ವಿದೇಶದಲ್ಲಿ ನ್ಯಾನೋ ಯುರೋಪಾ ದಾಂಗುಡಿ

ಗುರುವಾರ, ಮಾರ್ಚ್ 5, 2009, 14:33 [IST]
Nano Europa
ಟಾಟಾ ಮೋಟರ್ಸ್ ನ ಬಹುನಿರೀಕ್ಷಿತ ಪುಟಾಣಿ ಕಾರು ನ್ಯಾನೋ ಭಾರತದಲ್ಲಿ ಬಿಡುಗಡೆಯಾಗುವ ಮೊದಲೇ ನ್ಯಾನೋ ಯುರೋಪಾವನ್ನು ಜಿನೀವಾ ಆಟೋ ಪ್ರದರ್ಶನದಲ್ಲಿ ಟಾಟಾ ಕಂಪನಿ ಬಿಡುಗಡೆ ಮಾಡಿದೆ.
  Read:  In English 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನ್ಯಾನೋ ಯುರೋಪಾ ತನ್ನ ಬೇಡಿಕೆಯನ್ನು ಕುದುರಿಸಿಕೊಳ್ಳುತ್ತಿದೆ. ಇದರಿಂದಾಗಿ ಇನ್ನು ಎರಡು ವರ್ಷ ನ್ಯಾನೋ ಯುರೋಪಾ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತನ್ನ ಅಭಿಯಾನವನ್ನು ಮುಂದುವರಿಸುವ ನಿರೀಕ್ಷೆಯಿದೆ.

ಮೂರು ಸಿಲಿಂಡರ್, ಮಲ್ಟಿ ಪಾಯಿಂಟ್ ಫ್ಯೂಯೆಲ್ ಇಂಜೆಕ್ಷನ್ ಇಂಜಿನ್ ಮತ್ತು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವ ಯುರೋಪಾ ವಿದೇಶಿ ಕಾರುಪ್ರೇಮಿಗಳನ್ನು ಬಹುವಾಗಿ ಸೆಳೆಯುತ್ತಿದೆ. ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಹೊಂದಿರುವುದು ಯುರೋಪಾ ವಿದೇಶಿಗರನ್ನು ಸೆಳೆಯಲು ಸಹಕಾರಿಯಾಗಿದೆ. ನ್ಯಾನೋಗಿಂದ ತುಸು ಉದ್ದವಿರುವ ಯೋರೋಪಾದಲ್ಲಿ ಏರ್ ಬ್ಯಾಗ್ ಮತ್ತು ರಕ್ಷಣಾ ಅನುಕೂಲಗಳನ್ನು ಕೂಡ ಸೇರಿಸಲಾಗಿದೆ.

ಈ ಎಲ್ಲ ಕಾರಣಗಳಿಂದಾಗಿ ಭಾರತದಲ್ಲಿ ಬಿಡುಗಡೆಯಾಗುತ್ತಿರುವ ನ್ಯಾನೋಗಿಂತ ಯುರೋಪಾ ಸ್ಪಲ್ಪ ದುಬಾರಿಯಾಗಿದೆ. ಆದಾಗ್ಯೂ, ಅಗ್ಗದ ಕಾರುಗಳೊಂದಿಗೆ ಯುರೋಪಾ ತುರುಸಿನ ಸ್ಪರ್ಧೆ ನೀಡಲಿದೆ ಮತ್ತು ಉತ್ತಮ ನಿರ್ವಹಣೆ ನೀಡಲಿದೆ ಹಾಗು ವಾಯುಮಾಲಿನ್ಯ ಪರೀಕ್ಷೆಯಲ್ಲಿಯೂ ಪಾಸಾಗಲಿದೆ ಎಂಬುದು ಟಾಟಾದ ಮಹತ್ವಾಕಾಂಕ್ಷೆಯ ಹೇಳಿಕೆ.
User Comments
[ ಅಭಿಪ್ರಾಯ ಬರೆಯಿರಿ ]
ಈ ಲೇಖನಕ್ಕೆ ಕಾಮೆಂಟ್ ಹಾಕುವವರಲ್ಲಿ ನೀವೇ ಮೊದಲಿಗರಾಗಿರಿ.