ಸರಿಸಾಟಿಯಿಲ್ಲದ ಸರದಾರ 2016 ರೇಂಜ್ ರೋವರ್ ಇವೊಕ್

By Nagaraja

ಕಾರು ಎಂದ ಮೇಲೆ ಅದು ಐಷಾರಾಮಿ ಆಗಿರಬೇಕು. ಕೇವಲ ರಸ್ತೆ ಮಾತ್ರವಲ್ಲದೆ ಸಾಹಸ ಅನುಭವ ನೀಡುವ ಆಫ್ ರೋಡ್ ಗಳಲ್ಲೂ ತನ್ನ ಸಾಮರ್ಥ್ಯವನ್ನು ತೋರಬೇಕು. ಆಧುನಿಕ ಜಗತ್ತಿನಲ್ಲಿ ಕಾರು ಚಾಲನೆ ರಸ್ತೆ ಸಂಚಾರಕ್ಕಷ್ಟೇ ಸೀಮಿತವಾಗದೆ ಆಫ್ ರೋಡ್ ಶೈಲಿಗೂ ಹೊಂದಿರಬೇಕು.

ಹಾಗೆ 1970ನೇ ಸಾಲಿನಲ್ಲಿ ಎಂಟ್ರಿ ಕೊಟ್ಟಿರುವ ಲ್ಯಾಂಡ್ ರೋವರ್ ರೇಂಜ್ ರೋವರ್ ಈಗ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ತನ್ನ ಅಗ್ರ ಸ್ಥಾನಮಾನವನ್ನು ಕಾಪಾಡಿಕೊಂಡಿದೆ. ಬ್ರಿಟನ್ ಸರ್ವಕಾಲಿಕ ಶ್ರೇಷ್ಠ ಕಾರುಗಳಲ್ಲಿ ಟಾಪ್ 10 ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ರೇಂಜ್ ರೋವರ್, ಭಾರತದಲ್ಲೂ ಮೋಡಿ ಮಾಡಲು ಆರಂಭಿಸಿದೆ.

2016 ರೇಂಜ್ ರೋವರ್ ಇವೊಕ್


ನೂತನ ರೇಂಜ್ ರೋವರ್ ಇವೋಕ್ ಡ್ರೈವ್ ಸ್ಪಾರ್ಕ್ ತಂಡಕ್ಕೆ ಸಿಕ್ಕಿರುವ ಹೊಸ ಚೆಲುವೆ. ಸಂಪೂರ್ಣ ಡ್ರೈವಿಂಗ್ ಪ್ಯಾಕೇಜ್ ನೊಂದಿಗೆ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರೇಂಜ್ ರೋವರ್ ಇವೊಕ್ ಅತ್ಯುತ್ತಮ ಚಲನಶೀಲತೆಯನ್ನು ಕಾಪಾಡಿಕೊಂಡಿದೆ ಎಂಬುದರಲ್ಲಿ ಸಂಶಯವೇ ಇಲ್ಲ.

ಹಿಂದಿನ ತಲೆಮಾರಿನ ಮಾದರಿಗಳಿಗೆ ಹೋಲಿಸಿದಾಗ ನೂತನ ರೇಂಜ್ ರೋವರ್ ಪರಿಷ್ಕೃತ ಬಂಪರ್ ಮತ್ತು ಸ್ಲಿಮ್ ಆಗಿರುವ ಎಲ್ ಇಡಿ ಫಾಗ್ ಲ್ಯಾಂಪ್ ಗಳನ್ನು ಪಡೆದಿದೆ. ಇದನ್ನು ಕೆಳಗಡೆಯಿರುವ ಬಂಪರ್ ನ ಮೇಲ್ಮುಖವಾಗಿ ಲಗತ್ತಿಸಲಾಗಿದೆ. ಇದರ ಜೊತೆಗೆ ಬೃಹತ್ತಾದ ಏರ್ ಇಂಟೇಕ್ ಗಳು ನಿಖರವಾದ ಚಲನಶೀಲತೆಯನ್ನು ಖಾತ್ರಿಪಡಿಸಲಿದೆ. ಹೊಸತಾದ ರಿಯರ್ ರೂಫ್ ಸ್ಪಾಯ್ಲರ್ ಮತ್ತು ಸೆಂಟರ್ ಬ್ರೇಕ್ ಲೈಟ್ ಗಳು ಮಗದೊಂದು ಆಕರ್ಷಣೆಯಾಗಿದೆ.

2016 ರೇಂಜ್ ರೋವರ್ ಇವೊಕ್

ವಿಶೇಷವಾಗಿಯೂ ಹೊಸತಾದ ಸಿಗ್ನೇಚರ್ 'ಡಬ್ಲ್ಯು' ಆಕರಾದ ಡೇಟೈಮ್ ರನ್ನಿಂಗ್ ಲೈಟ್ಸ್, ಗ್ಲೋಸಿ ಬ್ಲ್ಯಾಕ್ ಹನಿಕಾಂಬ್ ಗ್ರಿಲ್, 18 ಇಂಚುಗಳ ಅಲಾಯ್ ಚಕ್ರಗಳು ಈ ದೈತ್ಯ ಎಸ್‌ಯುವಿಗೆ ಅತ್ಯಾಧುನಿಕ ಸ್ಪರ್ಶವನ್ನು ನೀಡಲಿದೆ. ಹಾಗಿದ್ದರೂ ಬೇಸ್ ವೆರಿಯಂಟ್ ಹಳೆಯ 2 ಬಾರ್ ಗ್ರಿಲ್, ಹ್ಯಾಲಗನ್ ಹೆಡ್ ಲ್ಯಾಂಪ್ ಮತ್ತು 17 ಇಂಚುಗಳ ಟೆನ್ ಸ್ಪೋಕ್ ಅಲಾಯ್ ಚಕ್ರಗಳನ್ನು ಪಡೆಯಲಿದೆ.
2016 ರೇಂಜ್ ರೋವರ್ ಇವೊಕ್

ಕಾರಿನೊಳಗೆ ಸಾಫ್ಟ್ ಟಚ್ ವೈಶಿಷ್ಟ್ಯ ಮತ್ತು ಲೆಥರ್ ಹೋದಿಕೆಗಳ ಅನುಭವವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ. ಎಂಟು ಇಂಚುಗಳ 'ಇನ್ ಕಂಟ್ರೋಲ್' ಜಾಗ್ವಾರ್ ಲ್ಯಾಂಡ್ ರೋವರ್ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಪ್ರಮುಖ ಆಕರ್ಷಣೆಯಾಗಲಿದೆ. ಇನ್ನುಳಿದಂತೆ ಡೋರ್ ಕ್ಯಾಸಿಂಗ್, 12 ವಿಧಗಳ ಎಲೆಕ್ಟ್ರಿಕ್ ಫ್ರಂಟ್ ಸೀಟು ಜೊತೆ ಚಾಲಕ ಮತ್ತು ಪ್ರಯಾಣಿಕ ಮೆಮೆರಿ ಸೇವೆಯೂ ಲಭ್ಯವಾಗಲಿದೆ.
2016 ರೇಂಜ್ ರೋವರ್ ಇವೊಕ್

ಹೊಸತಾದ ಸೀಟುಗಳು ರಸ್ತೆಯಲ್ಲಿ ಹೆಚ್ಚು ಆರಾಮದಾಯಕವೆನಿಸಲಿದೆ. ಹಾಗಿದ್ದರೂ ಎಲ್ಲ ಎಸ್‌ಯುವಿಗಳಲ್ಲಿರುವಂತೆಯೇ ಹಿಂದುಗಡೆ ಸೀಟುಗಳು ಸ್ವಲ್ಪ ಇಕ್ಕಟ್ಟಾಗಿದ್ದು, ಕ್ಲಿಷ್ಟಕರವೆನಿಸಲಿದೆ. ನಿಜಕ್ಕೂ ಇದೊಂದು ಸಮಸ್ಯೆ ಅನಿಸಿದ್ದಲ್ಲಿ ಮತ್ತಷ್ಟು ದೊಡ್ಡದಾದ ರೇಂಜ್ ರೋವರ್ ಅಥವಾ ರೇಂಜ್ ರೋವರ್ ಸ್ಪೋರ್ಟ್ ಆವೃತ್ತಿಯನ್ನು ಆಯ್ಕೆ ಮಾಡಬಹುದಾಗಿದೆ.

ಇವೆಲ್ಲದಕ್ಕೂ ಹೊರತಾಗಿ ಹೆಡ್-ಅಪ್ ಡಿಸ್ ಪ್ಲೇ, 360 ಡಿಗ್ರಿ ಕ್ಯಾಮೆರಾ, ಆಂಬಿಯಂಟ್ ಲೈಟಿಂಗ್, 825 ವಾಟ್ 17 ಸ್ಪೀಕರುಗಳ ಮೆರಿಡಿಯನ್ ಸೌಂಡ್ ಸಿಸ್ಟಂಗಳು ಆಡಂಬರ ಕಾರಿಗೆ ಮತ್ತಷ್ಟು ಮೆರಗು ತುಂಬಲಿದೆ.

2016 ರೇಂಜ್ ರೋವರ್ ಇವೊಕ್

ನೂತನ ರೇಂಜ್ ರೋವರ್ ಇವೊಕ್ ಕಾರಿನಲ್ಲಿರುವ ಟರೈನ್ ರೆಸ್ಪಾನ್ಸ್ ಸಿಸ್ಟಂ ಬಳಕೆ ಅತ್ಯಂತ ಸುಲಭ ಹಾಗೂ ಸರಳವಾಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ. ಸವಾಲುಗಳಿಂದ ಭರಿತವಾದ ಭೂಪ್ರದೇಶವನ್ನು ನಿಭಾಯಿಸಲು ಟರೈನ್ ರೆಸ್ಪಾನ್ಸ್ ವ್ಯವಸ್ಥೆಯು ನಿಜಕ್ಕೂ ಉಪಯುಕ್ತವೆನಿಸುತ್ತದೆ. ಈ ಮೂಲಕ ನೈಜ ಆಫ್ ರೋಡ್ ಸಾಮರ್ಥ್ಯವನ್ನು ಬಿಂಬಿಸುತ್ತದೆ.

ಟರೈನ್ ರೆಸ್ಪಾನ್ಸ್ ಮೋಡ್ ನಲ್ಲಿ ಚಾಲಕನಿಗೆ ಮಡ್ ರಟ್ಸ್, ಗ್ರಾಸ್-ಗ್ರಾವೆಲ್-ಸ್ನೊ ಮತ್ತು ಸ್ಯಾಂಡ್ ಆಯ್ಕೆಗಳನ್ನು ಆಯ್ಕೆ ಮಾಡುವ ಅವಕಾಶವಿರುತ್ತದೆ. ತದಾ ಬಳಿಕ ಈ ವ್ಯವಸ್ಥೆಯು ಸ್ವಯಂಚಾಲಿತವಾಗಿ ಎಂಜಿನ್ ರೆಸ್ಪಾನ್ಸ್ ನಿಭಾಯಿಸುತ್ತದೆ. ಅಂತೆಯೇ ಇದರಲ್ಲಿರುವ ಗೇರ್ ಬಾಕ್ಸ್ ಪ್ರೋಗ್ರಾಂ, ಹಿಲ್ ಡಿಸೆಂಟ್ ಕಂಟ್ರೋಲ್ ವ್ಯವಸ್ಥೆಗಳು ಎಳೆತ, ನಿಯಂತ್ರಣಗಳ ಅತ್ಯುತ್ತಮ ಸಂಯೋಜನೆಯನ್ನು ಒದಗಿಸುತ್ತದೆ.

2016 ರೇಂಜ್ ರೋವರ್ ಇವೊಕ್


ಹಿಲ್ ಡಿಸೆಂಟ್ ಕಂಟ್ರೋಲ್ (ಎಚ್‌ಡಿಸಿ) ಮಗದೊಂದು ಮುಖ್ಯ ಸುರಕ್ಷಾ ವೈಶಿಷ್ಟ್ಯವಾಗಿದ್ದು, ಮಡ್ ರಟ್ ಟರೈನ್ ರೆಸ್ಪಾನ್ಸ್ ಮೋಡ್ ಆಯ್ಕೆ ಮಾಡಿದಾಗ ಸ್ವಯಂಚಾಲಿತವಾಗಿ ಸಕ್ರಿಯವಾಗಲಿದೆ. ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ಸಂಯೋಗದಿಂದ ಕೆಲಸ ಮಾಡುವ ಹಿಲ್ ಡಿಸೆಂಟ್ ಕಂಟ್ರೋಲ್, ತೀವ್ರ ಇಳಿಜಾರಿನಲ್ಲೂ ನಿಯಂತ್ರಣ ತಪ್ಪದೇ ನೋಡಿಕೊಂಡು ಅತ್ಯುತ್ತಮ ಚಲನಶೀಲತೆಯನ್ನು ಕಾಪಾಡಿಕೊಳ್ಳಲಿದೆ.

ರೇಂಜ್ ರೋವರ್ ಇವೊಕ್ ಪರಿಷ್ಕೃತ ಆವೃತ್ತಿಯು ಭಾರತದಲ್ಲಿ 188 ಅಶ್ವಶಕ್ತಿ ಉತ್ಪಾದಿಸಬಲ್ಲ ಫೋರ್ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸ್ಪಡಲಿದೆ. ಆಲ್ ವೀಲ್ ಡ್ರೈವ್ (ಎಡಬ್ಲ್ಯುಡಿ) ಸೇವೆಯೊಂದಿಗಿನ ಇದರ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್, ಪ್ರತಿ ಲೀಟರ್ ಗೆ 8.5 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ. ಹೊಸತಾದ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಮತ್ತು ಉದ್ದವಾದ ಸಸ್ಪೆನ್ಷನ್ ಟ್ರಾವೆಲ್ ಹೆಚ್ಚು ನಾಜೂಕಾದ ಮತ್ತು ಎತ್ತರದ ಚಾಲನಾ ಸ್ಥಾನವನ್ನು ಖಾತ್ರಿಪಡಿಸಲಿದೆ.

2016 ರೇಂಜ್ ರೋವರ್ ಇವೊಕ್

ನೂತನ ರೇಂಜ್ ರೋವರ್ ಇವೊಕ್ ಹೆದ್ದಾರಿಯಲ್ಲಿ ಸ್ಥಿರತೆ, ಸಂಯೋಜನೆ ಹಾಗೂ ಶಾಂತಿಯುತವಾದ ಚಾಲನೆಯನ್ನು ಪ್ರದಾನ ಮಾಡುತ್ತದೆ. ಗಾಡವಾದ ತಿರುವಿನಲ್ಲೂ ಇದರ ನಿಯಂತ್ರಣ ಪರಿಣಾಮಕಾರಿಯೆನಿಸುತ್ತದೆ. ಐಷಾರಾಮಿ ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಗರಿಷ್ಠ ಮಾರಾಟವನ್ನು ಕಾಯ್ದುಕೊಂಡಿರುವ ರೇಂಜ್ ರೋವರ್ ಇವೊ ಆವೃತ್ತಿಯು ಭಾರತದಲ್ಲಿ ಎಕ್ಸ್ ಶೋ ರೂಂ 48 ಲಕ್ಷ ರು.ಗಳಷ್ಟು ದುಬಾರಿಯೆನಿಸುತ್ತದೆ. ಮುಂದಿನ ದಿನಗಳಲ್ಲಿ ಕನ್ವರ್ಟಿಬಲ್ ಆವೃತ್ತಿಯು ಭಾರತಕ್ಕೆ ಎಂಟ್ರಿ ಕೊಡಲಿ ಎಂಬುದು ನಮ್ಮ ಆಶಯವಾಗಿದೆ.
2016 ರೇಂಜ್ ರೋವರ್ ಇವೊಕ್

ಅಂತಿಮ ತೀರ್ಪು
ತನ್ನ ಹಿಂದಿನ ತಲೆಮಾರಿನ ಮಾದರಿಗಳಿಗೆ ಹೋಲಿಸಿದಾಗ ಆಧುನಿಕತೆಗೆ ತಕ್ಕಂತೆ ಹೆಚ್ಚು ಆಕ್ರಮಣಕಾರಿ ವಿನ್ಯಾಸ ಹಾಗೂ ಪರಿಣಾಮಕಾರಿ ನಿರ್ವಹಣೆಯೊಂದಿಗೆ ರೇಂಜ್ ರೋವರ್ ಇವೊಕ್ ಎಂಟ್ರಿ ಕೊಟ್ಟಿದೆ. ನೀವು ಐಷಾರಾಮಿ ಕಾರು ಕೊಂಡುಕೊಳ್ಳುವಷ್ಟು ಸಮರ್ಥರಾದ್ದಲ್ಲಿ ಹಿಂದು ಮುಂದೆ ನೋಡದೇ ಆಫ್ ರೋಡ್ ಶೈಲಿಯ ಇವೊಕ್ ಕಾರನ್ನು ಖರೀದಿಸಬಹುದಾಗಿದೆ.

ಮುನ್ನಡೆಗಳು

  • ಪರಿಣಾಮಕಾರಿ ವಿನ್ಯಾಸ (ಕ್ರೀಡಾ ಕಾರು ಶೈಲಿಯ ಗಾಜುಗಳು, ಪ್ಯಾನರಾಮಿಕ್ ರೂಫ್, ಸ್ಟೈಲಿಷ್ ಬೊನೆಟ್),
  • ನಯವಾದ ಎಂಜಿನ್,
  • ಸ್ವಾಧೀನಯುತ ಚಾಲನಾ ಸ್ಥಾನ,
  • ಆಫ್ ರೋಡ್ ವಿಶಿಷ್ಟತೆ,
  • ಬೂಟ್ ಓಪನ್ ಮಾಡುವಾಗ ಗೆಸ್ಟರ್ ಗುರುತಿಸುವಿಕೆ

2016 ರೇಂಜ್ ರೋವರ್ ಇವೊಕ್
ಹಿನ್ನಡೆಗಳು
  • ಕಡಿಮೆ ವೇಗದಲ್ಲಿ ಭಾರವಾದ ಸ್ಟೀರಿಂಗ್ ನಂತೆ ಭಾಸವಾಗುವುದು.
  • ಸಣ್ಣದಾದ ರಿಯರ್ ವಿಂಡೋಗಳು,
  • ಇದರಿಂದಾಗಿ ಗೋಚರತೆ ಅಭಾವ,
  • ಇಕ್ಕಟ್ಟಾದ ವಾಹನ ದಟ್ಟಣೆಯಲ್ಲಿ ಹಿನ್ನಡೆ,
  • ಹಿಂದುಗಡೆ ಲೆಗ್ ರೂಂ, ಹೆಡ್ ರೂಂನ ಸಮಸ್ಯೆ

Most Read Articles

Kannada
English summary
2016 Range Rover Evoque — The Mountain Of Style
Story first published: Friday, July 1, 2016, 13:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X