ್ಲಿ ಲಾಂಚ್ ಆಗಿತ್ತು. ಈ ಬಗ್ಗೆ ಸಂಪೂರ್ಣ ಟೆಸ್ಟ್ ಡ್ರೈವ್ ವಿಮರ್ಶೆಯನ್ನು ಇಲ್ಲಿ ಕೊಡಲಾಗಿದೆ.

ಟೆಸ್ಟ್ ಡ್ರೈವ್: ಪೆಟ್ರೋಲ್, 2.0 ಟಿಎಫ್‌ಎಸ್‌ಐ ಕ್ವಾಟ್ರೊ

ಪರೀಕ್ಷೆ ಮಾಡಿದವರು: ಅಜಿಂಕ್ಯಾ ಪ್ಯಾರಾಲಿಕರ್ (ಉಪ ಸಂಪಾದಕರು, ಡ್ರೈವ್‌ಸ್ಪಾರ್ಕ್)

ಕೀ.ಮೀ. : 180, ಮುಂಬೈ

ವೆರಿಯಂಟ್, ದರ ಮಾಹಿತಿ

ವೆರಿಯಂಟ್, ದರ ಮಾಹಿತಿ

ಕ್ಯೂ3 ಎಸ್ - 24.02 ಲಕ್ಷ ರು.

ಕ್ಯೂ3 2.0 ಟಿಡಿಐ ಕ್ವಾಟ್ರೊ ಬೇಸ್ ಗ್ರೇಡ್ - 29.69 ಲಕ್ಷ ರು.

ಕ್ಯೂ3 2.0 ಟಿಡಿಐ ಕ್ವಾಟ್ರೊ ಹೈ ಗ್ರೇಡ್ - 35.28 ಲಕ್ಷ ರು.

ಕ್ಯೂ3 2.0 ಟಿಎಫ್‌ಎಸ್‌ಐ - 32.63 ಲಕ್ಷ ರು.

ಕ್ಯೂ3 2.0 ಟಿಎಫ್‌ಎಸ್‌ಐ ಕ್ವಾಟ್ರೊ ಪ್ರೀಮಿಯಂ ಪ್ಲಸ್ - 38.51 ಲಕ್ಷ ರು.

ಎಕ್ಸ್‌ಟೀರಿಯರ್

ಎಕ್ಸ್‌ಟೀರಿಯರ್

ಫಿಟ್ ಆಂಡ್ ಫಿನಿಶ್ ಮೇಲೆ ಆಡಿ ಕ್ಯೂ3 ಹೆಚ್ಚಿನ ಗಮನ ಕೊಡಲಾಗಿದೆ. ನಮಗೆ ಲಭಿಸಿದ ಕಪ್ಪು ನೀಲಿ ಕ್ಯೂ3 ಕಾರಿನ ಬಣ್ಣವು ಆಕಕರ್ಷಕವಾಗಿತ್ತು. ಇಲ್ಲಿ ಆಡಿಯ ಎಸ್‌ಯುವಿ ಡಿಸೈನ್ ಅನ್ನು ಹಿಂಬಾಲಿಸಲಾಗಿದೆ. ಇದು 4.39 ಮೀಟರ್ ಉದ್ದವನ್ನು ಹೊಂದಿದೆ.

ಎಂಟ್ರಿ ಲೆವೆಲ್ ಲಗ್ಷುರಿ ಎಸ್‌ಯುವಿ ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

ಆಡಿ ಕ್ಯೂ3 ತನ್ನದೇ ಆದ ವಿಶಿಷ್ಟ ರೀತಿಯ ಸ್ಟೈಲಿಷ್ ಹೆಡ್‌ಲೈಟ್ ಪೆಡೆದುಕೊಂಡಿದ್ದು, ಜತೆಗೆ ಸಿ ರೂಪದ ಎಲ್‌ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಇದರಲ್ಲಿದೆ. ಇಲ್ಲಿ ಟೈಲ್ ಲ್ಯಾಂಪ್ ಸಹ ಎಲ್‌ಇಡಿ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಸಣ್ಣದಾಗಿರುವ ಫಾಗ್ ಲ್ಯಾಂಪ್‌ಗಳು ಕೆಳಗಡೆ ಲಗತ್ತಿಸಿದರೂ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ.

ಎಂಟ್ರಿ ಲೆವೆಲ್ ಲಗ್ಷುರಿ ಎಸ್‌ಯುವಿ ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

ಆಡಿ ಕ್ಯೂ3 ಬಲವಾದ ದೇಹ ವಿನ್ಯಾಸ ಪಡೆದುಕೊಂಡಿದ್ದು, ಇದು ಕಾರಿಗೆ ಹೆಚ್ಚು ಕ್ರೀಡಾತ್ಮಕ ಹಾಗೂ ಕೂಪೆ ವಿನ್ಯಾಸವನ್ನು ಪ್ರದಾನ ಮಾಡುತ್ತದೆ. ಈ ಮೂಲಕ ಯುವ ಗ್ರಾಹಕರನ್ನು ಸೆಳೆಯುವ ಇರಾದೆಯನ್ನಿರಿಸಿಕೊಳ್ಳಲಾಗಿದೆ.

ಬಣ್ಣಗಳು

ಬಣ್ಣಗಳು

ಫಾಟಂ ಬ್ಲ್ಯಾಕ್, ಮೈಸನೊ ರೆಡ್ ಪಿಯರ್ಲ್, ಅಮಲ್ಫಿ ವೈಟ್, ಸಮೋವಾ ಒರೆಂಜ್, ಕ್ಯಾರಿಬೊ ಬ್ರೌನ್ ಆಂಡ್ ಐಸ್ ಸಿಲ್ವರ್, ಗ್ಲೇಸಿಯರ್ ವೈಟ್ ಮೆಟ್ಯಾಲಿಕ್ ಮತ್ತು ಕೋಬಾಲ್ಟ್ ಬ್ಲೂ ಮೆಟ್ಯಾಲಿಕ್.

ಒಳಮೈ

ಒಳಮೈ

ಸಾಮಾನ್ಯ ಆಡಿ ಕಾರುಗಳಂತೆ ಕ್ಯೂ3 ಇಂಟಿರಿಯರ್‌ಗಳು ಸಹ ಐಷಾರಾಮಿ ಸ್ಪರ್ಶ ಪಡೆದಿವೆ. ಇದು ಗ್ರೇ ಹಾಗೂ ಬೀಜ್ ಬಣ್ಣದ ಮಿಶ್ರಣವನ್ನು ಹೊಂದಿದೆ. ಇನ್ನು ಚಾಲಕರಿಗೆ ಸುಲಭವಾಗುವ ರೀತಿಯಲ್ಲಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ರಚಿಸಲಾಗಿದೆ.

ಎಂಟ್ರಿ ಲೆವೆಲ್ ಲಗ್ಷುರಿ ಎಸ್‌ಯುವಿ ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

ಆಡಿ ಕ್ಯೂ3 ಹಿಂಬದಿಯ ಸೀಟಿನಲ್ಲಿ ಮೂವರಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾಗಿದೆ. ಹಿಂದುಗಡೆಯ ಪ್ರಯಾಣಿಕರಿಗೂ ರಿಯರ್ ಏರ್ ಕಾನ್ ಸೌಲಭ್ಯವಿದೆ. ಇಲ್ಲಿ ಕ್ರೀಮ್ ಕಲರ್ ಲೆಥರ್ ಸಿಟ್ಟಿಂಗ್ ವ್ಯವಸ್ಥೆ ಕೊಡಲಾಗಿದೆ. ಫ್ರಂಟ್ ಸೀಟು ಹಿಂಬದಿಗೆ ಸರಿಸಿದರೂ ಉತ್ತಮ ಲೆಗ್ ರೂಂ ಕಾಯ್ದುಕೊಳ್ಳಲಾಗಿದೆ. ಎಲ್ಲ ಮೂವರು ಪ್ರಯಾಣಿಕರಿಗೂ ವೈಯಕ್ತಿಕ ಹೆಡ್ ರೆಸ್ಟ್ ಸಹ ಕೊಟ್ಟಿರುವುದು ಗಮನಾರ್ಹವಾಗಿದೆ.

ಎಂಟ್ರಿ ಲೆವೆಲ್ ಲಗ್ಷುರಿ ಎಸ್‌ಯುವಿ ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

ಮುಂಭಾಗದ ಸೀಟು ಚಾಲಕರಿಗೆ ಆರಾಮದಾಯಕವೆನಿಸಲಿದೆ. ಇದನ್ನು ನಿಮ್ಮ ಡ್ರೈವಿಂಗ್‌ಗೆ ಅನುಸಾರವಾಗಿ ಹೊಂದಿಕೆ ಮಾಡಬಹುದಾಗಿದೆ. ಇಲ್ಲಿರುವ ಲೆಥರ್ ಸೀಟುಗಳು ಕಾರಿಗೆ ಪ್ರೀಮಿಯಂ ಲುಕ್ ನೀಡುತ್ತದೆ.

ಎಂಟ್ರಿ ಲೆವೆಲ್ ಲಗ್ಷುರಿ ಎಸ್‌ಯುವಿ ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

ಈ ಬೇಬಿ ಎಸ್‌ಯುವಿನಲ್ಲಿ ಎರಡು ಸಾಲುಗಳ ಆಸನ ವ್ಯವಸ್ಥೆಯಿರುತ್ತದೆ. ಚಿತ್ರದಲ್ಲಿ ನೋಡುತ್ತಿರುವಂತೆಯೇ ಹಿಂಬದಿಯ ಹೆಡ್ ರೆಸ್ಟ್‌ಗಳನ್ನು ಕೆಳಕ್ಕೆ ಸರಿಸಲಾಗಿದೆ.

ಎಂಟ್ರಿ ಲೆವೆಲ್ ಲಗ್ಷುರಿ ಎಸ್‌ಯುವಿ ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

ಆಡಿ ಕ್ಯೂ3 ಕಾರಲ್ಲಿ 460 ಲೀಟರ್ ಬೂಟ್ ಸ್ಪೇಸ್ ಇರಲಿದೆ. ಇದನ್ನು 1365 ಲೀಟರ್ ವರೆಗೂ ವರ್ಧಿಸಬಹುದಾಗಿದೆ. ಹಿಂಬದಿಯ ಸೀಟುಗಳನ್ನು ಮಡಚುವ ಮುಖಾಂತರ ಇದನ್ನು ಸಾಧಿಸಬಹುದಾಗಿದೆ.

ವೈಶಿಷ್ಟ್ಯ

ವೈಶಿಷ್ಟ್ಯ

ಆಡಿ ಕ್ಯೂ3 ಎರಡು ಅನಲಾಗ್ ಮೀಟರ್ ಹೊಂದಿದ್ದು, ಇವೆರಡರ ನಡುವೆ ಡಿಜಿಟಲ್ ಡಿಸ್‌ಪ್ಲೇ ಹೊಂದಿದೆ. ಇದರ ಅನಲಾಗ್ ಮೀಟರ್‌ಗಳು ಆರ್‌ಪಿಎಂ, ಎಂಜಿನ್ ಓಯಿಲ್ ತಾಪಮಾನ, ವೇಗತೆ, ಇಂಧನ ಮಟ್ಟಗಳಂತಹ ಬೇಸಿಕ್ ಮಾಹಿತಿಗಳನ್ನು ಒದಗಿಸಲಿದೆ. ಹಾಗೆಯೇ ಡಿಜಿಟಲ್ ಮೀಟರ್‌ಗಳು ಟ್ರಿ ಮೀಟರ್ ಒಳಗೊಂಡಿದ್ದು, ಇದು ಎಷ್ಟು ದೂರ ಕ್ರಮಿಸಿದ್ದೀರಾ, ಸರಾಸರಿ ವೇಗ, ಸರಸಾರಿ ಇಂಧನ ವ್ಯಯ, ಡೋರ್ ಓಪನ್ ವಾರ್ನಿಂಗ್‌ಗಳಂತಹ ಮಹತ್ವದ ಮಾಹಿತಿಗಳನ್ನು ಒದಗಿಸಲಿದೆ.

ಎಂಟ್ರಿ ಲೆವೆಲ್ ಲಗ್ಷುರಿ ಎಸ್‌ಯುವಿ ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

ಆಡಿ ಕ್ಯೂ3ನಲ್ಲಿರುವ ಮಾಹಿತಿ ಮನರಂಜನಾ ಸಿಸ್ಟಂ, ಹೆಸರಲ್ಲೇ ಸೂಚಿಸಿರುವಂತೆಯೇ ಮಾಹಿತಿ ಜತೆ ಮನರಂಜನೆಯನ್ನು ನೀಡುತ್ತದೆ. ಇಲ್ಲಿ ನಿಮಗೆ ಸಂಗೀತ, ರೆಡಿಯೋ ಆಲಿಸಬಹುದಾಗಿದೆ. ಇದರ ಜತೆಗೆ ಐಚ್ಛಿಕ ನೇವಿಗೇಷನ್, ರಿವರ್ಸ್ ಪಾರ್ಕಿಂಗ್ ಮಾರ್ಗದರ್ಶನ ಮತ್ತು ಹೆಚ್ಚುವರಿ ಕೆನೆಕ್ಟಿವಿಟಿಗಾಗಿ ಬ್ಲೂಟೂತ್ ಲಭ್ಯವಿದೆ.

ಎಂಟ್ರಿ ಲೆವೆಲ್ ಲಗ್ಷುರಿ ಎಸ್‌ಯುವಿ ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

ಆಡಿ ಕ್ಯೂ3 ಸ್ಟೀರಿಂಗ್ ವೀಲ್ ಶುಭ್ರವಾಗಿದ್ದು, ಯಾವುದೇ ಸ್ವಿಚ್‌ನ ತೊಂದರೆ ನಿಮಗೆ ಕಾಡುವುದಿಲ್ಲ. ಇದಕ್ಕಾಗಿ ನಾವು ಆಡಿಗೆ ಧನ್ಯವಾದ ಹೇಳಬೇಕು. ಇಲ್ಲಿ ಮ್ಯೂಸಿಕ್, ಮನರಂಜನೆ, ಟ್ರಿಪ್ ಮೀಟರ್‌ಗಳನ್ನು ನಿಯಂತ್ರಿಸಬಹುದಾದ ಕೆಲವೇ ಕೆಲವು ಅಗತ್ಯ ಸ್ವಿಚ್ ಮಾತ್ರವಿದೆ.

ಸನ್ ರೂಫ್

ಸನ್ ರೂಫ್

ಇವೆಲ್ಲದರ ಜತೆಗೆ ಆಡಿಯಲ್ಲಿ ಸನ್ ರೂಫ್ ಸೌಲಭ್ಯವೂ ಇದೆ. ಇದು ಒನ್ ಟಚ್ ಬಟನ್‌ನಿಂದ ನಿಯಂತ್ರಿಸಲ್ಪಡುತ್ತದೆ.

ಎಂಜಿನ್

ಎಂಜಿನ್

ನಯವಾದ ಎಂಜಿನ್ ಆಡಿ ಕ್ಯೂ3 ಹೊಂದಿದ್ದು, ಕ್ಯಾಬಿನ್ ಶಬ್ದ ಬಹಳ ಕಡಿಮೆಯಾಗಿದೆ. ಇದು ಆಲ್ ವೀಲ್ ಡ್ರೈವಿಂಗ್ ವ್ಯವಸ್ಥೆಯನ್ನು ಪಡೆದಿದೆ.

ನಿರ್ವಹಣೆ

ನಿರ್ವಹಣೆ

ಅಲ್ಪ ಸ್ವಲ್ಪ ಅಡ್ಡದಿಡ್ಡಿ ಚಾಲನೆಗೆ ಪ್ರಯತ್ನಿಸಿದರೂ ಆಡಿ ಕ್ಯೂ3 ಸ್ಥಿರತೆ ಒದಿಗಸಲಿದೆ. ಇದು ಆಟೋ ಸ್ಟಾರ್ಟ್/ಸ್ಟಾಪ್‌ಗಳಂತಹ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ಮೈಲೇಜ್

ಮೈಲೇಜ್

ಸಹಜವಾಗಿಯೇ ಐಷಾರಾಮಿ ಕಾರುಗಳ ಮೈಲೇಜ್ ಬಗ್ಗೆ ಯಾರು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಿದ್ದರೂ ನಮ್ಮ ಟೆಸ್ಟ್ ಡ್ರೈವ್ ಪ್ರಕಾರ ಟಿಎಫ್‌ಎಸ್‌ಐ ಎಂಜಿನ್ ಲೀಟರ್‌‌ಗೆ 10.2 ಕೀ.ಮೀ. ನೀಡುವಲ್ಲಿ ಯಶಸ್ವಿಯಾಗಿದೆ. ಇದು ಎಆರ್‌ಎಐ ಮಾನ್ಯತೆಗೆ (11.72) ಸಮೀಪವಾಗಿದೆ.

ಟ್ರಾನ್ಸ್‌ಮಿಷನ್

ಟ್ರಾನ್ಸ್‌ಮಿಷನ್

ಇದರ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮಹತ್ವವೆನಿಸಿದ್ದು, ಗೇರ್ ಬದಲಾಯಿಸುವಾಗ ಅನುಭವಕ್ಕೆ ಬರುವುದಿಲ್ಲ. ಇದು ಪಾರ್ಕಿಂಗ್ ಜತೆಗೆ ಆರ್, ಎನ್, ಡಿ ಹಾಗೂ ಎಸ್‌ಗಳೆಂಬ ಡ್ರೈವಿಂಗ್ ಮೋಡ್‌ಗಳನ್ನು ಹೊಂದಿದೆ.

ಚಾಲನೆ ಹಾಗೂ ಹ್ಯಾಂಡ್ಲಿಂಗ್

ಚಾಲನೆ ಹಾಗೂ ಹ್ಯಾಂಡ್ಲಿಂಗ್

ಆಫ್ ರೋಡ್‌ಗಳಲ್ಲೂ ಆಡಿ ಕ್ಯೂ3 ಉತ್ತಮ ಚಾಲನಾ ಅನುಭವ ನೀಡುತ್ತದೆ. ಹಾಗಿದ್ದರೂ ಕೆಲವೊಂದು ಸಂದರ್ಭಗಳಲ್ಲಿ ಆವೇಗದ ಕೊರತೆ ಕಾಡುತ್ತದೆ.

ಬ್ರೇಕಿಂಗ್, ಸಸ್ಪೆಷನ್

ಬ್ರೇಕಿಂಗ್, ಸಸ್ಪೆಷನ್

ಬ್ರೇಕಿಂಗ್ ಸಿಸ್ಟಂ ಅತ್ಯುತ್ತಮ ಎನಿಸಿದರೂ ಬಿಎಂಡಬ್ಲ್ಯು ಎಕ್ಸ್1 ಮಾದರಿಗಳಿಗೆ ಹೋಲಿಸಿದಾಗ ಸ್ವಲ್ಪ ಹಿನ್ನಡೆ ಅನುಭವಿಸುತ್ತದೆ. ಒಟ್ಟಾರೆಯಾಗಿ ಅತ್ಯುತ್ತಮವೆನಿಸಿದೆ.

ಹಿನ್ನಡೆ

ಹಿನ್ನಡೆ

ಕೆಲವೊಂದು ವಿಚಾರಗಳನ್ನು ಇಲ್ಲಿ ಉಲ್ಲೇಖ ಮಾಡಲಾಗಿದೆ. ಡ್ಯಾಶ್‌ಬೋರ್ಡ್‌ನಲ್ಲಿ ಸಿಂಗಲ್ ಪೀಸ್ ವುಡ್ ಆಳವಡಿಸಿರುವುದು ಆಶ್ಚರ್ಯಕ್ಕೆ ಎಡೆಮಾಡಿಕೊಟ್ಟಿದೆ.

ಎಂಟ್ರಿ ಲೆವೆಲ್ ಲಗ್ಷುರಿ ಎಸ್‌ಯುವಿ ಆಡಿ ಕ್ಯೂ3 ಟೆಸ್ಟ್ ಡ್ರೈವ್ ರಿವ್ಯೂ

ಚಾಲನೆ, ಆರಾಮದಾಯಕತೆ ಹಾಗೂ ಸಸ್ಪೆಷನ್ ಎಲ್ಲವೂ ಓಕೆ ಅನಿಸಿದರೂ ಆವೇಗ ಕಡಿಮೆಯಾಗಿರುವುದು ಹಿನ್ನಡೆಯಾಗಿ ಪರಿಣಮಿಸಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ಪ್ಲಸ್ ಪಾಯಿಂಟ್

ಅತ್ಯುತ್ತಮ ಲುಕ್,

ಚಾಲನಾ ಅನುಭವ,

ಗ್ರೌಂಡ್ ಕ್ಲಿಯರನ್ಸ್,

ಐಷಾರಾಮಿ ಇಂಟಿರಿಯರ್,

ಪ್ರೀಮಿಯಂ ಲೆಥರ್,

ಜರ್ಮನಿಯ ನಿರ್ಮಾಣ ಗುಣಮಟ್ಟತೆ,

ಸುರಕ್ಷತೆ

ಮೈನಸ್ ಪಾಯಿಂಟ್

ವೇಗತೆ ಕೊರತೆ,

ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಿನ್ನಡೆ,

ಡ್ಯಾ‌ಶ್‌ಬೋರ್ಡ್‌ನಲ್ಲಿ ಸಿಂಗಲ್ ವುಡ್ ಇಸರ್ಟ್

ಎಕ್ಸ್ ಫಾಕ್ಟರ್

ಆಫ್ ರೋಡರ್‌ಗಳ ಪೈಕಿ ಕ್ಯೂ3 ಶ್ರೇಷ್ಠ ಎಸ್‌‍ಯುವಿ ಆಗಿದೆ. ಪ್ರಾಯೋಗಿಕವಾಗಿಯೂ ಇದು ಆಡಿ ಘನತೆಯನ್ನು ಹೆಚ್ಚಿಸಲಿದೆ. ಹಾಗಿದ್ದರೂ ಸಂಚಾರ ವೆಚ್ಚ ಅಧಿಕವಾಗಿರುವುದರಿಂದ ಪೆಟ್ರೋಲ್ ಮಾದರಿಯು ಖರೀದಿಗಾರರನ್ನು ಆಕರ್ಷಿಸುವ ಸಾಧ್ಯತೆ ಕಡಿಮೆಯಾಗಿದೆ.

ಹಣದ ಮೌಲ್ಯ: 3/5

ಕ್ವಾಟ್ರೊ

ಕ್ವಾಟ್ರೊ

ಆಡಿಯ ಫೋರ್ ವೀಲ್ ಡ್ರೈವ್ ಸಿಸ್ಟಂ ಕ್ವಾಟ್ರೊ ಆಗಿದೆ. 1980 ಮಾರ್ಚ್ 3ರಂದು ಜರ್ಮನಿಯ ಈ ಐಷಾರಾಮಿ ವಾಹನ ತಯಾರಕ ಸಂಸ್ಥೆಯು ಮೊದಲ ಬಾರಿಗೆ ಬಳಕೆ ಮಾಡಿತ್ತು. 1991ರ ವರೆಗೆ ಆಡಿ ರೋಡ್ ಹಾಗೂ ರಾಲಿ ಕಾರುಗಳು ಕ್ವಾಟ್ರೊ ವಿಭಾಗದಲ್ಲಿ ಗುರುತಿಸಿಕೊಂಡಿದ್ದವು. ಇಲ್ಲಿ ಕ್ವಾಟ್ರೊ ಎಂಬುದು ಇಟಲಿಯಲ್ಲಿ ನಾಲ್ಕು ಎಂಬುದನ್ನು ಸೂಚಿಸುತ್ತದೆ. ಇದೇ ಕಾರಣಕ್ಕಾಗಿ ತನ್ನೆಲ್ಲ ಫೋರ್ ವೀಲ್ ಡ್ರೈವ್ ಮಾದರಿಗಳು ಆಡಿ ಕ್ಯೂವಿನಿಂದ ಗುರುತಿಸಿಕೊಳ್ಳುತ್ತಿದೆ.

Most Read Articles

Kannada
English summary
The German luxury car manufacturer not only produces premium sedans, estates and hatchbacks but also offer luxury SUVs. Audi name their SUV models with a prefix, Q. They offer Indians a choice of Q products, ranging from the Q7, their biggest SUV to their entry level Q3.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X