ಟೆಸ್ಟ್ ಡ್ರೈವ್- ಹೊಚ್ಚ ಹೊಸ ಮಸೆರಟಿ ಕ್ವಾರ್ಟೊಪೊರ್ಟೆ ಜಿಟಿಎಸ್ ಜೊತೆ ಒಂದು ಸುತ್ತು..!!

Written By:

ಕಳೆದ ಒಂದು ದಶಕದ ಅವಧಿಯಲ್ಲಿ ವಿಶ್ವ ಆಟೋ ಉದ್ಯಮದಲ್ಲಿ ತನ್ನದೇ ಅಧಿಪತ್ಯ ಸಾಧಿಸುತ್ತಿರುವ ಐಷಾರಾಮಿ ಸೆಡಾನ್ ಮಾದರಿ ಮಸೆರಟಿ ಸಂಸ್ಥೆಯು, ಇದೀಗ ತನ್ನ ಹೊಚ್ಚ ಹೊಸ ಕ್ವಾರ್ಟೊಪೊರ್ಟೆ ಜಿಟಿಎಸ್ ಮಾದರಿ ಮೂಲಕ ದಾಖಲೆಯ ತವಕದಲ್ಲಿದೆ.

ಮೊದಲ ನೋಟದಲ್ಲೇ ಐಷಾರಾಮಿ ಕಾರು ಪ್ರಿಯರನ್ನು ಸೆಳೆಯುವ ಮಸೆರಟಿ ಕ್ವಾರ್ಟೊಪೊರ್ಟೆ ಜಿಟಿಎಸ್ ಕಾರು ಮಾದರಿಯೂ ಸದ್ಯ ವಿಶ್ವಾದ್ಯಂತ ಭಾರೀ ಸದ್ದು ಮಾಡುತ್ತಿದೆ.

ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಮಸೆರಟಿ ಕ್ವಾರ್ಟೊಪೊರ್ಟೆ ಜಿಟಿಎಸ್‌ನಲ್ಲಿ ಡ್ರೈವ್ ಸ್ಪಾರ್ಕ್‌ನ ಟೀಂ ನಡೆಸಿದ ಟೆಸ್ಟ್ ಡ್ರೈವಿಂಗ್ ಅನುಭವ ನಿಜಕ್ಕೂ ಅದ್ಭುತವಾಗಿತ್ತು.

ಸುಧಾರಿತ ಇಟಾಲಿಯನ್ ತಂತ್ರಜ್ಞಾನದೊಂದಿಗೆ ಅಭಿವೃದ್ಧಿ ಹೊಂದಿರುವ ಮಸೆರಟಿ ಕ್ವಾರ್ಟೊಪೊರ್ಟೆ ಜಿಟಿಎಸ್ ಮಾದರಿಯೂ ವಿ8 ಎಂಜಿನ್ ಹೊಂದಿದೆ.

ಮೂಲತಃ ಫೆರಾರಿ ಸಹಯೋಗದಲ್ಲಿ ಅಭಿವೃದ್ಧಿ ಹೊಂದಿರುವ ಮಸೆರಟಿ ಕ್ವಾರ್ಟೊಪೊರ್ಟೆ ಜಿಟಿಎಸ್, ಸ್ಪೋರ್ಟ್ಸ್ ಮತ್ತು ಐಷಾರಾಮಿ ಸೆಡಾನ್ ಎರಡು ಮಾದರಿಯಲ್ಲೂ ಗುರುತಿಸಿಕೊಂಡಿದೆ.

ಒಳಾಂಗಣ ಮತ್ತು ಹೊರ ವಿನ್ಯಾಸದಲ್ಲಿ ಅದ್ಭುತ ರಚನೆಯಿದ್ದು, 20 ಇಂಚಿನ ಅಲಾಯ್ ಸಿಲ್ವರ್ ಚಕ್ರಗಳನ್ನು ಹೊಂದಿದೆ. ಜೊತೆಗೆ ಡ್ಯಯಲ್ ಎಕ್ಸಾಸ್ಟ್ ವ್ಯವಸ್ಥೆ ಕೂಡಾ ಇದೆ.

ಒಳಾಂಗಣ ವಿನ್ಯಾಸದಲ್ಲಿ ಸಂಪೂರ್ಣ ಲೆದರ್ ಬಳಕೆಯಿದ್ದು, ಆರಾಮದಾಯಕ ಹಾಗೂ ಐಷಾರಾಮಿ ಸೀಟುಗಳು ಕಾರಿನ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ.

ಎಂಜಿನ್ ಸಾಮರ್ಥ್ಯ

ಫೆರಾರಿ ವಿ8 3,799ಸಿಸಿ 3.8 ಲೀಟರ್ ಡ್ಯುಯಲ್ ಎಂಜಿನ್ ಹೊಂದಿರುವ ಮಸೆರಟಿ ಕ್ವಾರ್ಟೊಪೊರ್ಟೆ ಜಿಟಿಎಸ್, ಕೇವಲ 4.7 ಸೇಕೆಂಡ್‌ಗಳಲ್ಲಿ 100 ಕಿ.ಮಿ ವೇಗ ಪಡೆದುಕೊಳ್ಳುವ ಶಕ್ತಿ ಹೊಂದಿದೆ.

523 ಬಿಎಚ್‌ಪಿ ಮತ್ತು 650ಎಂಎನ್ ಉತ್ಪಾದನಾ ಶಕ್ತಿ ಹೊಂದಿರುವ ಮಸೆರಟಿ ಕ್ವಾರ್ಟೊಪೊರ್ಟೆ ಜಿಟಿಎಸ್‌ನಲ್ಲಿ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ವ್ಯವಸ್ಥೆ ಇದೆ.

ಮಸೆರಟಿ ಕ್ವಾರ್ಟೊಪೊರ್ಟೆ ಜಿಟಿಎಸ್ ಕಾರು ಮಾದರಿಯಲ್ಲಿ ನಿಮಗೆ ಬೇಕಾದ ರೀತಿಯಲ್ಲಿ ಡ್ರೈವಿಂಗ್ ಮೂಡ್ ಬದಲಿಸುವ ಅವಕಾಶವಿದ್ದು, ಆಟೋ ನಾರ್‌ಮಲ್, ಆಟೋ ಸ್ಪೋಟ್ಸ್, ಮ್ಯಾನುವಲ್ ನಾರ್‌ಮಲ್, ಮ್ಯಾನುವಲ್ ಸ್ಪೋರ್ಟ್ಸ್ ಮೂಡ್‌ಗಳಲ್ಲಿ ಚಾಲನೆ ಮಾಡಬಹುದಾಗಿದೆ.

ಇನ್ನು ಅದ್ಭುತ ರಚನೆ ಹೊಂದಿರುವ ಮಸೆರಟಿ ಕ್ವಾರ್ಟೊಪೊರ್ಟೆ ಜಿಟಿಎಸ್ ಬೆಲೆ ವಿಚಾರಕ್ಕೆ ಬಂದರೆ ಹೊಸ ಮಾದರಿ ಜಿಟಿಎಸ್ ಬೆಲೆಯೂ ದೆಹಲಿ ಎಕ್ಸ್‌ಶೋರಂ ಪ್ರಕಾರ 2.2 ಕೋಟಿ ಇದ್ದು, ವಿಶ್ವದ ದುಬಾರಿ ಕಾರುಗಳಲ್ಲಿ ಇದು ಒಂದಾಗಿದೆ.

Story first published: Saturday, May 27, 2017, 19:39 [IST]
English summary
Read in Kannada about first drive Maserati quattroporte GTS.
Please Wait while comments are loading...

Latest Photos