ಮರಳಿ ಬಂದ ಇನ್ನೋವಾ; ಹಳೆಯ ಕಾರಿಗಿಂತಲೂ ಹೇಗೆ ಭಿನ್ನ?

By Nagaraja

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಭಾರತದಲ್ಲಿ ಮೊದಲನೇ ತಲೆಮಾರಿನ ಇನ್ನೋವಾ ಕಾರಿನ ನಿರ್ಮಾಣವನ್ನು ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ಸ್ಥಗಿತಗೊಳಿಸಿದೆ. ಈ ಸಂಬಂಧ ಸಂಸ್ಥೆಯ ಬಿಡದಿಯ ಘಟಕದಿಂದ ಕೊನೆಯ ಆವೃತ್ತಿಯ ಇನ್ನೋವಾದ ಸುದ್ದಿಯನ್ನು ನಾವು ಈಗಾಗಲೇ ಪ್ರಕಟಿಸಿರುತ್ತೇವೆ.

Also Read: ಕಿಂಗ್ ಮೇಕರ್ ಮೊದಲನೇ ತಲೆಮಾರಿನ ಇನ್ನೋವಾ ನಿರ್ಮಾಣಕ್ಕೆ ಕೊನೆ

ಈ ನಡುವೆ 2016 ಆಟೋ ಎಕ್ಸ್ ಪೋದಲ್ಲಿ ನೂತನ ಇನ್ನೋವಾ ಪ್ರತ್ಯಕ್ಷಗೊಂಡಿದ್ದು, ಐಕಾನಿಕ್ ಕಾರು ಮರಳಿ ಬರಲು ವೇದಿಕೆ ಸಿದ್ದಗೊಂಡಿದೆ. ಇನ್ನೋವಾ ಕ್ರೈಸ್ಟಾ ಎಂದು ಅರಿಯಲ್ಪಡುವ ಎರಡನೇ ತಲೆಮಾರಿನ ಇನ್ನೋವಾ ತನ್ನ ಹಿಂದಿನ ಮಾದರಿಗಿಂತಲೂ ಸಂಪೂರ್ಣ ಭಿನ್ನವೆನಿಸಲಿದೆ.

ವಿನ್ಯಾಸ - ಮುಂಭಾಗ

ವಿನ್ಯಾಸ - ಮುಂಭಾಗ

ಹಳೆಯ ತಲೆಮಾರಿನ ಇನ್ನೋವಾ ಕಾರಿಗೆ ಹೋಲಿಸಿದಾಗ ನೂತನ ಇನ್ನೋವಾ ಕ್ರೈಸ್ಟಾ ಹೆಚ್ಚು ಆಧುನಿಕ ಶೈಲಿಯ ವಿನ್ಯಾಸವನ್ನು ಪಡೆದಿದೆ. ಇಲ್ಲಿ ಎಲ್ ಇಡಿ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಪ್ರಮುಖವಾಗಿಯೂ ಎದ್ದು ಕಾಣಿಸಲಿದೆ.

ವಿನ್ಯಾಸ - ಮುಂಭಾಗ

ವಿನ್ಯಾಸ - ಮುಂಭಾಗ

ಮುಂಭಾಗದಲ್ಲಿ ಷಡ್ಭುಜೀಯಾಕೃತಿಯ ಫ್ರಂಟ್ ಗ್ರಿಲ್ ಮೇಲೆ ಟೊಯೊಟಾ ಲಾಂಛನವು ಲಗತ್ತಿಸಲಾಗಿದೆ. ಇದಕ್ಕೆ ಲಂಬವಾಗಿ ಕ್ರೋಮ್ ರೇಖೆಗಳನ್ನು ಕೊಡಲಾಗಿದೆ.

ವಿನ್ಯಾಸ - ಮುಂಭಾಗ

ವಿನ್ಯಾಸ - ಮುಂಭಾಗ

ಇಲ್ಲಿ ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಜೊತೆ ಚೂಪಾದ ಹೆಡ್ ಲ್ಯಾಂಪ್ ಮಿಲನವಾಗುತ್ತದೆ. ಇನ್ನು ಕೆಳಮುಖವಾಗಿ ಫಾಂಗ್ ಲ್ಯಾಂಪ್, ಟರ್ನ್ ಇಂಡಿಕೇಟರ್ ಮತ್ತು ಟರ್ನ್ ಇಂಡಿಕೇಟರ್ ಗಳನ್ನು ಜೋಡಣೆ ಮಾಡಲಾಗಿದೆ.

ವಿನ್ಯಾಸ - ಹಿಂಭಾಗ

ವಿನ್ಯಾಸ - ಹಿಂಭಾಗ

ಕಾರಿನ ಹಿಂಭಾಗದ ವಿನ್ಯಾಸದಲ್ಲೂ ಇನ್ನೋವಾ ಕ್ರೈಸ್ಟಾ ಹೊಸತನವನ್ನು ಕಾಪಾಡಿಕೊಂಡಿದೆ. ಹಿಂದುಗಡೆ ವಿಂಡ್ ಶೀಲ್ಡ್ ಕೆಳಗಡೆ ತಿರುಗುಬಾಣದಂತಹ ಟೈಲ್ ಲೈಟ್ ಗಳು, ರಿಯರ್ ಸ್ಪಾಯ್ಲರ್ ಮತ್ತು ಎಕ್ಸಾಸ್ಟ್ ಕೊಳವೆಗಳನ್ನು ಕಾಣಬಹುದಾಗಿದೆ.

ವಿನ್ಯಾಸ - ಬದಿ

ವಿನ್ಯಾಸ - ಬದಿ

ಅಂತೆಯೇ ಬದಿಯಲ್ಲೂ ವಿಶಿಷ್ಟ ಬಹು ಬಳಕೆಯ ವಾಹನದ ವಿನ್ಯಾಸವನ್ನು ಕಾಪಾಡಿಕೊಂಡಿದ್ದು, ಕ್ರೋಮ್ ಸ್ಪರ್ಶಿತ ಡೋರ್ ಹ್ಯಾಂಡಲ್, ಬ್ಲ್ಯಾಕ್ ಪಿಲ್ಲರ್ ಮತ್ತು 17 ಇಂಚುಗಳ ಅಲಾಯ್ ಚಕ್ರಗಳು ಇರಲಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ನೂತನ ಇನ್ನೋವಾ ಕ್ರೈಸ್ಟಾದಲ್ಲಿ ಹೊಸತಾದ ಎಂಜಿನ್ ಆಳವಡಿಸಲಾಗಿದೆ. ಇದರ ಎಲ್ಲ ಹೊಸತನದ 2.4 ಲೀಟರ್ ಕೆಡಿ ಸಿರೀಸ್ ಟರ್ಬೊ ಚಾರ್ಜ್ಡ್ ಡೀಸೆಲ್ ಎಂಜಿನ್ 359 ಎನ್ ಎಂ ತಿರುಗುಬಲದಲ್ಲಿ (1200-2800 ಆರ್‌ಪಿಎಂ) 147 ಅಶ್ವಶಕ್ತಿಯನ್ನು (3400 ಆರ್‌ಪಿಎಂ) ಉತ್ಪಾದಿಸಲಿದೆ. ಇದು ಐದು ಸ್ಪೀಡ್ ಮ್ಯಾನುವಲ್ ಜೊತೆಗೆ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರಲಿದೆ.

ಮರಳಿ ಬಂದ ಇನ್ನೋವಾ; ಹಳೆಯ ಕಾರಿಗಿಂತಲೂ ಹೇಗೆ ಭಿನ್ನ?

ಇನ್ನೊಂದೆಡೆ ಹಳೆಯ ಇನ್ನೋವಾದಲ್ಲಿರುವ 2.5 ಲೀಟರ್ ಕೆಡಿ ಸಿರೀಸ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ 100 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿತ್ತು. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನಿಂದ ಲಭ್ಯವಾಗುತ್ತಿತ್ತು.

ವಿಶಿಷ್ಟತೆಗಳು - ಹೊರಮೈ

ವಿಶಿಷ್ಟತೆಗಳು - ಹೊರಮೈ

  • 17 ಇಂಚುಗಳ ಅಲಾಯ್ ಚಕ್ರಗಳು,
  • ಹೊಸ ಬಣ್ಣಗಳು,
  • ಸ್ಮಾರ್ಟ್ ಎಂಟ್ರಿ ಸಿಸ್ಟಂ ಜೊತೆ ಸ್ಟ್ಯಾರ್ಟ್/ಸ್ಟಾಪ್ ಬಟನ್,
  • ಈಸಿ ಕ್ಲೋಸರ್ ಬ್ಯಾಕ್ ಡೋರ್,
  • ಕ್ರೋಮ್ ವಿಂಡೋ ಲೈನಿಂಗ್.
  • ವಿಶಿಷ್ಟತೆಗಳು - ಒಳಮೈ

    ವಿಶಿಷ್ಟತೆಗಳು - ಒಳಮೈ

    • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆ ರಿಯರ್ ಆಟೋ ಕೂಲರ್,
    • ಏಳು ಇಂಚುಗಳ ಆಡಿಯೋ ಜೊತೆ ನೇವಿಗೇಷನ್,
    • ಕ್ರೂಸ್ ಕಂಟ್ರೋಲ್,
    • ಪವರ್ ಡ್ರೈವರ್ ಸೀಟು,
    • ಸೀಟುಗಳ ಸುಲಭ ನಿರ್ವಹಣೆ
    • ವೈಶಿಷ್ಟ್ಯಗಳು

      ವೈಶಿಷ್ಟ್ಯಗಳು

      ನೂತನ ಇನ್ನೋವಾದಲ್ಲಿರುವ ಕೆಲವೊಂದು ಗಮನಾರ್ಹ ವೈಶಿಷ್ಟ್ಯಗಳನ್ನು ಇಲ್ಲಿ ಪಟ್ಟಿ ಮಾಡಿ ಕೊಡಲಾಗುವುದು.

      • ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್,
      • ನೂತನ ಚಾಸೀ,
      • ಹೀಲ್ ಸ್ಟ್ಯಾರ್ಟ್ ಅಸಿಸ್ಟ್,
      • ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್,
      • 8 ಇಂಚುಗಳ ಟಚ್ ಸ್ಕ್ರೀನ್ ಮಾಹಿತಿ ಮನರಂಜನಾ ಸಿಸ್ಟಂ ಜೊತೆ ಏರ್ ಗೆಸ್ಟರ್,
      • 7 ಮತ್ತು 8 ಸೀಟುಗಳ ಆಯ್ಕೆ
      • ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್ (ಸ್ಟ್ಯಾಂಡರ್ಡ್),
      • ಮರಳಿ ಬಂದ ಇನ್ನೋವಾ; ಹಳೆಯ ಕಾರಿಗಿಂತಲೂ ಹೇಗೆ ಭಿನ್ನ?

        ವೈಶಿಷ್ಟ್ಯಗಳನ್ನು ತುಲನೆ ಮಾಡಿ ನೋಡಿದಾಗ ಹಳೆಯ ಮಾದರಿಗಿಂತಲೂ ನೂತನ ಇನ್ನೋವಾ ಕ್ರೈಸ್ಟಾ ಪ್ರೀಮಿಯಂ ಕಾರಾಗಿರಲಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇದು ಆಧುನಿಕ ಗ್ರಾಹಕನ ಬಯಕೆಗಳನ್ನೆಲ್ಲ ಈಡೇರಿಸುವ ಪ್ರಯತ್ನ ಮಾಡಿದೆ.

        ಸುರಕ್ಷತೆ

        ಸುರಕ್ಷತೆ

        ನೂತನ ಕಾರಿನ ಕ್ರೈಸ್ಟಾದಲ್ಲಿ ಭದ್ರತೆಗೂ ಅತಿ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಎಲ್ಲ ವೆರಿಯಂಟ್ ಗಳಲ್ಲೂ ಡ್ಯುಯಲ್ ಏರ್ ಬ್ಯಾಗ್ ಜೊತೆಗೆ ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್ ಮತ್ತು ಬ್ರೇಕ್ ಅಸಿಸ್ಟ್ ಸೌಲಭ್ಯಗಳು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಇನ್ನುಳಿದಂತೆ ಎಸ್ ಯುವಿ ಕಾರಿನಲ್ಲಿರುವುದಕ್ಕೆ ಸಮಾನವಾಗಿ ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಮತ್ತು ಐಚ್ಛಿಕ ಆರು ಏರ್ ಬ್ಯಾಗ್ ಗಳ ಸೌಲಭ್ಯವೂ ಇರುತ್ತದೆ.

        ಬೆಲೆ

        ಬೆಲೆ

        ಪ್ರಸ್ತುತ ಬೆಂಗಳೂರು ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಇನ್ನೋವಾ 11.64 ಲಕ್ಷ ರು.ಗಳಿಂದ ಟಾಪ್ ಎಂಡ್ 16.92 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಿದೆ. ಅಂದರೆ ಹೊಸ ಇನ್ನೋವಾ ಇದಕ್ಕಿಂತಲೂ ಬೆಲೆ ಬಾಳಲಿದೆ.

        ಅಂತಿಮ ತೀರ್ಪು

        ಅಂತಿಮ ತೀರ್ಪು

        ನೂತನ ಇನ್ನೋವಾ ಕ್ರೈಸ್ಟಾ, ದೇಶದ ಬಹು ಬಳಕೆಯ ವಾಹನ ವಿಭಾಗಕ್ಕೆ ಹೊಸ ಆಯಾಮವನ್ನು ತುಂಬಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಆಗಲೇ ಈ ವಿಭಾಗದಲ್ಲಿ ಕಿಂಗ್ ಮೇಕರ್ ಎನಿಸಿಕೊಂಡಿರುವ ಟೊಯೊಟಾ ಇನ್ನೋವಾ ತನ್ನ ಯಶಸ್ಸನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ. ಈ ನಿಟ್ಟಿನಲ್ಲಿ 2005ನೇ ಇಸವಿಯಲ್ಲಿ ಪ್ರವೇಶಿಸಿರುವ ಹಳೆಯ ಮಾದರಿಯೂ ಹೊಸ ಇನ್ನೋವಾ ಕ್ರೈಸ್ಟಾಗೆ ಹಾದಿ ಬಿಟ್ಟು ಕೊಟ್ಟಿದೆ.

        ಇವನ್ನೂ ಓದಿ...

        ಇನ್ನೋವಾ ಕ್ರೈಸ್ಟಾ; ಹಳೆ ಬಾಟಲಿಯಲ್ಲಿ ಹೊಸ ಮದ್ಯ


Most Read Articles

Kannada
English summary
Innovation Born Again: Comparing The New Toyota Innova Crysta With The Old
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X