ದೇಶದ ಟಾಪ್ 10 ಡೀಸೆಲ್ ಮೈಲೇಜ್ ಕಾರುಗಳು

By Nagaraja

ದೇಶದಲ್ಲಿ ಬಜೆಟ್ ಕಾರು ಖರೀದಿ ಮಾಡುವ ಪ್ರತಿಯೊಬ್ಬ ಗ್ರಾಹಕನೂ ಸಹ ಮೈಲೇಜ್ ಬಗ್ಗೆ ತಿಳಿದುಕೊಳ್ಳಲು ತುಂಬಾನೇ ಉತ್ಸುಕತೆ ಹೊಂದಿರುತ್ತಾನೆ. ಇದೇ ಕಾರಣಕ್ಕಾಗಿ ವಾಹನ ತಯಾರಕ ಸಂಸ್ಥೆಗಳು ಸಹ ಗರಿಷ್ಠ ಇಂಧನ ಕ್ಷಮತೆಯ ಕಾರುಗಳನ್ನೇ ಬಿಡುಗಡೆ ಮಾಡಲು ಗಮನ ವಹಿಸುತ್ತದೆ.

ಇತ್ತೀಚೆಗಿನ ದಿನಗಳಲ್ಲಿ ವಾಹನ ಮಾರುಕಟ್ಟೆಯಲ್ಲಿ ಪೈಪೋಟಿ ಜಾಸ್ತಿಯಾಗಿದ್ದು, ಅನೇಕ ಹೊಸ ಮಾದರಿಗಳು ಲಗ್ಗೆಯಿಟ್ಟಿವೆ. ದೇಶದಲ್ಲಿ ಇಂಧನ ಕ್ಷಮತೆ ಮಾನ್ಯತೆಯನ್ನು ಭಾರತ ವಾಹನ ಅಧ್ಯಯನ ಸಂಸ್ಥೆ ಅಥವಾ ಎಆರ್‌ಎಐ ನೀಡುತ್ತದೆ. ಎಆರ್‌ಎಐ ಮತ್ತು ನೈಜ ರಸ್ತೆ ಪರಿಸ್ಥಿತಿಯಲ್ಲಿನ ಮೈಲೇಜ್ ಪ್ರಮಾಣವು ಸ್ವಲ್ಪ ಭಿನ್ನವಾದರೂ ವಾಹನ ತಯಾರಕ ಸಂಸ್ಥೆಗಳು ಇದನ್ನೇ ಮಾನದಂಡವಾಗಿಟ್ಟುಕೊಂಡು ಮಾರಾಟ ತಂತ್ರವನ್ನು ಅನುಸರಿಸುತ್ತದೆ.

ದೇಶದ ಟಾಪ್ 10 ಡೀಸೆಲ್ ಮೈಲೇಜ್ ಕಾರುಗಳು

ಕಳೆದೊಂದು ವರ್ಷದಲ್ಲಿ ಡೀಸೆಲ್ ಕಾರು ಬೆಲೆ ಪ್ರತಿ ತಿಂಗಳಲ್ಲಿ ಏರಿಕೆ ಕಾಣುತ್ತಲೇ ಇದೆ. ಇದೇ ಕಾರಣಕ್ಕಾಗಿ ಪೆಟ್ರೋಲ್ ಹಾಗೂ ಡೀಸೆಲ್ ನಡುವಣ ಬೆಲೆ ಅಂತರ ಕಡಿಮೆಯಾಗಿದೆ. ಹಾಗಿದ್ದರೂ ಗರಿಷ್ಠ ಮೈಲೇಜ್ ನೀಡುವ ಏಕ ಕಾರಣಕ್ಕಾಗಿ ಮಾತ್ರ ಗ್ರಾಹಕರು ಈಗಲೂ ಡೀಸೆಲ್ ಕಾರುಗಳನ್ನು ಖರೀದಿಸಲು ಬಯಸುತ್ತಾರೆ. ಈ ನಿಟ್ಟಿನಲ್ಲಿ ದೇಶದಲ್ಲಿ ಸದ್ಯ ಲಭ್ಯವಿರುವ ಟಾಪ್ 10 ಗರಿಷ್ಠ ಮೈಲೇಜ್ ನೀಡುವ ಡೀಸೆಲ್ ಕಾರುಗಳ ಪಟ್ಟಿಯನ್ನು ನಾವು ಒದಗಿಸಲಿದ್ದೇವೆ. ಮೇಲೆ ತಿಳಿಸಿದಂತೆಯೇ ಭಾರತೀಯ ವಾಹನ ಅಧ್ಯಯನ ಸಂಸ್ಥೆ ಮಾನದಂಡದಲ್ಲಿ ಇದನ್ನು ರಚಿಸಲಾಗಿದೆ. ಇದಕ್ಕಾಗಿ ಮುಂದಿನ ಪುಟಗಳತ್ತ ಕಣ್ಣಾಯಿಸಿರಿ.

10. ನಿಸ್ಸಾನ್ ಮೈಕ್ರಾ - 23.08 kmpl

10. ನಿಸ್ಸಾನ್ ಮೈಕ್ರಾ - 23.08 kmpl

ದೇಶದ ಅಗ್ರ 10 ಮೈಲೇಜ್ ಡೀಸೆಲ್ ಕಾರುಗಳ ಪಟ್ಟಿಯಲ್ಲಿ ನಿಸ್ಸಾನ್ ಮೈಕ್ರಾ ಕಾಣಿಸಿಕೊಂಡಿದೆ. ಜಪಾನ್ ಮೂಲದ ನಿಸ್ಸಾನ್ ಸಂಸ್ಥೆಯ ಅತಿ ಚಿಕ್ಕ ಆಕರ್ಷಕ ಕಾರುಗಳಲ್ಲಿ ಒಂದಾಗಿರುವ ಮೈಕ್ರಾ, 1461 ಸಿಸಿ, 4 ಸಿಲಿಂಡರ್, ಎಸ್‌ಒಎಚ್‌ಸಿ 8 ವಾಲ್ವ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸ್ಪಡುತ್ತದೆ. ಇದು 63 ಅಶ್ವಶಕ್ತಿ (160 ಎನ್‌ಎಂ ಟಾರ್ಕ್) ಅಂತೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

ನಿಸ್ಸಾನ್ ಮೈಕ್ರಾ - 23.08 kmpl

9. ಮಾರುತಿ ಸುಜುಕಿ ರಿಟ್ಜ್ - 23.2 kmpl

9. ಮಾರುತಿ ಸುಜುಕಿ ರಿಟ್ಜ್ - 23.2 kmpl

ತನ್ನದೇ ಆದ ವಿಶಿಷ್ಟ ವಿನ್ಯಾಸ ಹೊಂದಿರುವ ಮಾರುತಿ ಸುಜುಕಿ ರಿಟ್ಜ್ ಮಾರುತಿಯ ಜನಪ್ರಿಯ ಮಾರುತಿಗಳಲ್ಲಿ ಒಂದಾಗಿದೆ. ಇದು 1248 ಸಿಸಿ 4 ಸಿಲಿಂಡರ್, ಡಿಡಿಐಎಸ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು (74 ಅಶ್ವಶಕ್ತಿ, 190 ಎನ್‌ಎಂ), 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿದೆ.

ಮಾರುತಿ ಸುಜುಕಿ ರಿಟ್ಜ್ - 23.2 kmpl

8. ಟೊಯೊಟಾ ಎಟಿಯೋಸ್ ಲಿವಾ - 23.59 kmpl

8. ಟೊಯೊಟಾ ಎಟಿಯೋಸ್ ಲಿವಾ - 23.59 kmpl

ಟೊಯೊಟಾದ ಸಣ್ಣ ಕಾರುಗಳಲ್ಲಿ ಗಮನಾರ್ಹವೆನಿಸಿರುವ ಎಟಿಯೋಸ್ ಲಿವಾ 1364 ಸಿಸಿ, 4 ಸಿಲಿಂಡರ್, 8ವಿ, ಎಸ್‌‌ಒಎಚ್‌ಸಿ, ಡಿ-4ಡಿ ಡೀಸೆಲ್ ಎಂಜಿನ್ ಹೊಂದಿದ್ದು, 67 ಅಶ್ವಶಕ್ತಿ (170 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಇದು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಸಹ ಪಡೆದುಕೊಂಡಿದೆ.

ಟೊಯೊಟಾ ಎಟಿಯೋಸ್ ಲಿವಾ - 23.59 kmpl

7. ಹ್ಯುಂಡೈ ಗ್ರಾಂಡ್ ಐ10 - 24 kmpl

7. ಹ್ಯುಂಡೈ ಗ್ರಾಂಡ್ ಐ10 - 24 kmpl

ಐ20 ಮತ್ತು ಐ10 ನಡುವೆ ಕಾಣಿಸಿಕೊಂಡಿದ್ದ ಹ್ಯುಂಡೈ ಗ್ರಾಂಡ್ ಐ10 ನಿರೀಕ್ಷೆಯಂತೆಯೇ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಹ್ಯಾಚ್‌ಬ್ಯಾಕ್ ಕಾರು 1120 ಸಿಸಿ, 3 ಸಿಲಿಂಡರ್, 1.1 ಲೀಟರ್ ಯು II ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದ್ದು, 70 ಅಶ್ವಶಕ್ತಿ (160ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಇರಲಿದೆ.

ಹ್ಯುಂಡೈ ಗ್ರಾಂಡ್ ಐ10 - 24 kmpl

6. ಹ್ಯುಂಡೈ ಎಕ್ಸ್‌ಸೆಂಟ್ - 24.4 kmpl

6. ಹ್ಯುಂಡೈ ಎಕ್ಸ್‌ಸೆಂಟ್ - 24.4 kmpl

ಹೋಂಡಾ ಅಮೇಜ್ ಕಾಂಪಾಕ್ಟ್ ಸೆಡಾನ್ ಪ್ರತಿಸ್ಪರ್ಧಿಯಾಗಿರುವ ಹ್ಯುಂಡೈ ಎಕ್ಸ್‌ಸೆಂಟ್ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುವಲ್ಲಿ ಯಶಸ್ವಿಯಾಗಿತ್ತು. ಇದು 1120ಸಿಸಿ 3 ಸಿಲಿಂಡರ್ 1.1 ಯು2 ಸಿಆರ್‌ಡಿಐ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಹಾಗೆಯೇ 71 ಅಶ್ವಶಕ್ತಿ (180 ಎನ್‌ಎಂ ಟಾರ್ಕ್) ಹಾಗೂ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಹೊಂದಿರಲಿದೆ.

ಹ್ಯುಂಡೈ ಎಕ್ಸ್‌ಸೆಂಟ್ - 24.4 kmpl

5. ಫೋರ್ಡ್ ಫಿಯೆಸ್ಟಾ - 25.01 kmpl

5. ಫೋರ್ಡ್ ಫಿಯೆಸ್ಟಾ - 25.01 kmpl

ಅಮೆರಿಕದ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಫೋರ್ಡ್‌ನ ಜನಪ್ರಿಯ ಫಿಯೆಸ್ಟಾ ಇತ್ತೀಚೆಗಷ್ಟೇ ಹೊಸ ರೂಪ ಪಡೆದುಕೊಂಡಿತ್ತು. ಇದರ 1498 ಸಿಸಿ 4 ಸಿಲಿಂಡರ್ ಇನ್ ಲೈನ್ 8ವಿ ಎಸ್‌ಒಎಚ್‌ಸಿ ಡೀಸೆಲ್ ಎಂಜಿನ್ 89 ಬಿಎಚ್ಪಿ ಉತ್ಪಾದಿಸುವ (204 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ. ಇದು ಕೂಡಾ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್‌ನಿಂದ ನಿಯಂತ್ರಸ್ಪಡುತ್ತದೆ.

ಫೋರ್ಡ್ ಫಿಯೆಸ್ಟಾ - 25.01 kmpl

4. ಷೆವರ್ಲೆ ಬೀಟ್ - 25.44 kmpl

4. ಷೆವರ್ಲೆ ಬೀಟ್ - 25.44 kmpl

ಷೆವರ್ಲೆ ಬೀಟ್ ಭಾರತದಲ್ಲಿ ನಿರೀಕ್ಷಿದಷ್ಟು ಯಶ ಸಾಧಿಸಿರಲಾರದು. ಆದರೆ ಮೈಲೇಜ್ ವಿಚಾರದಲ್ಲಿ ಮಾತ್ರ ಈ ಚೊಕ್ಕದಾದ ಹ್ಯಾಚ್‌ಬ್ಯಾಕ್ ಕಾರು ಯಾವುದೇ ರಾಜಿಗೂ ತಯಾರಾಗಿಲ್ಲ. ಕೇವಲ 936 ಸಿಸಿ 3 ಸಿಲಿಂಡರ್ ಇಲೈನ್ ಟಿಎಸ್‌ಐಸಿ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುವ ಷೆವರ್ಲೆ ಬೀಟ್, 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರುತ್ತದೆ. ಅಲ್ಲದೆ 58 ಅಶ್ವಶಕ್ತಿ ಉತ್ಪಾದಿಸುವ (150 ಎನ್‌ಎಂ ಟಾರ್ಕ್) ಸಾಮರ್ಥ್ಯ ಹೊಂದಿದೆ.

ಷೆವರ್ಲೆ ಬೀಟ್ - 25.44 kmpl

3. ಹೋಂಡಾ ಅಮೇಜ್ - 25.8 kmpl

3. ಹೋಂಡಾ ಅಮೇಜ್ - 25.8 kmpl

ಕಳೆದೊಂದು ವರ್ಷದಲ್ಲಿ ಭಾರಿ ಸದ್ದು ಮಾಡಿರುವ ಹೋಂಡಾ ಅಮೇಜ್ ಕಾಂಪಾಕ್ಟ್ ಸೆಡಾನ್ ಕಾರು ಮೈಲೇಜ್, ಎಂಜಿನ್ ಮತ್ತು ಶೈಲಿಯಿಂದಾಗಿಯೇ ಅತಿ ಹೆಚ್ಚು ಯಶಸ್ಸು ಸಾಧಿಸಿತ್ತು. ಇದು ಕೂಡಾ ಸಿಟಿಗೆ ಸಮಾನವಾದ ಎಂಜಿನ್ ಪಡೆದುಕೊಂಡಿದ್ದು, 1498 ಸಿಸಿ 4 ಸಿಲಿಂಡರ್ ಡಿಒಎಚ್‌ಸಿ ಐ-ಡಿಟೆಕ್ ಎಂಜಿನ್‌ನಿಂದ (98 ಅಶ್ವಶಕ್ತಿ, 200 ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದುಕೊಂಡಿದೆ.

ಹೋಂಡಾ ಅಮೇಜ್ - 25.8 kmpl

2. ಹೋಂಡಾ ಸಿಟಿ - 26 kmpl

2. ಹೋಂಡಾ ಸಿಟಿ - 26 kmpl

ಮಾರುತಿ ಸಿಯಾಝ್‌ಗೆ ನೇರ ಪ್ರತಿಸ್ಪರ್ಧಿಯಾಗಿರುವ ಹೋಂಡಾ ಸಿಟಿ ಕೆಲವು ತಿಂಗಳುಗಳ ಹಿಂದೆಯಷ್ಟೇ ಹೊಸ ನೋಟದೊಂದಿಗೆ ಬಿಡುಗಡೆ ಹೊಂದಿತ್ತು. ಇದು 1498 ಸಿಸಿ 4 ಸಿಲಿಂಡರ್ ಡಿಒಎಚ್‌ಸಿ ಐ-ಡಿಟೆಕ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು (98 ಅಶ್ವಶಕ್ತಿ, 200 ಎನ್‌ಎಂ ಟಾರ್ಕ್) 6 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ಹೋಂಡಾ ಸಿಟಿ - 26 kmpl

1. ಮಾರುತಿ ಸುಜುಕಿ ಸಿಯಾಝ್ 26.21 kmpl

1. ಮಾರುತಿ ಸುಜುಕಿ ಸಿಯಾಝ್ 26.21 kmpl

ಇನ್ನಷ್ಟೇ ಬಿಡುಗಡೆಯಾಗಬೇಕಾಗಿರುವ ಮಾರುತಿ ಸುಜುಕಿ ಸಿಯಾಝ್, ದೇಶದ ಅತಿ ಹೆಚ್ಚು ಇಂಧನ ಕ್ಷಮತೆಯುಳ್ಳ ಅಗ್ರ 10 ಡೀಸೆಲ್ ಕಾರುಗಳ ಪೈಕಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದು ಭಾರತ ವಾಹನ ಅಧ್ಯಯನ ಸಂಸ್ಥೆಯ ಮಾನ್ಯತೆಯ ಪ್ರಕಾರ ಪ್ರತಿ ಲೀಟರ್‌ಗೆ 26.21 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ. ಜನಪ್ರಿಯ ಹೋಂಡಾ ಸಿಟಿ ಹಾಗೂ ಹ್ಯುಂಡೈ ವರ್ನಾ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಿರುವ ಮಾರುತಿ ಸುಜುಕಿ ಸಿಯಾಝ್, 1.3 ಲೀಟರ್ ಡಿಡಿಐಎಸ್ ಡೀಸೆಲ್ ಎಂಜಿನ್‌ನಿಂದ (89 ಬಿಎಚ್‌ಪಿ, 200 ಎನ್‌ಎಂ ಟಾರ್ಕ್) ನಿಯಂತ್ರಿಸಲ್ಪಡಲಿದೆ. ಮುಂಬರುವ ಹಬ್ಬದ ಮಾರುಕಟ್ಟೆ ವೇಳೆ ಮಾರುಕಟ್ಟೆ ಪ್ರವೇಶಿಸಲಿರುವ ಸಿಯಾಝ್, ಡೀಸೆಲ್ ವಿಡಿಐ, ವಿಡಿಐ ಪ್ಲಸ್ ಮತ್ತು ಝಡ್‌ಡಿಐ ವೆರಿಯಂಟ್‌ಗಳಲ್ಲಿ ಲಭ್ಯವಾಗಲಿದೆ.

ಮಾರುತಿ ಸಿಯಾಝ್ ಮೈಲೇಜ್ - 26.21 kmpl

Most Read Articles

Kannada
English summary
We'll discuss about the top-10 most fuel efficient diesel cars in India. The basis on which we have short-listed these cars, is the ARAI mileage figures that these cars achieved during their test.
Story first published: Wednesday, September 17, 2014, 18:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X