ಭಾರತೀಯರಿಗಾಗಿ ಭಾರತದಲ್ಲೇ ನಿರ್ಮಿತ ಕಾರು - ಎಮಿಯೊ ವಿಮರ್ಶೆ

Written By:

ಬೀಟ್ಲ್ ನಂತಹ ಸರ್ವಕಾಲಿಕ ಶ್ರೇಷ್ಠ ಕಾರುಗಳನ್ನು ನಿರ್ಮಿಸಿರುವ ಜರ್ಮನಿಯ ಮೂಲದ ಪ್ರತಿಷ್ಠಿತ ಸಂಸ್ಥೆ ಫೋಕ್ಸ್ ವ್ಯಾಗನ್, ಇತ್ತೀಚೆಗಷ್ಟೇ ಭಾರತೀಯರಿಗಾಗಿ ಭಾರತದಲ್ಲೇ ನಿರ್ಮಿತ ಅತಿ ನೂತನ ಎಮಿಯೊ ಕಾಂಪಾಕ್ಟ್ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿತ್ತು. ಕಾಂಪಾಕ್ಟ್ ಸೆಡಾನ್ ಭಾರತದಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಕಾರು ವಿಭಾಗವಾಗಿದೆ. ಇಲ್ಲಿ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಗಳಂತಹ ಘಟಾನುಘಟಿ ಕಾರುಗಳೊಂದಿಗೆ ಪೈಪೋಟಿ ನಡೆಸಲು ಎಮಿಯೊ ರಂಗ ಪ್ರವೇಶ ಮಾಡಿದೆ.

2016 ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಅನಾವರಣಗೊಂಡಿರುವ ಫೋಕ್ಸ್ ವ್ಯಾಗನ್ ಎಮಿಯೊ, ಸಂಸ್ಥೆಯ ಜನಪ್ರಿಯ ಪೊಲೊ ಹ್ಯಾಚ್ ಬ್ಯಾಕ್ ಕಾರಿನ ತಳಹದಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಫೋಕ್ಸ್ ವ್ಯಾಗನ್ ಚಕನ್ ಘಟಕದಲ್ಲಿ ನಿರ್ಮಾಣವಾಗಿರುವ ಎಮಿಯೊ, ಸಂಸ್ಥೆಯಿಂದ ದೇಶದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕಾಂಪಾಕ್ಟ್ ಸೆಡಾನ್ ಕಾರಾಗಿದೆ. ಅಷ್ಟಕ್ಕೂ ಈ ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಕಾರು ಹೇಗೆ ವಿಶಿಷ್ಟತೆ ಕಾಪಾಡಿಕೊಂಡಿದೆ ಎಂಬುದನ್ನುಸಂಪೂರ್ಣ ಚಾಲನಾ ವಿಮರ್ಶೆಯ ಮೂಲಕ ತಿಳಿಯೋಣವೇ...ವಿನ್ಯಾಸ
ಮುಂಭಾಗದಲ್ಲಿ ಪೊಲೊಗೆ ಸಮಾನವಾದ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದ್ದು, ಕಪ್ಪು ವರ್ಣದ ಫ್ರಂಟ್ ಗ್ರಿಲ್, ಸಮತಲವಾದ ಫಾಗ್ ಲ್ಯಾಂಪ್, ಹ್ಯಾಲಗನ್ ಡ್ಯುಯಲ್ ಬೀಮ್ ಹೆಡ್ ಲ್ಯಾಂಪ್, ಬದಿಯಲ್ಲಿ ಸ್ವಭಾವ ರೇಖೆಗಳು ಮತ್ತು ಪರಿಣಾಮಕಾರಿ ರಿಯರ್ ಪ್ರೊಫೈಲ್ ಪ್ರಮುಖ ಆಕರ್ಷಣೆಯಾಗಿದೆ.

 • ಹ್ಯಾಲಗನ್ ಹೆಡ್ ಲ್ಯಾಂಪ್,
 • ದೇಹ ಬಣ್ಣದ ಬಂಪರ್,
 • ದೇಹ ವರ್ಣದ ಹೊರಗಿನ ಡೋರ್ ಹ್ಯಾಂಡಲ್ ಮತ್ತು ಮಿರರ್,
 • ಡೋರ್ ಹ್ಯಾಂಡಲ್ ಜೊತೆ ಟರ್ನ್ ಇಂಡಿಕೇಟರ್.

ಕಾರಿನ ಹಿಂಬದಿಯಲ್ಲಿ ಢಿಕ್ಕಿ ಜಾಗ ಜಾಸ್ತಿ ಮಾಡುವ ನಿಟ್ಟಿನಲ್ಲಿ ಮುಂಭಾಗದ ಬಂಪರ್ ವಿನ್ಯಾಸದಲ್ಲಿ 35 ಎಂಎಂಗಳಷ್ಟು ಕಡಿತ ಮಾಡಲಾಗಿದೆ. ಸಬ್ ಫೋರ್ ಮೀಟರ್ ಕಾರಿನಲ್ಲಿ ಇದೇ ಮೊದಲ ಬಾರಿಗೆ ಸ್ಟಾಟಿಕ್ ಕಾರ್ನರಿಂಗ್ ಲೈಟ್ಸ್ ಗಳನ್ನು ಫೋಕ್ಸ್ ವ್ಯಾಗನ್ ಎಮಿಯೊ ಮೂಲಕ ನೀಡಲಾಗುತ್ತಿದೆ.


ಒಳಮೈ
ಕಾರಿನ ಒಳಮೈಯಲ್ಲೂ ಪೊಲೆಗೆ ಸಮಾನವಾದ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ. ಇದು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆ ಹಾಗೂ ಸಿಲ್ವರ್ ಸ್ಪರ್ಶವನ್ನು ಕಾಣಬಹುದಾಗಿದೆ. ಸೀಟುಗಳಲ್ಲಿ ಆರ್ಮ್ ರೆಸ್ಟ್ ನೀಡಿರುವುದು ದೂರ ಪ್ರಯಾಣದ ವೇಳೆ ನೆರವಾಗಲಿದೆ. ಹಿಂಬದಿಯಲ್ಲೂ ಬೇಕಾದಷ್ಟು ಹೆಡ್ ಮತ್ತು ಲೆಗ್ ರೂಂ ಕೊಡಲಾಗಿದೆ.

ಆದರೂ ಎರಡನೇ ಸಾಲಿನಲ್ಲಿ ಮೂವರಿಗೆ ಕುಳಿತುಕೊಳ್ಳಲು ಇಕ್ಕಟ್ಟಿನ ಪರಿಸ್ಥಿತಿ ಎದುರಾಗಲಿದ್ದು, ಆರ್ಮ್ ರೆಸ್ಟ್ ಅಭಾವ ಕಾಡಲಿದೆ. ಜಾಗತಿಕ ತಾಪಮಾನ ವರ್ಧಿಸುತ್ತಿರುವ ಈ ಹಂತದಲ್ಲಿ ರಿಯರ್ ಎಸಿ ವೆಂಟ್ಸ್ ಗಳು ಸ್ವಾಗತಾರ್ಹವೆನಿಸಿದೆ. ತಾಂತ್ರಿಕವಾಗಿ ಗಮನಿಸಿದಾಗ ಢಿಕ್ಕಿ ಜಾಗ ತನ್ನ ಪ್ರತಿಸ್ಪರ್ಧಿಗಿಂತಲೂ ಕಡಿಮೆಯಾದರೂ ಇದನ್ನು ರಚಿಸಿರುವ ರೀತಿಯು ದೊಡ್ಡ ಲಗ್ಗೇಜ್ ಗಳಿನ್ನಡಲು ಸಹಕಾರಿಯಾಗಲಿದೆ.


ಮನರಂಜನೆ
ನೂತನ ಎಮಿಯೊದಲ್ಲಿ ಮರನಂಜನೆಗೂ ಆದ್ಯತೆ ಕೊಡಲಾಗಿದ್ದು, ಟಚ್ ಸ್ಕ್ರೀನ್ ಮಲ್ಟಿಮೀಡಿಯಾ ಮ್ಯೂಸಿಕ್ ಸಿಸ್ಟಂ ಜೊತೆ ಮಿರರ್ ಲಿಂಕ್, ಐ ಪೊಡ್ ಕನೆಕ್ಟಿವಿಟಿ, ಫೋನ್ ಬುಕ್, ಎಸ್ಎಂಎಸ್ ವ್ಯೂಯರ್, ಆಟೋಮ್ಯಾಟಿಕ್ ಎಸಿ, ಡಸ್ಟ್ ಫಿಲ್ಟರ್, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್, ಎಲ್ ಇಡಿ ಟರ್ನ್ ಇಂಡಿಕೇಟರ್, ಕೂಲ್ಡ್ ಗ್ಲೋವ್ ಬಾಕ್ಸ್, ಟಿಲ್ಟ್ ಹಾಗೂ ಟೆಲಿಸ್ಕಾಪಿಕ್ ಸ್ಟೀರಿಂಗ್ ವೀಲ್ ಮತ್ತು ಹಿಂಬದಿಯಲ್ಲೂ ಎಸಿ ವೆಂಟ್ಸ್ ಗಳಿರಲಿದೆ.

ಗಮನಾರ್ಹ ಅಂಶಗಳು
ಆಟೋಮ್ಯಾಟಿಕ್ ರೈನ್ ಸೆನ್ಸಿಂಗ್ ವೈಪರ್,
ಕ್ರೂಸ್ ಕಂಟ್ರೋಲ್,
ಸ್ಟ್ಯಾಂಡರ್ಡ್ ಡ್ಯುಯಲ್ ಏರ್ ಬ್ಯಾಗ್ ಜೊತೆ ಎಬಿಎಸ್, ಇಬಿಡಿ
ಪವರ್ ವಿಂಡೋ ಜೊತೆ ಒನ್ ಟಚ್ ಆಪರೇಷನ್,
ಆ್ಯಂಟಿ ಪಿಂಚ್ ಪವರ್ ವಿಂಡೋ
ಸ್ಟಾಟಿಕ್ ಕಾರ್ನರಿಂಗ್ ಲೈಟ್


ಎಂಜಿನ್

ಸದ್ಯ ಪೆಟ್ರೋಲ್ ವೆರಿಯಂಟ್ ನಲ್ಲಿ ಮಾತ್ರ ಲಭ್ಯವಿರುವ ಫೋಕ್ಸ್ ವ್ಯಾಗನ್ ಎಮಿಯೊದಲ್ಲಿರುವ 1.2 ಲೀಟರ್ ಎಂಪಿಐ ಪೆಟ್ರೋಲ್ ಎಂಜಿನ್ 110 ಎನ್ ಎಂ ತಿರುಗುಬಲದಲ್ಲಿ 74 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಸಹ ಪಡೆದಿದೆ.

ಡ್ರೈವಿಂಗ್
ಪ್ರಮುಖವಾಗಿಯೂ ಭಾರತವನ್ನು ಗುರಿಯಾಗಿ ನಿರ್ಮಿಸಿರುವ ಎಮಿಯೊ, ದೇಶದ ರಸ್ತೆ ಪರಿಸ್ಥಿತಿಯಲ್ಲಿ ಅತ್ಯುತ್ತಮ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ.

ಮೈಲೇಜ್: 17.83 ಕೀ.ಮೀ.

ಬ್ರೇಕ್
ಮುಂಭಾಗ: ಡಿಸ್ಕ್
ಹಿಂಭಾಗ: ಡ್ರಮ್

ಸಸ್ಪೆನ್ಷನ್
ಮುಂಭಾಗ: ಮೆಕ್ ಫೆರ್ಸನ್ ಸ್ಟ್ರಟ್ ಜೊತೆ ಸ್ಟೆಬಿಲೈಸರ್ ಬಾರ್
ಹಿಂಭಾಗ: ಸೆಮಿ ಇಂಡಿಪೆಂಡಂಟ್ ಟ್ರೈಲಿಂಗ್ ಆರ್ಮ್


ಆಯಾಮ (ಎಂಎಂ)
ಉದ್ದ: 3995
ಅಗಲ: 1682
ಎತ್ತರ: 1483
ಚಕ್ರಾಂತರ: 2470

ಇಂಧನ ಟ್ಯಾಂಕ್: 45

ಭದ್ರತೆ
ಕಾರಿನ ಭದ್ರತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್ ಗಳು ಮತ್ತು ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂಗಳು ಸ್ಟ್ಯಾಂಡರ್ಡ್ ಆಗಿ ದೊರಕಲಿದೆ. ಇನ್ನುಳಿದಂತೆ ರಿಯರ್ ವ್ಯೂ ಮಿರರ್ ಮತ್ತು ಪಾರ್ಕಿಂಗ್ ಸೆನ್ಸಾರ್ ಸೌಲಭ್ಯಗಳು ಇದರಲ್ಲಿವೆ.


ವೆರಿಯಂಟ್, ಬೆಲೆ (ಎಕ್ಸ್ ಶೋ ರೂಂ ದೆಹಲಿ)
ಟ್ರೆಂಡ್ ಲೈನ್: 5.24 ಲಕ್ಷ ರು.
ಟ್ರೆಂಡ್ ಲೈಟ್(ಮೆಟ್ಯಾಲಿಕ್): 5.34 ಲಕ್ಷ ರು.
ಕಂಫರ್ಟ್ ಲೈನ್: 5.99 ಲಕ್ಷ ರು.
ಕಂಫರ್ಟ್ ಲೈನ್ (ಮೆಟ್ಯಾಲಿಕ್): 6.09 ಲಕ್ಷ ರು.
ಹೈಲೈನ್: 7.05 ಲಕ್ಷ ರು.

ಮುನ್ನಡೆ

 • ಕ್ರೂಸ್ ಕಂಟ್ರೋಲ್,
 • ಆಟೋ ರೈನ್ ಸೆನ್ಸಿಂಗ್ ವೈಪರ್,
 • ಆ್ಯಂಟಿ ಪಿಂಚ್ ವಿಂಡೋ,
 • ಸ್ಟ್ಯಾಂಡರ್ಡ್ ಏರ್ ಬ್ಯಾಗ್ ಜೊತೆ ಎಬಿಎಸ್,
 • ಇನ್ಪೋಟೈನ್ಮೆಂಟ್ ಸಿಸ್ಟಂ
 • ಪ್ಲಾಸ್ಟಿಕ್ ಗುಣಮಟ್ಟತೆ

ಹಿನ್ನಡೆಗಳು

 • ಹಿಂಬದಿ ಸ್ಥಳಾವಕಾಶ,
 • ಹಿಂಬದಿಯಲ್ಲಿ ಮೂರು ಮಂದಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ವಲ್ಪ ಕಷ್ಟ,
 • ಪೆಟ್ರೋಲ್ ಎಂಜಿನ್ ಮಾತ್ರ


ಅಂತಿಮ ತೀರ್ಪು

ಭಾರತಕ್ಕೆ ಮಗದೊಂದು ಗುಣಮಟ್ಟದ ಕಾರನ್ನು ಕೊಡುಗೆಯಾಗಿ ನೀಡಲು ಫೋಕ್ಸ್ ವ್ಯಾಗನ್ ತೋರಿರುವ ಬದ್ಧತೆಯನ್ನು ನಾವಿಲ್ಲಿ ಮೆಚ್ಚಲೇ ಬೇಕು. ಮಾರುಕಟ್ಟೆಯಲ್ಲಿ ಪೈಪೋಟಿ ಜಾಸ್ತಿಯಾಗಿರುವಂತೆಯೇ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯ ಮಹತ್ವವನ್ನು ಅರಿತುಕೊಂಡಿರುವ ಫೋಕ್ಸ್ ವ್ಯಾಗನ್, ಭಾರತೀಯರಿಗಾಗಿ ಭಾರತದಲ್ಲೇ ನಿರ್ಮಿತ 'ಮೇಡ್ ಇನ್ ಇಂಡಿಯಾ' ಎಮಿಯೊ ಕಾರನ್ನು ನಿರ್ಮಿಸಿದೆ. ಸ್ಪರ್ಧಾತ್ಮಕ ಬೆಲೆಗಳಲ್ಲಿ ಮಾರುಕಟ್ಟೆ ತಲುಪಿರುವ ಎಮಿಯೊ ತನ್ನದೇ ಆದ ವಿಶಿಷ್ಟತೆ ಕಾಪಾಡಿಕೊಳ್ಳುವುದಂತೂ ಗ್ಯಾರಂಟಿ.

ಎಮೊ ಎಂದರೇನು?
'ಎಮೊ' ಎಂಬ ಲ್ಯಾಟಿನ್ ಪದದಿಂದ ಎಮಿಯೊ ಹುಟ್ಟಿಕೊಂಡಿದೆ. ಇಲ್ಲಿ ಎಮೊ ಎಂಬುದು 'ಐ ಲವ್' ಎಂಬ ಅರ್ಥವನ್ನು ನೀಡುತ್ತದೆ.

Click to compare, buy, and renew Car Insurance online

Buy InsuranceBuy Now

English summary
Volkswagen Ameo Review — Start Thinking New!
Please Wait while comments are loading...

Latest Photos

X