ನಿಮ್ಮ ಮೊದಲ ಕಾರು ಟೊಯೊಟಾ ಎಟಿಯೋಸ್ ಲಿವಾ ಆದರೇನು?

Written By:

21ನೇ ಶತಮಾನದಲ್ಲಿ ಭಾರತಕ್ಕೆ ಎಂಟ್ರಿ ಕೊಟ್ಟ ಬಳಿಕ ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಟೊಯೊಟಾ ಬಿಡುಗಡೆ ಮಾಡಿರುವ ಮೊದಲ ಹ್ಯಾಚ್ ಬ್ಯಾಕ್ ಕಾರು ಎಟಿಯೋಸ್ ಲಿವಾ ಆಗಿದೆ. ಎಟಿಯೋಸ್ ಸೆಡಾನ್ ತಳಹದಿಯಲ್ಲಿ ನಿರ್ಮಾಣವಾಗಿರುವ ಎಟಿಯೋಸ್ ಲಿವಾ ಕಾರು 2011ರಲ್ಲಿ ಮೊದಲ ಬಾರಿಗೆ ಪ್ರವೇಶ ಪಡೆದಿತ್ತು.

ಇವನ್ನೂ ಓದಿ: ಪ್ಲಾಟಿನಂ ಎಟಿಯೋಸ್ ಒಂದು ಪಕ್ಕಾ ಫ್ಯಾಮಿಲಿ ಕಾರು ಹೌದೇ ?

ಇತ್ತೀಚೆಗಷ್ಟೇ ಈ ಎರಡು ಕಾರುಗಳನ್ನು ಪರಿಷ್ಕೃತ ಆವೃತ್ತಿಯೊಂದಿಗೆ ಟೊಯೊಟಾ ಸಂಸ್ಥೆಯು ಪರಿಚಯಿಸಿತ್ತು. ಇದು ಆಧುನಿಕತೆಗೆ ತಕ್ಕಂತೆ ತಾಜಾತನವನ್ನು ಪಡೆದಿದ್ದು, ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿದೆ. ಭಾರತದಲ್ಲಿ ಎಟಿಯೋಸ್ ಲಿವಾ ಕಾರಿಗೂ ಅಷ್ಟೇನು ಯಶ ದೊರಕಿರಲಿಲ್ಲ. ಹಾಗಿದ್ದರೂ ಹೊಸ ಆವೃತ್ತಿಯು ಕುಂದು ಕೊರತೆಗಳೆನ್ನೆಲ್ಲ ನೀಗಿಸುವತ್ತ ಆಶಾಭಾವನೆ ಮೂಡಿಸಿದೆ. ಈ ಸಂಬಂಧ ಸಂಪೂರ್ಣ ಚಾಲನಾ ವಿಮರ್ಶೆಯನ್ನು ಓದುಗರ ಮುಂದಿಡಲಾಗುವುದು.

ಪರೀಕ್ಷಾರ್ಥ ಚಾಲನೆ: ಟೊಯೊಟಾ ಎಟಿಯೋಸ್ ಲಿವಾ ವಿಎಕ್ಸ್

ವಿನ್ಯಾಸ

ತುಂಬಾನೇ ಅತ್ಯಗತ್ಯವಾದ ಬದಲಾವಣೆಯನ್ನು ಟೊಯೊಟಾ ಎಟಿಯೋಸ್ ಲಿವಾ ಕಾರಿನಲ್ಲಿ ತರಲಾಗಿದೆ. ಪರಿಷ್ಕೃತ ಫ್ರಂಟ್ ಬಂಪರ್, ಗ್ರಿಲ್ ಒಟ್ಟಾರೆ ವಿನ್ಯಾಸದ ಮೇಲೆ ಪ್ರಭಾವ ಬೀರಿದೆ. ಒಟ್ಟಾರೆಯಾಗಿ ಕ್ರೀಡಾತ್ಮಕ ವಿನ್ಯಾಸ ಕಾಪಾಡಿಕೊಳ್ಳುವ ಪ್ರಯತ್ನ ಮಾಡಲಾಗಿದೆ.

ವಿನ್ಯಾಸ ನೋಟದ ಹೊರತಾಗಿ ಕಾರಿನ ಒಟ್ಟಾರೆ ಆಯಾಮದಲ್ಲಿ ಬದಲಾವಣೆ ತರಲಾಗಿಲ್ಲ. ಆದರೂ ಪ್ಲಾಟಿನಂ ಎಟಿಯೋಸ್ ತರಹನೇ ಕಾರಿನ ಎನ್ ವಿಎಚ್ ಮಟ್ಟದಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಇದು ಮತ್ತಷ್ಟು ಆನಂದದಾಯಕವಾಗಿ ಚಾಲನೆ ಮಾಡಲು ಸಹಕಾರಿಯಾಗಲಿದೆ. ಇದಕ್ಕೆ ಕ್ರೀಡಾತ್ಮಕ ಅಲಾಯ್ ವೀಲ್ ಗಳು ಚುರುಕು ಮುಟ್ಟಿಸಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಎಟಿಯೋಸ್ ಲಿವಾ ಜಿಎಕ್ಸ್: 5,64,127 ರು.
ಎಟಿಯೋಸ್ ಲಿವಾ ವಿ: 5,88,188 ರು.
ಎಟಿಯೋಸ್ ಲಿವಾ ವಿಎಕ್ಸ್: 6,39,231 ರು.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಎಟಿಯೋಸ್ ಲಿವಾ ಜಿಎಕ್ಸ್ ಡಿ: 6,94,053
ಎಟಿಯೋಸ್ ಲಿವಾ ವಿಡಿ: 7,11,614
ಎಟಿಯೋಸ್ ಲಿವಾ ವಿಎಕ್ಸ್ ಡಿ: 7,53,657

ಎಂಜಿನ್

ಎಂಜಿನ್ ತಾಂತ್ರಿಕತೆಯಲ್ಲೂ ಯಾವುದೇ ಬದಲಾವಣೆ ಇರುವುದಿಲ್ಲ. ನೂತನ ಎಟಿಯೋಸ್ ಲಿವಾ ಹ್ಯಾಚ್ ಬ್ಯಾಕ್ ಕಾರಿನಲ್ಲಿರುವ 1.2 ಲೀಟರ್ ಪೆಟ್ರೋಲ್ ಎಂಜಿನ್ 104 ಎನ್ ತಿರುಗುಬಲದಲ್ಲಿ 79 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.4 ಲೀಟರ್ ಡೀಸೆಲ್ ಎಂಜಿನ್ 170 ಎನ್ ಎಂ ತಿರುಗುಬಲದಲ್ಲಿ 67 ಅಶ್ವಶಕ್ತಿಯನ್ನು ನೀಡಲಿದೆ. ಇವೆರಡು ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನಿಂದ ನಿಯಂತ್ರಿಸಲ್ಪಡಲಿದೆ.

ಮೈಲೇಜ್ (km/1)

ಪೆಟ್ರೋಲ್: 18.16
ಡೀಸೆಲ್: 23.59

ಚಾಲನೆ ಮತ್ತು ಹ್ಯಾಂಡ್ಲಿಂಗ್

ಚಾಲನೆ ಹಾಗೂ ಹ್ಯಾಂಡ್ಲಿಂಗ್ ವಿಚಾರಕ್ಕೂ ಬಂದಾಗಲೂ ಟೊಯೊಟಾ ನಿಮ್ಮನ್ನು ನಿರಾಸೆಗೊಳಪಡಿಸುವುದಿಲ್ಲ. ಈ ನಿಟ್ಟಿನಲ್ಲಿ ನಿಖರ ಸಸ್ಪೆನ್ಷನ್ ವ್ಯವಸ್ಥೆಯನ್ನು ಮೆಚ್ಚಲೇ ಬೇಕಾಗುತ್ತದೆ.

ಟೊಯೊಟಾ ಎಟಿಯೋಸ್ ಆರಾಮದಾಯಕ ಚಾಲನೆಯನ್ನು ನೀಡಲಿದೆ. ಭಾರತದ ರಸ್ತೆ ಪರಿಸ್ಥಿತಿಯಲ್ಲಿ ಓಡಿಸುವುದು ಸವಾಲಿನ ವಿಷಯವಾಗಿರಲಿದೆ. ಕಡಿದಾದ ತಿರುವಿನಲ್ಲೂ ಅತ್ಯುತ್ತಮ ಸಮತೋಲನವನ್ನು ಕಾಪಾಡಿಕೊಳ್ಳಲಿದೆ.

ಕಾರಿನೊಳಗಿರುವ ಹೊಸ ಬಣ್ಣವು ಮನ ರಂಜಿಸಲಿದೆ. ಕಾರಿನ ಡ್ಯಾಶ್ ಬೋರ್ಡ್ ಮತ್ತು ಡೋರ್ ಗಳಿಗೆ ಕಪ್ಪು ಹಾಗೂ ಐವರಿ ಸ್ಪರ್ಶವನ್ನು ತುಂಬಲಾಗಿದೆ. ಅಂತೆಯೇ ಫ್ಯಾಬ್ರಿಕ್ ಸೀಟುಗಳು ಪ್ರೀಮಿಯಂ ಅನುಭವ ನೀಡುತ್ತದೆ.

ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಕಪ್ಪು ಥೀಮ್ ನಿಂದ ಆವೃತ್ತವಾಗಿದೆ. ವಾರ್ನಿಂಗ್ ಲೈಟ್ಸ್ ಸಹ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಹಾಗೆಯೇ ಮೀಟರ್ ಕನ್ಸಾಲ್ ಶುಭ್ರತೆಯನ್ನು ಹೆಚ್ಚು ಕಡಿಮೆ ಮಾಡಬಹುದಾಗಿದೆ.

ಒಂದು ಹ್ಯಾಚ್ ಬ್ಯಾಕ್ ಕಾರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಎಟಿಯೋಸ್ ಲಿವಾ ಪಡೆಯಲಿದೆ. ಇದರಲ್ಲಿ 2 ಡಿನ್ ಮ್ಯೂಸಿಕ್ ಪ್ಲೇಯರ್, ಎಲ್ಲ ಡೋರ್ ಗಳಲ್ಲೂ ಪವರ್ ವಿಂಡೋ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಮತ್ತು ಮಡಚಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಪರಿಷ್ಕೃತ ಮೀಟರ್ ಕನ್ಸಾಲ್, ಹಿಂದಿನ ಸೀಟಿನಲ್ಲೂ ಆರ್ಮ್ ರೆಸ್ಟ್, ಎತ್ತರ ಹೊಂದಾಣಿಸಬಹುದಾದ ಹೆಡ್ ರೆಸ್ಟ್ ಸೇವೆಗಳಿರಲಿದೆ.

ವೈಶಿಷ್ಟ್ಯಗಳು

ಹೊಸ ಓಪ್ಟಿಟ್ರಾನ್ ಕಾಂಬಿಮೀಟರ್,
ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ರಿಯರ್ ವ್ಯೂ ಮಿರರ್,
ಬೆಸ್ಟ್ ಇನ್ ಕ್ಲಾಸ್ ಕ್ಲಾಬಿನ್ ಜಾಗ,
ಬೆಸ್ಟ್ ಇನ್ ಕ್ಲಾಸ್ ಎಸಿ ಜೊತೆ ಬಹು ದಿಕ್ಕಿನತ್ತ ವೆಂಟ್ಸ್,
ಬೆಸ್ಟ್ ಇನ್ ಕ್ಲಾಸ್ ಢಿಕ್ಕಿ ಜಾಗ - 592 ಲೀಟರ್,
ಮಡಚಬಹುದಾದ ಹಿಂಬದಿಯ ಸೀಟು

ಸುರಕ್ಷತೆ

ಎಲ್ಲ ವೆರಿಯಂಟ್ ಗಳಲ್ಲೂ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್) ಜೊತೆ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ (ಇಬಿಡಿ) ಮತ್ತು ಡ್ಯುಯಲ್ ಫ್ರಂಟ್ ಏರ್ ಬ್ಯಾಗ್ ವ್ಯವಸ್ಥೆಯಿರಲಿದೆ. ಹಿಂಬದಿ ಸೀಟಿನ ಎಲ್ಲ ಮೂವರು ಪ್ರಯಾಣಿಕರಿಗೆ ತ್ರಿ ಪಾಯಿಂಗ್ ಸೀಟು ಬೆಲ್ಟ್ ಸೌಲಭ್ಯವು ಇರಲಿದೆ. ಇದರ ಜೊತೆಗೆ ಐಸೊಫಿಕ್ಸ್ ಚೈಲ್ಡ್ ಸೀಟ್ ಲಾಕ್ ವೈಶಿಷ್ಟ್ಯವು ಲಭ್ಯವಿರುತ್ತದೆ.

ನಮ್ಮ ಟೆಸ್ಟಿಂಗ್ ವೇಳೆ ಎಬಿಎಸ್ ವ್ಯವಸ್ಥೆಯು ನಿಖರವಾಗಿ ಕಾರ್ಯ ನಿರ್ವಹಿಸಿರುವುದು ಗಮನಕ್ಕೆ ಪಾತ್ರವಾಗಿದೆ. ಗಂಟೆಗೆ 100 ಕೀ.ಮೀ. ವೇಗದಲ್ಲೂ ಎಬಿಎಸ್ ಅತ್ಯುತ್ತಮ ಕಾರ್ಯ ಕ್ಷಮತೆ ಕಾಪಾಡಿಕೊಂಡಿದೆ.

ಸುರಕ್ಷತೆ

ಹೊಸ ಡ್ಯುಯಲ್ ಐಸೊಫಿಕ್ಸ್ ಚೈಲ್ಡ್ ಸೀಟ್ ಲಾಕ್,
ಎಬಿಎಸ್ ಜೊತೆ ಇಬಿಡಿ,
ಡ್ಯುಯಲ್ ಫ್ರಂಟ್ ಎಸ್ ಆರ್ ಎಸ್ ಏರ್ ಬ್ಯಾಗ್,
ಫ್ರಂಟ್ ಪ್ರಿ ಟೆನ್ಷನರ್ ಫೋರ್ಸ್ ಲಿಮಿಟರ್ ಸೀಟ್ ಬೆಲ್ಟ್,
ಹಿಂದಿನ ಸಾಲಿನ ಮಧ್ಯದಲ್ಲಿ ತೆಗೆಯಬಹುದಾದ ಹೆಡ್ ರೆಸ್ಟ್,
3 ಪಾಯಿಂಟ್ ರಿಯರ್ ಸೀಟು ಬೆಲ್ಟ್,
ಹೊಸತಾದ ಸೆಂಟ್ರಲ್ ಲಾಕಿಂಗ್ ಸಿಸ್ಟಂ,
ರವರ್ಸ್ ಪಾರ್ಕಿಂಗ್ ಸೆನ್ಸಾರ್ (ಐಚ್ಛಿಕ),
ಶಕ್ತಿಶಾಲಿ 1.4 ಲೀಟರ್ ಡೀಸೆಲ್ ಎಂಜಿನ್,
ಶಕ್ತಿಶಾಲಿ 1.2 ಲೀಟರ್ ಡಿಒಎಚ್ ಸಿ ಪೆಟ್ರೋಲ್,

ಅಂತಿಮ ತೀರ್ಪು

ಒಟ್ಟಿನಲ್ಲಿ ನೂತನ ಎಟಿಯೋಸ್ ಲಿವಾ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆಯೇ ಎಂಬುದು ಮೊದಲ ಪ್ರಶ್ನೆಯಾಗಿರುತ್ತದೆ. ನೋಟದಿಂದ ಹಿಡಿದು, ಹ್ಯಾಂಡ್ಲಿಂಗ್, ನಿರ್ವಹಣೆ, ಸುರಕ್ಷತೆ ಹಾಗೆ ವೈಶಿಷ್ಟ್ಯಗಳ ವಿಚಾರದಲ್ಲಿ ಟೊಯೊಟಾ ಎಟಿಯೋಸ್ ಲಿವಾ ಒಂದು ಕಂಪ್ಲೀಟ್ ಹ್ಯಾಚ್ ಬ್ಯಾಕ್ ಕಾರೆನಿಸಿಕೊಂಡಿದೆ. ಇವೆಲ್ಲದಕ್ಕೆ ಹೊರತಾಗಿ ಟೊಯೊಟಾ ಬ್ರಾಂಡ್ ಮೌಲ್ಯ ನಿಮ್ಮ ನಂಬಿಕೆಯನ್ನು ಇಮ್ಮಡಿಗೊಳಿಸಲಿದೆ.

Click to compare, buy, and renew Car Insurance online

Buy InsuranceBuy Now

English summary
The New Toyota Etios Liva Review — We Get Behind The Wheel Of Toyota’s Updated Hatchback
Please Wait while comments are loading...

Latest Photos