ಮಹೀಂದ್ರಾ ರೇವಾ ಕಾರು ಯುಎಸ್ ಮಾರುಕಟ್ಟೆಗೆ

Mahindra Electric Vehicle Targets US Market
ಬೆಂಗಳೂರು, ನ.24: ಭಾರತದ ಆಟೋಮೊಬೈಲ್ ಸಂಸ್ಥೆ ಮಹೀಂದ್ರಾ ರೇವಾ, ಅಮೆರಿಕದ ಆಟೋ ಮಾರುಕಟ್ಟೆಗೆ ಜಿಗಿಯುತ್ತಿದೆ. ಬೆಂಗಳೂರಿನ ರೇವಾ ಎಲೆಕ್ಟ್ರಿಕ್ ಕಾರು ಸಂಸ್ಥೆ(MERV)ಯ ತಂತ್ರಜ್ಞಾನದೊಂದಿಗೆ ಯುಎಸ್ ಮಾರುಕಟ್ಟೆಗೆ ಮಹೀಂದ್ರಾ ಎಲೆಕ್ಟ್ರಿಕ್ ಕಾರುಗಳು ಪ್ರವೇಶಿಸಲಿವೆ.

ಮಹೀಂದ್ರಾ ಹಾಗೂ ಮಹೀಂದ್ರಾ ಮೇ ತಿಂಗಳಿನಲ್ಲಿ ರೇವಾ ಸಂಸ್ಥೆ 55.2 ಷೇರುಗಳನ್ನು ತನ್ನದಾಗಿಸಿಕೊಂಡು, ಜಿಯೋ, ಎಲೆಕ್ಟ್ರಿಕ್ ವಾಣಿಜ್ಯ ವಾಹನ ಹೊರತರಲು ಯೋಚಿಸಿತ್ತು. ಆದರೆ, ಕಾರಣಾಂತರದಿಂದ ಹೊಸ ಉತ್ಪನ್ನಗಳನ್ನು ಪರಿಚಯಿಸಲು ತಡವಾದರೂ ಮಾಕ್ಸಿಮೊ ಹಾಗೂ ಬಿಜ್ಲಿ ತ್ರಿಚಕ್ರವಾಹನದ ಮೇಲೆ ಭರವಸೆ ಇಟ್ಟುಕೊಂಡಿದೆ.

ಎಲೆಕ್ಟ್ರಿಕ್ ಚಾರ್ಚಿಂಗ್ ತಂತ್ರಜ್ಞಾನವನ್ನು ಸಣ್ಣಕಾರುಗಳಲ್ಲಿ ಮಾತ್ರವಲ್ಲದೆ, ದೊಡ್ಡ ವಾಹನಗಳಲ್ಲೂ ಬಳಸಲು ಚಿಂತನೆ ನಡೆದಿದೆ. ಪರಿಸರ ಸ್ನೇಹಿಯಾದ ಈ ವಾಹನಗಳು ಮುಂದಿನ ದಶಕವನ್ನು ಆಳಲಿದೆ ಎಂದು Mahindra REVA Electric Vehicle Company(MREV)ನ ಮುಖ್ಯ ನಿರ್ವಾಹಕ ಆರ್ ಚಂದ್ರಮೌಳಿ ಹೇಳುತ್ತಾರೆ. ಬೆಂಗಳೂರಿನ MREV ಘಟಕ ವಾರ್ಷಿಕವಾಗಿ 6,000 ಎಲೆಕ್ಟ್ರಿಕ್ ಕಾರುಗಳನ್ನು ಹೊರತರುವ ಸಾಮರ್ಥ್ಯ ಹೊಂದಿದೆ ಎಂದರು.

ಕೊರಿಯಾದ ಸ್ಸಾಂಗ್ ಮೋಟರ್ಸ್ ಜೊತೆ ಒಪ್ಪಂದವಾದ ಮೇಲೆ ಜಾಗತಿಕವಾಗಿ ಎಲೆಕ್ಟ್ರಿಕ್ ಕಾರುಗಳ ಬ್ರ್ಯಾಂಡ್ ಆಗಿ ಬೆಳೆಯುವ ವಿಶ್ವಾಸವನ್ನು ಮಹೀಂದ್ರಾ ಹೊಂದಿದೆ. ನಂತರ ಅಮೆರಿಕದ ಮಾರುಕಟ್ಟೆಗೆ ಜಿಗಿಯುವ ಮಹೀಂದ್ರಾ ಮುಂದಿನ ಐದು ವರ್ಷಗಳಲ್ಲಿ ಜಾಗತಿಕ ಆಟೋಮೊಬೈಲ್ ಲೋಕದಲ್ಲಿ ಮೆರೆಯಲು ಸರ್ವ ಸನ್ನದ್ಧವಾಗಿದೆ. ಹೊಸ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಯುಎಸ್ ಮಾರುಕಟ್ಟೆಗೆ ಪರಿಚಯಿಸಲಾಗುವುದು.

ಸದ್ಯಕ್ಕೆ ಬೆಂಗಳೂರು ಹಾಗೂ ಲಂಡನ್ ನಲ್ಲಿ ಹೆಚ್ಚಿನ ಕಾರ್ಯವ್ಯಾಪ್ತಿಯನ್ನು ಸಂಸ್ಥೆ ಹೊಂದಿದೆ.2001 ರಲ್ಲಿ ಮೊದಲ ಬಾರಿಗೆ ರಸ್ತೆಗಿಳಿದ ರೇವಾ ಎಲೆಕ್ಟ್ರಿಕ್ ಕಾರುಗಳು, ಇದುವರೆವಿಗೂ ಸುಮಾರು 3,700 ಕಾರುಗಳ ಮಾರಾಟ ಕಂಡಿದೆ. ಯುಎಸ್ ಮಾರುಕಟ್ಟೆ ಪ್ರವೇಶದ ನಂತರ ಬೆಂಗಳೂರಿನ ಘಟಕದಲ್ಲಿ ಬಿಡುವಿಲ್ಲದ ಕೆಲಸ ಖಂಡಿತ.

Most Read Articles

Kannada
English summary
Mahindra & Mahindra is keen on entering into the US market with its electric vehicles. Based on the technical support from the Indian electric vehicle major Reva the schedule is for the coming five years.
Story first published: Monday, June 18, 2012, 10:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X