ಫಿಗೊ ಆಸ್ಪೈರ್ vs ಸ್ವಿಫ್ಟ್ ಡಿಜೈರ್; ಯಾವ ಕಾರು ಅತ್ಯುತ್ತಮ?

By Nagaraja

ಜನಪ್ರಿಯ ಮಾರುತಿ ಆಲ್ಟೊ ಕಾರನ್ನೇ ಹಿಂದಿಕ್ಕಿರುವ ಸ್ವಿಫ್ಟ್ ಡಿಜೈರ್ ಕಳೆದ ಕೆಲವು ತಿಂಗಳುಗಳಿಂದ ದೇಶದ ಅತಿ ಹೆಚ್ಚು ಮಾರಾಟದ ಕಾರೆಂಬ ಗೌರವಕ್ಕೆ ಭಾಜನವಾಗಿದೆ. 2008ನೇ ಇಸವಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡಿದ್ದ ಮಾರುತಿ ಸ್ವಿಫ್ಟ್ ಡಿಜೈರ್ ಇತ್ತೀಚೆಗಷ್ಟೇ ಪರಿಷ್ಕೃತ ಸ್ವರೂಪವನ್ನು ಪಡೆದುಕೊಂಡಿತ್ತು.

Also Read: ಕ್ರೆಟಾ vs ಡಸ್ಟರ್; ಮಿನಿ ಎಸ್ ಯುವಿಗಳ ಮಲ್ಲ ಯುದ್ಧ

ಹಾಗೆ ನೋಡಿದರೆ ಕಾಂಪಾಕ್ಟ್ ಸೆಡಾನ್ ಸಾಲಿನಲ್ಲಿ ಕಾರುಗಳ ದಂಡೇ ಪೈಪೋಟಿಗೆ ನಿಂತಿದೆ. ಹ್ಯುಂಡೈ ಎಕ್ಸ್ ಸೆಂಟ್, ಹೋಂಡಾ ಅಮೇಜ್, ಟಾಟಾ ಜೆಸ್ಟ್ ಹೀಗೆ ಪ್ರತಿಯೊಂದು ಕಾರುಗಳು ತನ್ನದೇ ಆದ ವಿಶಿಷ್ಟತೆಯನ್ನು ಕಾಪಾಡಿಕೊಂಡಿದೆ. ಆದರೆ ಇದುವರೆಗೆ ಯಾವ ಕಾರಿಗೂ ಸ್ವಿಫ್ಟ್ ಡಿಜೈರ್ ಹಿಂದಿಕ್ಕಲು ಸಾಧ್ಯವಾಗಲಿಲ್ಲ.

Also Read: ಜಾಝ್ vs ಎಲೈಟ್ ಐ20: ಪ್ರೀಮಿಯಂ ಹ್ಯಾಚ್ ಗಳ ಮಹಾಸಮರ

ಈ ನಡುವೆ ಅಮೆರಿಕದ ಐಕಾನಿಕ್ ಸಂಸ್ಥೆ ಫೋರ್ಡ್ ಅತಿ ನೂತನ ಫಿಗೊ ಆಸ್ಪೈರ್ ಬಿಡುಗಡೆಗೊಳಿಸಿರುವುದು ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ. ತಂತ್ರಜ್ಞಾನ ಹಾಗೂ ವೈಶಿಷ್ಟ್ಯಗಳೊಂದಿಗೆ ತುಂಬಿಕೊಂಡಿರುವ ಫಿಗೊ ಆಸ್ಪೈರ್ ಸ್ಪರ್ಧಾತ್ಮಕ ಬೆಲೆಯಲ್ಲಿ ದೇಶಕ್ಕೆ ಎಂಟ್ರಿ ಕೊಟ್ಟಿದೆ. ಹಾಗಿರುವಾಗ ಈ ಕಾರುಗಳ ನಡುವೆ ಯಾವುದು ಅತ್ಯುತ್ತಮ ಎಂಬುದನ್ನು ಹೋಲಿಸುವ ಪ್ರಯತ್ನ ಇಲ್ಲಿ ಮಾಡಲಾಗುವುದು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಫೋರ್ಡ್ ಫಿಗೊ ಆಸ್ಪೈರ್: ಪ್ರಾರಂಭಿಕ ಬೆಲೆ 4.89 ಲಕ್ಷ ರು.ಗಳ ಆರಂಭವಾಗಿ ಟಾಪ್ ಎಂಡ್ 8.24 ಲಕ್ಷ ರು.ಗಳ ವರೆಗೆ ದುಬಾರಿಯೆನಿಸುತ್ತದೆ.

ಮಾರುತಿ ಸ್ವಿಫ್ಟ್ ಡಿಜೈರ್: 5.16 ಲಕ್ಷ ರು.ಗಳಿಂದ ಆರಂಭವಾಗುವ ಸ್ವಿಫ್ಟ್ ಡಿಜೈರ್ ಟಾಪ್ ವೆರಿಯಂಟ್ 7.90 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ.

ವಿನ್ಯಾಸ - ಫೋರ್ಡ್ ಫಿಗೊ ಆಸ್ಪೈರ್

ವಿನ್ಯಾಸ - ಫೋರ್ಡ್ ಫಿಗೊ ಆಸ್ಪೈರ್

ಮೊದಲ ನೋಟದಲ್ಲೇ ಆಸ್ಪೈರ್ ವಿನ್ಯಾಸ ಕಣ್ಮಣ ಸೆಳೆಯುತ್ತದೆ. ಮುಂಭಾಗದಲ್ಲಿ ಆಸ್ಟನ್ ಮಾರ್ಟಿನ್ ಪ್ರೇರಣೆ ಪಡೆದ ಗ್ರಿಲ್ ಪ್ರಮುಖ ಆಕರ್ಷಣೆಯಾಗಿದೆ. ಒಟ್ಟಾರೆಯಾಗಿ ನೇರ ದಿಟ್ಟ ಕ್ರೀಡಾತ್ಮಕ ವಿನ್ಯಾಸವನ್ನು ಕಾಯ್ದುಕೊಂಡಿದೆ.

ವಿನ್ಯಾಸ - ಸ್ವಿಫ್ಟ್ ಡಿಜೈರ್

ವಿನ್ಯಾಸ - ಸ್ವಿಫ್ಟ್ ಡಿಜೈರ್

ಇತ್ತೀಚೆಗಷ್ಟೇ ಹೊಸ ಮಾರ್ಪಾಡುಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ಸ್ವಿಫ್ಟ್ ಡಿಜೈರ್ ಕಾರಿನಲ್ಲಿ ಹೆಚ್ಚು ಕ್ರೋಮ್ ಸ್ಪರ್ಶತೆಯನ್ನು ಕಾಣಬಹುದಾಗಿದೆ.

ವೈಶಿಷ್ಟ್ಯಗಳು - ಫೋರ್ಡ್ ಫಿಗೊ ಆಸ್ಪೈರ್

ವೈಶಿಷ್ಟ್ಯಗಳು - ಫೋರ್ಡ್ ಫಿಗೊ ಆಸ್ಪೈರ್

ಫೋರ್ಡ್ ಫಿಗೊ ಆಸ್ಪೈರ್ ಕಾರಿನಲ್ಲಿ ಮೈ ಫೋರ್ಡ್ ಡಾಕ್ ಸಿಂಕ್ ಜೊತೆ ಆಪ್ ಲಿಂಕ್, ಮೈ ಕೀ ಟೆಕ್ನಾಲಜಿ, ಎಮರ್ಜನ್ಸಿ ಅಸಿಸ್ಟನ್ಸ್, ಯುಎಸ್‌ಬಿ, ಆಕ್ಸ್ ಇನ್ ಕನೆಕ್ಟಿವಿಟಿ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಮತ್ತು ಗರಿಷ್ಠ ಸ್ಟೋರೆಜ್ ಜಾಗವು ಸಿಗಲಿದೆ.

 ವೈಶಿಷ್ಟ್ಯಗಳು - ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ವೈಶಿಷ್ಟ್ಯಗಳು - ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಇನ್ನೊಂದೆಡೆ ಸ್ವಿಫ್ಟ್ ಡಿಜೈರ್ ಕಾರನ್ನು ಸ್ಟ್ಯಾರ್ಟ್/ಸ್ಟಾಪ್ ಬಟನ್, ಹಿಂದುಗಡೆ ಸೀಟಿನಲ್ಲೂ ಆಕ್ಸೆಸರಿ ಸಾಕೆಟ್, ಆಡಿಯೋ ಸಿಸ್ಟಂ, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ರಿವರ್ಸ್ ಪಾರ್ಕಿಂಗ್ ಸಿಸ್ಟಂಗಳಂತಹ ವೈಶಿಷ್ಟ್ಯಗಳು ವಿಶಿಷ್ಟವಾಗಿಸಲಿದೆ.

ಎಂಜಿನ್ ತಾಂತ್ರಿಕತೆ - ಫೋರ್ಡ್ ಫಿಗೊ ಆಸ್ಪೈರ್

ಎಂಜಿನ್ ತಾಂತ್ರಿಕತೆ - ಫೋರ್ಡ್ ಫಿಗೊ ಆಸ್ಪೈರ್

ಎರಡು ಪೆಟ್ರೋಲ್ ಹಾಗೂ ಏಕಮಾತ್ರ ಡೀಸೆಲ್ ಸೇರಿದಂತೆ ಒಟ್ಟು ಮೂರು ಎಂಜಿನ್ ಆಯ್ಕೆಗಳಲ್ಲಿ ಫಿಗೊ ಆಸ್ಪೈರ್ ಲಭ್ಯವಾಗಲಿದೆ.

1.2 ಲೀಟರ್ ಪೆಟ್ರೋಲ್ (88 ಅಶ್ವಶಕ್ತಿ)

1.5 ಲೀಟರ್ ಪೆಟ್ರೋಲ್ (112 ಅಶ್ವಶಕ್ತಿ)

1.5 ಲೀಟರ್ ಡೀಸೆಲ್ (100 ಅಶ್ವಶಕ್ತಿ)

ಗೇರ್ ಬಾಕ್ಸ್: ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್

ಎಂಜಿನ್ ತಾಂತ್ರಿಕತೆ - ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಎಂಜಿನ್ ತಾಂತ್ರಿಕತೆ - ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

1.2 ಲೀಟರ್ ಪೆಟ್ರೋಲ್ (83 ಅಶ್ವಶಕ್ತಿ)

1.3 ಲೀಟರ್ ಡೀಸೆಲ್ (75 ಅಶ್ವಶಕ್ತಿ)

ಗೇರ್ ಬಾಕ್ಸ್: ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್

 ಮೈಲೇಜ್

ಮೈಲೇಜ್

ಫೋರ್ಡ್ ಫಿಗೊ ಆಸ್ಪೈರ್

ಪೆಟ್ರೋಲ್: 18.2 kpl

ಡೀಸೆಲ್: 25.8 kpl

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಪೆಟ್ರೋಲ್: 20.85 kpl

ಡೀಸೆಲ್: 26.59 kpl

ಸುರಕ್ಷತೆ

ಸುರಕ್ಷತೆ

ನೂತನ ಫಿಗೊ ಆಸ್ಪೈರ್ ಕಾರಿನಲ್ಲಿ ಡ್ಯುಯಲ್ ಏರ್ ಬ್ಯಾಗ್ ಗಳ ಸೌಲಭ್ಯವು ಎಲ್ಲ ಶ್ರೇಣಿಗಳಲ್ಲೂ ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಅಲ್ಲದೆ ಬದಿ ಹಾಗೂ ಕರ್ಟೈನ್ ಸೇರಿದಂತೆ ಆರು ಏರ್ ಬ್ಯಾಗ್ ಗಳ ಆಯ್ಕೆಯೂ ಇರುತ್ತದೆ. ಆದರೆ ಡಿಜೈರ್ ಮಾದರಿಯಲ್ಲಿ ಇದರ ಕೊರತೆ ಕಾಡಲಿದ್ದು, ಟಾಪ್ ಎಂಡ್ ವೆರಿಯಂಟ್ ನಲ್ಲಿ ಎರಡು ಏರ್ ಬ್ಯಾಗ್ ಸೌಲಭ್ಯವಷ್ಟೇ ಇರಲಿದೆ.

ಅಂತಿಮ ತೀರ್ಪು

ಅಂತಿಮ ತೀರ್ಪು

ನೂತನ ಫಿಗೊ ಆಸ್ಪೈರ್ ಜನಪ್ರಿಯ ಸ್ವಿಫ್ಟ್ ಡಿಜೈರ್ ಮಾದರಿಯನ್ನು ನಿರ್ವಹಣೆ, ಸುರಕ್ಷತೆ, ವೈಶಿಷ್ಟ್ಯ, ತಂತ್ರಜ್ಞಾನ, ಬೆಲೆ ಹೀಗೆ ಎಲ್ಲ ವಿಭಾಗದಲ್ಲೂ ಮೀರಿ ನಿಂತಿದೆ. ಆದರೆ ನಂಬಿಕೆಗ್ರಸ್ತ ಮಾರುತಿ ಸಂಸ್ಥೆಯು ಬೃಹತ್ ಸರ್ವಿಸ್ ಜಾಲದ ಮುಖಾಂತರ ಉಳಿಸಿಕೊಂಡು ಬಂದಿರುವ ಜನಪ್ರಿಯತೆಯನ್ನು ಮೀರಿ ನಿಲ್ಲಲ್ಲು ಸ್ವಲ್ಪ ಕಷ್ಟಕರವಾಗಲಿದೆ ಎಂಬುದಂತೂ ಅಷ್ಟೇ ಸತ್ಯ.

Most Read Articles

Kannada
English summary
The newest entry to this segment however is the Ford Figo Aspire, the first sub-4 meter sedan in India from Ford. So how does it fare when compared to the Swift Dzire in terms of pricing, design, engine specification, features and safety? Here's a detailed look at the two:
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X