ಸಣ್ಣ ಕಾರಿನ ದೊಡ್ಡತನ; ಇದುವೇ ಟಾಟಾ ನ್ಯಾನೋ ಜೆನ್ ಎಕ್ಸ್

By Nagaraja

ಈಗಾಗಲೇ ಇತಿಹಾಸದಲ್ಲಿ ತನ್ನ ನಾಮವನ್ನು ಭದ್ರವಾಗಿರಿಸಿರುವ ಟಾಟಾ ನ್ಯಾನೋ ಜೈತ್ರಯಾತ್ರೆ ಇಲ್ಲಿಗೂ ಕೊನೆಗೊಳ್ಳುವುದಿಲ್ಲ. ಪೀಳೆಗೆಯಿಂದ ಪೀಳಿಗೆಗೆಗೆ ಹೊಸತನ ನೀಡುವ ಭರವಸೆಯೊಂದಿಗೆ ಟಾಟಾದ ಹೊಸ ಅವತಾರ ಅದುವೇ ನ್ಯಾನೋ ಜೆನ್ ಎಕ್ಸ್ ಸೆಮಿ ಆಟೋಮ್ಯಾಟಿಕ್ ಕಾರು ಬಂದೇ ಬಿಟ್ಟಿದೆ.

ಇವನ್ನೂ ಓದಿ: ಆಲ್ಟೊ vs ನ್ಯಾನೋ: ಯಾವ ಕಾರು ಬೆಸ್ಟ್ ?

ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಬಿಡುಗಡೆ ಕಾಣಲಿರುವ ನ್ಯಾನೋ ಜೆನ್ ಎಕ್ಸ್ ಎಎಂಟಿ ಕಾರಿನಲ್ಲಿ ಅಂತದ್ದೇನಿದೆ ಎಂಬ ಕುತೂಹಲ ನಿಮ್ಮಲ್ಲಿರುವಂತೆಯೇ ನಮ್ಮಲ್ಲಿಯೂ ಹುಟ್ಟಿಕೊಂಡಿತ್ತು. ಇದಕ್ಕುತ್ತರವಾಗಿ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇವೆ.

ವಿನ್ಯಾಸ

ವಿನ್ಯಾಸ

ನೂತನ ಟಾಟಾ ನ್ಯಾನೋ ಜೆನ್ ಎಕ್ಸ್ ಒಟ್ಟಾರೆ ವಿನ್ಯಾಸದಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಇಲ್ಲೂ ಗ್ರಾಹಕರಿಗೆ ಕೈಕೆಟುಗುವ ಬೆಲೆಯಲ್ಲಿ ಅತ್ಯುತ್ತಮ ಕಾರೊಂದನ್ನು ತಲುಪಿಸುವ ತನ್ನ ಪ್ರಯತ್ನವನ್ನು ಟಾಟಾ ಅಚ್ಚುಕಟ್ಟಾಗಿ ನಿರ್ವಹಿಸಿದೆ. ಪರಿಷ್ಕೃತ ಬಂಪರ್, ಸ್ಪೋಕ್ಡ್ ಹೆಡ್ ಲೈಟ್, ಫಾಗ್ ಲ್ಯಾಂಪ್ ಹಾಗೂ ಹೊಸ ಗ್ರಿಲ್ ಹೊಸ ನ್ಯಾನೋದ ಆಕರ್ಷಣೆಯಾಗಿರಲಿದೆ. ಇನ್ನು ಎರಡೂ ಹೆಡ್ ಲೈಟ್ ನಡುವಣ ಟಾಟಾ ಲಾಂಛನ ಎದ್ದು ಕಾಣಿಸುತ್ತಿದೆ.

ಹಿಂದುಗಡೆ ತೆರೆಯಬಹುದಾದ ಢಿಕ್ಕಿ ಬಾಗಿಲು

ಹಿಂದುಗಡೆ ತೆರೆಯಬಹುದಾದ ಢಿಕ್ಕಿ ಬಾಗಿಲು

ಕೊಟ್ಟ ಮಾತನ್ನು ಪಾಲಿಸಿರುವ ಟಾಟಾ ನ್ಯಾನೋ ಹಿಂದುಗಡೆ ತೆರೆಯಬಹುದಾದ ಢಿಕ್ಕಿ ಬಾಗಿಲು ಒದಗಿಸಿರುವುದು ಬಹು ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ನ್ಯಾನೋ ಹಿಂದಿನ ಆವೃತ್ತಿಯಲ್ಲಿ ಇಂತಹದೊಂದು ಸೌಲಭ್ಯದ ಕೊರತೆ ಕಾಡುತ್ತಿತ್ತು. ಇದು 110 ಲೀಟರ್ ಢಿಕ್ಕಿ ಜಾಗವನ್ನು ಹೊಂದಿರುವುದು ಒಮ್ಮೆ ಇದರತ್ತ ಕಣ್ಣಾಯಿಸುವಂತೆ ಮಾಡುತ್ತಿದೆ. ಇನ್ನು ಎಎಂಟಿ ಆವೃತ್ತಿಯಲ್ಲಿ ಸ್ಟೋರೆಜ್ ಜಾಗ 91 ಲೀಟರ್ ಮಾತ್ರವಾಗಿರಲಿದೆ.

 ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಇದು 624 ಸಿಸಿ ಟ್ವಿನ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 38.19 ಅಶ್ವಶಕ್ತಿ (51 ತಿರುಗುಬಲ) ಉತ್ಪಾದಿಸಲಿದೆ. ಈ ಮೂಲಕ ಅತ್ಯಂತ ಅಗ್ಗದ ಎಎಂಟಿ ಮಾದರಿ ಎನಿಸಿಕೊಳ್ಳಲಿದೆ.

ಗೇರ್ ಬಾಕ್ಸ್

ಗೇರ್ ಬಾಕ್ಸ್

ವಾಹನೋದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಯೆಂಬಂತೆ ನ್ಯಾನೋ ಜೆನ್ ಎಕ್ಸ್ ನಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆಳವಡಿಕೆಯಾಗಿದೆ. ಇದರಿಂದ ಇಂಧನ ಕ್ಷಮತೆಗೆ ಹೆಚ್ಚಿನ ಧಕ್ಕೆಯುಂಟಾಗುವುದಿಲ್ಲ ಎಂಬುದು ಗಮನಾರ್ಹ ಅಂಶವಾಗಿದ್ದು, ಸಿಟಿ ಮುಂತಾದ ವಾಹನ ದಟ್ಟಣೆಯ ಪ್ರದೇಶದಲ್ಲಿ ಚಾಲನೆ ತುಂಬಾನೆ ಸುಲಭವಾಗಿರಲಿದೆ.

ಮೈಲೇಜ್ ಮತ್ತು ಇಂಧನ ಟ್ಯಾಂಕ್

ಮೈಲೇಜ್ ಮತ್ತು ಇಂಧನ ಟ್ಯಾಂಕ್

ಟಾಟಾ ಪ್ರಕಾರ ನ್ಯಾನೋ ಜೆನ್ ಎಕ್ಸ್ ಎಎಂಟಿ ಮಾದರಿಯು ಪ್ರತಿ ಲೀಟರ್ ಗೆ 21.9 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಇನ್ನು ಸಾಮಾನ್ಯ ಮ್ಯಾನುವಲ್ ಕಾರು ಪ್ರತಿ ಲೀಟರ್ ಗೆ 25.4 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ. ಹಾಗೆಯೇ 24 ಲೀಟರ್ ಗಳ ಇಂಧನ ಟ್ಯಾಂಕ್ ಜೋಡಣೆ ಮಾಡಲಾಗಿದೆ.

ಒಳಮೈ ಸ್ಥಳಾವಕಾಶ

ಒಳಮೈ ಸ್ಥಳಾವಕಾಶ

ಹಿಂದಿನ ನ್ಯಾನೋ ಮಾದರಿಗಳಂತೆ ಹೊಸ ಜೆನ್ ಎಕ್ಸ್ ಮಾದರಿಯಲ್ಲೂ ಮೋಡಿ ಮಾಡಿರುವ ಟಾಟಾ ಸಂಸ್ಥೆಯು ಜೆನ್ ಎಕ್ಸ್ ಮಾದರಿಯಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಿದೆ. ಹಾಗೆಯೇ ಹಿಂದುಗಡೆ ಸೀಟನ್ನು ಮಡಚುವ ಮೂಲಕ ಹೆಚ್ಚುವರಿ ಸ್ಥಳಾವಕಾಶವನ್ನು ಪಡೆಯಬಹುದಾಗಿದೆ.

ಇನ್ಸ್ಟುಮೆಂಟ್

ಇನ್ಸ್ಟುಮೆಂಟ್

ನ್ಯಾನೋ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮಧ್ಯ ಭಾಗದಲ್ಲಿ ಲಗತ್ತಿಸಲಾಗಿದ್ದು ತುಂಬಾನೇ ಸರಳವಾಗಿದೆ. ಈ ಅನಲಾಗ್ ಡಿಜಿಟಲ್ ಕನ್ಸೋಲ್ ನಲ್ಲಿ ಇಂಧನ ವ್ಯಯ, ಡಿಜಿಟಲ್ ಗಡಿಯಾರ, ಪ್ರವಾಸ ಮೀಟರ್, ಗೇರ್ ಮುಂತಾದ ಅಗತ್ಯ ಮಾಹಿತಿಗಳನ್ನು ಪಡೆಯಬಹುದಾಗಿದೆ.

ವಿಶಿಷ್ಟತೆ

ವಿಶಿಷ್ಟತೆ

ಹಿಂದಿನ ಮಾದರಿಗಿಂತಲೂ ಹೊಸ ನ್ಯಾನೋ ಕಾರಿನಲ್ಲಿ ದಪ್ಪವಾದ ಆಕರ್ಷಕವಾದ ಸ್ಟೀರಿಂಗ್ ವೀಲ್, ಫೋರ್ ಸ್ಪೀಡ್ ಮ್ಯೂಸಿಕ್ ಸಿಸ್ಟಂ, ಬ್ಲೂಟೂತ್, ಯುಎಸ್ ಬಿ ಕನೆಕ್ಟಿವಿಟಿ, ಮುಂಭಾಗದಲ್ಲಿ ಪವರ್ ವಿಂಡೋ ಮತ್ತು ಚಾರ್ಜಿಂಗ್ ಔಟ್ಲೆಟ್ ಮುಂತಾದ ಸೌಲಭ್ಯಗಳು ದೊರಕಲಿದೆ. ಇನ್ನು ಸ್ವಿಚ್ ಗಳು ಗೇರ್ ಬಾಕ್ಸ್ ಮೇಲ್ಗಡೆಯಾಗಿ ನೀಡಲಾಗಿದೆ.

ಸ್ಟೋರೆಜ್

ಸ್ಟೋರೆಜ್

ಹಾಗಿದ್ದರೂ ಬಾಟಲಿ ಅಥವಾ ಸಣ್ಣ ಪುಟ್ಟ ಅಗತ್ಯ ವಸ್ತುಗಳನ್ನಿಡುವುದು ಪ್ರಯಾಸದಾಯಕವಾಗಿದೆ. ಎಲ್ಲವೂ ಒಂದು ಬಜೆಟ್ ಇರುವಾಗ ಇಂತಹ ಸಣ್ಣ ಪುಟ್ಟ ಕೊರತೆಯನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇಲ್ಲಿ ಡೋರ್ ನಲ್ಲಿ ಹೋಲ್ಡರ್ ನೀಡಿದರೂ ಇದರ ಉಪಯೋಗ ಸಿಗಲಾರದು. ಯಾಕೆಂದರೆ ತುಂಬಾನೇ ಚಿಕ್ಕದಾಗಿದ್ದು, ದೈನಿಕ ಪತ್ರಗಳನ್ನಷ್ಟೇ ಇಡಬಹುದಾಗಿದೆ.

ಸುರಕ್ಷತೆ

ಸುರಕ್ಷತೆ

ಪ್ರತಿಯೊಂದು ಬಜೆಟ್ ಕಾರಿನಲ್ಲೂ ಸುರಕ್ಷತೆ ದೊಡ್ಡ ಸಮಸ್ಯೆಯಾಗಿರುತ್ತದೆ. ಯಾಕೆಂದರೆ ಬೆಲೆ ಕಡಿತ ಮಾಡುವ ನಿಟ್ಟಿನಲ್ಲಿ ಏರ್ ಬ್ಯಾಗ್ ಗಳಂತಹ ಸೌಲಭ್ಯಗಳು ಮೊದಲೇ ಸಿಗುವುದಿಲ್ಲ. ಇದರಿಂದಾಗಿ ಏನೇ ಹೆಚ್ಚು ಕಡಿಮೆಯಾದರೆ ಸೀಟು ಬೆಲ್ಟ್ ಗಳನ್ನು ಮಾತ್ರ ಆಶ್ರಯಿಸಬೇಕಾಗುತ್ತದೆ. ಇನ್ನು ಹೆಚ್ಚಿನ ಭದ್ರತೆಗಾಗಿ ನ್ಯಾನೋ ದೇಹವನ್ನು ಬಲವರ್ಧಿಸಲಾಗಿದೆ ಎಂದು ಸಂಸ್ಥೆಯು ಸಮರ್ಥಿಸಿಕೊಳ್ಳುತ್ತಿದೆ.

ಬೆಲೆ

ಬೆಲೆ

ನಿಸ್ಸಂಶವಾಗಿಯೂ ನ್ಯಾನೋ ಟಾಪ್ ಎಂಡ್ ಜೆನ್ ಎಕ್ಸ್ ಎಎಂಟಿ ಮಾದರಿಯು ಮೂರು ಲಕ್ಷ ರು.ಗಳ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು (ಮೇ 19ರಂದು ಬಿಡುಗಡೆ) ದೇಶದ ಅತ್ಯಂತ ಅಗ್ಗದ ಎಎಂಟಿ ಮಾದರಿ ಎನಿಸಿಕೊಳ್ಳಲಿದೆ. ಅಷ್ಟಕ್ಕೂ ನ್ಯಾನೋ ಚೊಕ್ಕ ಕಾರು ನಿಮ್ಮ ಮನ ಸೆಳೆಯಿತೇ? ನಮ್ಮ ಕಾಮೆಂಟ್ ಬಾಕ್ಸ್ ಮೂಲಕ ಉತ್ತರಿಸಿರಿ.

ಅಂತಿಮ ತೀರ್ಪು

ಅಂತಿಮ ತೀರ್ಪು

ಅಷ್ಟಕ್ಕೂ ನ್ಯಾನೋ ಜೆನ್ ಎಕ್ಸ್ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆಯೇ ಎಂಬುದು ಮೂಡಿ ಬರುತ್ತಿರುವ ಕೊನೆಯ ಪ್ರಶ್ನೆಯಾಗಿದೆ. ಸಿಟಿ ಡ್ರೈವಿಂಗ್ ಸಂಬಂಧಪಟ್ಟಂತೆ ನ್ಯಾನೋ ಅತ್ಯುತ್ತಮ ಕಾರು ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ ನಗರದಿಂದ ಸ್ವಲ್ಪ ಆಚೆಗೆ ಹೆದ್ದಾರಿಯ ವಿಚಾರಕ್ಕೆ ಬಂದಾಗ ನ್ಯಾನೋ ಕಾರ್ಯ ಕ್ಷಮತೆಯಲ್ಲಿ ಸಂದೇಹ ಮೂಡುತ್ತದೆ. ಹಾಗಿದ್ದರೂ ಎಎಂಟಿ ಆಯ್ಕೆ, ತೆರೆಯಬಹುದಾದ ಢಿಕ್ಕಿ ಜಾಗ ಹಾಗೂ ಸ್ಥಳಾವಕಾಶ ಮುಂತಾದ ವಿಚಾರಗಳಿಗೆ ಬಂದಾಗ ನ್ಯಾನೋ ಒಂದು ಉತ್ತಮ ಕಾರನ್ನು ಸಿದ್ದಪಡಿಸಿದೆ ಎಂದೇ ಹೇಳಬಹುದು.

ಎಎಂಟಿ ಎಂದರೇನು?

ಎಎಂಟಿ ಎಂದರೇನು?

ಎಎಂಟಿ ವರ್ಷನ್ ಮ್ಯಾನುವಲ್ ಗೇರ್ ಬಾಕ್ಸ್ ಮೇಲೆ ಅವಲಂಬಿತವಾಗಿದ್ದು, ಆಟೋ ಮೋಡ್‌ನಲ್ಲಿ (ಡ್ರೈವ್) ಸ್ವಯಂಚಾಲಿತವಾಗಿ ಗೇರ್‌ಗಳು ಬದಲಾಗುತ್ತಿರುತ್ತವೆ. ಇದು ಸ್ಪೋರ್ಟ್ಸ್ ಮೋಡ್ (ಮ್ಯಾನುವಲ್) ಸಹ ಪಡೆದುಕೊಂಡಿದ್ದು, ಇಲ್ಲಿ ಚಾಲಕ ಮ್ಯಾನುವಲ್ ಆಗಿ ಗೇರ್ ಬದಲಾವಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಪ್ಲಸ್ (ಗೇರ್ ಹೆಚ್ಚಿಸಲು) ಮತ್ತು ಮೈನಸ್ (ಗೇರ್ ಕಡಿಮೆ ಮಾಡಲು) ನೀಡಲಾಗಿದೆ.

ಎಎಂಟಿ ಬಗ್ಗೆ ತಿಳಿದುಕೊಳ್ಳಲೇಬೇಕಾದ 10 ಅಂಶಗಳು

ಎಎಂಟಿ ಬಗ್ಗೆ ತಿಳಿದುಕೊಳ್ಳಲೇಬೇಕಾದ 10 ಅಂಶಗಳು

ಇಟಲಿ ಮೂಲದ ಮ್ಯಾಗ್ನೆಟ್ಟಿ ಮರೆಲ್ಲಿ ಸಂಸ್ಥೆಯು ಭಾರತಕ್ಕೆ ಎಂಎಂಟಿ ವ್ಯವಸ್ಥೆಯನ್ನು ಒದಗಿಸುತ್ತದೆ.

ಎಎಂಟಿ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 10 ಅಂಶಗಳು

ಇವನ್ನೂ ಓದಿ

ಇವನ್ನೂ ಓದಿ

ಟಾಟಾ ನ್ಯಾನೋ ಕಾರಿನ 15 ರೋಚಕ ಸತ್ಯಗಳು

ಐದು ಲಕ್ಷಕ್ಕೆ 5 ಬಜೆಟ್ ಕಾರುಗಳು

Most Read Articles

Kannada
English summary
That's how the Tata Nano GenX was born. With an AMT, a boot that opens and a size that is apt, or rather perfect for the city. Let's take a look at what the Tata Nano GenX has to offer:
Story first published: Thursday, May 7, 2015, 10:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X