ಫೋರ್ಡ್ ಫಿಗೊ: ಮೊದಲ ಚಾಲನಾ ವಿಮರ್ಶೆ; ಸ್ವಿಫ್ಟ್ ಗಡಗಡ!

By Nagaraja

ಇತ್ತೀಚೆಗಷ್ಟೇ ನಮ್ಮ ಪ್ರಧಾನ ಸಂಪಾದಕರಾದ ಜೊಬೊ ಕುರುವಿಲ್ಲಾ ಅವರಿಗೆ ಅತಿ ನೂತನ ಎರಡನೇ ತಲೆಮಾರಿನ ಫೋರ್ಡ್ ಫಿಗೊ ಮೊದಲ ಚಾಲನಾ ವಿಮರ್ಶೆ ಮಾಡುವ ಅವಕಾಶ ದೊರಕಿತ್ತು. ಪ್ರಮುಖವಾಗಿಯೂ ದೇಶದ ಜನಪ್ರಿಯ ಕಾರಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಹ್ಯಾಚ್ ಬ್ಯಾಕ್ ಕಾರಿಗೆ ಸೆಡ್ಡು ನೀಡುತ್ತಿರುವ ನೂತನ ಫೋರ್ಡ್ ಫಿಗೊ ಎಲ್ಲ ಹಂತದಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿ ನಿಂತಿದೆ.

ನೀವು ಕಾಂಪಾಕ್ಟ್ ಸೆಡಾನ್ ಕಾರಿನ ಹುಡುಕಾಟದಲ್ಲಿದ್ದೀರಾ? ಬನ್ನಿ ಫೋರ್ಡ್ ಫಿಗೊ ಆಸ್ಪೈರ್ ವಿಮರ್ಶೆ ಓದಿ

ಮಾರುತಿ ಸ್ವಿಫ್ಟ್ ನಂತಹ ಜನಪ್ರಿಯ ಮಾದರಿಯನ್ನು ಹಿಂದಿಕ್ಕುವುದು ಅಷ್ಟು ಸುಲಭದ ಮಾತಲ್ಲ. ಇದಕ್ಕಾಗಿ ಸಂಪೂರ್ಣ ಪೂರ್ವ ತಯಾರಿಯನ್ನೇ ನಡೆಸಿರುವ ಫೋರ್ಡ್ ನೂತನ ಫಿಗೊ ಹ್ಯಾಚ್ ಬ್ಯಾಕ್ ಭಾರತದಲ್ಲೇ ಅಭಿವೃದ್ಧಿ ಹಾಗೂ ವಿನ್ಯಾಸಗೊಳಿಸಿದೆ. ಇದಕ್ಕೆ ಇಂಧನ ಕ್ಷಮತೆ, ನಿರ್ವಹಣೆ, ವೈಶಿಷ್ಟ್ಯಗಳು ಒಟ್ಟು ಸೇರಿದಾಗ ಫೋರ್ಡ್ ಫಿಗೊ ಕಾರನ್ನು ಹಿಮ್ಮೆಟ್ಟಿಸುವುದು ಅಷ್ಟು ಸುಲಭವಲ್ಲ ಎಂಬುದು ತಿಳಿದು ಬರುತ್ತದೆ.

ವಿನ್ಯಾಸ

ವಿನ್ಯಾಸ

ಮುಂದುಗಡೆ ಆಸ್ಟನ್ ಮಾರ್ಟಿನ್ ಸ್ಫೂರ್ತಿ ಪಡೆದ ಫ್ರಂಟ್ ಗ್ರಿಲ್ ನೂತನ ಫೋರ್ಡ್ ಫಿಗೊ ಕಾರಿನ ಮುಖ ಛಾಯೆಗಾಗಿ ಗುರುತಿಸಿಕೊಳ್ಳುತ್ತಿದೆ. ಹಿಂದಕ್ಕೆ ಬಾಗಿದ ಹೆಡ್ ಲೈಟ್ ಮತ್ತು ವಿಂಡ್ ಶಿಲ್ಡ್ ಕಾರಿನ ಏರೋಡೈನಾಮಿಕ್ ವಿನ್ಯಾಸವನ್ನು ಪ್ರತಿಬಿಂಬಿಸುತ್ತದೆ.

ವಿನ್ಯಾಸ

ವಿನ್ಯಾಸ

ನಿಸ್ಸಂಶಯವಾಗಿಯೂ ಮಾರುತಿ ಸ್ವಿಫ್ಟ್ ಮತ್ತು ಹ್ಯುಂಡೈ ಗ್ರಾಂಡ್ ಐ10 ಮಾದರಿಗಳನ್ನು ಹೋಲಿಸಿದಾಗ ನೂತನ ಫೋರ್ಡ್ ಫಿಗೊ ತಾಜಾತನದ ವಿನ್ಯಾಸವನ್ನು ಮೈಗೂಡಿಸಿ ಬಂದಿದ್ದು, ಶಕ್ತಿಯುತವಾಗಿ ಎದ್ದುಕಾಣುವ ಸ್ವಭಾವ ರೇಖೆಗಳು ಕಾರಿಗೆ ಹೆಚ್ಚಿನ ಚಲನಶೀಲತೆಯನ್ನು ಪ್ರದಾನ ಮಾಡುತ್ತದೆ.

ವಿನ್ಯಾಸ

ವಿನ್ಯಾಸ

ಫೋರ್ಡ್ ಡಿಎನ್‌ಎ ಡಿಸೈನ್ ಸ್ವಭಾವವು ಕಾರಿಗೆ ಪ್ರೀಮಿಯಂ ಸ್ಪರ್ಶವನ್ನು ನೀಡಲಿದೆ. ಇದರ ದಿಟ್ಟವಾದ ರೇಖೆಗಳು ಹಿಂಬದಿಯಲ್ಲಿ ಟೈಲ್ ಲ್ಯಾಂಪನ್ನು ಬಂದು ಸೇರುತ್ತದೆ.

ವಿನ್ಯಾಸ - ಒಳಮೈ

ವಿನ್ಯಾಸ - ಒಳಮೈ

ಕ್ಲಾಸಿಕ್ ಜೊತೆಗೆ ಆಧುನಿಕ ತಂತ್ರಜ್ಞಾನಗಳು ಸೇರಿದಾಗ ಪ್ರಯಾಣಿಕರಿಗೊಂದು ಅಪ್ಪಟ ಹ್ಯಾಚ್ ಬ್ಯಾಕ್ ಕಾರು ಸಿದ್ಧವಾಗುತ್ತಿದೆ. ಸಹಜವಾಗಿಯೇ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಲೆಗ್ ರೂಂ ಹಾಗೂ ಹೆಡ್ ರೂಂಗಳ ಬಗ್ಗೆ ಪ್ರಶ್ನೆಗಳು ಬರುತ್ತವೆ. ಇದರತ್ತವೂ ಫೋರ್ಡ್ ಕೆಲಸ ಮಾಡಿದ್ದು, ಪ್ರಯಾಣಿಕರನ್ನು ನಿರಾಸೆಗೊಳಿಸುವುದಿಲ್ಲ.

ವಿನ್ಯಾಸ - ಒಳಮೈ

ವಿನ್ಯಾಸ - ಒಳಮೈ

ಬೆಸ್ಟ್ ಇನ್ ಕ್ಲಾಸ್ ಲೆಗ್ ರೂಂನೊಂದಿಗೆ ಬಂದಿರುವ ಫೋರ್ಡ್ ಫಿಗೊ ಗುಣಮಟ್ಟದ ಸೀಟುಗಳೊಂದಿಗೆ ಪ್ರಯಾಣಿಕರಿಗೆ ಆರಾಮದಾಯಕ ಪಯಣವನ್ನು ಖಾತ್ರಿಪಡಿಸುತ್ತದೆ. ಕಾರಿನೊಳಗೆ ಹೆಚ್ಚಿನ ಸ್ಥಳಾವಕಾಶವಿದ್ದು, ದೊಡ್ಡದಾದ ಗ್ಲೋವ್ ಬಾಕ್ಸ್, ಮುಂದಿನ ಸಾಲಿನಲ್ಲಿ ಮೂರು ಕಪ್ ಹೋಲ್ಡರ್, ಮುಂಭಾಗದ ಡೋರ್ ನಲ್ಲಿ ಬಾಟಲಿ ಹೋಲ್ಡರ್ ಜೊತೆಗೆ ಸೀಟು ಹಿಂದುಗಡೆ ವಾರ್ತಾ ಪತ್ರಿಕೆ ಅಥವಾ ಮ್ಯಾಗಜೀನ್ ಗಳನ್ನಿಡಲು ಸೀಟು ಬ್ಯಾಕ್ ಪಾಕೆಟ್ ಸೌಲಭ್ಯವೂ ಇರುತ್ತದೆ.

ಗ್ರೌಂಡ್ ಕ್ಲಿಯರನ್ಸ್ - 174 ಎಂಎಂ

ಚಕ್ರಾಂತರ - ಒಂದು ಸಣ್ಣ ಹೋಲಿಕೆ

ಚಕ್ರಾಂತರ - ಒಂದು ಸಣ್ಣ ಹೋಲಿಕೆ

  • ಫೋರ್ಡ್ ಫಿಗೊ: 2491 ಎಂಎಂ
  • ಮಾರುತಿ ಸ್ವಿಫ್ಟ್: 2430 ಎಂಎಂ
  • ಹ್ಯುಂಡೈ ಗ್ರಾಂಡ್ ಐ10: 2425 ಎಂಎಂ
  • ಅಂದರೆ ವಿಭಾಗದಲ್ಲೇ ಅತಿ ಹೆಚ್ಚು ಚಕ್ರಾಂತರ ಹೊಂದಿರುವ ಫೋರ್ಡ್ ಫಿಗೊ ಅತ್ಯುತ್ತಮ ಸ್ಥಳಾವಕಾಶವನ್ನು ಖಾತ್ರಪಡಿಸುತ್ತದೆ.

    ಎಂಜಿನ್, ಗೇರ್ ಬಾಕ್ಸ್

    ಎಂಜಿನ್, ಗೇರ್ ಬಾಕ್ಸ್

    ಫೋರ್ಡ್ ಫಿಗೊ ಪರ-ವಿರೋಧ ವಾದ ಆರಂಭವಾಗುವುದೇ ಇಲ್ಲಿಂದ. ನೂತನ ಫೋರ್ಡ್ ಫಿಗೊ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅವುಗಳೆಂದರೆ,

    • 1.2 ಲೀಟರ್ ಟಿಐ ವಿಸಿಟಿ ಪೆಟ್ರೋಲ್: 88 ಅಶ್ವಶಕ್ತಿ
    • 1.5 ಲೀಟರ್ ಟಿಡಿಸಿಐ ಡೀಸೆಲ್: 100 ಅಶ್ವಶಕ್ತಿ
    • 1.5 ಲೀಟರ್ ಪೆಟ್ರೋಲ್ (ಆಟೋಮ್ಯಾಟಿಕ್): 112 ಅಶ್ವಶಕ್ತಿ
    • ಎಂಜಿನ್

      ಎಂಜಿನ್

      ಈ ಪೈಕಿ 1.2 ಲೀಟರ್ ಪೆಟ್ರೋಲ್ ಎಂಜಿನ್ ವೇಗ ಪ್ರಿಯರಲ್ಲಿ ಸ್ವಲ್ಪ ಅಸಂತೃಪ್ತಿಗೆ ಕಾರಣವಾಗಿದೆ. ನಗರ ಚಾಲನೆಗೆ ಇದು ಓಕೆ ಎನಿಸಿದರೂ ಹೆದ್ದಾರಿಗಳಂತಹ ತೆರೆದ ರಸ್ತೆಗಳಲ್ಲಿ ಮಂದಗತಿಯ ವೇಗವರ್ಧನೆಯು ಸ್ವಲ್ಪ ಹಿನ್ನೆಡೆಗೆ ಕಾರಣವಾಗುತ್ತದೆ. ಹಾಗಿದ್ದರೂ 1.5 ಡೀಸೆಲ್ ಎಂಜಿನ್ ಹಾಗೂ 1.5 ಲೀಟರ್ ಪೆಟ್ರೋಲ್ ಆಟೋಮ್ಯಾಟಿಕ್ ಎಂಜಿನ್ ಗಳು ನಿಮ್ಮ ಮೆಚ್ಚುಗೆಗೆ ಕಾರಣವಾಗಲಿದೆ.

      ಮೈಲೇಜ್, ಚಾಲನಾ ಅನುಭವ

      ಮೈಲೇಜ್, ಚಾಲನಾ ಅನುಭವ

      ಫೋರ್ಡ್ ಫಿಗೊ 1.5 ಲೀಟರ್ ಡೀಸೆಲ್ ಎಂಜಿನ್ 215 ಎನ್‌ಎಂ ತಿರುಗುಬಲದಲ್ಲಿ 99 ಅಶ್ವಶಕ್ತಿ ಉತ್ಪಾದಿಸುತ್ತಿದ್ದು, ನಗರ ಹಾಗೂ ಹೆದ್ದಾರಿ ಎರಡು ಸೇರಿ 100ರಿಂದ 140 ಕೀ.ಮೀ. ವೇಗದಲ್ಲಿ ಸಾಗಿದಾಗ ಪ್ರತಿ ಲೀಟರ್ ಗೆ 22 ಕೀ.ಮೀ. ಮೈಲೇಜ್ ದೊರಕುತ್ತದೆ. ಇಲ್ಲಿ ಎಆರ್‌ಎಐ ನೀಡಿರುವ ಮೈಲೇಜ್ ಅಂಕಿಅಂಶ 25.83 ಎಂಬುದು ಮಹತ್ವವೆನಿಸುತ್ತದೆ.

      ಫೋರ್ಡ್ ಫಿಗೊ: ಮೊದಲ ಚಾಲನಾ ವಿಮರ್ಶೆ

      ಇನ್ನೊಂದೆಡೆ ಆಟೋಮ್ಯಾಟಿಕ್ ಪೆಟ್ರೋಲ್ ಮಾದರಿಯು 17 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ ಎಂಬುದನ್ನು ಸಂಸ್ಥೆ ವಾದಿಸಿದರೂ ನೈಜ ರಸ್ತೆ ಪರಿಸ್ಥಿತಿಯಲ್ಲಿ ಗಂಟೆಗೆ 100ರಿಂದ 140 ಕೀ.ಮೀ. ವೇಗದಲ್ಲಿ ಚಲಿಸಿದಾಗ 12.5 ಕೀ.ಮೀ. ಮೈಲೇಜ್ ಸಿಗುತ್ತದೆ.

      ಎಆರ್‌ಎಐ ಮೈಲೇಜ್

      • 1.2 ಲೀಟರ್ ಪೆಟ್ರೋಲ್: 18.16
      • 1.5 ಲೀಟರ್ ಡೀಸೆಲ್: 25.83
      • 1.5 ಲೀಟರ್ ಪೆಟ್ರೋಲ್ (6 ಸ್ಪೀಡ್ ಆಟೋ): 17.00
      • ಆಟೋಮ್ಯಾಟಿಕ್ ಪೆಟ್ರೋಲ್ ಎಂಜಿನ್

        ಆಟೋಮ್ಯಾಟಿಕ್ ಪೆಟ್ರೋಲ್ ಎಂಜಿನ್

        ಇಲ್ಲಿ ಆಟೋಮ್ಯಾಟಿಕ್ ಪೆಟ್ರೋಲ್ ಎಂಜಿನ್ ಶಬ್ದವನ್ನು ಎತ್ತಿ ಹೇಳಬೇಕಾಗಿದ್ದು, ವಿಂಡೋ ಮುಚ್ಚುಗಡೆಗೊಳಿಸಿದಾಗ ಒಂದು ಕ್ರೀಡಾ ಕಾರಿನಲ್ಲಿ ಚಲಿಸುವ ಅನುಭವ ನಿಮ್ಮದಾಗುತ್ತದೆ. ಅಷ್ಟೇ ಯಾಕೆ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಿರ್ಮಾಣ ಗುಣಮಟ್ಟ, ನಯವಾದ ಬಳಕೆ ಹಾಗೂ ಚಾಲನೆ ಎಲ್ಲವೂ ಇಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತದೆ.

        ಸುರಕ್ಷತೆ

        ಸುರಕ್ಷತೆ

        ಕಾರಿನ ಭದ್ರತೆಯ ವಿಷಯದಲ್ಲಿ ಫೋರ್ಡ್ ತನ್ನ ಪ್ರತಿಸ್ಪರ್ಧಿಗಳನ್ನು ಮಣಿಸಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ತನ್ನೆಲ್ಲ ಶ್ರೇಣಿಯ ಫಿಗೊ ಕಾರಿಗೂ ಚಾಲಕ ಬದಿಯ ಏರ್ ಬ್ಯಾಗ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ಒದಗಿಸುತ್ತಿರುವ ಫೋರ್ಡ್, ಡ್ಯುಯಲ್, ಸೈಡ್, ಕರ್ಟೈನ್ ಸೇರಿದಂತೆ ಒಟ್ಟು ಆರು ಏರ್ ಬ್ಯಾಗ್ ಗಳ ಭದ್ರತೆಯನ್ನು ಒದಗಿಸುತ್ತಿದೆ.

        ಸಿಂಕ್ ಜೊತೆ ಫೋರ್ಡ್ ಆಪ್ ಲಿಂಕ್

        ಸಿಂಕ್ ಜೊತೆ ಫೋರ್ಡ್ ಆಪ್ ಲಿಂಕ್

        ಅಪಘಾತದ ಸಂದರ್ಭದಲ್ಲಿ ನೆರವಿಗೆ ಬರುವ ಫೋರ್ಡ್ ಜನಪ್ರಿಯ ಎಮರ್ಜನ್ಸಿ ಅಸಿಸ್ಟನ್ಸ್ ಸೇವೆಯು ಇಲ್ಲಿ ಪ್ರಾಮುಖ್ಯ ಗಿಟ್ಟಿಸುತ್ತದೆ. ಇದು ಸ್ವಯಂಚಾಲಿತವಾಗಿ ಸಿಂಕ್ ಹಾಗೂ ಬ್ಲೂಟೂತ್ ಫೋನ್ ಮುಖಾಂತರ ತ್ವರಿತ ಗತಿಯಲ್ಲಿ ಸ್ವಯಂಚಾಲಿತವಾಗಿ ಮಾಹಿತಿ ವಾಹನ ಸ್ಥಳದ ಬಗ್ಗೆ ಮಾಹಿತಿ ರವಾನಿಸಲಿದೆ.

        ಮೈ ಫೋರ್ಡ್ ಡಾಕ್

        ಮೈ ಫೋರ್ಡ್ ಡಾಕ್

        ಈ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಸ್ಮಾರ್ಟ್ ತಂತ್ರಾಂಶವನ್ನು ಫೋರ್ಡ್ ನೀಡುತ್ತಿದ್ದು, ಈ ಪೈಕಿ ಮೈ ಫೋರ್ಡ್ ಡಾಕ್ ಮುಖ್ಯವೆನಿಸುತ್ತದೆ. ಈ ಮೂಲಕ ಮೊಬೈಲ್ ಫೋನ್ ಗಳನ್ನು ಇಡಲು, ಸಂಪರ್ಕಿಸಲು ಹಾಗೂ ಚಾರ್ಜ್ ಮಾಡಲು ಸುಲಭವಾಗಲಿದೆ. ಜೊತೆಗೆ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆಗೆ ಎಂಪಿ3 ಪ್ಲೇಯರ್, ಸ್ಯಾಟಲೈಟ್ ನೇವಿಗೇಷನ್ ಸಿಸ್ಟಂ ಸಂಪರ್ಕಿಸಲು ಸಹಕಾರಿಯಾಗಲಿದೆ.

        ಬೆಲೆ (ಎಕ್ಸ್ ಶೋ ರೂಂ ದೆಹಲಿ)

        ಬೆಲೆ (ಎಕ್ಸ್ ಶೋ ರೂಂ ದೆಹಲಿ)

        1.2 ಎಲ್ ಟಿಐ-ವಿಸಿಟಿ (ಪೆಟ್ರೋಲ್): ಪ್ರಾರಂಭಿಕ ಬೆಲೆ 4.29 ಲಕ್ಷ ರು.

        1.5 ಲೀಟರ್ ಟಿಡಿಸಿಐ (ಡೀಸೆಲ್): ಪ್ರಾರಂಭಿಕ ಬೆಲೆ 5.29 ಲಕ್ಷ ರು.

        1.5 ಲೀಟರ್ ಟಿಐ-ವಿಸಿಟಿ (ಪೆಟ್ರೋಲ್ ಆಟೋಮ್ಯಾಟಿಕ್): 6.91 ಲಕ್ಷ ರು.

        ಫೋರ್ಡ್ ಫಿಗೊ ಸಂಪೂರ್ಣ ಬೆಲೆಗಾಗಿ ಇಲ್ಲಿ ಕ್ಕಿಕ್ಕಿಸಿ

        ವೆರಿಯಂಟ್, ಬಣ್ಣಗಳು

        ವೆರಿಯಂಟ್, ಬಣ್ಣಗಳು

        ದೆಹಲಿ ಎಕ್ಸ್ ಶೋ ರೂಂ 4.29 ಲಕ್ಷ ರು. ಪ್ರಾರಂಭಿಕ ಬೆಲೆಯೆಲ್ಲಿ ಬಿಡುಗಡೆಯಾಗಿರುವ ನೂತನ ಫೋರ್ಡ್ ಫಿಗೊ ಮೂರು ಎಂಜಿನ್, ಆರು ವೆರಿಯಂಟ್ ಹಾಗೂ ಏಳು ಬಣ್ಣಗಳಲ್ಲಿ ಲಭ್ಯವಾಗಲಿದೆ.

        ವೆರಿಯಂಟ್: ಬೇಸ್, ಆ್ಯಂಬಿಯಂಟ್, ಟ್ರೆಂಡ್, ಟ್ರೆಂಡ್ ಪ್ಲಸ್, ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್

        ಬಣ್ಣಗಳು: ರಗ್ಬಿ ರೆಡ್, ಸ್ಪಾರ್ಕ್ಲಿಂಗ್ ಗೋಲ್ಡ್, ಓಕ್ಸಫರ್ಡ್ ವೈಟ್, ಟಕ್ಸೆಡೊ ಬ್ಲ್ಯಾಕ್, ಡೀಪ್ ಇಂಪಾಕ್ಟ್ ಬ್ಲೂ, ಇಂಗೊಟ್ ಸಿಲ್ವರ್ ಮತ್ತು ಸ್ಪೋಕ್ ಗ್ರೇ

        ಪ್ಲಸ್ ಪಾಯಿಂಟ್

        ಪ್ಲಸ್ ಪಾಯಿಂಟ್

        • ಬೇಕಾದಷ್ಟು ಸ್ಟೋರೆಜ್ ಜಾಗ,
        • ಆಧುನಿಕ ತಂತ್ರಜ್ಞಾನ - ಮೈ ಫೋರ್ಡ್ ಡಾಕ್, ಫೋರ್ಡ್ ಆಪ್ ಲಿಂಕ್,
        • ಪರಿಣಾಮಕಾರಿ ಎಸಿ,
        • ಶಕ್ತಿಶಾಲಿ, ಇಂಧನ ಕ್ಷಮತೆಯ ಡೀಸೆಲ್ ಎಂಜಿನ್,
        • ಸ್ಟೈಲಿಷ್ ಹಾಗೂ ಸ್ಪೋರ್ಟಿ ಡಿಸೈನ್,
        • ಏಳು ಬಣ್ಣಗಳ ಆಯ್ಕೆ,
        • ಎಲ್ಲ ವೆರಿಯಂಟ್ ಗಳಲ್ಲೂ ಸ್ಟ್ಯಾಂಡರ್ಡ್ ಏರ್ ಬ್ಯಾಗ್,
        • ಟಾಪ್ ಎಂಡ್ ವೆರಿಯಂಟ್ ನಲ್ಲಿ ಆರು ಏರ್ ಬ್ಯಾಗ್ ಗಳ ಆಯ್ಕೆ,
        • ಕಾರಿನೊಳಗೆ ಹೆಚ್ಚು ಸ್ಥಳಾವಕಾಶ,
        • ಫೋರ್ಡ್ ಮೈಕೀ
        • ಹಿನ್ನೆಡೆ

          ಹಿನ್ನೆಡೆ

          • 1.2 ಪಟ್ರೋಲ್ ಎಂಜಿನ್ ವೇಗವರ್ಧನೆ,
          • ಮುಂಭಾಗ ಹಾಗೂ ಹಿಂಭಾಗ ಪ್ರಯಾಣಿಕ ಸೀಟುಗಳ ಎತ್ತರ ಸ್ವಲ್ಪ ಜಾಸ್ತಿ,
          • ಫೋರ್ಡ್ ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಾನಿಕ್ ಪವರ್ ಅಸಿಸ್ಟಡ್ ಸ್ಟೀರಿಂಗ್ (EPAS) ಕಡಿಮೆ ವೇಗದಲ್ಲಿ ಶ್ರಮರಹಿತವಾಗಿದ್ದರೂ ಹೈಡ್ರಾಲಿಕ್ ಪವರ್ ಅಸಿಸ್ಟಡ್ ಸ್ಟೀರಿಂಗ್ ಗೆ ಹೋಲಿಸಿದಾಗ ಗರಿಷ್ಠ ವೇಗದಲ್ಲಿ ಹ್ಯಾಂಡ್ಲಿಂಗ್ ನಲ್ಲಿ ಬೇಕಾದಷ್ಟು ಆತ್ಮವಿಶ್ವಾಸವನ್ನು ನೀಡುವುದಿಲ್ಲ.
          • ಅಂತಿಮ ತೀರ್ಪು

            ಅಂತಿಮ ತೀರ್ಪು

            ಅಷ್ಟಕ್ಕೂ ನೂತನ ಫೋರ್ಡ್ ಫಿಗೊ ಗೇಮ್ ಚೇಂಜರ್ ಆಗುವುದೇ ಎಂಬುದಕ್ಕೆ ಗ್ರಾಹಕರ ಬೇಡಿಕೆಗಳೇ ಮೊದಲ ಆದ್ಯತೆಯಾದರೂ ಮಾರುಕಟ್ಟೆಯಲ್ಲಿ ತಾಜಾತನವನ್ನುಂಟು ಮಾಡಲಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಮಾರಾಟ ಸಂಖ್ಯೆಯ ವಿಚಾರದಲ್ಲಿ ಸ್ವಿಫ್ಟ್ ಮೀರಿಸುವುದು ಅಷ್ಟು ಸುಲಭವಲ್ಲದಿದ್ದರೂ ಒಂದು ಕಂಪ್ಲೀಟ್ ಪ್ಯಾಕೇಜ್ ಹ್ಯಾಚ್ ಬ್ಯಾಕ್ ಕಾರು ಎನ್ನುವ ನಿಟ್ಟಿನಲ್ಲಿ ವಾಹನ ಪ್ರೇಮಿಗಳಿಗೆ ಅತ್ಯುತ್ತಮ ಆಯ್ಕೆಯಾಗಲಿದೆ. ಅಲ್ಲದೆ ಮೊದಲ ಜನಾಂಗದ ಯಶಸ್ಸನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ ಎಂಬುದಂತೂ ಸ್ಪಷ್ಟ.

            ಫೋರ್ಡ್ ಫಿಗೊ: ಮೊದಲ ಚಾಲನಾ ವಿಮರ್ಶೆ

            ಎಂಜಿನ್ ತಾಂತ್ರಿಕತೆ

            ಫೋರ್ಡ್ ಫಿಗೊ: ಮೊದಲ ಚಾಲನಾ ವಿಮರ್ಶೆ

            ರೇಟಿಂಗ್


Most Read Articles

Kannada
English summary
First Drive: 2015 Ford Figo—The Pursuit Of Success
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X