ನ್ಯೂ ಫೋರ್ಡ್ ಫಿಗೊ Vs ಮಾರುತಿ ಸ್ವಿಫ್ಟ್

By Nagaraja

ನೂತನ ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಕಾರು ಬಿಡುಗಡೆಯಾದ ಬೆನ್ನಲ್ಲೇ ಎಲ್ಲ ಕಾರು ಪ್ರೇಮಿಗಳ ಮನದಲ್ಲಿ ಕಾಡುವ ಒಂದೇ ಒಂದು ಪ್ರಶ್ನೆ ಜನಪ್ರಿಯ ಮಾರುತಿ ಸ್ವಿಫ್ಟ್ ಹಿಂದಿಕ್ಕಲು ಹೊಸ ತಲೆಮಾರಿನ ಫೋರ್ಡ್ ಕಾರಿಗೆ ಸಾಧ್ಯವಾಗಬಹುದೇ? ಹೌದು, ಕಳೆದ ಕೆಲವು ವರ್ಷಗಳಿಂದ ಮಾರುಕಟ್ಟೆಯಲ್ಲಿ ಜನಪ್ರಿಯ ಕಾರೆಂಬ ಪಟ್ಟ ಕಟ್ಟಿಕೊಂಡಿರುವ ಸ್ವಿಫ್ಟ್ ಮಾದರಿಗೆ ಯೋಜನಾಬದ್ದ ಪ್ರತಿ ತಂತ್ರದೊಂದಿಗೆ ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ತನ್ನ ಎರಡನೇ ತಲೆಮಾರಿನ ಫಿಗೊ ಹ್ಯಾಚ್ ಬ್ಯಾಕ್ ಕಾರನ್ನು ಪರಿಚಯಿಸುತ್ತಿದೆ.

ಎಂಜಿನ್ ಸಾಮರ್ಥ್ಯದಿಂದ ಹಿಡಿದು ನಿರ್ವಹಣೆ, ಇಂಧನ ಕ್ಷಮತೆ, ಸೌಲಭ್ಯಗಳು ಹಾಗೂ ಕೈಗೆಟುಕುವ ಬೆಲೆಯಲ್ಲಿ ನ್ಯೂ ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಕಾರು ಮಾರುಕಟ್ಟೆ ಪ್ರವೇಶಿಸಿದೆ. ಪ್ರಸ್ತುತ ಲೇಖನದಲ್ಲಿ ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಮತ್ತು ಜನಪ್ರಿಯ ಮಾರುತಿ ಸ್ವಿಫ್ಟ್ ಕಾರುಗಳ ಮಧ್ಯೆ ಹೋಲಿಕೆ ಮಾಡುವ ಪ್ರಯತ್ನ ಮಾಡಲಾಗುವುದು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಮಾರುತಿ ಸುಜುಕಿ ಸ್ವಿಫ್ಟ್

  • ಪೆಟ್ರೋಲ್: ಪ್ರಾರಂಭಿಕ ಬೆಲೆ 4.65 ಲಕ್ಷ ರು.
  • ಡೀಸೆಲ್: ಪ್ರಾರಂಭಿಕ ಬೆಲೆ 5.84 ಲಕ್ಷ ರು.
  • ಫೋರ್ಡ್ ಫಿಗೊ

    • ಪೆಟ್ರೋಲ್: ಪ್ರಾರಂಭಿಕ ಬೆಲೆ 4.30 ಲಕ್ಷ ರು.
    • ಡೀಸೆಲ್: ಪ್ರಾರಂಭಿಕ ಬೆಲೆ 5.30 ಲಕ್ಷ ರು.
    • ವಿನ್ಯಾಸ: ಸ್ವಿಫ್ಟ್

      ವಿನ್ಯಾಸ: ಸ್ವಿಫ್ಟ್

      ವರ್ಷಗಳಿಂದಲೂ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಜನ ಮೆಚ್ಚುಗೆಯ ವಿನ್ಯಾಸವನ್ನು ಮೈಗೂಡಿಸಿ ಬಂದಿದೆ. ಅಲ್ಲದೆ ವರ್ಷಗಳಿಂದ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಆದರೆ ಸಮಕಾಲೀನ ವಾಹನ ಮಾರುಕಟ್ಟೆಯಲ್ಲಿ ಗ್ರಾಹಕರು ಹೊಸತನವನ್ನು ಬಯಸುವುದು ನೂತನ ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಕಾರಿಗೆ ನೆರವಾಗುವ ಭರವಸೆಯಿದೆ.

      ವಿನ್ಯಾಸ: ಫಿಗೊ

      ವಿನ್ಯಾಸ: ಫಿಗೊ

      ಹಿಂದಿನ ಮಾದರಿಗಿಂತಲೂ ಗಮನಾರ್ಹ ಬದಲಾವಣೆಯೊಂದಿಗೆ ಮುಂದೆ ಬಂದಿರುವ ಎರಡನೇ ತಲೆಮಾರಿನ ಫೋರ್ಡ್ ಫಿಗೊ, ಆಸ್ಟನ್ ಮಾರ್ಟಿನ್ ಸ್ಪೂರ್ತಿ ಪಡೆದ ದಿಟ್ಟವಾದ ಫ್ರಂಟ್ ಗ್ರಿಲ್ ಪಡೆದುಕೊಂಡಿದೆ. ಒಟ್ಟಾರೆಯಾಗಿ ಅತ್ಯುತ್ತಮ ರಸ್ತೆ ಸಾನಿಧ್ಯ ಮೈಗೂಡಿಸಿ ಬಂದಿದೆ.

      ವೈಶಿಷ್ಟ್ಯಗಳು: ಮಾರುತಿ ಸ್ವಿಫ್ಟ್

      ವೈಶಿಷ್ಟ್ಯಗಳು: ಮಾರುತಿ ಸ್ವಿಫ್ಟ್

      ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಎಂಜಿನ್ ಸ್ಟ್ಯಾರ್ಟ್/ಸ್ಟಾಪ್ ಬಟನ್, ಆಡಿಯೋ ಸಿಸ್ಟಂ ಜೊತೆ ಬ್ಲೂಟೂತ್ ಕನೆಕ್ಟಿವಿಟಿ, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಔಟ್ ಸೈಡ್ ರಿಯರ್ ವ್ಯೂ ಮಿರರ್, ರಿಯರ್ ಫಾಗ್ ಲ್ಯಾಂಪ್ ಮತ್ತು ಕೀಲೆಸ್ ಎಂಟ್ರಿಗಳಂತಹ ಸೌಲಭ್ಯಗಳನ್ನು ಅನುಭವಿಸಬಹುದಾಗಿದೆ.

      ವೈಶಿಷ್ಟ್ಯಗಳು: ಫೋರ್ಡ್ ಫಿಗೊ

      ವೈಶಿಷ್ಟ್ಯಗಳು: ಫೋರ್ಡ್ ಫಿಗೊ

      ಇನ್ನೊಂದೆಡೆ ಫೋರ್ಡ್ ಫಿಗೊ ಹ್ಯಾಚ್ ಬ್ಯಾಕ್ ಕಾರಿನಲ್ಲಿ ಡ್ಯುಯಲ್ ಟೋನ್ (ಜೋಡಿ ಬಣ್ಣ) ಡ್ಯಾಶ್ ಬೋರ್ಡ್, ಫೋರ್ಡ್‌ನ ಅತಿ ವಿಶಿಷ್ಟ ಸಿಂಕ್ (SYNC) ಮಲ್ಟಿಮೀಡಿಯಾ ಸಿಸ್ಟಂ, ಮೈ ಕೀ, ನಿಯಮಿತ ಗರಿಷ್ಠ ವೇಗ ಮಿತಿ, ಫೋರ್ಡ್ ಮೈ ಡಾಕ್, ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಮುಂತಾದ ವೈಶಿಷ್ಟ್ಯಗಳು ನಿಮ್ಮದಾಗಲಿದೆ.

      ಎಂಜಿನ್ ತಾಂತ್ರಿಕತೆ

      ಎಂಜಿನ್ ತಾಂತ್ರಿಕತೆ

      ಮಾರುತಿ ಸುಜುಕಿ ಸ್ವಿಫ್ಟ್

      1.2 ಲೀಟರ್ ಪೆಟ್ರೋಲ್ ಎಂಜಿನ್ (83 ಅಶ್ವಶಕ್ತಿ, 114 ಎನ್‍‌ಎಂ ತಿರುಗುಬಲ, 5 ಸ್ಪೀಡ್ ಮ್ಯಾನುವಲ್)

      1.3 ಲೀಟರ್ ಡೀಸೆಲ್ ಎಂಜಿನ್ (74 ಅಶ್ವಶಕ್ತಿ, 190 ಎನ್‌ಎಂ ತಿರುಗುಬ, 5 ಸ್ಪೀಡ್ ಮ್ಯಾನುವಲ್)

      ಎಂಜಿನ್ ತಾಂತ್ರಿಕತೆ

      ಎಂಜಿನ್ ತಾಂತ್ರಿಕತೆ

      ಫೋರ್ಡ್ ಫಿಗೊ

      1.2 ಲೀಟರ್ ಪೆಟ್ರೋಲ್ ಎಂಜಿನ್ (87 ಅಶ್ವಶಕ್ತಿ, 112 ಎನ್‌ಎಂ ತಿರುಗುಬಲ, 5 ಸ್ಪೀಡ್ ಮ್ಯಾನುವಲ್)

      1.5 ಲೀಟರ್ ಡೀಸೆಲ್ ಎಂಜಿನ್ (99 ಅಶ್ವಶಕ್ತಿ, 215 ಎನ್‌ಎಂ ತಿರುಗುಬಲ, 5 ಸ್ಪೀಡ್ ಮ್ಯಾನುವಲ್)

      1.5 ಲೀಟರ್ ಪೆಟ್ರೋಲ್ ಎಂಜಿನ್ (110 ಅಶ್ವಶಕ್ತಿ, 136 ಎನ್‌ಎಂ ತಿರುಗುಬಲ, 6 ಸ್ಪೀಡ್ ಆಟೋಮ್ಯಾಟಿಕ್)

      ಮೈಲೇಜ್

      ಮೈಲೇಜ್

      ಮೈಲೇಜ್: ಮಾರುತಿ ಸ್ವಿಫ್ಟ್

      ಪೆಟ್ರೋಲ್: 20.4 kpl

      ಡೀಸೆಲ್: 25.2 kpl

      ಮೈಲೇಜ್: ಫೋರ್ಡ್ ಫಿಗೊ

      1.2 ಲೀಟರ್ ಪೆಟ್ರೋಲ್: 18.16 kpl

      ಡೀಸೆಲ್: 25.83 kpl

      1.5 ಲೀಟರ್ ಪೆಟ್ರೋಲ್: 17 kpl

      ಸುರಕ್ಷತೆ

      ಸುರಕ್ಷತೆ

      ಸುರಕ್ಷತೆ: ಮಾರುತಿ ಸ್ವಿಫ್ಟ್

      ಭದ್ರತೆಯ ವಿಚಾರಕ್ಕೆ ಬಂದಾಗ ಸ್ವಿಫ್ಟ್ ತುಂಬಾನೇ ಹಿಂದೆ ಬಿದ್ದಿದ್ದು, ಬೇಸ್ ಮಾಡೆಲ್ ನಲ್ಲಿ ಸೀಟ್ ಬೆಲ್ಟ್ ಹಾಗೂ ಟಾಪ್ ಎಂಡ್ ವೆರಿಯಂಟ್ ನಲ್ಲಿ ಡ್ಯುಯಲ್ ಏರ್ ಬ್ಯಾಗ್, ರಿವರ್ಸ್ ಸೆನ್ಸಾರ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್), ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮ್ತತು ಬ್ರೇಕ್ ಅಸಿಸ್ಟ್ (ಇಬಿಡಿ) ಸೇವೆಗಳಿರಲಿದೆ.

      ಸುರಕ್ಷತೆ: ಫೋರ್ಡ್ ಫಿಗೊ

      ಫೋರ್ಡ್ ಫಿಗೊ ಕಾರಿನಲ್ಲಿ ಚಾಲಕರಿಗೆ ಸ್ಟ್ಯಾಂಡರ್ಡ್ ಏರ್ ಬ್ಯಾಗ್ ಹಾಗೂ ಟಾಪ್ ಎಂಡ್ ವೆರಿಯಂಟ್ ಗಳಲ್ಲಿ ಸೈಡ್, ಕರ್ಟೈನ್ ಸೇರಿದಂತೆ ಆರು ಏರ್ ಬ್ಯಾಗ್ ಗಳ ಸೌಲಭ್ಯ, ಎಬಿಎಸ್, ಇಬಿಡಿ, ಎಮರ್ಜಿನ್ಸಿ ಅಸಿಸ್ಟ್ ಮತ್ತು ಸೀಟು ಬೆಲ್ಟ್ ರಿಮೈಂಡರ್ ವ್ಯವಸ್ಥೆಗಳಿರಲಿದೆ.

      ಅಂತಿಮ ತೀರ್ಪು

      ಅಂತಿಮ ತೀರ್ಪು

      ಈ ಎಲ್ಲ ಅಂಶಗಳನ್ನು ಕೂಲಂಕುಷವಾಗಿ ಪರಿಶೋಧಿಸಿದಾಗ ನೂತನ ಫೋರ್ಡ್ ಫಿಗೊ ಸಾಂಪ್ರಾದಾಯಿಕ ಸ್ವಿಫ್ಟ್ ಕಾರನ್ನು ಹಿಮ್ಮಿಟ್ಟಿಸುತ್ತಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಎಂಜಿನ್ ನಿರ್ವಹಣೆಯಿಂದ ಹಿಡಿದು, ವೈಶಿಷ್ಟ್ಯ, ಅನುಕೂಲತೆ ಹಾಗೂ ಆರಾಮದಾಯಕತೆಯ ವಿಚಾರದಲ್ಲಿ ಫೋರ್ಡ್ ಫಿಗೊ ಮುಂದಿದೆ. ಇವೆಲ್ಲದಕ್ಕೆ ಆಟೋಮ್ಯಾಟಿಕ್ ವೆರಿಯಂಟ್ ಮತ್ತಷ್ಟು ಮೆರಗು ತುಂಬಲಿದೆ. ಹಾಗಿದ್ದರೂ ದೇಶದ್ಯಾಂತ ಅತ್ಯುತ್ತಮ ಸೇಲ್ಸ್ ಆ್ಯಂಡ್ ಸರ್ವೀಸ್ ಕಾಪಾಡಿಕೊಂಡು ಬಂದಿರುವ ಸ್ವಿಫ್ಟ್ ನಂಬಿಕೆಗ್ರಸ್ತ ಕಾರು ಪಟ್ಟವನ್ನು ಅಳಿಸಿ ಹಾಕುವುದು ಸುಲಭದ ಮಾತಲ್ಲ

Most Read Articles

Kannada
English summary
Maruti Suzuki Swift Vs New Ford Figo Comapro
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X