ಮಾರುತಿ ಎಸ್ ಕ್ರಾಸ್ Vs ಹ್ಯುಂಡೈ ಕ್ರೆಟಾ: ಜಿದ್ದಾಜಿದ್ದಿನ ಹೋರಾಟ

By Nagaraja

ದೇಶದ ಎರಡು ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು ನಿಧಾನವಾಗಿ ಸಣ್ಣ ಕಾರುಗಳ ವಿಭಾಗದಿಂದ ಹೆಚ್ಚು ಸೌಲಭ್ಯಗಳ್ಳುಳ ಪ್ರೀಮಿಯಂ ವಿಭಾಗದತ್ತವೂ ತನ್ನ ಚಿತ್ತ ಹಾಯಿಸಿದೆ. ಇದರಂತೆ ಭಾರತ ವಾಹನ ಮಾರುಕಟ್ಟೆಗೆ ಮಾರುತಿ ಸುಜುಕಿ ಎಸ್-ಕ್ರಾಸ್ ಮತ್ತು ಹ್ಯುಂಡೈ ಕ್ರೆಟಾಗಳೆಂಬ ಎರಡು ಆಕರ್ಷಕ ಕಾರುಗಳ ಪ್ರವೇಶವಾಗಿದೆ.

Also Read: ಫಿಗೊ ಆಸ್ಪೈರ್ vs ಸ್ವಿಫ್ಟ್ ಡಿಜೈರ್

ದೇಶದ ಪ್ರಯಾಣಿಕ ಕಾರು ವಿಭಾಗದಲ್ಲಿ ಅಗ್ರ ಎರಡು ಸ್ಥಾನಗಳನ್ನು ಹಂಚಿಕೊಂಡಿರುವ ಮಾರುತಿ ಹಾಗೂ ಹ್ಯುಂಡೈ ಪ್ರೀಮಿಯಂ ವಿಭಾಗಕ್ಕೆ ಎಂಟ್ರಿ ಕೊಡುವುದರೊಂದಿಗೆ ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಸಿದ್ಧಗೊಂಡಿದೆ. ಅಲ್ಲದೆ ಈಗಾಗಲೇ ಮಾರುಕಟ್ಟೆಯಲ್ಲಿರುವ ರೆನೊ ಡಸ್ಟರ್, ಫೋರ್ಡ್ ಇಕೊಸ್ಪೋರ್ಟ್, ನಿಸ್ಸಾನ್ ಟೆರನೊ ಮುಂತಾದ ಮಾದರಿಗಳಲ್ಲೂ ಮೈಚಳಿ ಆರಂಭಿಸಿದೆ.

Also Read: ಕ್ರೆಟಾ vs ಡಸ್ಟರ್

ಈಗ ಬಹುನಿರೀಕ್ಷಿತ ಮಾರುತಿ ಸುಜುಕಿ ಎಸ್-ಕ್ರಾಸ್ ಮತ್ತು ಹ್ಯುಂಡೈ ಕ್ರೆಟಾ ಕಾರುಗಳ ನಡುವಣ ಒಂದು ಸರಳ ಹೋಲಿಕೆ ಮಾಡುವ ಪ್ರಯತ್ನ ಮಾಡಲಾಗುವುದು. ಇದಕ್ಕಾಗಿ ಚಿತ್ರ ಪುಟದತ್ತ ಮುಂದುವರಿಯಿರಿ...

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ

  • ಮಾರುತಿ ಸುಜುಕಿ ಎಸ್-ಕ್ರಾಸ್: ಪ್ರಾರಂಭಿಕ ಬೆಲೆ 8.34 ಲಕ್ಷ ರು.ಗಳಿಂದ 13.74 ಲಕ್ಷ ರು.ಗಳ ವರೆಗೆ
  • ಹ್ಯುಂಡೈ ಕ್ರೆಟಾ: ಪ್ರಾರಂಭಿಕ ಬೆಲೆ 8.59 ಲಕ್ಷ ರು.ಗಳಿಂದ 13.60 ಲಕ್ಷ ರು.ಗಳ ವರೆಗೆ
  • ವಿನ್ಯಾಸ - ಎಸ್ ಕ್ರಾಸ್

    ವಿನ್ಯಾಸ - ಎಸ್ ಕ್ರಾಸ್

    ಹೊಚ್ಚ ಹೊಸ ಫ್ಲ್ಯಾಟ್‌ಫಾರ್ಮ್ ನಲ್ಲಿ ನೂತನ ಮಾರುತಿ ಸುಜುಕಿ ಎಸ್-ಕ್ರಾಸ್ ನಿರ್ಮಾಣ ಮಾಡಲಾಗಿದೆ. ಈ ಪ್ರೀಮಿಯಂ ಕಾರು ಮಾರುತಿ ಹೊಸತಾಗಿ ಆರಂಭಿಸಿರುವ ನೆಕ್ಸಾ ಎಕ್ಸ್ ಕ್ಲೂಸಿವ್ ಶೋ ರೂಂಗಳಲ್ಲಿ ಮಾತ್ರ ಮಾರಾಟಕ್ಕೆ ಲಭ್ಯವಾಗಲಿದೆ.

    ವಿನ್ಯಾಸ- ಹ್ಯುಂಡೈ ಕ್ರೆಟಾ

    ವಿನ್ಯಾಸ- ಹ್ಯುಂಡೈ ಕ್ರೆಟಾ

    ಹ್ಯುಂಡೈನ ಮುಂದಿನ ತಲೆಮಾರಿನ ಫ್ಲೂಯಿಡಿಕ್ ವಿನ್ಯಾಸ ರಚನೆಯನ್ನು (FS2.0)ಆಧಾರವಾಗಿಟ್ಟುಕೊಂಡು ಕ್ರೆಟಾ ವಿನ್ಯಾಸ ರಚಿಸಲಾಗಿದೆ. ಎಲ್ಲ ಹಂತದಲ್ಲೂ ಹ್ಯುಂಡೈ ಕ್ರೆಟಾ ಆಕರ್ಷಕ ರೂಪವನ್ನು ಮೈಗೂಡಿಸಿ ಬಂದಿದೆ.

     ವೈಶಿಷ್ಟ್ಯಗಳು - ಎಸ್ ಕ್ರಾಸ್

    ವೈಶಿಷ್ಟ್ಯಗಳು - ಎಸ್ ಕ್ರಾಸ್

    ಕ್ರೂಸ್ ಕಂಟ್ರೋಲ್, ರೈನ್ ಸೆನ್ಸಿಂಗ್ ವೈಪರ್, ಹೈ ಇಂಟೆನ್ಸಿಟಿ ಡಿಸಾರ್ಜ್, ಹೆಡ್ ಲ್ಯಾಂಪ್ ಜೊತೆ ಆಟೋ ಫಂಕ್ಷನ್, ಸ್ಮಾರ್ಟ್ ಪ್ಲೇ ಇನ್ಮೋಟೈನ್ಮೆಂಟ್ ಸಿಸ್ಟಂ ಜೊತೆ ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಪುಶ್ ಬಟನ್ ಸ್ಟ್ಯಾರ್ಟ್/ಸ್ಟಾಪ್ ಆಯ್ಕೆಗಳು ಹೊಸ ಮಾರುತಿ ಎಸ್-ಕ್ರಾಸ್ ಕಾರನ್ನು ವಿಭಿನ್ನವಾಗಿಸಲಿದೆ.

     ವೈಶಿಷ್ಟ್ಯಗಳು - ಹ್ಯುಂಡೈ ಕ್ರೆಟಾ

    ವೈಶಿಷ್ಟ್ಯಗಳು - ಹ್ಯುಂಡೈ ಕ್ರೆಟಾ

    ಇತ್ತ ಕಡೆ ಹ್ಯುಂಡೈ ಕ್ರೆಟಾದಲ್ಲೂ ಗಮನಾರ್ಹ ವೈಶಿಷ್ಟ್ಯಗಳನ್ನು ಕಾಣಬಹುದಾಗಿದ್ದು, ಆಡಿಯೋ ವಿಡಿಯೋ ನೇವಿಗೇಷನ್ ಸಿಸ್ಟಂ (ಎವಿಎನ್), 5 ಇಂಚುಗಳ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ, ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟ್ಯಾರ್ಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, 17 ಇಂಚುಗಳ ಡೈಮಂಡ್ ಕಟ್ ಅಲಾಯ್ ವೀಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಮತ್ತು ಎಲ್ ಇಡಿ ಸ್ಥಾನ ನಿರ್ಣಯ ಲ್ಯಾಂಪ್ ಗಳ ಸೌಲಭ್ಯಗಳಿರಲಿದೆ.

    ಎಂಜಿನ್ ತಾಂತ್ರಿಕತೆ: ಎಸ್ ಕ್ರಾಸ್

    ಎಂಜಿನ್ ತಾಂತ್ರಿಕತೆ: ಎಸ್ ಕ್ರಾಸ್

    ಎರಡು ಡೀಸೆಲ್ ಎಂಜಿನ್ ಗಳ ಆಯ್ಕೆಯೊಂದಿಗೆ ಮಾತ್ರ ಎಸ್ ಕ್ರಾಸ್ ಲಭ್ಯವಾಗಲಿದೆ. ಅವುಗಳೆಂದರೆ

    • 1.3 ಲೀಟರ್ ಡಿಡಿಐಎಸ್ (89 ಅಶ್ವಶಕ್ತಿ, 200 ಎನ್‌ಎಂ ತಿರುಗುಬಲ), 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್.
    • 1.6 ಲೀಟರ್ ಡಿಡಿಐಎಸ್ (118 ಅಶ್ವಶಕ್ತಿ, 320 ಎನ್‌ಎಂ ತಿರುಗುಬಲ), 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್.
    • ಎಂಜಿನ್ ತಾಂತ್ರಿಕತೆ: ಹ್ಯುಂಡೈ ಕ್ರೆಟಾ

      ಎಂಜಿನ್ ತಾಂತ್ರಿಕತೆ: ಹ್ಯುಂಡೈ ಕ್ರೆಟಾ

      ಇನ್ನೊಂದೆಡೆ ಮೂರು ಎಂಜಿನ್ ಗಳ ಆಯ್ಕೆಗಳು ಹ್ಯುಂಡೈ ಕ್ರೆಟಾದಲ್ಲಿ ಸಿಗಲಿದೆ.

      • 1.6 ಡ್ಯುಯಲ್ ವಿಟಿವಿಟಿ ಪೆಟ್ರೋಲ್ (123 ಅಶ್ವಶಕ್ತಿ),
      • 1.4 ಲೀಟರ್ ಡೀಸೆಲ್ (90 ಅಶ್ವಶಕ್ತಿ)
      • 1.6 ಲೀಟರ್ ಡೀಸೆಲ್ (128 ಅಶ್ವಶಕ್ತಿ)
      • ಗೇರ್ ಬಾಕ್ಸ್: ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸಹ ಲಭ್ಯ.

        ಮೈಲೇಜ್

        ಮೈಲೇಜ್

        ಎಸ್-ಕ್ರಾಸ್:

        • 1.3 ಲೀಟರ್: 23.65 kpl
        • 1.6 ಲೀಟರ್: 22.07 kpl
        • ಹ್ಯುಂಡೈ ಕ್ರೆಟಾ

          • 1.6 ಲೀಟರ್ ಡೀಸೆಲ್: 21 kpl
          • 1.4 ಲೀಟರ್ ಡೀಸೆಲ್: 20 kpl
          • ಪೆಟ್ರೋಲ್ ಎಂಜಿನ್: 15 kpl
          • ಸುರಕ್ಷತೆ

            ಸುರಕ್ಷತೆ

            ಎಸ್ ಕ್ರಾಸ್ ಕಾರಿನಲ್ಲಿ ಎಬಿಎಸ್ ಹಾಗೂ ಏರ್ ಬ್ಯಾಗ್ ಸೌಲಭ್ಯಗಳಿದ್ದರೆ ಹ್ಯುಂಡೈ ಕ್ರೆಟಾವು ಬದಿ, ಕರ್ಟೈನ್ ಏರ್ ಬ್ಯಾಗ್, ಎಬಿಎಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಮತ್ತು ವೆಹಿಕಲ್ ಸ್ಥಿರತೆ ನಿರ್ವಹಣಾ ಮುಂತಾದ ವೈಶಿಷ್ಟ್ಯಗಳನ್ನು ಒದಗಿಸುತ್ತಿದೆ.

            ಅಂತಿಮ ತೀರ್ಪು

            ಅಂತಿಮ ತೀರ್ಪು

            ಎರಡು ಮಾದರಿಗಳು ತನ್ನದೇ ಆದ ವೈಶಿಷ್ಟ್ಯಗಳೊಂದಿಗೆ ವಿಶಿಷ್ಟವೆನಿಸಿಕೊಂಡಿದೆ. ಒಂದೆಡೆ ತನ್ನನ್ನು ತಾನೇ ಕ್ರಾಸೋವರ್ ಎಂದು ಹೆಸರಿಸಿಕೊಂಡಿರುವ ಮಾರುತಿ ಎಸ್-ಕ್ರಾಸ್, ನಿಷ್ಠಾವಂತ ಗ್ರಾಹಕರನೆಚ್ಚಿನ ಆಯ್ಕೆಯಾಗಲಿದೆ. ಹಾಗೆಯೇ ಹ್ಯುಂಡೈ ಕ್ರೆಟಾ ವಿನ್ಯಾಸ, ನಿರ್ವಹಣೆ, ವೈಶಿಷ್ಟ್ಯ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಮಾರುತಿ ಬಹುನಿರೀಕ್ಷಿತ ಕಾರನ್ನು ಮೀರಿ ನಿಲ್ಲಲಿದೆ. ಈ ಹಂತದಲ್ಲಿ ಗ್ರಾಹಕರ ಬಯಕೆಗಳು ಹೆಚ್ಚು ಮಹತ್ವ ಗಿಟ್ಟಿಸಿಕೊಳ್ಳುತ್ತದೆ. ಅಲ್ಲದೆ ತಮ್ಮ ಬಜೆಟ್ ಗೆ ಅನುಗುಣವಾಗಿ ಅತ್ಯುತ್ತಮ ಕಾರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

            ಮತ್ತಷ್ಟು

            ಕಾರು ಹೋಲಿಕೆ ಪುಟಕ್ಕಾಗಿ ಭೇಟಿ ಕೊಡಿರಿ

Most Read Articles

Kannada
English summary
Let's take a detailed look at what these two vehicles have to offer and where your money fetches better value.
Story first published: Monday, August 17, 2015, 9:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X