ಕ್ರೆಟಾ vs ಡಸ್ಟರ್; ಮಿನಿ ಎಸ್‌ಯುವಿಗಳ ಮಲ್ಲ ಯುದ್ಧ

By Nagaraja

ಭಾರತದ ಮಾರುಕಟ್ಟೆಗೆ ನೂತನ ಹ್ಯುಂಡೈ ಕ್ರೆಟಾ ಸೇರ್ಪಡೆಯೊಂದಿಗೆ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಸ್ಪರ್ಧೆ ಮತ್ತಷ್ಟು ಬಿಗುಗೊಂಡಿದೆ. ಇದೇ ವಿಭಾಗದಲ್ಲಿ ಈಗಾಗಲೇ ಗ್ರಾಹಕರ ನೆಚ್ಚಿನ ಮಾದರಿಯೆನಿಸಿಕೊಂಡಿರುವ ಫ್ರಾನ್ಸ್ ಮೂಲದ ರೆನೊ ಡಸ್ಟರ್ ಉತ್ತಮ ಮಾರಾಟವನ್ನು ಕಾಪಾಡಿಕೊಂಡಿದೆ.

Also Read : ಆಲ್ಟೊ 800 vs ನ್ಯಾನೋ; ಒಂದು ಸಿಂಪಲ್ ಗೈಡ್

ಹಾಗಿರುವಾಗ ಇದೇ ಮೊದಲ ಬಾರಿಗೆ ಸಣ್ಣ ಕ್ರೀಡಾ ಬಳಕೆಯ ವಾಹನಗಳ ಸಾಲಿಗೆ ಹ್ಯುಂಡೈ ಎಂಟ್ರಿ ಕೊಡುತ್ತಿದ್ದು, ಎರಡು ಜನಪ್ರಿಯ ಬ್ರಾಂಡ್ ಗಳ ನಡುವಣ ಮಲ್ಲ ಯುದ್ಧಕ್ಕೆ ವೇದಿಕೆ ಸಿದ್ಧಗೊಂಡಿದೆ. ಇನ್ನೊಂದೆಡೆ ಡಸ್ಟರ್ ಕಾರನ್ನು ರಿ ಬ್ಯಾಡ್ಜ್ ಮಾಡಿಕೊಂಡು ಮತ್ತಷ್ಟು ಪ್ರೀಮಿಯಂ ರೂಪ ಕೊಟ್ಟಿರುವ ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯು ಇದೇ ವಿಭಾಗದಲ್ಲಿ ಆಗಲೇ ಟೆರನೊ ಎಂಬ ನೂತನ ಕಾರನ್ನು ಪರಿಚಯಿಸಿದೆ. ಒಟ್ಟಿನಲ್ಲಿ ಮಿನಿ ಎಸ್‌ಯುವಿಗಳ ಮಲ್ಲ ಯುದ್ಧದಲ್ಲಿ ವಿಜಯಿಶಾಲಿ ಯಾರು ಎಂಬುದಕ್ಕೆ ಮುಂದಿನ ಕೆಲವೇ ದಿನಗಳಲ್ಲಿ ಉತ್ತರ ಲಭ್ಯವಾಗಲಿದೆ.

ಬೆಲೆ

ಬೆಲೆ

ಹ್ಯುಂಡೈ ಕ್ರೆಟಾ: ಬಹುನಿರೀಕ್ಷಿತ ಹ್ಯುಂಡೈ ಕ್ರೆಟಾ ಬೆಲೆ ಬಿಡುಗಡೆ ವೇಳೆಯಷ್ಟೇ ಸ್ಪಷ್ಟವಾಗಲಿದೆ. ಇದರ ಪೆಟ್ರೋಲ್ ಮಾದರಿಗಳು 8.6 ಲಕ್ಷ ರು.ಗಳಿಂದ 11.3 ಹಾಗೂ ಡೀಸೆಲ್ ಮಾದರಿಗಳು 9.5 ಲಕ್ಷ ರು.ಗಳಿಂದ 14.1 ಲಕ್ಷ ರು.ಗಳಷ್ಟು ದುಬಾರಿಯೆನಿಸುವ ಸಾಧ್ಯತೆಯಿದೆ.

ರೆನೊ ಡಸ್ಟರ್: ರೆನೊ ಡಸ್ಟರ್ ಪೆಟ್ರೋಲ್ ಮಾದರಿಯು 8.3 ಲಕ್ಷ ರು.ಗಳಿಂದ 9.7 ಹಾಗೂ ಡೀಸೆಲ್ ಮಾದರಿಯು 13.63 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ.

ವಿನ್ಯಾಸ - ಹ್ಯುಂಡೈ ಕ್ರೆಟಾ

ವಿನ್ಯಾಸ - ಹ್ಯುಂಡೈ ಕ್ರೆಟಾ

ಹ್ಯುಂಡೈನ ಮುಂದಿನ ತಲೆಮಾರಿನ ಕ್ರಾಂತಿಕಾರಿ ಫ್ಲೂಯಿಡಿಕ್ 2.0 ವಿನ್ಯಾಸ ತತ್ವಶಾಸ್ತ್ರವನ್ನು ನೂತನ ಕ್ರೆಟಾದಲ್ಲಿ (FS2.0) ಅನುಸರಿಸಲಾಗಿದೆ. ಇದು ಎಲ್ಲ ವಿಭಾಗದಿಂದಲೂ ಆಧುನಿಕ ಹಾಗೂ ಪ್ರೀಮಿಯಂ ವಿನ್ಯಾಸ ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ.

ವಿನ್ಯಾಸ - ರೆನೊ ಡಸ್ಟರ್

ವಿನ್ಯಾಸ - ರೆನೊ ಡಸ್ಟರ್

ಇನ್ನೊಂದೆಡೆ ಈಗಲೇ ಮಾರುಕಟ್ಟೆಯಲ್ಲಿರುವ ರೆನೊ ಡಸ್ಟರ್ ಕ್ರೀಡಾತ್ಮಕ ಶೈಲಿಯ ಶಕ್ತಿಶಾಲಿ ದಿಟ್ಟ ನೋಟವನ್ನು ಕಾಪಾಡಿಕೊಂಡಿದ್ದರೂ ಸಹ ಬದಲಾದ ಪರಿಸ್ಥಿತಿಯಲ್ಲಿ ಸ್ವಲ್ಪ ಕಳೆಗುಂದಿದೆ ಎಂದೇ ವಿಶ್ಲೇಷಿಸಬೇಕಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಡಸ್ಟರ್ ಮಾರಾಟಕ್ಕೆ ಹಿನ್ನೆಡೆಗೆ ಕಾರಣವಾಗಲಿದೆ ಎಂಬ ಭೀತಿ ಹಬ್ಬಿದೆ. ಇದರಿಂದಾಗಿ ಆದಷ್ಟು ಬೇಗನೇ ಈ ಬಹುನಿರೀಕ್ಷಿತ ಮಾದರಿಯ ಪರಿಷ್ಕೃತ ಮಾದರಿಯನ್ನು ಬಿಡುಗಡೆ ಮಾಡಬೇಕಾಗಿರುವುದು ಅತಿ ಅಗತ್ಯವಾಗಿದೆ.

ವೈಶಿಷ್ಟ್ಯ - ಹ್ಯುಂಡೈ ಕ್ರೆಟಾ

ವೈಶಿಷ್ಟ್ಯ - ಹ್ಯುಂಡೈ ಕ್ರೆಟಾ

ಆಡಿಯೋ ವಿಡಿಯೋ ನೇವಿಗೇಷನ್ ಸಿಸ್ಟಂ (ಎವಿಎನ್), ಐದು ಇಂಚುಗಳ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ, ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟ್ಯಾರ್ಟ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲ್, 17 ಇಂಚುಗಳ ಡೈಮಂಡ್ ಕಟ್ ಅಲಾಯ್ ವೀಲ್ಸ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಎಲ್ ಇಡಿ ಸ್ಥಾನಿಕ ಲ್ಯಾಂಪ್ ಗಳ ಸೌಲಭ್ಯವಿರಲಿದೆ.

ವೈಶಿಷ್ಟ್ಯ - ರೆನೊ ಡಸ್ಟರ್

ವೈಶಿಷ್ಟ್ಯ - ರೆನೊ ಡಸ್ಟರ್

ಇನ್ನೊಂದೆಡೆ ರೆನೊ ಡಸ್ಟರ್ ಕಾರಿನಲ್ಲಿ ಡಬಲ್ ಬ್ಯಾರಲ್ ಹೆಡ್ ಲ್ಯಾಂಪ್, ಟು ಟೋನ್ ಕಲರ್ಡ್ ಬಂಪರ್, ಕ್ರೋಮ್ ಫ್ರಂಟ್ ಗ್ರಿಲ್ ಸೌರಂಡ್, ಕೀಲೆಸ್ ಎಂಟ್ರಿ ಮತ್ತು ಮೀಡಿಯಾ ನೇವ್ ಸಿಸ್ಟಂಗಳ ವ್ಯವಸ್ಥೆಯಿರಲಿದೆ.

ಎಂಜಿನ್ ಮತ್ತು ತಾಂತ್ರಿಕತೆ - ಹ್ಯುಂಡೈ ಕ್ರೆಟಾ

ಎಂಜಿನ್ ಮತ್ತು ತಾಂತ್ರಿಕತೆ - ಹ್ಯುಂಡೈ ಕ್ರೆಟಾ

ಮೂರು ಎಂಜಿನ್ ಆಯ್ಕೆಗಳಲ್ಲಿ ಹ್ಯುಂಡೈ ಕ್ರೆಟಾ ಲಭ್ಯವಾಗಲಿದೆ. ಅವುಗಳೆಂದರೆ,

  • 1.6 ಡ್ಯುಯಲ್ ವಿಟಿವಿಟಿ ಪೆಟ್ರೋಲ್ (123 ಅಶ್ವಶಕ್ತಿ)
  • 1.4 ಲೀಟರ್ ಡೀಸೆಲ್ ಎಂಜಿನ್ (90 ಅಶ್ವಶಕ್ತಿ)
  • 1.6 ಲೀಟರ್ ಡೀಸೆಲ್ (128 ಅಶ್ವಶಕ್ತಿ)
  • ಇವೆಲ್ಲದರ ಜೊತೆಗೆ 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹಾಗೂ ಸೆಗ್ಮೆಂಟ್ ನಲ್ಲಿ ಇದೇ ಮೊದಲ ಬಾರಿಗೆ ಐಚ್ಛಿಕ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಲಭ್ಯವಾಗಲಿದೆ.

    ಎಂಜಿನ್ ತಾಂತ್ರಿಕತೆ - ರೆನೊ ಡಸ್ಟರ್

    ಎಂಜಿನ್ ತಾಂತ್ರಿಕತೆ - ರೆನೊ ಡಸ್ಟರ್

    ರೆನೊ ಡಸ್ಟರ್ ಕೂಡಾ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ,

    1.5 ಲೀಟರ್ ಪೆಟ್ರೋಲ್ ಎಂಜಿನ್ (102 ಅಶ್ವಶಕ್ತಿ, 145 ಎನ್ಎಂ ತಿರುಗುಬಲ), 5 ಸ್ಪೀಡ್ ಮ್ಯಾನುವಲ್

    1.4 ಲೀಟರ್ ಡೀಸೆಲ್ (84 ಅಶ್ವಶಕ್ತಿ, 200 ಎನ್ಎಂ ತಿರುಗುಬಲ ಅಥವಾ 108 ಅಶ್ವಶಕ್ತಿ ಹಾಗೂ 248 ಎನ್ಎಂ ತಿರುಗುಬಲ). ಡೀಸೆಲ್ ಎಂಜಿನ್ ಗಳು ಐದು ಹಾಗೂ ಆರ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ನಿಮ್ಮ ಮಾಹಿತಿಗಾಗಿ ರೆನೊ ಡಸ್ಟರ್ ಆಲ್ ವೀಲ್ ಡ್ರೈವಿಂಗ್ ವೆರಿಯಂಟ್ ಗಳಲ್ಲೂ ದೊರಕುತ್ತದೆ.

    ಮೈಲೇಜ್

    ಮೈಲೇಜ್

    ಹ್ಯುಂಡೈ ಕ್ರೆಟಾ:

    • 1.6 ಲೀಟರ್ ಡೀಸೆಲ್ - 21 kpl
    • 1.4 ಲೀಟರ್ ಡೀಸೆಲ್ - 20 kpl
    • ಪೆಟ್ರೋಲ್ ಎಂಜಿನ್ - 15 kpl
    • ರೆನೊ ಡಸ್ಟರ್

      • ಪೆಟ್ರೋಲ್ ಎಂಜಿನ್ - 13 kpl
      • ಡೀಸೆಲ್ ಎಂಜಿನ್ - 19.87 ಮತ್ತು 19.64 kpl.
      • ಸುರಕ್ಷತೆ

        ಸುರಕ್ಷತೆ

        ಹ್ಯುಂಡೈ ಕ್ರೆಟಾ

        • ಡ್ಯುಯಲ್ ಏರ್ ಬ್ಯಾಗ್,
        • ಕರ್ಟೈನ್ ಏರ್ ಬ್ಯಾಗ್,
        • ಎಬಿಎಸ್,
        • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
        • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್,
        • ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ (ವಿಎಸ್ಎಂ),
        • ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ)
        • ರೆನೊ ಡಸ್ಟರ್

          • ಡ್ಯುಯಲ್ ಏರ್ ಬ್ಯಾಗ್,
          • ಎಬಿಎಸ್,
          • ಇಬಿಡಿ,
          • ಬ್ರೇಕ್ ಅಸಿಸ್ಟ್,
          • ಇಎಸ್ ಪಿ
          • ಅಂತಿಮ ತೀರ್ಪು

            ಅಂತಿಮ ತೀರ್ಪು

            ಈ ವಿಭಾಗದಲ್ಲಿ ರೆನೊ ಡಸ್ಟರ್ ಅತ್ಯಂತ ಜನಪ್ರಿಯ ಮಾದರಿ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ತಾಜಾತನದ ಭರವಸೆಯೊಂದಿಗೆ ಗ್ರಾಹಕರಿಗೆ ಹೊಸ ಆಯ್ಕೆಗಳೊಂದಿಗೆ ಮುಂದೆ ಬಂದಿರುವ ಹ್ಯುಂಡೈ ಕ್ರೆಟಾ ಬಿಡುಗಡೆಗೂ ಮುನ್ನವೇ 10,000ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಗಿಟ್ಟಿಸಿಕೊಂಡಿರುವುದು ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ. ಹಾಗಿದ್ದರೂ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಬೇಕಾಗಿರುವುದು ಬಹಳ ನಿರ್ಣಾಯಕವೆನಿಸಲಿದೆ. ಒಟ್ಟಾರೆಯಾಗಿ ನಿಮ್ಮ ಅಭಿಮತದ ಪ್ರಕಾರ ರೆನೊ ಡಸ್ಟರ್ ಹಾಗೂ ಹ್ಯುಂಡೈ ಕ್ರೆಟಾ ನಡುವೆ ಯಾವುದು ಶ್ರೇಷ್ಠ ಕಾರು? ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಮೂಲ್ಯ ಅಭಿಪ್ರಾಯಗಳನ್ನು ತಿಳಿಸಿರಿ.

            ಕಾರು ಹೋಲಿಕೆ: ಇವನ್ನೂ ಓದಿ

            ಜಾಝ್ vs ಎಲೈಟ್ ಐ20: ಪ್ರೀಮಿಯಂ ಹ್ಯಾಚ್ ಗಳ ಮಹಾಸಮರ


Most Read Articles

Kannada
English summary
So, can the South Korean carmaker knock down the best seller by the French carmaker? Or is the Duster just going to kick dust on the new Creta? Let's find out!
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X