ಚಾಲನಾ ವಿಮರ್ಶೆ- ಪ್ರಯಾಣದಲ್ಲಿ ಹೊಸ ಥ್ರಿಲ್ ಕೋಡೋ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್

Written By:

ಐಷಾರಾಮಿ ಕಾರುಗಳ ಪೈಕಿ ಅಗ್ರಸ್ಥಾನದಲ್ಲಿರುವ ಮರ್ಸಿಡಿಸ್-ಬೆಂಝ್, ತನ್ನ ಹೊಸ ಆವೃತ್ತಿ ಇ-ಕ್ಲಾಸ್ ಬಿಡುಗಡೆಗೊಳಿಸಿದೆ. ಉದ್ದನೆ ಚಕ್ರಗಳೊಂದಿಗೆ ಹೊಸ ಲುಕ್ ಪಡೆದಿರುವ ಇ-ಕ್ಲಾಸ್ ಆವೃತ್ತಿಯು ಪ್ರಯಾಣದಲ್ಲಿ ಹೊಸ ಥ್ರಿಲ್ ನೀಡಲಿದೆ.

ಐಷಾರಾಮಿ ಸೆಡಾನ್ ಕಾರುಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಮರ್ಸಿಡಿಸ್ ಬೆಂಝ್, ಲಕ್ಸುರಿ ಮಾದರಿಯ ಇ-ಕ್ಲಾಸ್ ಕಾರನ್ನು ಮಾರುಕಟ್ಟೆಗೆ ಪರಿಚಯ ಮಾಡಿದೆ.
ಆರಾಮದಾಯಕ ಪ್ರಯಾಣಕ್ಕೆ ಇದು ಹೇಳಿ ಮಾಡಿಸದಂತಿದ್ದು, ದೂರದ ಪ್ರಯಾಣದಲ್ಲೂ ನಿಮಗೆ ಹೊಸ ಅನುಭವ ನೀಡಲಿದೆ.

ಒಳ ವಿನ್ಯಾಸ
ದೊಡ್ಡ ಗಾತ್ರದ ಒಳವಿನ್ಯಾಸ ಹೊಂದಿರುವ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಆವೃತ್ತಿಯು, ಅತ್ಯುತ್ತಮ ವೈಶಿಷ್ಟ್ಯತೆಗಳನ್ನು ಹೊಂದಿದೆ. ಹೀಗಾಗಿ ಪ್ರಯಾಣದ ವೇಳೆ ಯಾವುದೇ ಆಯಾಸವಾಗದಂತೆ ಹತ್ತಾರು ಅನುಕೂಲತೆಗಳನ್ನು ಕಲ್ವಿಸಲಾಗಿದೆ.

ವೀಲ್ಹ್ ಬೇಸ್ ಸ್ಥಾನದಲ್ಲಿ ಹೆಚ್ಚು ಸ್ಥಳಾವಕಾಶ ಒದಗಿಸಲಾಗಿದ್ದು, ಆರಾಮದಾಯಕ ಪ್ರಯಾಣಕ್ಕೆ ಅನುಕೂಲವಾಗಿವೆ. ಈ ಹಿಂದಿನ ಆವೃತ್ತಿಗಿಂತ 140ಎಂಎಂ ವೀಲ್ಹ್ ಬೇಸ್ ಸ್ಥಾನವನ್ನು ಹೆಚ್ಚಿಸಲಾಗಿದ್ದು, ಹಿಂಬದಿಯ ಸೀಟುಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ಐಷಾರಾಮಿ ಎಲ್ಲ ವ್ಯವಸ್ಥೆಗಳನ್ನು ಒಳಗೊಂಡಿರುವ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಆವೃತ್ತಿಯಲ್ಲಿ ಸನ್ ರೂಪ್ ಅಳವಡಿಸಲಾಗಿದೆ. ಸರೌಂಡ್ ಸೌಂಡ್ ಸಿಸ್ಟಮ್ ಕೂಡಾ ಇದ್ದು, 64 ವಿವಿಧ ಬಣ್ಣಗಳನ್ನು ಹೊಂದಿರುವ ಲೈಟಿಂಗ್ ವ್ಯವಸ್ಥೆಯು ಇ-ಕ್ಲಾಸ್ ಆವೃತ್ತಿಯ ಅಂದವನ್ನು ಹೆಚ್ಚಿಸಿವೆ.

ಎಂಜಿನ್ ಸಾಮರ್ಥ್ಯ
ಹೊಚ್ಚ ಹೊಸ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಆವೃತ್ತಿಗಳು ಪ್ರಮುಖ 2 ಮಾದರಿಯಲ್ಲಿ ಬಿಡುಗೊಂಡಿದ್ದು, ಡೀಸೆಲ್ ಆವೃತ್ತಿಯ ಇ-ಕ್ಲಾಸ್ 350ಡಿ ಮಾದರಿಯಲ್ಲಿ 2,987 ಸಿಸಿ ವಿ6 ಸಿಲಿಂಡರ್ ಎಂಜಿನ್ ಹೊಂದಿದೆ. ಜೊತೆಗೆ 6.6 ಸೆಕೇಂಡ್‌ಗಳಲ್ಲಿ 100ಕಿಮಿ ವೇಗ ಪಡೆದುಕೊಳ್ಳಬಲ್ಲ ಸಾಮರ್ಥ್ಯವಿದ್ದು, 250 ಕಿಮಿ ಗರಿಷ್ಠ ವೇಗದಲ್ಲಿ ಚಲಿಸುವಷ್ಟು ಶಕ್ತಿಶಾಲಿ ಎಂಜಿನ್ ಹೊಂದಿದೆ.

ಭಾರತೀಯ ರಸ್ತೆಗಳಿಗೆ ತಕ್ಕಂತೆ ವಿವಿಧ ಮೂಡ್‌ಗಳಲ್ಲಿ ಕಾರು ಚಾಲನೆ ಅವಕಾಶವಿದ್ದು, ಇಕೋ, ಸ್ಪೋರ್ಟ್ಸ್, ಸ್ಪೋರ್ಟ್ಸ್ ಪ್ಲಸ್ ಮತ್ತು ವೈಯಕ್ತಿಕ ಮೂಡ್‌ಗಳಿಗೆ ಬದಲಾಯಿಸಿಕೊಳ್ಳಬಹುದು. ಇದರಿಂದ ಚಾಲನೆ ವೇಳೆ ನಮಗೆ ಸಂಪೂರ್ಣ ಸುರಕ್ಷತೆ ಸಿಗಲಿದ್ದು, ಗರಿಷ್ಠ ವೇಗದ ಸಂದರ್ಭದಲ್ಲೂ ವೇಗದ ಮೇಲೆ ಹಿಡಿತ ಸಾಧಿಸಬಹುದು.

ಸುರಕ್ಷಾ ವೈಶಿಷ್ಟ್ಯತೆಗಳು
ಉದ್ದನೆ ಬಾನೆಟ್ ವ್ಯವಸ್ಥೆಯನ್ನು ಹೊಂದಿರುವ ಇ-ಕ್ಲಾಸ್ ಆವೃತ್ತಿಯು, ರೂಪ್‌ಲೈನ್ ವಿನ್ಯಾಸವು ಹೊಸ ಮಾದರಿಗಳಿಗೆ ಹೊಸ ಲುಕ್ ನೀಡಿವೆ. ಜೊತೆಗೆ ಪಾರ್ಕಿಂಗ್ ಪೈಲಟ್ ಹೊಂದಿದ್ದು, ಈ ಕೆಳಗಿನ ವಿಡಿಯೋ ವೀಕ್ಷಿಸಿ.

ಇ-ಕ್ಲಾಸ್ ಮಾದರಿಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಪಾರ್ಕಿಂಗ್ ಸ್ಥಳಗಳಲ್ಲಿ 360 ಡಿಗ್ರಿ ಆಕೃತಿಯಲ್ಲಿ ವಾಸ್ತಾಂಶವನ್ನು ತಿಳಿದುಕೊಳ್ಳಬಹುದಾಗಿದೆ. ಇದು ಪಾರ್ಕಿಂಗ್ ಮಾಡುವಾಗ ಸ್ವಯಂ ಚಾಲನೆಯೊಂದಿಗೆ ಮಾಹಿತಿ ನೀಡ ಬಲ್ಲದಾಗಿದ್ದು, E 350 ಆವೃತ್ತಿಯಲ್ಲಿ ಮಾತ್ರ ಈ ವ್ಯವಸ್ಥೆ ಲಭ್ಯವಿದೆ.

ಹೊಸ ಆವೃತ್ತಿಗಳಲ್ಲಿ ಒಟ್ಟು 7 ಏರ್‌ಬ್ಯಾಗ್‌ಗಳ ವ್ಯವಸ್ಥೆಯಿದ್ದು, ಮುಂಭಾಗದಲ್ಲಿ ಡ್ಯುಯಲ್ ಏರ್‌ಬ್ಯಾಗ್, ಫ್ರಂಟ್ ಸೈಡ್ ಏರ್‌ಬ್ಯಾಗ್ ಮತ್ತು ಪರದೆ ಬಳಿಯಲ್ಲೂ ಏರ್‌ಬ್ಯಾಗಗಳು ಸುರಕ್ಷತೆ ನೀಡಲಿವೆ. ಇದರಿಂದ ಚಾಲಕನಿಗೆ ಸಂಪೂರ್ಣ ಸುರಕ್ಷತೆ ಸಿಗಲಿದ್ದು, ತುರ್ತು ಸಂದರ್ಭಗಳಲ್ಲಿ ಮುನ್ಸೂಚನೆ ನೀಡಬಲ್ಲ ತಂತ್ರಜ್ಞಾನ ವ್ಯವಸ್ಥೆಯೂ ಇದರಲ್ಲಿದೆ.

ಆಧುನಿಕ ತಂತ್ರಜ್ಞಾನಗಳಿಂದ ಸಿದ್ಧಗೊಂಡಿರುವ ಇ-ಕ್ಲಾಸ್ ಆವೃತ್ತಿಯು ಚಾಲನೆ ವೇಳೆ ಚಾಲಕ ತಪ್ಪು ಮಾಡಿದರೇ ತಿದ್ದುಬಲ್ಲ ಬುದ್ಧಿವಂತಿಕೆ ಹೊಂದಿದೆ. ಅಪಾಯದ ಮುಂಚೂಣಿ ತಿಳಿಸಬಲ್ಲ ಕೆಲವು ಸುರಕ್ಷಾ ಸಾಧನಗಳ ವ್ಯವಸ್ಥೆಯಿದ್ದು, ನಿಮ್ಮ ಪ್ರಯಾಣವನ್ನು ಸುಖಕರವಾಗಿಸಲಿದೆ.

ಹೊಸ ಆವೃತ್ತಿಯ ಬೆಲೆ
ಹೊಸ ಹೊಸ ತಂತ್ರಜ್ಞಾನಗಳೊಂದಿಗೆ ಸಿದ್ದಗೊಂಡಿರುವ ಮರ್ಸಿಡಿಸ್ ಬೆಂಝ್ ಇ-ಕ್ಲಾಸ್ ಆವೃತ್ತಿಗಳ ಬೆಲೆ ಸ್ವಲ್ಪ ದುಬಾರಿಯೇ ಎಂದರೇ ತಪ್ಪಾಗಲಾರದು. ಭಾರತೀಯ ಮಾರುಕಟ್ಟೆಯ ಬೇಡಿಕೆಗಳಿಗೆ ಅನುಗುಣವಾಗಿ ಸಿದ್ಧಗೊಂಡಿರುವ ಹೊಸ ಆವೃತ್ತಿಗಳ ಬೆಲೆಯು ಮುಂಬೈ ಎಕ್ಸ್ ‌ಶೋರಂ ಪ್ರಕಾರ ರೂ. 56.15 ಲಕ್ಷಕ್ಕೆ (ಡೀಸೆಲ್ ಮಾದರಿ) ಮತ್ತು ಪೆಟ್ರೋಲ್ ಮಾದರಿಯೂ ರೂ.69.47 ಲಕ್ಷಕ್ಕೆ ಲಭ್ಯವಿದೆ.

ಹೊಸ ಮಾದರಿಯ ಪ್ರಮುಖಾಂಶಗಳು
1. ಪಾರ್ಕಿಂಗ್ ಪೈಲಟ್
2. ಏರ್ ಬಾಡಿ ಕಂಟ್ರೋಲರ್
3. ಚಾಲನಾ ವ್ಯವಸ್ಥೆಯ ಸುರಕ್ಷಾ ಕಿಟ್
4. ಒರಗಿಕೊಳ್ಳಬಹುದಾದ ಹಿಂದಿನ ಸೀಟುಗಳು
5. 64 ಬಣ್ಣಗಳಿಂದ ಕೂಡಿದ ಒಳವಿನ್ಯಾಸದ ಬೆಳಕು
6. ಸ್ಲೈಡಿಂಗ್ ಸನ್ರೂಫ್
7. 9-ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್‌ಮಿಷನ್
8. 12.3-ಇಂಚಿನ ಮಿಡಿಯಾ ಡಿಸ್‌ಫೈ
9. 13-ಸ್ಪೀಕರ್ ಸರೌಂಡ್ ಸೌಂಡ್ ಸಿಸ್ಟಮ್
10. ಟಚ್-ಸೆನ್ಸಿಟಿವ್ ಸ್ಪೀರಿಂಗ್ ವೀಲ್ಹ್ ನಿಯಂತ್ರಕ ವ್ಯವಸ್ಥೆ

ಒಟ್ಟಾರೆ ಅತ್ಯಾಧುನಿಕ ವ್ಯವಸ್ಥೆಗಳಿಂದ ಕೂಡಿರುವ ವಿನೂತನ ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ಆವೃತ್ತಿಯು ಐಷಾರಾಮಿ ಪ್ರಯಾಣಕ್ಕೆ ಹೇಳಿ ಮಾಡಿಸಿದಂತಿದೆ. ಜೊತೆಗೆ ಭಾರತೀಯ ಮಾರುಕಟ್ಟೆಯಲ್ಲಿ ಉದ್ಯಮಿಗಳು ಹೆಚ್ಚಿನ ಪ್ರಮಾಣದಲ್ಲಿ ಬೆಂಝ್ ಆವೃತ್ತಿಗಳ ಖರೀದಿಗೆ ಮನಸ್ಸು ಮಾಡುತ್ತಿದ್ದು, ಇ-ಕ್ಲಾಸ್ ಮಾದರಿ ಭರ್ಜರಿ ಮಾರಾಟಗೊಳ್ಳುವ ನೀರಿಕ್ಷೆಯಿದೆ.

ಡ್ರೈವ್‌ಸ್ಪಾರ್ಕ್‌ನಲ್ಲಿ ಮತ್ತಷ್ಟು ಸುದ್ದಿಗಳು ನಿಮಗಾಗಿ

ಮರ್ಸಿಡಿಸ್-ಬೆಂಝ್ ಇ-ಕ್ಲಾಸ್ ಕಾರಿನ ಚಿತ್ರಗಳು

Story first published: Monday, March 20, 2017, 17:44 [IST]
English summary
The 2017 Mercedes E-Class LWB model is a game changer. What does the new E-Class offer? Read our Mercedes-Benz E-Class long-wheelbase first drive review to learn more.
Please Wait while comments are loading...

Latest Photos