ಮಹೀಂದ್ರ ಕೆಯುವಿ100; ಅನುಕೂಲ ಮತ್ತು ಅನಾನುಕೂಲತೆಗಳು

By Nagaraja

ಭಾರತದ ಮುಂಚೂಣಿಯ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ವರ್ಷಾರಂಭದಲ್ಲಷ್ಟೇ ಅತಿ ನೂತನ ಕೆಯುವಿ100 ಕಾರನ್ನು ಬಿಡುಗಡುಗೊಳಿಸಿತ್ತು. ಆಕ್ರಮಣಕಾರಿ ವಿನ್ಯಾಸ, ಎಸ್‌ಯುವಿ ಶೈಲಿ ಮೈಗೂಡಿಸಿ ಬಂದಿರುವ ಮಹೀಂದ್ರ ಕೆಯುವಿ100 ಕಾರನ್ನು ಸಂಸ್ಥೆಯ ಚೆನ್ನೈನ ಸಂಶೋಧನಾ ಘಟಕದಲ್ಲಿ ಅಭಿವೃದ್ಧಿಪಡಿಸಲಾಗಿದೆ.

Also Read: ಮಹೀಂದ್ರ ಕೆಯುವಿ100 - ನೀವು ತಿಳಿದುಕೊಳ್ಳಬೇಕಾದ ಅಂಶಗಳು

ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಗುರಿ ಮಾಡುತ್ತಿರುವ ಮಹೀಂದ್ರ ಕೆಯುವಿ100 ವಿಶ್ವದರ್ಜೆಯ ಫಾಲ್ಕನ್ ಎಂಜಿನ್ ಬಳಕೆ ಮಾಡಲಾಗಿದ್ದು, ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಮಾರುತಿ ಸುಜುಕಿಯ ಜನಪ್ರಿಯ ಸ್ವಿಫ್ಟ್ ಕಾರಿಗೆ ಪೈಪೋಟಿ ಒಡ್ಡಲಿದೆ.

ಹಿನ್ನಡೆ - ವಿನ್ಯಾಸ

ಹಿನ್ನಡೆ - ವಿನ್ಯಾಸ

ಮುಂಭಾಗದಿಂದ ನೋಡಿದಾಗ ಅತ್ಯುತ್ತಮ ಎನಿಸಿದರೂ ಬದಿಯಲ್ಲಿ ಪರಿಣಾಮಕಾರಿ ಎನಿಸಿಕೊಂಡಿಲ್ಲ. ಇನ್ನು ಹಿಂಭಾಗದ ಬಂಪರ್ ಒತ್ತಿದಂತಿರುವುದರಿಂದ ಅವಘಡ ಸಂದರ್ಭಗಳು ಎದುರಾದ್ದಲ್ಲಿ ಗಾಯಗಳಾಗುವ ಸಾಧ್ಯತೆಗಳು ಹೆಚ್ಚಿವೆ.

ಹಿನ್ನಡೆ - ವಿನ್ಯಾಸ

ಹಿನ್ನಡೆ - ವಿನ್ಯಾಸ

ಮಹೀಂದ್ರ ಕ್ರೀಡಾ ಬಳಕೆಯ ವಾಹನಗಳಿಗೆ ಹೋಲಿಸಿದಾಗ ಚಕ್ರಗಳು ಚಿಕ್ಕದಾಗಿದೆ. ಇನ್ನು ಬೊನೆಟ್ ಮತ್ತು ಟೈಲ್ ಗೇಟ್ ಬಳಿಯಿರುವ ಸ್ವಭಾವ ರೇಖೆಗಳು ಹೆಚ್ಚಿನ ಅಂತರವನ್ನು ಕಾಪಾಡಿಕೊಂಡಿದ್ದು, ಪ್ರಭಾವಶಾಲಿ ಎನಿಸಿಕೊಂಡಿಲ್ಲ.

ಹಿನ್ನಡೆ - ವಿನ್ಯಾಸ

ಹಿನ್ನಡೆ - ವಿನ್ಯಾಸ

ವಿಶ್ಲೇಷಕರ ಪ್ರಕಾರ ನಾಯ್ಸ್, ವೈಬ್ರೇಷನ್ ಮತ್ತು ಹಾರ್ಶ್ ನೆಶ್ ಮಟ್ಟ ಕೊಂಚ ಜಾಸ್ತಿಯಾಗಿದ್ದು, ಹಿನ್ನಡೆಗೆ ಕಾರಣವಾಗಿದೆ.

ಹಿನ್ನಡೆ - ವಿನ್ಯಾಸ

ಹಿನ್ನಡೆ - ವಿನ್ಯಾಸ

ರೂಫ್ ಲೈನ್ ಗಳು ಗಟ್ಟಿಯಾಗಿ ಬಂಧಿಸಿದಂತೆ ಭಾಸವಾಗುತ್ತಿಲ್ಲ. ಕೆಲವೇ ಸಮಯಗಳಲ್ಲಿ ಇದು ತೆರವುಗೊಳ್ಳುವ ಭೀತಿಯೂ ಇದೆ.

ಹಿನ್ನಡೆ - ವಿನ್ಯಾಸ

ಹಿನ್ನಡೆ - ವಿನ್ಯಾಸ

ಅಂತೆಯೇ ಮುಂಭಾಗ ಹಾಗೂ ಹಿಂಭಾಗದ ವೈಪರ್ ಗಳು ಹಳೆಯದಂತಿದ್ದು, ಆಧುನಿಕ ಸ್ಪರ್ಶತೆಯನ್ನು ಕಾಪಾಡಿಕೊಳ್ಳಲು ವಿಫಲವಾಗಿದೆ.

ಹಿನ್ನಡೆ - ಒಳಮೈ

ಹಿನ್ನಡೆ - ಒಳಮೈ

ಆಂತರಿಕ ಭಾಗಗಳಲ್ಲಿ ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಆರು ಮಂದಿ ಪ್ರಾಪ್ತ ವಯಸ್ಕರಿಗೆ ಕುಳಿತುಕೊಳ್ಳಲು ಕಷ್ಟಕರವಾಗಲಿದೆ. ಅಲ್ಲದೆ ಮಕ್ಕಳನ್ನು ಫ್ರಂಟ್ ಸೀಟಿನಲ್ಲಿ ಕುಳ್ಳಿರಿಸುವುದು ಭದ್ರತೆಯ ದೃಷ್ಟಿಕೋನದಲ್ಲಿ ಅಷ್ಟು ಹಿತಕರವಲ್ಲ.

ಹಿನ್ನಡೆ - ನಿರ್ವಹಣೆ

ಹಿನ್ನಡೆ - ನಿರ್ವಹಣೆ

ನಗರ ಪ್ರದೇಶದ ಚಾಲನೆಗೆ ಮಹೀಂದ್ರ ಕೆಯುವಿ100 ಯೋಗ್ಯವೆನಿಸಿದರೂ ದೂರ ಪ್ರಯಾಣದ ವೇಳೆ ನಿರ್ವಹಣಾ ಕೊರತೆ ಎದುರಿಸಲಿದೆ.

 ಹಿನ್ನಡೆ - ಟರ್ನಿಂಗ್ ರೇಡಿಯಸ್

ಹಿನ್ನಡೆ - ಟರ್ನಿಂಗ್ ರೇಡಿಯಸ್

ತನ್ನ ಪ್ರತಿಸ್ಪರ್ಧಿಯಾದ ಮಾರುತಿ ಸ್ವಿಫ್ಟ್ ಕಾರಿಗೆ ಹೋಲಿಸಿದಾಗ ಮಹೀಂದ್ರ ಕೆಯುವಿ100ಗೆ ಉದ್ದವಾದ ಟರ್ನಿಂಗ್ ರೇಡಿಯಸ್ ಜಾಸ್ತಿಯಾಗಿದೆ.

ಹಿನ್ನಡೆ - ರಿವರ್ಸ್

ಹಿನ್ನಡೆ - ರಿವರ್ಸ್

ಸಿ ಪಿಲ್ಲರ್ ನಿಂದಾಗಿ ಕಾರನ್ನು ರಿವರ್ಸ್ ಮಾಡುವಾಗ ಕೊಂಚ ಮಟ್ಟಿನಲ್ಲಿ ಗೋಚರತೆಯ ಅಭಾವ ಎದುರಾಗಲಿದೆ. ಇಲ್ಲಿ ರಿಯರ್ ಪಾರ್ಕಿಂಗ್ ಸೆನ್ಸಾರ್ ಮತ್ತು ಕ್ಯಾಮೆರಾಗಳ ಆಳವಡಿಕೆ ಅವಶ್ಯಕವೆನಿಸಿದೆ.

ಹಿನ್ನಡೆ - ಇಂಧನ ಟ್ಯಾಂಕ್

ಹಿನ್ನಡೆ - ಇಂಧನ ಟ್ಯಾಂಕ್

ಇಲ್ಲೂ ತನ್ನ ಪ್ರತಿಸ್ಪರ್ಧಿ ಮಾರುತಿ ಸ್ವಿಫ್ಟ್ ಗೆ ಹೋಲಿಸಿದಾಗ (42 ಲೀಟರ್) ಮಹೀಂದ್ರ ಕೆಯುವಿ100, 35 ಲೀಟರ್ ಗಳಷ್ಟೇ ಇಂಧನ ಟ್ಯಾಂಕ್ ಹೊಂದಿರುತ್ತದೆ. ಮಗದೊಂದು ಪ್ರತಿಸ್ಪರ್ಧಿ ಹ್ಯುಂಡೈ ಗ್ರಾಂಡ್ ಐ10 ಕಾರಿನಲ್ಲಿ 43 ಲೀಟರ್ ಗಳ ಇಂಧನ ಟ್ಯಾಂಕ್ ವ್ಯವಸ್ಥೆಯಿದೆ.

ಮುನ್ನಡೆ - ವಿನ್ಯಾಸ

ಮುನ್ನಡೆ - ವಿನ್ಯಾಸ

ಹಿನ್ನಡೆಗಳನ್ನು ಹೋಲಿಸಿದಾಗ ಮಹೀಂದ್ರ ಕೆಯುವಿ100 ಅತಿ ಹೆಚ್ಚು ಅನುಕೂಲತೆಗಳನ್ನು ಹೊಂದಿದೆ. ಅವುಗಳನ್ನೊಮ್ಮೆ ನೋಡೋಣವೇ...

ಮುನ್ನಡೆ - ವಿನ್ಯಾಸ

ಮುನ್ನಡೆ - ವಿನ್ಯಾಸ

ಇದೇ ಮೊದಲ ಬಾರಿಗೆ ಶೈಲಿಯ ಯುವ ಎಸ್‌ಯುವಿ ಅತಿ ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿದ್ದು, ಡೇಟೈಮ್ ರನ್ನಿಂಗ್ ಲೈಟ್ಸ್ ಆಕರ್ಷಕವೆನಿಸುತ್ತಿದೆ.

ಮುನ್ನಡೆ - ವಿನ್ಯಾಸ

ಮುನ್ನಡೆ - ವಿನ್ಯಾಸ

ಫಾಲೋ ಮಿ ಹೆಡ್ ಲ್ಯಾಂಪ್ ಕಾರನ್ನು ಲಾಕ್ ಅಥವಾ ಅನ್ ಲಾಕ್ ಮಾಡಿದಾಗಲೂ ತನ್ನ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತದೆ. ಒಟ್ಟಿನಲ್ಲಿ ಮಿನಿ ಎಸ್‌ಯುವಿ ಎಂಬುದಕ್ಕೆ ತಕ್ಕುದಾಗಿ ದೃಢವಾದ ನಿಲುವನ್ನು ಪಡೆದಿದೆ.

ಮುನ್ನಡೆ - ಒಳಮೈ

ಮುನ್ನಡೆ - ಒಳಮೈ

ಮಾಹಿತಿದಾಯಕ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಅಚ್ಚುಕಟ್ಟಾದ ಆಡಿಯೋ ನಿಯಂತ್ರಣ, ಸ್ಟೀರಿಂಗ್ ವೀಲ್ ಮುಂತಾದ ವ್ಯವಸ್ಥೆಗಳು ಮೆಚ್ಚುಗೆಗೆ ಪಾತ್ರವಾಗಿದೆ.

ಮುನ್ನಡೆ - ಗೇರ್ ಬಾಕ್ಸ್

ಮುನ್ನಡೆ - ಗೇರ್ ಬಾಕ್ಸ್

ಸಾಂಪ್ರದಾಯಿಕ ಶೈಲಿಯ ವಿರುದ್ಧವಾಗಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನಲ್ಲೇ ಲಗತ್ತಿಸಲಾಗಿರುವ ಗೇರ್ ಲಿವರ್ ಮಹೀಂದ್ರ ಎಂಜಿನಿಯರ್ ಶ್ರೇಷ್ಠತೆಗೆ ಸಾಕ್ಷಿಯಾಗಿದೆ. ಈ ಮೂಲಕ ಆರು ಮುಂದಿಗೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿಕೊಡಲಾಗಿದೆ.

ಮುನ್ನಡೆ - ಸ್ಟೋರೆಜ್

ಮುನ್ನಡೆ - ಸ್ಟೋರೆಜ್

ಚಾಲಕ ಮತ್ತು ಪ್ರಯಾಣಿಕ ಸೀಟಿನ ಕೆಳಭಾಗದಲ್ಲಿ 10 ಕೆ.ಜಿ ಭಾರವನ್ನಿಡಬಹುದಾದ ಸ್ಟೋರೆಜ್ ಜಾಗ ಕೊಡಲಾಗಿದೆ. ಇದರ ಹೊರತಾಗಿ ಹಿಂಭಾಗದಲ್ಲಿ ಜಾಗ ಮಾಡಿಕೊಡಲಾಗಿದೆ.

ಮುನ್ನಡೆ - ಬೆಳಕು

ಮುನ್ನಡೆ - ಬೆಳಕು

ಎಲ್ಲ ನಾಲ್ಕು ಡೋರ್ ಗಳಲ್ಲೂ ವಿಶಿಷ್ಟ ಬೆಳಕಿನ ಸೇವೆಯಿದ್ದು, ಸುಲಭವಾಗಿ ನಿರ್ವಹಿಸಬಹುದಾಗಿದೆ.

ಮುನ್ನಡೆ - ನಿರ್ವಹಣೆ

ಮುನ್ನಡೆ - ನಿರ್ವಹಣೆ

ಇಕೊ ಮತ್ತು ಪವರ್ ಮೋಡ್ ಚಾಲನಾ ಶೈಲಿಗಳಲ್ಲಿ ಲಭ್ಯವಿರುವ ಮಹೀಂದ್ರ ಕೆಯುವಿ100 ಅತ್ಯುತ್ತಮ ನಿರ್ವಹಣೆಯನ್ನು ಕಾಪಾಡಿಕೊಂಡಿದೆ.

ಮುನ್ನಡೆ ಫಸ್ಟ್ ಇನ್ ಕ್ಲಾಸ್

ಮುನ್ನಡೆ ಫಸ್ಟ್ ಇನ್ ಕ್ಲಾಸ್

  • ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ,
  • ಡೀಸೆಲ್ ನಿಯಂತ್ರಿತ ಇಕೊ ಮೋಡ್,
  • ಡೀಸೆಲ್ ಮೈಲೇಜ್ 25.32 ಕೀ.ಮೀ.
  • ಡೇಟೈಮ್ ರನ್ನಿಂಗ್ ಲ್ಯಾಂಪ್ಸ್,
  • ಅತಿ ನೂತನ ಎಂಜಿನ್

    ಅತಿ ನೂತನ ಎಂಜಿನ್

    • ಡೀಸೆಲ್: mFALCON, D75
    • ಎಂಜಿನ್ ಸಾಮರ್ಥ್ಯ: 1198 ಸಿಸಿ
    • ಗರಿಷ್ಠ ಪವರ್: 77(57)@3750 (bhp(kW)@rpm)
    • ತಿರುಗುಬಲ: 190@1750-2250 Nm@rpm
    • ಅತಿ ನೂತನ ಎಂಜಿನ್

      ಅತಿ ನೂತನ ಎಂಜಿನ್

      • ಪೆಟ್ರೋಲ್: mFALCON, G80
      • ಎಂಜಿನ್ ಸಾಮರ್ಥ್ಯ: 1198 ಸಿಸಿ
      • ಗರಿಷ್ಠ ಪವರ್: 82(61)@5500 bhp(kW)@rpm
      • ತಿರುಗುಬಲ: 115@3500-3600 Nm@rpm
      •  ಅಂತಿಮ ತೀರ್ಪು

        ಅಂತಿಮ ತೀರ್ಪು

        ಒಟ್ಟಿನಲ್ಲಿ ಬೆಲೆಗೆ ತಕ್ಕ ಮೌಲ್ಯ ನೀಡುತ್ತಿರುವ ಮಹೀಂದ್ರ ಕೆಯುವಿ100 ಕಾರಿಗೆ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೇಡಿಕೆ ದಾಖಲಾಗುತ್ತಿದೆ. ಹಾಗಿದ್ದರೂ ಕಳೆದ ಕೆಲವಾರು ವರ್ಷಗಳಿಂದ ಅತಿ ಹೆಚ್ಚು ಜನಪ್ರಿಯತೆ ಕಾಪಾಡಿಕೊಳ್ಳುವ ಮೂಲಕ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರೆಂಬ ಪಟ್ಟ ಕಟ್ಟಿಕೊಂಡಿರುವ ಮಾರುತಿ ಸುಜುಕಿ ಸ್ವಿಫ್ಟ್ ಮೇಲುಗೈಯನ್ನು ಹಿಮ್ಮೆಟ್ಟಿಸುವುದು ಅಷ್ಟು ಸುಲಭದ ವಿಚಾರವಲ್ಲ.

        ಇವನ್ನೂ ಓದಿ

        ಮಹೀಂದ್ರ ಕೆಯುವಿ100; ಎಂಜಿನ್, ಮೈಲೇಜ್ ಮತ್ತಷ್ಟು

        ಸಂಕ್ರಾಂತಿ ಕೊಡುಗೆ; ಮಹೀಂದ್ರ ಕೆಯುವಿ100 ಭರ್ಜರಿ ಬಿಡುಗಡೆ

Most Read Articles

Kannada
English summary
A Quick Overview Of The Pros & Cons: Mahindra KUV100
Story first published: Monday, March 21, 2016, 17:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X