ಜೆಟ್ಟಾ ಕಾರು ರಿವ್ಯೂ: ನಾನು ಕೆಟ್ಟ ಹುಡುಗನಲ್ಲ!

ಇತ್ತೀಚೆಗೆ ಫೋಕ್ಸ್‌ವ್ಯಾಗನ್ ಕಂಪನಿಯು ಜೆಟ್ಟಾ ಸಲೂನ್ ಕಾರಿನ ಪೆಟ್ರೋಲ್ ಆವೃತ್ತಿಯನ್ನು ಪರಿಚಯಿಸಿದೆ. ಇದು ಸ್ಕೋಡಾ ಲಾರಾ 1.8 ಲೀಟರ್ ಟಿಎಸ್ಐ ಎಂಜಿನ್ ಬದಲಿಗೆ 1.4 ಲೀಟರ್ ಎಂಜಿನ್ ಜೊತೆಗೆ ಆಗಮಿಸಿದೆ. ಪೆಟ್ರೋಲ್ ದರ ದುಬಾರಿಯಾಗಿದ್ದರೂ, ಜೆಟ್ಟಾ ಪೆಟ್ರೋಲ್ ಆವೃತ್ತಿ ಪರಿಚಯಿಸಿದ ಫೋಕ್ಸ್ ವ್ಯಾಗನ್ ಎದೆಗಾರಿಕೆ ಮೆಚ್ಚಲೇಬೇಕು.

ದುಬಾರಿ ಡೀಸೆಲ್ ಕಾರುಗಳಿಗೆ ಹೆಚ್ಚು ಪಾವತಿಸಲಿಚ್ಚಿಸದ, ಆದರೆ ದೊಡ್ಡದಾದ ಆರಾಮದಾಯಕವಾಗಿರುವ ಅದ್ದೂರಿ ಕಾರು ಖರೀದಿಸಲು ಬಯಸುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ನೂತನ ಜೆಟ್ಟಾವನ್ನು ಫೋಕ್ಸ್ ವ್ಯಾಗನ್ ಪರಿಚಯಿಸಿದೆ. ಹೊಸ ಜೆಟ್ಟಾದ ಸಣ್ಣ ಎಂಜಿನ್ ಅತ್ಯಧಿಕ ಇಂಧನ ದಕ್ಷತೆಯ ಕಾರು ಕೂಡ ಹೌದು.

ಟರ್ಬೊಚಾರ್ಜಿಂಗ್ ಮತ್ತು ಡೈರೆಕ್ಟ್ ಇಂಜೆಕ್ಷನ್ ಇರುವುದರಿಂದ ನೂತನ ಜೆಟ್ಟಾದ ಎಂಜಿನ್ ಸಣ್ಣದಾಗಿದ್ದರೂ ಪರವಾಗಿಲ್ಲವೆಂದೆನಿಸುತ್ತದೆ. ನೂತನ ಜೆಟ್ಟಾ ಪೆಟ್ರೋಲ್ ಎಂಜಿನ್ ಡೀಸೆಂಟಾಗಿ 121 ಅಶ್ವಶಕ್ತಿ ಮತ್ತು 20.4 ಕೆಜಿಎಂ ಟಾರ್ಕ್ ಪವರ್ ನೀಡುತ್ತದೆ. ಆರಾಮದಾಯಕ ಪ್ರಯಾಣಕ್ಕೆ ಅಷ್ಟು ಪವರ್ ಸಾಲದೇ?

ಕಾರು ಚಲಿಸದೆ ಇದ್ದಾಗ(ಉದಾಹರಣೆಗೆ ಟ್ರಾಫಿಕ್ ಸಿಗ್ನಲ್ ಮುಂದೆ) ಎಂಜಿನ್ ಸದ್ದು ಮೆದುವಾಗಿ ಅನುಭವಕ್ಕೆ ಬರುತ್ತದೆ. ನಂತರ ನೀವು ಸುಮಾರು 4 ಸಾವಿರ ಆವರ್ತನದವರೆಗೆ ಸಾಗುವಾಗ ಇದೇ ನಾಜೂಕಿನ ಅನುಭವ ಇರುತ್ತದೆ.

ಸುಮಾರು 1,500 ಆರ್ ಪಿಎಂ ದಾಟುವಾಗ ನಿಜವಾದ ಆಕ್ಸಿಲರೇಷನ್ ಅನುಭವ ದೊರಕುತ್ತದೆ. ಇದೇ ಆಕ್ಸಿಲರೇಷನ್ ಅನುಭವ 5,500 ಆವರ್ತನ ಅಥವಾ ಆರ್ ಪಿಎಂ ತನಕ ಇರುತ್ತದೆ. ನಂತರದ ಆರ್ ಪಿಎಂ ಸವಾರಿ ಹೆಚ್ಚು ಉತ್ತಮವಾಗಿಲ್ಲ. 6 ಸ್ಪೀಡಿನ ಮ್ಯಾನುಯಲ್ ಗೇರ್ ಬಾಕ್ಸ್ ಅತ್ಯುತ್ತಮ ಸವಾರಿಗೆ ಸಹಕರಿಸುತ್ತದೆ.

ನೂತನ ಜೆಟ್ಟಾ ಟಿಎಸ್ಐ ಕಾರು ಕೇವಲ ಮ್ಯಾನುಯಲ್ ಗೇರ್ ಆಯ್ಕೆಯಲ್ಲಿ ದೊರಕುತ್ತದೆ. ಇದು ಬೇಸಿಕ್ ಟ್ರೆಂಡ್ ಲೈನ್, ಮಧ್ಯಮ ಕಂಫರ್ಟ್ ಲೈನ್ ಆವೃತ್ತಿಗಳಲ್ಲಿ ಮಾತ್ರ ದೊರಕುತ್ತದೆ. ಇದರಲ್ಲೂ ಕಂಫರ್ಟ್ ಲೈನ್ ಆವೃತ್ತಿಯಲ್ಲಿ 6 ಏರ್ ಬ್ಯಾಗುಗಳು, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್ ಇತ್ಯಾದಿಗಳಿವೆ.

ನೂತನ ಫೋಕ್ಸ್ ವ್ಯಾಗನ್ ಜೆಟ್ಟಾ ಟಿಎಸ್ಐ ಟ್ರೆಂಡ್ ಲೈನ್ ದರ ಸುಮಾರು 13.6 ಲಕ್ಷ ರು. ಆಸುಪಾಸಿನಲ್ಲಿದೆ. ಕಂಫರ್ಟ್ ಲೈನ್ ಜೆಟ್ಟಾ ಟಿಎಸ್ಐ ದರ ಸುಮಾರು 15.07 ಲಕ್ಷ ರು. ಆಸುಪಾಸಿನಲ್ಲಿದೆ. ಇವೆಲ್ಲ ದೆಹಲಿ ಎಕ್ಸ್ ಶೋರೂಂ ದರಗಳು.

ಓದಿ: ಕಾರು ವಿಮರ್ಶೆ

Most Read Articles

Kannada
English summary
Volkswagen Jetta 1.4 TSi Car Review. Jetta TSi powered by 1.4 liter, 1390 cc direct injection, turbo charged petrol engine. Jetta 1.4 TSi Starting price 13.3 lakh. Read Jetta full Review.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X