ಡ್ರೈವ್‌ಸ್ಪಾರ್ಕ್ ವಿಮರ್ಶೆ: ಆಪ್ ರೋಡಿಂಗ್‌ನಲ್ಲಿ ಪರಾಕ್ರಮ ಮೆರೆದ ವಿನೂತನ ಫೋರ್ಡ್ ಎಂಡೀವರ್..!!

Written By:

ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ನಡೆದ ಫೋರ್ಡ್ ಎಂಡೀವರ್ ಆಫ್ ರೋಡಿಂಗ್ ಟೆಸ್ಟ್, ಕಾರು ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ತಗ್ಗು ದಿಣ್ಣೆ ಪ್ರದೇಶಗಳಲ್ಲೂ ಸರಾಗವಾಗಿ ಚಲಿಸಬಲ್ಲ ಸಾಮರ್ಥ್ಯ ಹೊಂದಿರುವ ಫೋರ್ಡ್ ಎಂಡೀವರ್, ಭಾರತೀಯ ರಸ್ತೆಗಳಿಗೆ ಹೇಳಿ ಮಾಡಿಸಿದಂತಿದೆ.

ಫೋರ್ಡ್ ಎಂಡೀವರ್ ಸಾಮರ್ಥ್ಯ:
3.2-ಲೀಟರ್ ಟರ್ಬೋಚಾರ್ಜ್ಡ್ ನಾಲ್ಕು ಸಿಲಿಂಡರಿನ ಡಿಸೇಲ್ ಎಂಜಿನ್ ಹೊಂದಿರುವ ಫೋರ್ಡ್ ಎಂಡೀವರ್ ಕಾರು, 197ಬಿಎಚ್‌ಪಿ ಮತ್ತು 470ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 6-ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ವ್ಯವಸ್ಥೆಯನ್ನು ಹೊಂದಿದ್ದು, ಸಾಹಸಿ ಕಾರು ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ.

ವಿನೂತನ ಫೋರ್ಡ್ ಎಂಡೀವರ್‌ನಲ್ಲಿರುವ ಭೂಪ್ರದೇಶ ನಿರ್ವಹಣಾ ವ್ಯವಸ್ಥೆ (TMS)ಅದ್ಭುತವಾಗಿದೆ. ವಿವಿಧ ರೀತಿಯ ಭೂ ಪ್ರದೇಶಗಳಲ್ಲಿ ತನ್ನ ಪ್ರತಿಕ್ರಿಯೆಯನ್ನು ಬದಲಾಯಿಸಬಲ್ಲ ಶಕ್ತಿ ಹೊಂದಿದ್ದು, ಚಾಲನಾ ವ್ಯವಸ್ಥೆಯನ್ನು ಸರಾಗವಾಗಿ ನಿಯಂತ್ರಿಸಬಲ್ಲ ವ್ಯವಸ್ಥೆಯನ್ನು ಪಡೆದುಕೊಂಡಿದೆ. ಇದರ ಜೊತೆಗೆ ನಾಲ್ಕುಗಳನ್ನು ಚಕ್ರಗಳನ್ನು ಪ್ರತ್ಯೇಕವಾಗಿ ನಿಯಂತ್ರಿಸಲು ಪ್ರತ್ಯೇಕ ಬಟನ್‌ಗಳನ್ನು ಇರಿಸಲಾಗಿದೆ.

ಫೋರ್ಡ್ ಎಂಡೀವರ್ ಹೊಸ ವಿನ್ಯಾಸಗಳು ಅದ್ಭುತವಾಗಿವೆ. ನಗರಪ್ರದೇಶಗಳಲ್ಲಿ ಸರಾಗವಾಗಿ ಪ್ರಯಾಣಕ್ಕೆ ನಾರ್ಮಲ್ ಮೋಡ್ ವ್ಯವಸ್ಥೆ ಕಲ್ಪಿಸಲಾಗಿದ್ದು, ತಗ್ಗುದಿಣ್ಣೆಗಳಲ್ಲೂ ಆರಾಮದಾಯಕ ಪ್ರಯಾಣ ಮಾಡಬಹುದಾಗಿದೆ.

ಆಪ್ ರೋಡಿಂಗ್ ಟೆಸ್ಟ್‌ನಲ್ಲಿ ವಿವಿಧ ಸಾಹಸಗಳನ್ನು ತೋರಿದ ಫೋರ್ಡ್ ಎಂಡೀವರ್, ಯಾವುದೇ ಅಡೆತಡೆಯಿಲ್ಲದೇ ಅದ್ಭುತ ಪ್ರದರ್ಶನ ನೀಡಿತು. ಹಿಮ, ಮಡ್ ಮತ್ತು ಹುಲ್ಲು ಹೀಗೆ ವಿವಿಧ ಮೋಡ್‌ಗಳಲ್ಲಿ ತೋರಿದ ಪ್ರದರ್ಶನಗಳು ಸಾಹಸಿ ಕಾರು ಪ್ರಿಯರ ಮೆಚ್ಚುಗೆಗೆ ಪಾತ್ರವಾಯ್ತು.

ಸಾಹಸ ಪ್ರದರ್ಶನ ವೇಳೆ ತೀಕ್ಷ್ಣ ಬುದ್ದಿವಂತಿಕೆ ತೋರಿದ ಫೋರ್ಡ್ ಎಂಡೀವರ್, ವಿವಿಧ ಮೋಡ್‌ಗಳಲ್ಲಿ ನೀಡಲಾಗಿದ್ದ ಆಫ್ ರೋಡಿಂಗ್ ಸಾಹಸಗಳನ್ನು ಯಾವುದೇ ಅಡೆತಡೆ ಇಲ್ಲಿದೆ ಸಮರ್ಥವಾಗಿ ಪ್ರದರ್ಶಿಸಿತು.

ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನುಗ್ಗಬಲ್ಲ ಸಾಮರ್ಥ್ಯ ಹೊಂದಿರುವ ಫೋರ್ಡ್ ಎಂಡೀವರ್, ಕಡಿದಾದ ಬೆಟ್ಟಗಳನ್ನು ಸಲೀಸಾಗಿ ಎರಿ ತನ್ನ ಗುರಿ ತಲುಪಬಲ್ಲದು. ಜೊತೆಗೆ ರಾಕ್ ಮೋಡ್‌ಗೆ ತೊಡಿಸಿಕೊಳ್ಳಲು ಎಂಡೀವರ್ ಗೇರ್‌ಬಾಕ್ಸ್ ವ್ಯವಸ್ಥೆಯ ಮಹತ್ತರ ಕಾರ್ಯನಿರ್ವಹಣೆ ಎಲ್ಲರೂ ಮೆಚ್ಚುವಂತದ್ದು.

ಕೇವಲ ತಗ್ಗು ದಿಣ್ಣೆಗಳಲ್ಲಿ ಅಷ್ಟೇ ಅಲ್ಲದೇ ಮರುಭೂಮಿಯಲ್ಲೂ ತನ್ನ ಸಾಹಸ ತೋರಬಲ್ಲ ಶಕ್ತಿಯನ್ನು ಫೋರ್ಡ್ ಎಂಡೀವರ್ ಪಡೆದುಕೊಂಡಿದೆ. ಇದಕ್ಕಾಗಿ ಸ್ಯಾಂಡ್ ಮೋಡ್ ವ್ಯವಸ್ಥೆಯನ್ನು ಹೊಂದಿದ್ದು, ತ್ರಾಸದಾಯಕ ಮರುಳು ಚಪ್ಪಟೆಯಲ್ಲೂ ತನ್ನ ವೇಗ ನಿಯಂತ್ರಣ ಮಾಡಬಲ್ಲದು.

ಇಳಿಜಾರು ಪ್ರದೇಶಗಳಲ್ಲೂ ಸಾಕಷ್ಟು ಶಕ್ತಿ ಪ್ರದರ್ಶನ ಮಾಡಿದ ಫೋರ್ಡ್ ಎಂಡೀವರ್, 23-ಡಿಗ್ರಿ ಕಡಿದಾದ ದಿಣ್ಣೆಯನ್ನು ಯಾವುದೇ ಆತಂಕವಿಲ್ಲದೇ ಗುರಿತಲುಪಿತು. ಇದಲ್ಲದೇ ಫೋರ್ಡ್ ಎಂಡೀವರ್ ಮುಖ್ಯಸ್ಥರ ಪ್ರಕಾರ 35-ಡಿಗ್ರಿ ಇಳಿಜಾರಿನಲ್ಲೂ ಸಾರಾಗವಾಗಿ ಪ್ರಯಾಣಮಾಡಬಲ್ಲದು ಎನ್ನುತ್ತಾರೆ.

ಫೋರ್ಡ್ ಎಂಡೀವರ್ ಬೆಲೆಗಳು:
ಎಸ್‌ಯುವಿ ಆವೃತ್ತಿಯಲ್ಲಿ ಸಿದ್ಧಗೊಂಡಿರುವ ಫೋರ್ಡ್ ಎಂಡೀವರ್ ಹೊಸ ಮಾದರಿಯು ಬೆಂಗಳೂರು ಎಕ್ಸ್‌ಶೋರಂ ಪ್ರಕಾರ ರೂ. 31.50ಲಕ್ಷಕ್ಕೆ ಲಭ್ಯವಿರಲಿದ್ದು, ಆಪ್ ರೋಡಿಂಗ್ ಕೌಲಶ್ಯಗಳು ಗಮನಸೆಳೆಯುತ್ತಿವೆ.

ಬೆಂಗಳೂರಿನಲ್ಲಿ ಆಪ್ ರೋಡಿಂಗ್ ಕೌಶಲ್ಯ ಪ್ರದರ್ಶನ ಮಾಡಿರುವ ಹೊಚ್ಚ ಹೊಸ ಫೋರ್ಡ್ ಎಂಡೀವರ್ ಕಾರಿನ ಹೆಚ್ಚಿನ ಚಿತ್ರಗಳಿಗಾಗಿ ಕೆಳಗಿನ ಗ್ಯಾರಿಯನ್ನು ಕ್ಲಿಕ್ ಮಾಡಿ.

Click to compare, buy, and renew Car Insurance online

Buy InsuranceBuy Now

Read more on ಫೋರ್ಡ್ ford
Story first published: Monday, March 6, 2017, 18:52 [IST]
English summary
The Ford Endeavour's Off-Road capabilities get tested to the max as we take the big Ford off the beaten path.
Please Wait while comments are loading...

Latest Photos