ಐದು ಲಕ್ಷ ಬಜೆಟ್ ಗೆ ಅತ್ಯುತ್ತಮ 5 ಬಜೆಟ್ ಕಾರುಗಳು

By Nagaraja

ಐದು ಲಕ್ಷ ರುಪಾಯಿ ಬಜೆಟ್ ನೊಳಗಿರುವ ಒಂದು ಅಂದವಾದ ಸಣ್ಣ ಕಾರಿನ ಹುಡುಕಾಟದಲ್ಲಿದ್ದೀರಾ? ನಿಮಗೆ ನಾವು ನೆರವಾಗಲಿದ್ದೇವೆ. ದೇಶದಲ್ಲಿ ಕಾರು ಖರೀದಿಸುವ ಗ್ರಾಹಕರ ಪೈಕಿ ಬಹು ದೊಡ್ಡ ವಿಭಾಗವು ಸಣ್ಣದಾದ ಹ್ಯಾಚ್ ಬ್ಯಾಕ್ ಕಾರನ್ನೇ ಹೆಚ್ಚು ನೆಚ್ಚಿಕೊಂಡಿರುತ್ತಾರೆ. ಈ ನಿಟ್ಟಿನಲ್ಲಿ ಗರಿಷ್ಠ ಇಂಧನ ಕ್ಷಮತೆ ಹಾಗೂ ಜನಪ್ರಿಯತೆಯು ನಿರ್ಣಾಯಕ ಪಾತ್ರ ವಹಿಸುತ್ತದೆ.

ಹಾಗೆ ನೋಡಿದಾಗ ಸಣ್ಣ ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಹಲವಾರು ಮಾದರಿಗಳು ಲಭ್ಯವಾಗುವುದು. ಈ ಪೈಕಿ ಆಯ್ದ ಟಾಪ್ ಐದು ಮಾಡೆಲ್ ಗಳನ್ನು ನಾವಿಲ್ಲಿ ಪಟ್ಟಿ ಮಾಡಿ ಕೊಟ್ಟಿರುತ್ತೇವೆ. ಈ ಲೇಖನವು ಮೊದಲ ಬಾರಿಗೆ ಕಾರು ಖರೀದಿಸುವ ಹಾಗೂ ಬಜೆಟ್ ಕಾರು ಹುಡುಕುವವರಿಗೆ ನೆರವಾಗಲಿದೆ ಎಂಬುದು ನಮ್ಮ ನಂಬಿಕೆ.

1. ಹ್ಯುಂಡೈ ಐ10

1. ಹ್ಯುಂಡೈ ಐ10

ಮಾರುತಿ ಸುಜುಕಿ ಕಾರನ್ನು ನೋಡಿ ಬಳಲಿದವರಿಗೆ ಒಂದು ಉತ್ತಮ ಹ್ಯಾಚ್ ಬ್ಯಾಕ್ ಕಾರಿನ ರೂಪದಲ್ಲಿ ಹ್ಯುಂಡೈ ಐ10 ಹೊರಹೊಮ್ಮಿದೆ. 4.02 ಲಕ್ಷ ರು.ಳ ಪ್ರಾರಂಭಿಕ ಬೆಲೆ (ಎಕ್ಸ್ ಶೋ ರೂಂ ಬೆಂಗಳೂರು) ಹೊಂದಿರುವ ಹ್ಯುಂಡೈ ಐ10 ಪ್ರತಿ ಲೀಟರ್ ಗೆ 19.81 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಅಲ್ಲದೆ ಒಂದು ಸಣ್ಣ ಕಾರಿಗೆ ಬೇಕಾಗಿರುವ ಪವರ್ ವಿಂಡೋಸ್, ಪವರ್ ಸ್ಟೀರಿಂಗ್, ಚೈಲ್ಡ್ ಸೇಫ್ಟಿ ಲಾಕ್ ಮತ್ತು ಸೆಂಟ್ರಲ್ ಲಾಕಿಂಗ್ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

 ಹ್ಯುಂಡೈ ಐ10

ಹ್ಯುಂಡೈ ಐ10

ಇನ್ನು ಎಂಜಿನ್ ಬಗ್ಗೆ ಮಾತನಾಡುವುದಾದ್ದಲ್ಲಿ ಈ ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯು ಐ10 ಕಾರಿನಲ್ಲಿ 1.1 ಲೀಟರ್ ಐಆರ್ ಡಿಇ2 (iRDE2) ಪೆಟ್ರೋಲ್ ಎಂಜಿನ್ ಒದಗಿಸುತ್ತಿದ್ದು, 99 ತಿರುಗುಬಲದಲ್ಲಿ 68 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿದೆ.

2. ಮಾರುತಿ ಸುಜುಕಿ ಸೆಲೆರಿಯೊ

2. ಮಾರುತಿ ಸುಜುಕಿ ಸೆಲೆರಿಯೊ

ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿಯ ನಾವೀನ್ಯತೆಯ ಭಾಗವಾಗಿರುವ ಸೆಲೆರಿಯೊ ಕಳೆದ ಕೆಲವು ಸಮಯಗಳಲ್ಲಿ ಅತಿ ಹೆಚ್ಚು ಮಾರಾಟವನ್ನು ದಾಖಲಿಸಿದೆ. ಪ್ರತಿ ಲೀಟರ್ ಗೆ 23.1 ಕೀ.ಮೀ. ಮೈಲೇಜ್ ನೀಡಬಲ್ಲ ಈ ಆಕರ್ಷಕ ಕಾರಿನ ಬೆಂಗಳೂರು ಎಕ್ಸ್ ಶೋ ರೂಂ ಪ್ರಾರಂಭಿಕ ಬೆಲೆ 4.03 ಲಕ್ಷ ರು.ಗಳಾಗಿದೆ.

ಮಾರುತಿ ಸುಜುಕಿ ಸೆಲೆರಿಯೊ

ಮಾರುತಿ ಸುಜುಕಿ ಸೆಲೆರಿಯೊ

ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಅಥವಾ ಸರಳವಾಗಿ ಸೆಮಿ ಆಟೋಮ್ಯಾಟಿಕ್ ತಂತ್ರಜ್ಞಾನವನ್ನು ಹೊಂದಿರುವ ಮಾರುತಿ ಸೆಲೆರಿಯೊ ಎಎಂಟಿ ಮಾದರಿಯು ಸಹ ಐದು ಲಕ್ಷ ಬಜೆಟ್ ಪರಿಧಿಯಲ್ಲಿ (4.54 ಲಕ್ಷ ರು. ಎಕ್ಸ್ ಶೋ ರೂಂ ಬೆಂಗಳೂರು) ಲಭ್ಯವಾಗುತ್ತದೆ. ಅಂತೆಯೇ 998 ಸಿಸಿ 3 ಸಿಲಿಂಡರ್ ಕೆ10ಬಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಸೆಲೆರಿಯೊ 67 ಅಶ್ವಶಕ್ತಿ (90 ತಿರುಗುಬಲ) ಉತ್ಪಾದಿಸಲಿದೆ. ಇನ್ನು ಈ ಮೊದಲೇ ತಿಳಿಸಿರುವಂತೆಯೇ 5 ಸ್ಪೀಡ್ ಮ್ಯಾನುವಲ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಇದರಲ್ಲಿರಲಿದೆ.

03. ಹೋಂಡಾ ಬ್ರಿಯೊ

03. ಹೋಂಡಾ ಬ್ರಿಯೊ

ಸಣ್ಣ ಕಾರು ಹೋಂಡಾ ಬ್ರಿಯೊ ತನ್ನದೇ ಆದ ವಿಶಿಷ್ಟ ವಿನ್ಯಾಸ ಶೈಲಿಯನ್ನು ಹೊಂದಿದೆ. ಹ್ಯುಂಡೈ ಐ10 ಕಾರಿಗೆ ಸಮಾನವಾದ ವೈಶಿಷ್ಟ್ಯಗಳನ್ನು ಹೊಂದಿರುವ ಹೋಂಡಾ ಬ್ರಿಯೊ ಎಕ್ಸ್ ಶೋ ರೂಂ ಬೆಂಗಳೂರು ಪ್ರಾರಂಭಿಕ ಬೆಲೆ 4.33 ಲಕ್ಷ ರು.ಗಳಾಗಿದೆ. ಅಲ್ಲದೆ ಪ್ರತಿ ಲೀಟರ್ ಗೆ 18.9 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಹೋಂಡಾ ಬ್ರಿಯೊ

ಹೋಂಡಾ ಬ್ರಿಯೊ

ಅಂದ ಹಾಗೆ ಹೋಂಡಾ ಬ್ರಿಯೊ ಹ್ಯಾಚ್ ಬ್ಯಾಕ್ ಕಾರು 1198 ಸಿಸಿ, 4 ಸಿಲಿಂಡರ್, ಎಸ್ ಒಎಚ್ ಸಿ ಐ-ವಿಟೆಕ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸ್ಪಡುತ್ತಿದ್ದು, 109 ತಿರುಗುಬಲದಲ್ಲಿ 87 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

4. ನಿಸ್ಸಾನ್ ಮೈಕ್ರಾ ಆಕ್ಟಿವ್

4. ನಿಸ್ಸಾನ್ ಮೈಕ್ರಾ ಆಕ್ಟಿವ್

ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯ ಕನಸಿನ ಕೂಸಾಗಿರುವ ನಿಸ್ಸಾನ್ ಮೈಕ್ರಾ ಸಹ ಐದು ಲಕ್ಷ ರು.ಗಳ ಬಜೆಟ್ ನಲ್ಲಿ ತನ್ನ ಸ್ಥಾನವನ್ನು ಗುರುತಿಸಿಕೊಂಡಿದೆ. ಇದರ ಪ್ರಾರಂಭಿಕ ಬೆಲೆ 4.46 ಲಕ್ಷ ರು.ಗಳಾಗಿರಲಿದೆ (ಎಕ್ಸ್ ಶೋ ರೂಂ ಬೆಂಗಳೂರು). ಪ್ರಸ್ತುತ ಕಾರು ಪ್ರತಿ ಲೀಟರ್ ಗೆ 19.4 ಕೀ.ಮೀ. ಮೈಲೇಜ್ ನೀಡಲಿದೆ.

ನಿಸ್ಸಾನ್ ಮೈಕ್ರಾ ಆಕ್ಟಿವ್

ನಿಸ್ಸಾನ್ ಮೈಕ್ರಾ ಆಕ್ಟಿವ್

ನಿಸ್ಸಾನ್ ಮೈಕ್ರಾ 1198 ಸಿಸಿ, 3 ಸಿಲಿಂಡರ್, ಡಿಒಎಚ್ ಸಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 67 ಅಶ್ವಶಕ್ತಿ (104 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಪಡೆದುಕೊಂಡರಲಿದೆ.

05. ದಟ್ಸನ್ ಗೊ

05. ದಟ್ಸನ್ ಗೊ

ಸುರಕ್ಷತೆ ವಿಚಾರದಲ್ಲಿ ದಟ್ಸನ್ ಗೊ ಭಾರಿ ಹಿನ್ನಡೆ ಅನುಭವಿಸಿರಬಹುದು. ಆದರೆ ನಿಸ್ಸಾನ್ ನ ಈ ಬಜೆಟ್ ಬ್ರಾಂಡ್ ದಟ್ಸನ್ ಗೊ ಐದು ಲಕ್ಷ ರು.ಗಳ ಪರಿಧಿಯಲ್ಲಿ ಅತ್ಯುತ್ತಮ ಬಜೆಟ್ ಕಾರನ್ನು ಒದಗಿಸುತ್ತದೆ ಎಂಬುದನ್ನು ನಾವು ಒಪ್ಪಿಕೊಳ್ಳಲೇಬೇಕು. 3.12 ಲಕ್ಷ ರು. ಪ್ರಾರಂಭಿಕ ಬೆಲೆ ಹೊಂದಿರುವ ದಟ್ಸನ್ ಗೊ ಹ್ಯಾಚ್ ಬ್ಯಾಕ್ ಕಾರಿನ ಟಾಪ್ ಎಂಡ್ ವೆರಿಯಂಟ್ 3.69 ಲಕ್ಷ ರು.ಗಳಷ್ಟೇ ದುಬಾರಿಯೆನಿಸಿದೆ (ಎರಡೂ ಎಕ್ಸ್ ಶೋ ರೂಂ ಬೆಂಗಳೂರು ಬೆಲೆ). ಅಲ್ಲದೆ ಪ್ರತಿ ಲೀಟರ್ ಗೆ 20.63 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ದಟ್ಸನ್ ಗೊ

ದಟ್ಸನ್ ಗೊ

ಈ ಚೊಕ್ಕದಾದ ಆಕರ್ಷಕ ಕಾರು 1198 ಸಿಸಿ, 3 ಸಿಲಿಂಡರ್, 1.2 ಲೀಟರ್ ಡಿಒಎಚ್ ಸಿ ಜೊತೆ ಡ್ಯುಯಲ್ ವಿಟಿವಿಟಿ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 67 ಅಶ್ವಶಕ್ತಿ (104 ತಿರುಗುಬಲ) ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆಯಲಿದೆ.

ಐದು ಲಕ್ಷ ಬಜೆಟ್ ಗೆ ಅತ್ಯುತ್ತಮ 5 ಬಜೆಟ್ ಕಾರುಗಳು

ಅಷ್ಟಕ್ಕೂ ನಿಮ್ಮ ನೆಚ್ಚಿನ ಬಜೆಟ್ ಕಾರು ಯಾವುದು? ಯಾಕೆ?

Most Read Articles

Kannada
English summary
Here are 5 hatchbacks that give you good value for those precious 5 lakh rupees spent
Story first published: Thursday, April 2, 2015, 17:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X