ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಟೆಸ್ಟ್ ಡ್ರೈವ್: ಜೊಬೊ ಕುರುವಿಲ್ಲ (ಡ್ರೈವ್ ಸ್ಪಾರ್ಕ್ ಪ್ರಧಾನ ಸಂಪಾದಕರು)

ಇತ್ತೀಚೆಗಷ್ಟೇ ಐದು ಬಾಗಿಲುಗಳ, ಐದು ಸೀಟುಗಳನ್ನು ಹೊಂದಿರುವ ವಿಶೇಷವಾಗಿಯೂ ನೂತನ ಕಾರು ಖರೀದಿಸುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ದಟ್ಸನ್ ಗೊ ಸಣ್ಣ ಕಾರನ್ನು ಲಾಂಚ್ ಮಾಡಲಾಗಿತ್ತು. ಇದರಂತೆ ನಮ್ಮ ಪ್ರಧಾನ ಸಂಪಾದಕರು ನಡೆಸಿರುವ ಟೆಸ್ಟ್ ಡ್ರೈವ್‌ ವರದಿ ಹಾಗೂ ಸಂಪೂರ್ಣ ಚಾಲನಾ ಅನುಭವವನ್ನು ನಿಮ್ಮ ಜೊತೆ ಹಂಚಿಕೊಳ್ಳಲಿದ್ದೇವೆ.

ದಟ್ಸನ್ ಗೊ ವಿಷಯಕ್ಕೆ ಬರುವುದಕ್ಕಿಂತ ಮುನ್ನ ದಟ್ಸನ್ ಏನೆಂಬುದನ್ನು ಮೊದಲು ತಿಳಿಯಬೇಕಾಗುತ್ತದೆ. ಜಪಾನ್ ಮೂಲದ ಸಣ್ಣ ಕಾರು ಬ್ರಾಂಡ್ ಆಗಿರುವ ದಟ್ಸನ್ ಅನ್ನು 2013 ಜುಲೈ ತಿಂಗಳಲ್ಲಿ ಮರು ಪರಿಚಯಿಸಲಾಗಿತ್ತು. ಇದಕ್ಕೂ ಮೊದಲು ದಶಕಗಳ ಹಿಂದೆ 1931ನೇ ಇಸವಿಯಲ್ಲಿ ದಟ್ಸನ್ ಮೊದಲ ಮಾದರಿ ಜಗತ್ತಿಗೆ ಪರಿಚಯವಾಗಿತ್ತು. ಆ ಬಳಿಕ 1958ರಿಂದ 1986ನೇ ಇಸವಿಯ ವರೆಗೆ ಜಪಾನ್ ಮೂಲದ ನಿಸ್ಸಾನ್ ಬ್ರಾಂಡ್ ತಲಹದಿಯಲ್ಲೇ ಮಾರಾಟವಾಗುತ್ತಿತ್ತು. ಆದರೆ ಕಾರಣಾಂತರಗಳಿಂದಾಗಿ 1986ನೇ ಇಸವಿಯಲ್ಲಿ ಮುಚ್ಚುಗಡೆಗೊಳಿಸಿತ್ತು.

ಇದೀಗ ಬರೋಬ್ಬರಿ 27 ವರ್ಷಗಳ ಬಳಿಕ ರಿ ಎಂಟ್ರಿ ಕೊಟ್ಟಿರುವ ದಟ್ಸನ್, ಹೊಸ ರೂಪ, ಹಾವ ಭಾಷೆಯನ್ನು ಪಡೆದುಕೊಂಡಿದೆ. ಇತಿಹಾಸದಲ್ಲಿರುವ ದಟ್ಸನ್ ಐಷಾರಾಮಿ ಕಾರಾಗಿದ್ದರೆ ಇದೀಗ ಎಂಟ್ರಿ ಕೊಟ್ಟಿರುವ ದಟ್ಸನ್ ಪ್ರಮುಖವಾಗಿ ಭಾರತದಂತಹ ಬೆಳೆದು ಬರುತ್ತಿರುವ ಏಷ್ಯಾ ಹಾಗೂ ಆಫ್ರಿಕಾ ರಾಷ್ಟ್ರಗಳನ್ನು ಗುರಿಯಾಗಿರಿಸಿಕೊಂಡಿದೆ. ಹೀಗೆ ಆಗಮಿಸಿರುವ ದಟ್ಸನ್ ತನ್ನ ಚೊಚ್ಚಲ ಮಾದರಿಯನ್ನು ಭಾರತಕ್ಕೆ ಪರಿಚಯಿಸಿದೆ. ಇದು ಪ್ರಮುಖವಾಗಿಯೂ ಮಾರುತಿಯ ಜನಪ್ರಿಯ ಆಲ್ಟೊ ಕೆ10 ಹಾಗೂ ಹ್ಯುಂಡೈ ಇಯಾನ್ ಆವೃತ್ತಿಗಳಿಗೆ ಪ್ರತಿಸ್ಪರ್ಧಿಯಾಗಿರಲಿದೆ. ಅಷ್ಟಕ್ಕೂ ದಟ್ಸನ್ ಗೊ ಚಾಲನಾ ಅನುಭವ ಹಾಗೂ ಇನ್ನಿತರ ವೈಶಿಷ್ಟ್ಯಗಳ ವಿವರಗಳಿಗಾಗಿ ನಮ್ಮ ಚಿತ್ರಾತ್ಮಕ ವರದಿಯನ್ನು ಒಮ್ಮೆ ಓದಿ ನೋಡಿರಿ...

ದಟ್ಸನ್ ಗೊ ಪ್ರವೇಶ

ದಟ್ಸನ್ ಗೊ ಪ್ರವೇಶ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ದಟ್ಸನ್ ಗೊ 2014 ಮಾರ್ಚ್ 19ರಂದು ಭರ್ಜರಿ ಲಾಂಚ್ ಕಂಡಿತ್ತು. (ಬೆಂಗಳೂರಿನಲ್ಲಿ ಮಾರ್ಚ್ 23).

ಪರೀಕ್ಷಾರ್ಥ ಮಾದರಿ: ದಟ್ಸನ್ ಗೊ ಟಾಪ್ ಎಂಡ್ ವೆರಿಯಂಟ್ (ಟಿ), ಪೆಟ್ರೋಲ್

ಟೆಸ್ಟ್ ಡ್ರೈವ್: ಜೊಬೊ ಕುರುವಿಲ್ಲಾ (ಪ್ರಧಾನ ಸಂಪಾದಕರು, ಡ್ರೈವ್ ಸ್ಪಾರ್ಕ್)

ಕೀ.ಮೀ. ಹಾಗೂ ಸ್ಥಳ : 150, ಹೈದರಾಬಾದ್.

ದಟ್ಸನ್ ಗೊ ದರ (ಎಕ್ಸ್ ಶೋ ರೂಂ ದೆಹಲಿ)

ದಟ್ಸನ್ ಗೊ ದರ (ಎಕ್ಸ್ ಶೋ ರೂಂ ದೆಹಲಿ)

ದಟ್ಸನ್ ಗೊ ಪ್ರಾರಂಭಿಕ ದರ 3.12 ಲಕ್ಷ ರು.ಗಳಾಗಿದ್ದು, ಟಾಪ್ ಎಂಡ್ ವೆರಿಯಂಟ್ 3.69 ಲಕ್ಷ ರು.ಗಳಷ್ಟು ದುಬಾರಿಯಾಗಲಿದೆ.

ವೆರಿಯಂಟ್ ಹಾಗೂ ದರ

ಡಿ - 3.12 ಲಕ್ಷ ರು.

ಎ - 3.46 ಲಕ್ಷ ರು.

ಟಿ - 3.69 ಲಕ್ಷ ರು.

ಹೊರ ವಿನ್ಯಾಸ

ಹೊರ ವಿನ್ಯಾಸ

ಬಹುತೇಕ ಎಲ್ಲ ಗ್ರಾಹಕರ ಖರೀದಿ ವಿಚಾರದಲ್ಲೂ ಬೆಲೆ ಪ್ರಮುಖ ವಿಚಾರವಾಗಿರುವುದರಿಂದ ಈ ನಾಲ್ಕು ಚಕ್ರದ ವಾಹನವು ಸಹ ಅಷ್ಟೇ ಪ್ರಮುಖ ಪಾತ್ರ ವಹಿಸುತ್ತದೆ. ನಿಸ್ಸಾನ್ ಮೈಕ್ರಾ ತಲಹದಿಯಲ್ಲಿ ರೂಪುಗೊಂಡಿರುವ ದಟ್ಸನ್ ಗೊ ಸಣ್ಣ ಕಾರು ಕೂಡಾ ಗ್ರಾಹಕರ ನಿರೀಕ್ಷೆ ಮುಟ್ಟುವಲ್ಲಿ ಯಶಸ್ವಿಯಾಗಿದೆ. ಮುಂಭಾಗದಲ್ಲಿ ಇದರ ಡಿ ಕಟ್ ಗ್ರಿಲ್ ನಡುವೆ ದಟ್ಸನ್ ಬ್ರಾಂಡ್ ಲೊಗೊ ಎದ್ದು ಕಾಣಿಸುತ್ತಿದೆ.

ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ನಿಜವಾಗಿಯೂ ದಟ್ಸನ್ ಗೊ ನಿಮ್ಮನ್ನು ಪ್ರತಿಬಿಂಬಿಸಲಿದೆ. ಎಲ್ಲ ಹೊಸತನದಿಂದ ಕೂಡಿದ ಕಾರೊಂದು ನಿಮ್ಮ ಬಯಕೆಗಳನ್ನು ಈಡೇರಿಸಲಿದೆ. ಇಲ್ಲಿ ವಿಶಿಷ್ಟವಾದ ಫ್ರಂಟ್ ಗ್ರಿಲ್‌ನಿಂದ ಆರಂಭಿಸಿ ಅಥ್ಲೇಟಿಕ್ ರಿಯರ್ ಶೋಲ್ಡರ್ ವರೆಗೆ ದಟ್ಸನ್ ಗೊ ತನ್ನದೇ ಆದ ಶುಭ್ರ ವಿನ್ಯಾಸ ಕಾಪಾಡಿಕೊಂಡಿದೆ.

ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಹಿಂದುಗಡೆಯೂ ಎದ್ದು ಕಾಣಿಸುವಂತಹ ಟೈಲ್ ಲೈಟ್ ಹಾಗೂ ಇದಕ್ಕೆ ಹೊಂದಿಕೊಂಡು ಬಾಗಿಲಿನ ವಿನ್ಯಾಸ ಪ್ರಶಂಸನೀಯವಾಗಿದೆ. ಇದು ಉತ್ತಮ ಗ್ರೌಂಡ್ ಕ್ಲಿಯರನ್ಸ್ ಸಹ ಪಡೆದುಕೊಂಡಿದೆ.

ಗ್ರೌಂಡ್ ಕ್ಲಿಯರನ್ಸ್

ದಟ್ಸನ್ ಗೊ - 170 ಎಂಎಂ

ಮಾರುತಿ ಆಲ್ಟೊ ಕೆ10 - 160 ಎಂಎಂ

ಹ್ಯುಂಡೈ ಇಯಾನ್ - 170 ಎಂಎಂ

ಬಣ್ಣಗಳು

ಬಣ್ಣಗಳು

ದಟ್ಸನ್ ಗೊ ಬಿಳಿ, ಬೆಳ್ಳಿ, ಆಕಾಶ ನೀಲಿ ಹಾಗೂ ಕೆಂಪು (ರುಬಿ ರೆಡ್) ವರ್ಣಗಳಲ್ಲಿ ದೊರಕುತ್ತವೆ.

ಒಳಮೈ

ಒಳಮೈ

ಮೊದಲು ಸ್ಟೀರಿಂಗ್ ವೀಲ್ ಬಗ್ಗೆ ಮಾತನಾಡುವುದಾದ್ದಲ್ಲಿ ಇದು ತ್ರಿ ಸ್ಪೋಕ್ ಸ್ಟೀರಿಂಗ್ ವೀಲ್ ಪಡೆದುಕೊಂಡಿದೆ. ಇದು ಕಾರಿನ ಒಳಮೈಗೆ ತಕ್ಕ ವ್ಯತಿರಿಕ್ತ ಬಣ್ಣಗಳ ಆಯ್ಕೆಯನ್ನು ಪಡೆದುಕೊಂಡಿದೆ. ಇದರಲ್ಲಿ ನಾಲ್ಕು ಏರ್ ವೆಂಟ್ ಸಹ ಇರಲಿದ್ದು, ಪ್ರೀಮಿಯಂ ಅನುಭವ ನೀಡಲಿದೆ.

ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ದಟ್ಸನ್ ಗೊ ಕಾರಿನ ಗಮನಾರ್ಹ ಅಂಶವೆಂದರೆ ಇದರ ಗೇರ್ ಲಿವರ್ ಹಾಗೂ ಪಾರ್ಕಿಂಗ್ ಬ್ರೇಕ್ ಹ್ಯಾಂಡಲ್. ಚಿತ್ರದಲ್ಲಿ ನೋಡುತ್ತಿರುವೆಂತೆಯೇ ಸೆಂಟ್ರಲ್ ಕನ್ಸೋಲ್‌ಗೆ ಹೊಂದಿಕೊಂಡು ಇದನ್ನು ಲಗತ್ತಿಸಲಾಗಿದೆ. ಮೊದಲ ನೋಟಕ್ಕೆ ಇದು ಆಕರ್ಷಣೀಯವಾಗಿ ಗೋಚರಿಸುತ್ತಿಲ್ಲವಾದರೂ ಇದು ಪ್ರಯಾಣಿಕರಿಗೆ ಹೆಚ್ಚು ಸ್ಥಳಾವಕಾಶವನ್ನು ಪ್ರದಾನ ಮಾಡುವುದಲ್ಲದೆ ಇಕ್ಕಟ್ಟಿನ ಪಾರ್ಕಿಂಗ್ ಪ್ರದೇಶದಲ್ಲಿ ಸುಲಭವಾಗಿ ನಿಭಾಯಿಸಲು ನೆರವಾಗಲಿದೆ.

ಪಾರ್ಕಿಂಗ್ ಬ್ರೇಕ್ ಹ್ಯಾಂಡಲ್

ಪಾರ್ಕಿಂಗ್ ಬ್ರೇಕ್ ಹ್ಯಾಂಡಲ್

ಇದನೊಮ್ಮೆ ಸೂಕ್ಷ್ಮವಾಗಿ ಗಮನಿಸಿ. ಪಾರ್ಕಿಂಗ್ ಬ್ರೇಕ್ ಹ್ಯಾಂಡಲ್ ಸುಲಭವಾಗಿ ನಿಭಾಯಿಸಬಹುದು. ಆದರೆ ಎತ್ತರದ ಚಾಲಕರ ಕಾಲು ಇದಕ್ಕೆ ಪದೇ ಪದೇ ತಾಗುವ ಸಂಭವ ಜಾಸ್ತಿಯಾಗಿರುತ್ತದೆ. ಹಾಗಾಗಿ ಉದ್ದ ಕಾಲುಗಳನ್ನು ಹೊಂದಿರುವ ಚಾಲಕರಿಗೆ ಸ್ವಲ್ಪ ಇಕ್ಕಟ್ಟಿನ ಪರಿಸ್ಥಿತಿ ಎದುರಾಗಲಿದೆ.

ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಗೇರ್ ಲಿವರ್ ಹಾಗೂ ಪಾರ್ಕಿಂಗ್ ಬ್ರೇಕ್ ಹ್ಯಾಂಡಲ್ ಸೆಂಟ್ರೋಲ್ ಕನ್ಸೋಲ್‌ನಲ್ಲಿ ಲಗತ್ತಿಸುವ ಮೂಲಕ ದರ ಕಡಿತ ಮಾಡುವ ಯೋಜನೆಯನ್ನು ದಟ್ಸನ್ ಹೊಂದಿತ್ತು ಎಂದು ಅಂದುಕೊಂಡರೆ ತಪ್ಪಾದಿತ್ತು. ಯಾಕೆಂದರೆ ದೇಶದ ಗ್ರಾಹಕರು ಹೆಚ್ಚು ಕ್ಯಾಬಿನ್ ಪ್ರದೇಶವನ್ನು ಬಯಸುತ್ತಾರೆ. ಸುರಕ್ಷತೆಯ ದೃಷ್ಟಿಕೋನದಿಂದ ಇದು ಹಿತವಲ್ಲದಿದ್ದರೂ ಸಾಧ್ಯವಾದಷ್ಟು ಪ್ರಯೋಜನ ಪಡೆಯಲು ಬಯಸುತ್ತಾರೆ.

ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಇನ್ನು ಉತ್ತಮ ಲೆಗ್ ರೂಂ, ಹೆಡ್ ರೂಂ ಕಾಪಾಡಿಕೊಳ್ಳುವಲ್ಲಿ ದಟ್ಸನ್ ಗೊ ಯಶಸ್ಸನ್ನು ಕಂಡಿದೆ. ಮುಂಭಾಗ ಹಾಗೂ ಹಿಂಭಾಗದಲ್ಲಿ ಸಂಪರ್ಕಿತ ಸೀಟು ವ್ಯವಸ್ಥೆಯನ್ನು ಪಡೆದುಕೊಂಡಿದೆ.

ಆಯಾಮ

ದಟ್ಸನ್ ಗೊ - ಉದ್ದ, ಅಗಲ, ಎತ್ತರ (ಎಂಎಂ) - 3785, 1635, 1485

ಮಾರುತಿ ಆಲ್ಟೊ ಕೆ10 - ಉದ್ದ, ಅಗಲ, ಎತ್ತರ (ಎಂಎಂ) - 3620, 1475, 1460

ಹ್ಯುಂಡೈ ಇಯಾನ್ - ಉದ್ದ, ಅಗಲ, ಎತ್ತರ (ಎಂಎಂ) - 3495, 1550, 1500

ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಇನ್ನು ಈ ಸೆಗ್ಮೆಂಟ್‌ನಲ್ಲಿರುವ ಇತರ ಪ್ರತಿಸ್ಪರ್ಧಿಗಳ ಕಾರನ್ನು ಹೋಲಿಸಿದಾಗ ಹೆಚ್ಚಿನ ಲಗ್ಗೇಜ್ ಜಾಗವನ್ನು ದಟ್ಸನ್ ಗೊ ಪಡೆದುಕೊಂಡಿದೆ.

ಬೂಟ್ ಸ್ಪೇಸ್

ದಟ್ಸನ್ ಗೊ - 265 ಲೀಟರ್

ಮಾರುತಿ ಆಲ್ಟೊ ಕೆ10 - 160 ಲೀಟರ್

ಹ್ಯುಂಡೈ ಇಯಾನ್ - 215 ಲೀಟರ್

ಹೆಚ್ಚುವರಿ ಚಕ್ರ

ಹೆಚ್ಚುವರಿ ಚಕ್ರ

ಭಾರತದಂತಹ ಊಹೆಗೆ ನಿಲುಕದ ರಸ್ತೆಗಳಲ್ಲಿ ಹೆಚ್ಚುವರಿ ಚಕ್ರಗಳು ಅತಿ ಮುಖ್ಯವಾಗಿರುತ್ತದೆ. ದಟ್ಸನ್‌ನಲ್ಲೂ ಇದಲ ಸೌಲಭ್ಯವಿರುತ್ತದೆ. ಆದರೆ ವಿಚಿತ್ರವೆಂದೆರ ಜ್ಯಾಕ್ ಫ್ರಂಟ್ ಸೀಟು ಕೆಳಗಡೆ ಲಗತ್ತಿಸಲಾಗಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

ಪ್ರತಿಯೊಂದು ವಿಷಯಕ್ಕೂ ದಟ್ಸನ್ ಮಹತ್ವ ಕೊಟ್ಟಿರುವುದು ತಿಳಿದು ಬರುತ್ತದೆ. ಇದರ ಸಿಂಗಲ್ ಇನ್ಸ್ಟ್ರುಮೆಂಟ್ ಪ್ಯಾನೆಲ್ ಸಹ ಆಕರ್ಷಣೀಯವಾಗಿದೆ.

ಸೌಲಭ್ಯ:

ಬಿಳಿ ಹಾಗೂ ನೀಲಿ ಬಣ್ಣ,

ಡಿಜಿಟಲ್ ಟ್ಯಾಕೋಮೀಟರ್,

ಇಂಧನ ಸರಾಸರಿ ಸ್ಮಾರ್ಟ್ ಮೀಟರ್,

ತತ್ ಕ್ಷಣದ ಇಂಧನ ಮಾಪನ,

ಲೊ ಫ್ಯೂಯಲ್ ವಾರ್ನಿಂಗ್,

ಟ್ರಿಪ್ ಮೀಟರ್,

ಎಲೆಕ್ಟ್ರಾನಿಕ್ ಫ್ಯೂಯಲ್ ಗೇಜ್,

ಗೇರ್ ಶಿಫ್ಟ್ ಮಾರ್ಗದರ್ಶನ

ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ನಗರ ಪ್ರದೇಶದ ವಾಹನ ದಟ್ಟಣೆಯ ಪ್ರದೇಶದಲ್ಲಿ ನಿಮ್ಮ ದಿನನಿತ್ಯ ಪ್ರವಾಸವೂ ತುಂಬಾನೇ ಹೊರೆಯಾಗಿರುತ್ತದೆ. ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಆಕರ್ಷಕ ಮ್ಯೂಸಿಕ್ ಸಿಸ್ಟಂ ಲಗತ್ತಿಸಲಾಗಿದೆ. ಇದರಲ್ಲಿ ಮೊಬೈಲ್ ಡಾಕಿಂಗ್ ಸಿಸ್ಟಂ (ಎಂಡಿಎಸ್) ಮೂಲಕ ನಿಮ್ಮ ಸ್ಮಾರ್ಟ್ ಫೋನ್ ನೇರವಾಗಿ ಕಾರಿಗೆ ಕನೆಕ್ಟ್ ಮಾಡಬಹುದಾಗಿದೆ.

ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಕಾರಿನೊಳಗೆ ಹೊರಗಡೆಯ ಗಾಳಿಯ ಶಬ್ದ ಕಡಿಮೆ ಮಾಡುವುದರತ್ತ ಗಮನ ಕೊಡಲಾಗಿದ್ದು, ನಿಮ್ಮ ಸಂಭಾಷನೆ ಹಾಗೂ ಸಂಗೀತವನ್ನು ಇನ್ನಷ್ಟು ಆನಂದದಾಯಕವಾಗಿ ಆಲಿಸಬಹುದಾಗಿದೆ.

ಪ್ರಮುಖ ಫೀಚರ್ಸ್‌ಗಳು

ಪ್ರಮುಖ ಫೀಚರ್ಸ್‌ಗಳು

ಪವರ್ ಸ್ಟೀರಿಂಗ್,

ಪವರ್ ವಿಂಡೋಸ್,

ಸಂಪರ್ಕಿತ ಫ್ರಂಟ್ ಸೀಟು,

ಮೊಬೈಲ್ ಡಾಕಿಂಗ್ ಸ್ಟೇಷನ್ (ಎಂಡಿಎಸ್),

ಸೆಂಟ್ರಲ್ ಲಾಕಿಂಗ್ (ಮ್ಯಾನುವಲ್),

ಆಕ್ಸೆಸರಿ ಸಾಕೆಟ್ (12ವೋಲ್ಟ್),

ಫ್ರಂಟ್ ಸ್ಪೀಕರ್ (ಎರಡು ಬದಿಗಳಲ್ಲಿ),

ಡೋರ್ ಪಾಕೆಟ್ (1.5 ಲೀಟರ್ ಬಾಟಲಿ ಇಡಬಹುದಾದ),

ಇಂಟೆಲಿಜೆಟ್ ವೈಪಿಂಗ್ ಸಿಸ್ಟಂ

ಹಿನ್ನಡೆ

ಏರ್ ಬ್ಯಾಗ್ ಇಲ್ಲ, ಎಬಿಎಸ್. ಸುರಕ್ಷತೆ ಒಂದು ಸವಾಲಾಗಿರಲಿದೆ. ಕಡಿಮೆ ಪಕ್ಷ ಚಾಲಕ ಬದಿಯ ಏರ್ ಬ್ಯಾಗ್ ಒದಗಿಸಬೇಕಾಗಿತ್ತು.

ಎಂಜಿನ್

ಎಂಜಿನ್

1.2 ಲೀಟರ್ (1198 ಸಿಸಿ) ತ್ರಿ ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಸಹಜವಾಗಿಯೇ ಎಂಜಿನ್ ಐಡಲ್ ವೇಳೆ ವೈಬ್ರೇಷನ್ ಉಂಟಾಗುವುದನ್ನು ತಡೆಯಲು ದಟ್ಸನ್ ಎಂಜಿನಿಯರ್‌ಗಳು ಪ್ರಯಾಣಿಕ ಪ್ರಯತ್ನ ಮಾಡಿದ್ದಾರೆ. ಹಾಗಿದ್ದರೂ ಸ್ವಲ್ಪ ಗೊಂದಲಗಳು ಇನ್ನು ಹಾಗೆಯೇ ಬಾಕಿ ಉಳಿದಿದೆ.

ನಿರ್ವಹಣೆ

ನಿರ್ವಹಣೆ

ಫೋರ್ ಸಿಲಿಂಡರ್‌ಗೆ ಹೋಲಿಸಿದಾಗ ದಟ್ಸನ್ ಎಂಜಿನ್ ಶಬ್ದ ಸ್ವಲ್ಪ ಹೆಚ್ಚು ಹೊಂದಿದೆ. ಆದರೆ ಇದು ಸ್ವಲ್ಪ ದಿನಗಳಲ್ಲೇ ಚಾಲಕರು ಹೊಂದಿಕೊಂಡು ಹೋಗುವ ನಿರೀಕ್ಷೆಯಿದೆ. ಇನ್ನು ಟೆಸ್ಟ್ ಡ್ರೈವ್ ವೇಳೆ ಗಂಟೆಗೆ 165 ಕೀ.ಮೀ. ಹಾಗೂ 13.5 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗವರ್ಧಿಸುವಲ್ಲಿ ಸಾಧ್ಯವಾಗಿತ್ತು.

ದಟ್ಸನ್ ಗೊ 1200 ಸಿಸಿ ಎಂಜಿನ್ - 67 ಅಶ್ವಶಕ್ತಿ (104 ಎನ್‌ಎಂ ಟಾರ್ಕ್)

ಮಾರುತಿ ಆಲ್ಟೊ 1000 ಸಿಸಿ ಎಂಜಿನ್ - 67 ಅಶ್ವಶಕ್ತಿ (90 ಎನ್‌ಎಂ ಟಾರ್ಕ್)

ಮೈಲೇಜ್

ಮೈಲೇಜ್

ಸ್ಮರ್ಧಾತ್ಮಕ ದರದಲ್ಲಿ ಆಗಮನವಾಗಿರುವ ದಟ್ಸನ್ ಗೊ ಹೆಚ್ಚಿನ ಇಂಧನ ಕ್ಷಮತೆಯತ್ತ ಗಮನ ನೀಡಿದೆ. ಇದು ಭಾರತ ವಾಹನ ಅಧ್ಯಯನ ಸಂಸ್ಥೆ ಮಾನ್ಯತೆ ಪ್ರಕಾರ ಪ್ರತಿಲ ಲೀಟರ್‌ಗೆ 20.6 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದ್ದರೂ ನೈಜ ಪರಿಸ್ಥಿತಿಯಲ್ಲಿ ಹೆದ್ದಾರಿ ಹಾಗೂ ನಗರ ಪ್ರದೇಶ ಒಟ್ಟುಗೂಡಿಸಿದಾಗ ಪ್ರತಿ ಲೀಟರ್‌ಗೆ 17 ಕೀ.ಮೀ. ಮೈಲೇಜ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಎಆರ್‌ಎಐ ಮೈಲೇಜ್ (ಲೀಟರ್‌ಗೆ)

ದಟ್ಸನ್ ಗೊ - 20.6 ಕೀ.ಮೀ.

ಮಾರುತಿ ಕೆ 10 - 20.2 ಕೀ.ಮೀ.

ಹ್ಯುಂಡೈ ಇಯಾನ್ - 20 ಕೀ.ಮೀ.

ಡ್ರೈವ್, ಟ್ರಾನ್ಸ್‌ಮಿಷನ್, ಪೆಡಲು

ಡ್ರೈವ್, ಟ್ರಾನ್ಸ್‌ಮಿಷನ್, ಪೆಡಲು

ದಟ್ಸನ್ ಗೊ ಫ್ರಂಟ್ ವೀಲ್ ಡ್ರೈವ್ ಜತೆ ಫೈವ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಹ್ಯಾಂಡ್ಲಿಂಗ್

ಹ್ಯಾಂಡ್ಲಿಂಗ್

769 ಕೆ.ಜಿ ಭಾರವನ್ನು ಹೊಂದಿರುವ ದಟ್ಸನ್ ಗೊ, ನೈಜ ರಸ್ತೆ ಪರಿಸ್ಥಿತಿಯಲ್ಲೂ ಸಮತೋಲನ ನೀಡಲಿದೆ. ಅಲ್ಲದೆ ದಿನನಿತ್ಯ ಬಳಕೆಗೆ ಹೆಚ್ಚು ಸೂಕ್ತವೆನಿಸಲಿದೆ.

ಸ್ಟೀರಿಂಗ್, ಟರ್ನಿಂಗ್ ರೇಡಿಯಸ್

ಸ್ಟೀರಿಂಗ್, ಟರ್ನಿಂಗ್ ರೇಡಿಯಸ್

ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಹೊಂದಿರುವ ಟಾಪ್ ಎಂಡ್ ದಟ್ಸನ್ ಟಿ ಮಾದರಿಯು ಹೆಚ್ಚು ಆರಾಮದಾಯಕ ಚಾಲನೆ ಪ್ರದಾನ ಮಾಡಲಿದೆ.

ಟರ್ನಿಂಗ್ ರೇಡಿಯಸ್

ದಟ್ಸನ್ ಗೊ - 4.6 ಮೀಟರ್

ಮಾರುತಿ ಆಲ್ಟೊ ಕೆ10 - 4.6 ಮೀಟರ್

ಹ್ಯುಂಡೈ ಇಯಾನ್ - 5 ಮೀಟರ್

ಸಸ್ಪೆಷನ್, ಬ್ರೇಕಿಂಗ್, ಚಕ್ರ

ಸಸ್ಪೆಷನ್, ಬ್ರೇಕಿಂಗ್, ಚಕ್ರ

ಭಾರತದಂತಹ ರಸ್ತೆ ಪರಿಸ್ಥಿತಿಯಲ್ಲಿ ಅತ್ಯುತ್ತಮ ಚಾಲನಾ ಅನುಭವ ಹೊಂದಿರಬೇಕಾಗಿರುವುದು ಅತಿ ಅಗತ್ಯವಾಗಿದೆ. ಬ್ರೇಕಿಂಗ್ ವೇಳೆ ಚಕ್ರಗಳು ನಯವಾಗಿ ಕೆಲಸ ಮಾಡುತ್ತಿದೆ. ಆದರೆ 120 ಕೀ.ಮೀ. ಹೆಚ್ಚು ವೇಗದಲ್ಲಿ ಚಲಿಸುವಾಗ ಸ್ವಲ್ಪ ಶಬ್ದವುಂಟಾಗುತ್ತದೆ.

ನೆಗೆಟಿವ್ ಪಾಯಿಂಟ್

ನೆಗೆಟಿವ್ ಪಾಯಿಂಟ್

ಇನ್ನು ಕಡಿಮೆ ದರದಲ್ಲಿ ಎಲ್ಲವೂ ಪರಿಪೂರ್ಣವಾಗಿರಬೇಕೆಂದರೆ ಸ್ವಲ್ಪ ಕಷ್ಟಕರವಾಗಬಹುದು. ದಟ್ಸನ್ ಗೊದಲ್ಲೂ ಇದು ವ್ಯಕ್ತವಾಗಿದೆ. ಇಲ್ಲಿ ಡೋರ್ ಪ್ಯಾನೆಲ್ ಬಳಿ ಫಿನಿಶಿಂಗ್ ಟಚ್ ಅಭಾವ ಕಂಡುಬರುತ್ತಿದೆ.

ಹ್ಯಾಂಡ್ಲಿಂಗ್ ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಕೇವಲ ಡೋರ್ ಪ್ಯಾನೆಲ್ ವಿಚಾರ ಮಾತ್ರವಲ್ಲ. ಡೇ/ನೈಟ್ ಡಿಮ್ಮಿಂಗ್ ರಿಯರ್ ವ್ಯೂ ಮಿರರ್ ಕೊರತೆಯೂ ಕಾಡುತ್ತಿದೆ. ರಾತ್ರಿ ವೇಳೆ ಚಾಲನೆಗೆ ಕಷ್ಟಕರವಾಗಲಿದೆ.

ಹ್ಯಾಂಡ್ಲಿಂಗ್ ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಇನ್ನು ಕಾರಿನ ಹೊರಗಡೆ ಸೂಕ್ಷ್ಮವಾಗಿ ಗಮನಿಸಿದಾಗ ವಿಂಡ್ ಶೀಲ್ಡ್ ಕೆಳಗಡೆ ಫ್ಲಾಸ್ಟಿಕ್ ಸ್ವಲ್ಪ ಬಿಚ್ಚಿರುವಂತೆ ಗೋಚರಿಸುತ್ತಿದೆ.

ಹ್ಯಾಂಡ್ಲಿಂಗ್ ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಹಾಗೆಯೇ ಕಾರಿನ ಹಿಂಭಾಗದಲ್ಲಿ ಲಗತ್ತಿಸಿರುವ ಎಕ್ಸಾಸ್ಟ್ ಕೊಳವೆಯಲ್ಲೂ ಗುಣಮಟ್ಟತೆ ಕಾಯ್ದುಕೊಳ್ಳುವಲ್ಲಿ ಸಂಸ್ಥೆ ವಿಫಲವಾಗಿದೆ.

ಹ್ಯಾಂಡ್ಲಿಂಗ್ ದಟ್ಸನ್ ಗೊ ಚೊಚ್ಚಲ ಎಂಟ್ರಿ; ಟೆಸ್ಟ್ ಡ್ರೈವ್ ರಿಪೋರ್ಟ್

ಲಾಸ್ಟ್ ಬಟ್ ನಾಟ್ ಲೀಸ್ಟ್ ಎಂಬಂತೆ 'ಬೂಟ್ ಲಾಕ್' ಕೊರತೆಯನ್ನು ಖಂಡಿತವಾಗಿಯೂ ಒಪ್ಪಿಕೊಳ್ಳಲಾಗುವುದಿಲ್ಲ.

ಅಂತಿಮ ತೀರ್ಪು

ಅಂತಿಮ ತೀರ್ಪು

ಪ್ಲಸ್ ಪಾಯಿಂಟ್

ಆಕರ್ಷಕ ಎಕ್ಸ್‌ಟೀರಿಯರ್,

ಫ್ರಂಟ್ ಸೀಟು,

ಮೊಬೈಲ್ ಡಾಕಿಂಗ್ ಸಿಸ್ಟಂ,

ಬೆಸ್ಟ್ ಇನ್ ಕ್ಲಾಸ್,

ಬೆಸ್ಟ್ ಇನ್ ಬೂಟ್ ಸ್ಪೇಸ್,

ಬೆಸ್ಟ್ ಇನ್ ಪವರ್ ಆಂಡ್ ಟಾರ್ಕ್,

ಉತ್ತಮ ಮೈಲೇಜ್, (ನಗರ ಹಾಗೂ ಹೆದ್ದಾರಿ)

ಗರಿಷ್ಠ ಗ್ರೌಂಡ್ ಕ್ಲಿಯರನ್ಸ್,

2 ವರ್ಷಗಳ ವಾರಂಟಿ

ಹಿನ್ನಡೆ

ಸುರಕ್ಷತೆ ಕೊರತೆ (ಏರ್ ಬ್ಯಾಗ್, ಎಬಿಎಸ್ ಇಲ್ಲ),

ಬೂಟ್ ಲಾಕ್ ಕೊರತೆ,

ದರ ಕಡಿತ ಮಾಡುಲು ನಿಟ್ಟಿನಲ್ಲಿ ಪ್ಲಾಸ್ಟಿಕ್ಟ್ ಪರಿಕರ ಬಳಕೆ,

ಶಬ್ದ ಹೆಚ್ಚು, ವೈಬ್ರೇಷನ್, ಒರಟುತನ,

ಹೊಂದಾಣಿಸಲು ಸಾಧ್ಯವಲ್ಲದ ಔಟ್‌ಸೈಡ್ ರಿಯರ್ ವ್ಯೂ ಮಿರರ್,

ಚಾಲಕನ ಬದಿಯಲ್ಲಿ ವಿಂಡೋ ಕಂಟ್ರೋಲರ್ ಕೊರತೆ,

ಎಕ್ಸ್ ಫಾಕ್ಟರ್

ಮೊದಲ ಬಾರಿಗೆ ಕಾರು ಖರೀದಿಸಲು ಬಯಸುವವರಿಗೆ ತಮ್ಮ ಬಜೆಟ್‌ಗೆ ತಕ್ಕ ಮೌಲ್ಯ ದೊರಕಲಿದೆ. ಇದು ಎಂಟ್ರಿ ಲೆವೆಲ್ ಕಾರುಗಳ ಪೈಕಿ ಅತ್ಯುತ್ತಮ ಚಾಲನಾ ಅನುಭವ ಪ್ರದಾನ ಮಾಡಲಿದೆ.

ರೇಟಿಂಗ್: 3.5/5

Most Read Articles

Kannada
English summary
Engineered in India, for India, do you think the Datsun GO will rise up to meet the mounting expectations? From best-in-class torque to contrasting flimsy plasticware, we review the highs and lows of the Datsun GO. Hop on, let's get started...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X