ಕ್ರೀಡಾ ವಾಹನ ತಯಾರಿಕೆಗೆ ಮಹೀಂದ್ರಾ ಯತ್ನ

Ssangyong SUV
ನವದೆಹಲಿ, ಆ.25:ದೇಶದ ಪ್ರಮುಖ ವಾಹನ ತಯಾರಕ ಕಂಪೆನಿ ಮಹೀಂದ್ರಾ ಅಂಡ್ ಮಹೀಂದ್ರಾ ದಕ್ಷಿಣ ಕೊರಿಯಾದ ಸ್ಸಾಂಗ್ ಯೊಂಗ್ ಮೋಟಾರ್ಸ್ ಖರೀದಿಯ ಮೂಲಕ ಜಾಗತಿಕ ಕ್ರೀಡಾ ಉಪಯುಕ್ತ ವಾಹನ ತಯಾರಕನಾಗಲಿರುವುದಾಗಿ ಹೇಳಿದೆ.

ಈ ವಿಲೀನದಿಂದ ಎರಡೂ ಕಂಪೆನಿಗಳೂ ಜಾಗತಿಕ ಮಟ್ಟದಲ್ಲಿ ಬ್ರಾಂಡ್ ಸೃಷ್ಟಿಸಿ ಮಾರುಕಟ್ಟೆ ಹೆಚ್ಚಿಸಿಕೊಳ್ಳಲು ಅವಕಾಶವಾಗಲಿದೆ ಎಂದು ಮಹೀಂದ್ರಾದ ಆಟೋಮೋಟಿವ್ ಮತ್ತು ಫಾರ್ಮ್ ವಿಭಾಗದ ಅಧ್ಯಕ್ಷ ಪವನ್ ಗೊಯೆಂಕಾ ಹೇಳಿದರು.

ಕಂಪೆನಿ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರು ಎರಡೂ ಕಂಪೆನಿಗಳು ಉತ್ತಮ ಮಾರುಕಟ್ಟೆ ಹೊಂದಿದ್ದು ಜಾಗತಿಕ ಬ್ರಾಂಡ್ ಸೃಷ್ಟಿಸಲಿವೆ ಎಂದರು. ಕೊರಿಯಾದ ಸಣ್ಣ ವಾಹನ ತಯಾರಿಕಾ ಕಂಪೆನಿಯಾಗಿರುವ ಸ್ಸಾಂಗ್ ಯೊಂಗ್ ಕಡಿಮೆ ಬೆಲೆಯ ಕ್ರೀಡಾ ಉಪಯುಕ್ತ ವಾಹನ ರೆಕ್ಸ್ಟನ್, ಕೈರಾನ್, ಆಕ್ಟೋನ್ ಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುತಿದ್ದು ಸೇಡಾನ್ ಗಳನ್ನೂ ತಯಾರಿಸುತ್ತಿದೆ.

Most Read Articles

Kannada
Story first published: Wednesday, August 25, 2010, 11:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X