ಆಪ್ ರೋಡಿಂಗ್‌ ಕಸರತ್ತು ಪ್ರದರ್ಶಿಸಿದ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

Written By:

ಆಪ್ ರೋಡಿಂಗ್ ಪ್ರಿಯರಿಗಾಗಿಯೇ ಸಿದ್ಧಗೊಂಡಿರುವ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋಟ್ಸ್ ಕಾರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಸಿದ ಸಾಹಸ ಪ್ರದರ್ಶನ ಸಂಪೂರ್ಣ ಮಾಹಿತಿ ಇಲ್ಲಿದೆ.

ಐಷಾರಾಮಿ ಎಸ್‌ಯುವಿ ಮಾದರಿಗಳಲ್ಲಿ ಅಗ್ರಸ್ಥಾನದಲ್ಲಿರುವ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಇತ್ತೀಚೆಗೆ ಬೆಂಗಳೂರಿನಲ್ಲಿ ಆಪ್ ರೋಡಿಂಗ್ ಕೌಶಲ್ಯಗಳನ್ನು ಪ್ರದರ್ಶನ ಮಾಡಿದ್ದು, ನೋಡುಗರಿಗೆ ರೋಮಾಂಚನ ಉಂಟುಮಾಡಿತು.

ಆಪ್ ರೋಡಿಂಗ್‌ಗಾಗಿಯೇ ವಿಶೇಷ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರುವ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು, ಕಡಿದಾದ ತಗ್ಗುಪ್ರದೇಶಗಳಲ್ಲೂ ಸುಲಭವಾಗಿ ನುಗ್ಗುವ ಮೂಲಕ ಯಶಸ್ವಿ ಪ್ರದರ್ಶನ ನೀಡಿತು.

2.0- ಲೀಟರ್ ಟರ್ಬೋ ಚಾರ್ಜ್ಡ ಡಿಸೇಲ್ ಎಂಜಿನ್ ಹೊಂದಿರುವ ಡಿಸ್ಕವರಿ ಸ್ಪೋರ್ಟ್, 177 ಬಿಎಚ್‌ಪಿ ಹಾಗೂ 430 ಎಂಎನ್ ಟಾರ್ಕ್ ಉತ್ಪಾದನಾ ಶಕ್ತಿ ಹೊಂದಿದೆ.

ಡಿಸ್ಕವರಿ ಸ್ಪೋಟ್ಸ್ ಮತ್ತೊಂದು ವಿಶೇಷವೆಂದರೇ 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಹೊಂದಿದ್ದು, ಜಾಗತಿಕ ಗುಣಮಟ್ಟದ ಹೆಚ್‌ಡಿಸಿ ತಂತ್ರಜ್ಞಾನ ಪಡೆದುಕೊಂಡಿದೆ.

ಅತ್ಯುತ್ತಮ 212ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಕೂಡಾ ಹೊಂದಿರುವ ಡಿಸ್ಕವರಿ ಸ್ಪೋರ್ಟ್, ತಗ್ಗು ದಿಣ್ಣೆಗಳಲ್ಲೂ ಸರಾಗವಾಗಿ ಮುನ್ನುಗ್ಗಬಲ್ಲ ಪರಾಕ್ರಮಿ ಬಲ ಹೊಂದಿದೆ.

ಕೇವಲ ತಗ್ಗುದಿಣ್ಣೆಗಳಲ್ಲಿ ಅಷ್ಟೇ ಅಲ್ಲದೇ ಆಳತ್ತೆರದ ನೀರಿನಲ್ಲೂ ಯಾವುದೇ ಅಡೆತಡೆಯಿಲ್ಲದೇ ಸಾಗುವ ಕೌಶಲ್ಯವನ್ನು ಡಿಸ್ಕವರಿ ಸ್ಪೋರ್ಟ್ ಪಡೆದುಕೊಂಡಿದೆ.

ಬೆಲೆಗಳು

ರೂ. 58.17 ಲಕ್ಷ (ಬೆಂಗಳೂರು ಎಕ್ಸ್‌ಶೋರಂ ಪ್ರಕಾರ)

ಡಿಸ್ಕವರಿ ಸ್ಟೋರ್ಟ್ ಬಗೆಗೆ ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ವಿಶೇಷವಾಗಿ ಆಪ್ ರೋಡಿಂಗ್‌ಗಾಗಿಯೇ ಸಿದ್ಧಗೊಂಡಿರುವ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ ಕಾರು ಖರೀದಿಗೆ ಅತ್ಯುತ್ತಮ ಮಾದರಿಯಾಗಿದ್ದು, ಐಷಾರಾಮಿ ಎಸ್‌ಯುವಿ ಆಯ್ಕೆ ಮಾಡುವರಿಗೆ ಇದು ಉತ್ತಮ ಎನ್ನಬಹುದು.

Story first published: Saturday, June 10, 2017, 18:59 [IST]
English summary
Read in Kannada about land rover discovery sport off-road capabilities explored.
Please Wait while comments are loading...

Latest Photos