ಫ್ಯಾನ್ಸಿ ಕಾರು ನಂಬರ್ ಶೋಕಿ ಕಡಿಮೆಯಾಗುತ್ತಿದೆಯಾ?

Fancy Car Number
ಫ್ಯಾನ್ಸಿ ನಂಬರ್ ಅಂದ್ರೆ ಎಲ್ಲರಿಗೂ ಇಷ್ಟ. ಅದು ಮೊಬೈಲ್ ಫೋನ್ ನಂಬರ್ ಆಗಿರಬಹುದು, ತಮ್ಮಲ್ಲಿದ್ದ ವಾಹನದ ನಂಬರ್ ಆಗಿರಬಹುದು. ಇದನ್ನು ಶೋಕಿ ನಂಬರ್ ಅಂತಲೂ ಕೆಲವರು ಕರೀತಾರೆ. 9999, 8888 ಹೀಗೆ ವಿಭಿನ್ನ ಆಕರ್ಷಕ ಫ್ಯಾನ್ಸಿ ನಂಬರ್ ಗಳನ್ನು ಹೊಂದಲು ಹೆಚ್ಚಿನವರು ಇಷ್ಟಪಡುತ್ತಾರೆ. ಎಷ್ಟು ದುಡ್ಡು ತೆತ್ತಾದರೂ ಸರಿ ಅಂತಹ ನಂಬರ್ ಗಳನ್ನು ತಮ್ಮದಾಗಿಸುತ್ತಾರೆ.

ಇಂತಹ ಕ್ರೇಝ್ ಗೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ಕಳೆದ ವರ್ಷ ನವೆಂಬರ್ ನಲ್ಲಿ ಆಂಧ್ರ ಪ್ರದೇಶದ ಕೃಷ್ಣಾ ರೆಡ್ಡಿ ಎಂಬಾತ ಬಿಎಂಡಬ್ಲ್ಯು ಕಾರೊಂದನ್ನು ಖರೀದಿಸಿದ. ಅದರ ದರ ಸುಮಾರು 70 ಲಕ್ಷ ರೂಪಾಯಿ. ಆತನಿಗೂ ಫ್ಯಾನ್ಸಿ ಕಾರು ರಿಜಿಸ್ಟ್ರೇಷನ್ ನಂಬರ್ ಶೋಕಿ ಇತ್ತು. ಎಪಿ 09 ಸಿಎ 9999 ಎಂಬ ನಂಬರನ್ನು ಹರಾಜಿನಲ್ಲಿ ಖರೀದಿಸಿದ. ಈ ಫ್ಯಾನ್ಸಿ ನಂಬರಿಗಾಗಿ ಆತ ಪಾವತಿಸಿದ ದುಡ್ಡೆಷ್ಟು ಗೊತ್ತೆ? ಬರೋಬ್ಬರಿ 9.6 ಲಕ್ಷ ರೂಪಾಯಿ. ಹೀಗೆ ದುಡ್ಡಿನ ಮುಖ ನೋಡದೇ ನಂಬರ್ ಗಳನ್ನು ತನ್ನದಾಗಿಸಿಕೊಳ್ಳುತ್ತಾರೆ.

ಮಂತ್ರಿಗಳು, ರಾಜಕಾರಣಿಗಳು, ಪೋಲಿಸ್ ಅಧಿಕಾರಿಗಳು, ಉದ್ಯಮಿಗಳು ಮತ್ತು ವಿವಿಧ ಕ್ಷೇತ್ರದಲ್ಲಿ ದುಡಿಯುತ್ತಿರುವ ಪ್ರಮುಖ ವ್ಯಕ್ತಿಗಳಿಗೆ ಇಂತಹ ಕಾರು ನಂಬರ್ ಶೋಕಿ ಜಾಸ್ತಿ. ಇವರು ತಮಗೆ ಹಿಡಿಸಿದ ನಂಬರುಗಳು ಎಷ್ಟು ದುಬಾರಿಯಾಗಿದ್ದರೂ ಸರಿ ದೂಸರ ಮಾತನಾಡದೇ ಖರೀದಿಸುತ್ತಾರೆ.

ಬೆಂಗಳೂರಿನಲ್ಲಿ ಕಾರು ಫ್ಯಾನ್ಸಿ ನಂಬರ್ ಕ್ರೇಝ್ ಕಡಿಮೆಯಾಗುತ್ತಿದೆ ಎಂದು ಇತ್ತೀಚೆಗೆ ಪತ್ರಿಕೆಯೊಂದು ವರದಿ ಮಾಡಿತ್ತು. ಸರಕಾರವು ಫ್ಯಾನ್ಸಿ ಕಾರು ನಂಬರ್ ಗಳಿಗೆ ಶುಲ್ಕ ಹೆಚ್ಚಿಸಿರುವುದರಿಂದ ಜನರಲ್ಲಿ ಶೋಕಿ ಕಾರು ನಂಬರ್ ಮೋಹ ಕಡಿಮೆಯಾಗುತ್ತಿದೆ ಎನ್ನಲಾಗಿದೆ.

ಬೆಂಗಳೂರು ಆರ್ ಟಿಒ ಮಾಹಿತಿ ಪ್ರಕಾರ ಶುಲ್ಕ ಹೆಚ್ಚಿಸುವ ಮೊದಲು ಅಂದರೆ ಜನವರಿ 2009ರಿಂದ ಜನವರಿ 2010ರ ಅವಧಿಯಲ್ಲಿ ಸುಮಾರು 405 ವಾಹನ ಮಾಲೀಕರು ರನ್ನಿಂಗ್ ಸೀರಿಸ್ ನ ಫ್ಯಾನ್ಸಿ ನಂಬರ್ ಗಾಗಿ ಬುಕ್ಕಿಂಗ್ ಮಾಡಿದ್ದರು. 56 ಜನರು ಅಡ್ವಾನ್ಸ್ ಸೀರಿಸ್ ನಂಬರ್ ಗಾಗಿ ಕಾದಿರಿಸಿದ್ದರು. ಆದರೆ ನಂತರ ಫ್ಯಾನ್ಸಿ ನಂಬರ್ ಗೆ ಆರ್ ಟಿಒ ಶುಲ್ಕ ಹೆಚ್ಚಿಸಿದ್ದರಿಂದ ಜನರಲ್ಲಿ ಫ್ಯಾನ್ಸಿ ನಂಬರ್ ಕ್ರೇಝ್ ಗಮನಾರ್ಹವಾಗಿ ಕಡಿಮೆಯಾಗಿದೆ.

ಸರಕಾರ ಶುಲ್ಕ ಹೆಚ್ಚಿಸಿದ್ದರಿಂದ ಸರಕಾರಕ್ಕೆ ಲಾಭವೇನೂ ಆಗಿಲ್ಲ. ಯಾಕೆಂದರೆ ಜನರಲ್ಲಿ ಅಂತಹ ನಂಬರ್ ಶೋಕಿಯೇ ಕಡಿಮೆಯಾಗಿದೆ ಎಂದು ಬೆಂಗಳೂರು ಆರ್ ಟಿಒ ಅಧಿಕಾರಿಯೊಬ್ಬರು ಹೇಳುತ್ತಾರೆ. ಈ ಹಿಂದೆ ಫ್ಯಾನ್ಸಿ ನಂಬರ್ ಗೆ ಅಂತಹ ಯಾವುದೇ ಶುಲ್ಕವನ್ನು ಸರಕಾರ ವಿಧಿಸುತ್ತಿರಲಿಲ್ಲ. "ಪ್ರಸಕ್ತ ಶುಲ್ಕದಿಂದಾಗಿ ಜನರು ಆದಾಯ ತೆರಿಗೆಯ ಕುರಿತಾದ ಅಂಜಿಕೆಯಿಂದ ಫ್ಯಾನ್ಸಿ ನಂಬರ್ ಮೋಹದಿಂದ ದೂರವುಳಿಯುತ್ತಾರೆ" ಎಂದು ಮತ್ತೊಬ್ಬ ಅಧಿಕಾರಿ ತಿಳಿಸುತ್ತಾರೆ.

ದೆಹಲಿ ಸರಕಾರ ಕೂಡ ವಿಐಪಿ ಮತ್ತು ಫ್ಯಾನ್ಸಿ ರಿಜಿಸ್ಟ್ರೇಷನ್ ನಂಬರ್ ಗಳನ್ನು ಮಾರಾಟ ಮಾಡುವ ಯೋಜನೆ ಹೊಂದಿದೆ. ಅದು ಅಂತಹ ನಂಬರ್ ಗಳಿಗೆ 50 ಸಾವಿರ ರೂ.ನಿಂದ ಒಂದು ಲಕ್ಷದಷ್ಟು ದರ ನಿಗದಿ ಪಡಿಸಲು ನಿರ್ಧರಿಸಿದೆ. ಅಂದ್ರೆ ಒಂದಂಕಿಯ ನಂಬರ್ ಗಳಿಗೆ 0001, 0002, 0003, 0786, 1008 ಅಂದಾಜು ಒಂದು ಲಕ್ಷ ರೂಪಾಯಿನಷ್ಟು ದರವಿರುತ್ತದೆ. ಎರಡನೇ ವಿಭಾಗದಲ್ಲಿ 0010, 0099 ಇಂತಹ ನಂಬರ್ ಗಳಿಗೆ 75 ಸಾವಿರ ರೂ. ಮತ್ತು 0123, 0234 ಇತ್ಯಾದಿ ನಂಬರ್ ಗಳಿಗೆ 60 ಸಾವಿರ ರೂ. ದರ ನಿಗದಿ ಪಡಿಸುವ ಕುರಿತು ದೆಹಲಿ ಸಾರಿಗೆ ಇಲಾಖೆ ಚಿಂತಿಸುತ್ತಿದೆಯಂತೆ.

Most Read Articles

Kannada
English summary
Vehicle lovers are much crazy about Fancy Registration Numbers for their vehicles. The number nine continues to be a prized possession in Andhra Pradesh. Last year 'AP 09 CA 9999' fancy number went bid for Rs 9.6 lakhs. One news report saying that Craze for fancy numbers has abated.
Story first published: Friday, April 29, 2011, 13:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X