ಭಾರತಕ್ಕೆ ಎಂಟ್ರಿ ಕೊಟ್ಟ ಟೊಯೊಟಾ ಲಗ್ಷುರಿ ಕಾರು ಬ್ರಾಂಡ್ ಲೆಕ್ಸಸ್ ವಿನೂತನ ಆರ್‌ಎಕ್ಸ್ 450ಹೆಚ್

Written By:

ಜಪಾನ್ ಮೂಲದ ಪ್ರತಿಷ್ಠಿತ ಟೊಯೊಟಾ ಸಂಸ್ಥೆಯ ಐಷಾರಾಮಿ ಕಾರು ಬ್ರಾಂಡ್ ಆಗಿರುವ ಲೆಕ್ಸಸ್ ತನ್ನ ಬಹುನಿರೀಕ್ಷಿತ ಆರ್‌ಎಕ್ಸ್ 450ಹೆಚ್ ಬಿಡುಗಡೆಗೊಳಿಸಿದ್ದು, ಈ ಮೂಲಕ ಐಷಾರಾಮಿ ಕಾರು ವಿಭಾಗದಲ್ಲಿ ಮತ್ತಷ್ಟು ಪೈಪೋಟಿ ಹೆಚ್ಚಿಸಿದೆ.

ಈ ಹಿಂದೆಯೇ ಭಾರತೀಯ ಮಾರುಕಟ್ಟೆಯಲ್ಲಿ ಆರ್‌ಎಕ್ಸ್ 450ಹೆಚ್ ಬಿಡುಗಡೆಯಾಗುವ ಬಗ್ಗೆ ಸುಳಿವು ನೀಡಿದ್ದ ಲೆಕ್ಸಸ್, ಭಾರತೀಯ ಗ್ರಾಹಕರ ಬೇಡಿಕೆ ಅನುಗುಣವಾಗಿ ಹೊಸ ಮಾದರಿಯನ್ನು ಅಭಿವೃದ್ಧಿಗೊಳಿಸಿದೆ.

ಮೊಟ್ಟ ಮೊದಲ ಬಾರಿಗೆ 1996ರಲ್ಲಿ ಉತ್ಪಾದನೆಗೊಂಡಿದ್ದ ಲೆಕ್ಸಸ್ ಬ್ರಾಂಡ್, 2010ರಲ್ಲಿ ಆರ್‌ಎಕ್ಸ್ 450ಹೆಚ್ ಬಿಡುಗಡೆ ಮಾಡಿತ್ತು. ಈ ಮೂಲಕ ಐಷಾರಾಮಿ ಎಸ್‌ಯುವಿ ಮಾದರಿಗಳಲ್ಲಿ ಮುಂಚೂಣಿಯಲ್ಲಿತ್ತು.

ಸದ್ಯ ಹ್ರೈಬ್ರಿಡ್ ಮಾದರಿಯಲ್ಲಿ ಸಿದ್ಧಗೊಂಡಿರುವ ಲೆಕ್ಸಸ್ ಆರ್‌ಎಕ್ಸ್ 450ಹೆಚ್ ಎಸ್‌ಯುವಿ, ಪ್ರಮುಖ ಎಸ್‌ಯುವಿ ಐಷಾರಾಮಿ ಕಾರು ಆವೃತ್ತಿಗೆ ಸ್ಪರ್ಧೆ ಒಡ್ಡಲು ಸಿದ್ದಗೊಂಡಿದೆ.

ಆರ್‌ಎಕ್ಸ್ 450ಹೆಚ್ ಕಾರಿನ ಹೊರ ಮತ್ತು ಒಳ ವಿನ್ಯಾಸವನ್ನು ವಿಶೇಷವಾಗಿ ಅಭಿವೃದ್ಧಿಗೊಳಿಸಲಾಗಿದ್ದು, ಕಾರಿನ ಮುಂಭಾಗದ ವಿನ್ಯಾಸ ಐಷಾರಾಮಿ ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿದೆ.

ಎಂಜಿನ್ ಸಾಮರ್ಥ್ಯ

ಲೆಕ್ಸಸ್ ವಿನೂತನ ಆರ್‌ಎಕ್ಸ್ 450ಹೆಚ್ 3.5-ಲೀಟರ್ ವಿ6 ಎಂಜಿನ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 308ಬಿಎಚ್‌ಪಿ ಮತ್ತು 335 ಎನ್ಎಂ ಉತ್ಪಾದಿಸುವ ಶಕ್ತಿ ಪಡೆದುಕೊಂಡಿದೆ.

ಇದಲ್ಲದೇ ಐಷಾರಾಮಿ ಪ್ರಯಾಣಕ್ಕೆ ಅನುಕೂಲವಾಗುವಂತೆ ವಿವಿಧ ಮೂಡಗಳಲ್ಲಿ ಕಾರು ಚಾಲನೆ ಮಾಡಬಹುದಾಗಿದ್ದು, ಇಕೋ, ನಾರ್ಮಲ್, ಸ್ಪೋರ್ಟ್ಸ್ ಮತ್ತು ಸ್ಪೋರ್ಟ್ಸ್ ಪ್ಲಸ್ ಮೂಡ್‌ಗಳಲ್ಲಿ ಚಾಲನೆ ಮಾಡಬಹುದಾಗಿದೆ.

ಹೈಬ್ರಿಡ್ ಎಂಜಿನ್ ಕೂಡಾ ಇದ್ದು ಪ್ರಯಾಣದ ಪ್ರಾರಂಭದಲ್ಲಿ ಎಲೆಕ್ಟ್ರಿಕ್ ಎಂಜಿನ್ ಸಹಾಯದೊಂದಿಗೆ ಮುನ್ನಡೆಯುವ ಲೆಕ್ಸಸ್, ತದನಂತರ ಪೆಟ್ರೋಲ್ ಎಂಜಿನ್ ಶಕ್ತಿಗೆ ಬದಲಾಯಿಸಿಕೊಳ್ಳಬಹುದಾಗಿದೆ.

ಕೇವಲ 7.7 ಸೇಕೆಂಡುಗಳಲ್ಲಿ 100 ಕಿಮಿ ವೇಗ ಪಡೆದುಕೊಳ್ಳುವ ಸಾಮರ್ಥ್ಯವಿದ್ದು, ಗರಿಷ್ಠವಾಗಿ 200 ಕಿ.ಮಿ/ಪ್ರತಿ ಗಂಟೆಗೆ ಪಡೆದುಕೊಳ್ಳುವ ಎಂಜಿನ್ ಸಾಮರ್ಥ್ಯ ಲೆಕ್ಸಸ್ ಆರ್‌ಎಕ್ಸ್ 450ಹೆಚ್ ಹೊಂದಿದೆ.

ಬೆಲೆ (ದೆಹಲಿ ಎಕ್ಸ್‌ಶೋರಂ ಪ್ರಕಾರ)

ಲೆಕ್ಸಸ್ ಆರ್‌ಎಕ್ಸ್ 450ಹೆಚ್- ರೂ. 1.07 ಕೋಟಿ

ಲೆಕ್ಸಸ್ ಬಗ್ಗೆ ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಐಷಾರಾಮಿ ಎಸ್‌ಯುವಿ ಮಾದರಿಗಳಲ್ಲಿ ಲೆಕ್ಸಸ್ ಆರ್‌ಎಕ್ಸ್ 450ಹೆಚ್ ಅತ್ಯುತ್ತಮ ಕಾರು ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ಜಾಗ್ವಾರ್ ಎಂ ಫೇಸ್, ಫೋರ್ಷೇ ಮೆಕ್ಲನ್, ಬಿಎಂಡಬ್ಲ್ಯ ಎಕ್ಸ್6 ಕಾರುಗಳಿಗೆ ನೇರ ಪ್ರತಿಸ್ಪರ್ಧಿಯಾಗುವ ನೀರಿಕ್ಷೆಯಲ್ಲಿದೆ.

Story first published: Thursday, June 1, 2017, 15:55 [IST]
English summary
Read in Kannada about First Drive experience with Lexus RX 450h.
Please Wait while comments are loading...

Latest Photos