ದಟ್ಸನ್ ರೆಡಿ ಗೊ Vs ಟಾಟಾ ಜೆನ್‌ಎಕ್ಸ್ ನ್ಯಾನೋ; ಗೆಲುವು ಯಾರಿಗೆ?

By Nagaraja

ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಮಾರುತಿ ಸುಜುಕಿ ಅಧಿಪತ್ಯ ಸ್ಥಾಪಿಸಿದ್ದು, ಆಲ್ಟೊ ಅಜೇಯ ಓಟ ಮುಂದುವರಿಸಿದೆ. ಈ ವಿಭಾಗದಲ್ಲಿ ಟಾಟಾ ನ್ಯಾನೋ ಸಹ ತನ್ನದೇ ಆದ ವಿಶಿಷ್ಟ ಶೈಲಿಯೊಂದಿಗೆ ಪೈಪೋಟಿಯನ್ನು ಒಡುತ್ತಿದೆ. ಟಾಟಾದಿಂದ ಬಿಡುಗಡೆಯಾಗಿರುವ ನೂತನ ಜೆನ್ ಎಕ್ಸ್ ನ್ಯಾನೋಗೆ ಸ್ವಲ್ಪ ಮಟ್ಟಿಗಾದರೂ ಮರು ಜೀವ ತುಂಬುವಲ್ಲಿ ಸಾಧ್ಯವಾಗಿದೆ.

ಸಣ್ಣ ಕಾರಿನ ದೊಡ್ಡತನ; ಇದುವೇ ಟಾಟಾ ನ್ಯಾನೋ ಜೆನ್ ಎಕ್ಸ್

ಹಾಗಿರಬೇಕೆಂದರೆ ಅರ್ಬನ್ ಕ್ರಾಸ್ ಶೈಲಿಯ ಅತಿ ನೂತನ ದಟ್ಸನ್ ರೆಡಿ ಗೊ ಎಂಟ್ರಿ ಕೊಟ್ಟಿದ್ದು, ಸಣ್ಣ ಕಾರು ವಿಭಾಗದಲ್ಲಿ ಹೆಚ್ಚಿನ ಸ್ಪರ್ಧಾತ್ಮಕ ವೇದಿಕೆಯನ್ನು ಸೃಷ್ಟಿ ಮಾಡಿದೆ. ಪ್ರಸ್ತುತ ಲೇಖನದಲ್ಲಿ ನೂತನ ರೆಡಿ ಗೊ ಮತ್ತು ಜೆನ್ ಎಕ್ಸ್ ನ್ಯಾನೋ ನಡುವೆ ತುಲನೆ ಮಾಡುವ ಪ್ರಯತ್ನ ಮಾಡಲಿದ್ದೇವೆ.

ವಿನ್ಯಾಸ - ರೆಡಿ ಗೊ

ವಿನ್ಯಾಸ - ರೆಡಿ ಗೊ

ಹ್ಯಾಚ್ ಬ್ಯಾಕ್ ಗಿಂತಲೂ ಮಿಗಿಲಾಗಿ ಅರ್ಬನ್ ಕ್ರಾಸ್ ಶೈಲಿಯನ್ನು ದಟ್ಸನ್ ರೆಡಿ ಗೊ ಮೈಗೂಡಿಸಿ ಬಂದಿದೆ. ಇದು ರೆನೊ ಕ್ವಿಡ್ ಜೊತೆಗೆ ಕಾಮನ್ ಮೊಡ್ಯುಲ್ ಫ್ಲ್ಯಾಟ್ ಫಾರ್ಮ್ ಹಂಚಿಕೊಂಡಿದ್ದು, ಹೆಚ್ಚು ತಾಜಾತವನ್ನು ಕಾಪಾಡಿಕೊಂಡಿದೆ.

ವಿನ್ಯಾಸ - ರೆಡಿ ಗೊ

ವಿನ್ಯಾಸ - ರೆಡಿ ಗೊ

185 ಎಂಎಂ ಗ್ರೌಂಡ್ ಕ್ಲಿಯರನ್ಸ್ ಕಾಪಾಡಿಕೊಂಡಿರುವ ದಟ್ಸನ್ ರೆಡಿ ಗೊದಲ್ಲಿ ವೈಯಕ್ತಿಕ ಆಕ್ಸೆಸರಿ ಪ್ಯಾಕೇಜ್ ಗಳನ್ನು ಒದಗಿಸಲಾಗುತ್ತಿದೆ. ಆದರೆ ಹಿಂಬದಿಯಲ್ಲಿ ಸ್ಟೋರೆಜ್ ಜಾಗದ ಕೊರತೆಯನ್ನು ಅನುಭವಿಸಲಿದೆ.

ವಿನ್ಯಾಸ - ಜೆನ್ ಎಕ್ಸ್ ನ್ಯಾನೋ

ವಿನ್ಯಾಸ - ಜೆನ್ ಎಕ್ಸ್ ನ್ಯಾನೋ

ಹಳೆಯ ನ್ಯಾನೋಗೂ ನೂತನ ಜೆನ್ ಎಕ್ಸ್ ಮಾದರಿಯಲ್ಲೂ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಪರಿಷ್ಕೃತ ಬಂಪರ್, ಸ್ಪೋಕ್ಡ್ ಹೆಡ್ ಲೈಟ್, ಫಾಗ್ ಲ್ಯಾಂಪ್ ಹಾಗೂ ಹೊಸ ಗ್ರಿಲ್ ಹೊಸ ನ್ಯಾನೋದ ಆಕರ್ಷಣೆಯಾಗಿರಲಿದೆ. ಇನ್ನು ಎರಡೂ ಹೆಡ್ ಲೈಟ್ ನಡುವಣ ಟಾಟಾ ಲಾಂಛನ ಎದ್ದು ಕಾಣಿಸುತ್ತಿದೆ.

ವಿನ್ಯಾಸ - ಜೆನ್ ಎಕ್ಸ್ ನ್ಯಾನೋ

ವಿನ್ಯಾಸ - ಜೆನ್ ಎಕ್ಸ್ ನ್ಯಾನೋ

ಹಿಂದುಗಡೆ ತೆರೆಯಬಹುದಾದ ಢಿಕ್ಕಿ ಬಾಗಿಲು ಹೊಸ ಜೆನ್ ಎಕ್ಸ್ ನ್ಯಾನೋದ ಪ್ರಮುಖ ಆಕರ್ಷಣೆಯಾಗಿದೆ. ಇದು 110 ಲೀಟರ್ ಢಿಕ್ಕಿ ಜಾಗವನ್ನು ಹೊಂದಿರುವುದು ಒಮ್ಮೆ ಇದರತ್ತ ಕಣ್ಣಾಯಿಸುವಂತೆ ಮಾಡುತ್ತಿದೆ.

ರೇಟಿಂಗ್ - ವಿನ್ಯಾಸ

ರೇಟಿಂಗ್ - ವಿನ್ಯಾಸ

ದಟ್ಸನ್ ರೆಡಿ ಗೊ: 8/10

ಟಾಟಾ ಜೆನ್ ಎಕ್ಸ್ ನ್ಯಾನೋ: 7.5/10

ಆಯಾಮ - ದಟ್ಸನ್ ರೆಡಿ ಗೊ

ಆಯಾಮ - ದಟ್ಸನ್ ರೆಡಿ ಗೊ

ಉದ್ದ: 3429 ಎಂಎಂ

ಅಗಲ: 1560 ಎಂಎಂ

ಎತ್ತರ: 1541 ಎಂಎಂ

ಚಕ್ರಾಂತರ: 2348 ಎಂಎಂ

ಗ್ರೌಂಡ್ ಕ್ಲಿಯರನ್ಸ್: 185 ಎಂಎಂ

ಚಕ್ರದ ಗಾತ್ರ: 13 ಇಂಚು

ಆಯಾಮ - ನ್ಯಾನೋ ಜೆನ್ ಎಕ್ಸ್

ಆಯಾಮ - ನ್ಯಾನೋ ಜೆನ್ ಎಕ್ಸ್

ಉದ್ದ: 3164 ಎಂಎಂ

ಅಗಲ: 1750 ಎಂಎಂ

ಎತ್ತರ: 1652 ಎಂಎಂ

ಚಕ್ರಾಂತರ: 2230 ಎಂಎಂ

ಗ್ರೌಂಡ್ ಕ್ಲಿಯರನ್ಸ್: 180 ಎಂಎಂ

ಚಕ್ರದ ಗಾತ್ರ: 12 ಇಂಚು

ವೈಶಿಷ್ಟ್ಯಗಳು - ದಟ್ಸನ್ ರೆಡಿ ಗೊ

ವೈಶಿಷ್ಟ್ಯಗಳು - ದಟ್ಸನ್ ರೆಡಿ ಗೊ

ದಟ್ಸನ್ ರೆಡಿ ಗೊ ಬೇಸ್ ವೆರಿಯಂಟ್ ನಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡದಿರುವುದು ಖೇದಕರ ಸಂಗತಿ. ಹಾಗಿದ್ದರೂ ಟಾಪ್ ಎಂಡ್ ಆವೃತ್ತಿಯು ಪವರ್ ಸ್ಟೀರಿಂಗ್, ಫ್ರಂಟ್ ಪವರ್ ವಿಂಡೋ, ಆಡಿಯೋ ಸಿಸ್ಟಂ ಜೊತೆ ಯುಎಸ್ ಬಿ, ಆಕ್ಸ್, ರೆಡಿಯೋ ಇತ್ಯಾದಿ ಸೌಲಭ್ಯಗಳನ್ನು ಗಿಟ್ಟಿಸಿಕೊಳ್ಳಲಿದೆ. ಹಾಗಿದ್ದರೂ ಬ್ಯೂಟೂತ್ ಕನೆಕ್ಟಿವಿಟಿ ಸೌಲಭ್ಯದ ಕೊರತೆಯನ್ನು ಅನುಭವಿಸಲಿದೆ.

ವೈಶಿಷ್ಟ್ಯಗಳು - ಜೆನ್ ಎಕ್ಸ್ ನ್ಯಾನೋ

ವೈಶಿಷ್ಟ್ಯಗಳು - ಜೆನ್ ಎಕ್ಸ್ ನ್ಯಾನೋ

ಇನ್ನೊಂದೆಡೆ ಜೆನ್ ಎಕ್ಸ್ ನ್ಯಾನೋ ಟಾಪ್ ಎಂಡ್ ವೆರಿಯಂಟ್ ನಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆ ಇರುವುದು ಧನಾತ್ಮಕ ಅಂಶವಾಗಿದೆ. ಇದು ನಗರ ಚಾಲನೆಯನ್ನು ಸುಲಲಿತವಾಗಿಸಲಿದೆ. ಇನ್ನು ಆಡಿಯೋ ಸಿಸ್ಟಂ ಜೊತೆ ಯುಎಸ್ ಬಿ, ಆಕ್ಸ್, ರೆಡಿಯೋ ಮತ್ತು ಬ್ಲೂಟೂತ್ ಕನೆಕ್ಟಿವಿತಿ ಮುಂತಾದ ಸೌಲಭ್ಯಗಳು ಲಭ್ಯವಾಗಲಿದೆ.

ರೇಟಿಂಗ್ - ವೈಶಿಷ್ಟ್ಯ

ರೇಟಿಂಗ್ - ವೈಶಿಷ್ಟ್ಯ

ದಟ್ಸನ್ ರೆಡಿ ಗೊ: 7.5/10

ಟಾಟಾ ಜೆನ್ ಎಕ್ಸ್ ನ್ಯಾನೋ: 8/10

ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಮಾತ್ರ ನೀಡಲಾಗುತ್ತದೆ. ಹಾಗಾಗಿ ಹೆಚ್ಚಿನ ವೈಶಿಷ್ಟ್ಯಗಳನ್ನು ಗ್ರಾಹಕರು ನಿರೀಕ್ಷೆ ಮಾಡುವಂತಿಲ್ಲ.

ಎಂಜಿನ್ ತಾಂತ್ರಿಕತೆ - ರೆಡಿ ಗೊ

ಎಂಜಿನ್ ತಾಂತ್ರಿಕತೆ - ರೆಡಿ ಗೊ

ನೂತನ ದಟ್ಸನ್ ರೆಡಿ ಗೊದಲ್ಲಿರುವ 799 ಸಿಸಿ ಪೆಟ್ರೋಲ್ ಎಂಜಿನ್ 72 ಎನ್ ಎಂ ತಿರುಗುಬಲದಲ್ಲಿ 53 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದೆ.

ಎಂಜಿನ್ ತಾಂತ್ರಿಕತೆ - ನ್ಯಾನೋ ಜೆನ್ ಎಕ್ಸ್

ಎಂಜಿನ್ ತಾಂತ್ರಿಕತೆ - ನ್ಯಾನೋ ಜೆನ್ ಎಕ್ಸ್

ಇನ್ನೊಂದೆಡೆ ಚಿಕ್ಕದಾದ 624 ಸಿಸಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಜೆನ್ ಎಕ್ಸ್ ನ್ಯಾನೋ 51 ಎನ್ ಎಂ ತಿರುಗುಬಲದಲ್ಲಿ 37 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 4 ಸ್ಪೀಡ್ ಮ್ಯಾನುವಲ್ ಐದು ಸ್ಪೀಡ್ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿದೆ.

ರೇಟಿಂಗ್ - ಎಂಜಿನ್

ರೇಟಿಂಗ್ - ಎಂಜಿನ್

ದಟ್ಸನ್ ರೆಡಿ ಗೊ: 8/10

ಟಾಟಾ ಜೆನ್ ಎಕ್ಸ್ ನ್ಯಾನೋ: 7.5/10

ಸುರಕ್ಷತೆ - ದಟ್ಸನ್ ರೆಡಿ ಗೊ

ಸುರಕ್ಷತೆ - ದಟ್ಸನ್ ರೆಡಿ ಗೊ

ದಟ್ಸನ್ ರೆಡಿ ಗೊ ಟಾಪ್ ಎಂಡ್ ವೆರಿಯಂಟ್ ನಲ್ಲಿ ಚಾಲಕ ಬದಿಯ ಏರ್ ಬ್ಯಾಗ್ ಮತ್ತು ಎಂಜಿನ್ ಇಂಮೊಬಿಲೈಜರ್ ಸೌಲಭ್ಯವನ್ನು ಒದಗಿಸುತ್ತಿರುವುದು ಸ್ವಾಗತಾರ್ಹವಾಗಿದೆ.

ಸುರಕ್ಷತೆ - ಜೆನ್ ಎಕ್ಸ್ ನ್ಯಾನೋ

ಸುರಕ್ಷತೆ - ಜೆನ್ ಎಕ್ಸ್ ನ್ಯಾನೋ

ಜೆನ್ ಎಕ್ಸ್ ನ್ಯಾನೋದಲ್ಲಿ ಯಾವುದೇ ಏರ್ ಬ್ಯಾಗ್ ಸೌಲಭ್ಯಗಳು ಇರುವುದಿಲ್ಲ. ಹಾಗಿದ್ದರೂ ಸೆಂಟ್ರಲ್ ಲಾಕಿಂಗ್ ವ್ಯವಸ್ಥೆಯನ್ನು ಕೊಡಲಾಗಿದೆ.

ರೇಟಿಂಗ್ - ಭದ್ರತೆ

ರೇಟಿಂಗ್ - ಭದ್ರತೆ

ದಟ್ಸನ್ ರೆಡಿ ಗೊ: 8/10

ಟಾಟಾ ಜೆನ್ ಎಕ್ಸ್ ನ್ಯಾನೋ: 7/10

ಮೈಲೇಜ್

ಮೈಲೇಜ್

ದಟ್ಸನ್ ರೆಡಿ ಗೊ: 25.17 kmpl

ಟಾಟಾ ಜೆನ್ ಎಕ್ಸ್ ನ್ಯಾನೋ: 23.6 kmpl

ಬೆಲೆ ಮಾಹಿತಿ - ಜೆನ್ ಎಕ್ಸ್ ನ್ಯಾನೋ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ - ಜೆನ್ ಎಕ್ಸ್ ನ್ಯಾನೋ (ಎಕ್ಸ್ ಶೋ ರೂಂ ದೆಹಲಿ)

  • ಎಕ್ಸ್‌ಇ: 2,07,809 ರು.
  • ಎಕ್ಸ್‌ಎಂ: 2,43,173 ರು.
  • ಎಕ್ಸ್‌ಟಿ: 2,63,343 ರು.
  • ಎಕ್ಸ್‌ಎಂಎ: 2,84,755 ರು.
  • ಎಕ್ಸ್‌ಟಿಎ: 3,04,816 ರು.
  • ಬೆಲೆ ಮಾಹಿತಿ - ದಟ್ಸನ್ ರೆಡಿ ಗೊ (ಎಕ್ಸ್ ಶೋ ರೂಂ ದೆಹಲಿ)

    ಬೆಲೆ ಮಾಹಿತಿ - ದಟ್ಸನ್ ರೆಡಿ ಗೊ (ಎಕ್ಸ್ ಶೋ ರೂಂ ದೆಹಲಿ)

    • ಡಿ: 2,38,900 ರು.
    • ಎ: 2,82,649 ರು.
    • ಟಿ: 3,09,149 ರು.
    • ಟಿ (ಐಚ್ಛಿಕ): 3,19,399 ರು.
    • ಎಸ್: 3,34,399 ರು.
    • ಅಂತಿಮ ತೀರ್ಪು

      ಅಂತಿಮ ತೀರ್ಪು

      ನ್ಯಾನೋಗೆ ಹೋಲಿಸಿದಾಗ ಹೆಚ್ಚು ಸುಧಾರಿತ ವಿನ್ಯಾಸವು ರೆಡಿ ಗೊ ಕಾರಿಗೆ ವರದಾನವಾಗಲಿದೆ. ಇವೆಲ್ಲದರ ಜೊತೆಗೆ ಚಾಲಕ ಬದಿಯ ಏರ್ ಬ್ಯಾಗ್ ಸೌಲಭ್ಯವನ್ನು ನೀಡುರುವುದು ಮತ್ತು ತಾಜಾತನ ಕಾಪಾಡಿಕೊಂಡಿರುವುದು ಹೊಸತನವನ್ನು ತುಂಬಲಿದೆ.

      ಅಂತಿಮ ತೀರ್ಪು

      ಅಂತಿಮ ತೀರ್ಪು

      ಬೆಲೆಯ ವಿಚಾರವನ್ನು ಪರಿಗಣಿಸಿದಾಗ ನ್ಯಾನೋ ಮುನ್ನಡೆಯನ್ನು ಕಾಯ್ದುಕೊಂಡಿದೆ. ಅಲ್ಲದೆ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರಕುವ ಎಎಂಟಿ ಗೇರ್ ಬಾಕ್ಸ್ ಕಾರು ನ್ಯಾನೋ ಆಗಿದ್ದು, ನಗರ ಚಾಲನೆಗೆ ಹೇಳಿ ಮಾಡಿಸಿದಂತಿದೆ. ಹೀಗೆ ಎರಡೂ ಕಾರುಗಳು ತನ್ನದೇ ಆದ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ.

      ದಟ್ಸನ್ ರೆಡಿ ಗೊ Vs ಟಾಟಾ ಜೆನ್‌ಎಕ್ಸ್ ನ್ಯಾನೋ; ಗೆಲುವು ಯಾರಿಗೆ?

      ಈಗ ದಟ್ಸನ್ ರೆಡಿ ಗೊ ಮತ್ತು ಟಾಟಾ ಜೆನ್ ಎಕ್ಸ್ ನ್ಯಾನೋ ಕಾರುಗಳ ನಡುವೆ ಯಾವುದು ಅತ್ಯುತ್ತಮ ಎಂಬುದರ ಬಗ್ಗೆ ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಮುಕ್ತವಾಗಿ ಚರ್ಚಿಸಿರಿ.

Most Read Articles

Kannada
English summary
Battle Of The Young; Comparing Datsun redi-GO vs Tata Nano GenX
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X