ಗಸ್ತು ತಿರುಗಲು ಪೊಲೀಸರಿಗೆ ಟಾಟಾ ನ್ಯಾನೊ ಕಾರು

ಬೆಂಗಳೂರಿನಲ್ಲಿ ಪೊಲೀಸರಿಗೆ ಗಸ್ತು ತಿರುಗಲು ನ್ಯಾನೊ ಕಾರುಗಳನ್ನು ನೀಡುವ ಕುರಿತು ಸರಕಾರ ಚಿಂತಿಸುತ್ತಿದೆ. ಈ ಸಣ್ಣಕಾರಿನ ದರ ಕಡಿಮೆ ಇರುವುದರಿಂದ, ಗಲ್ಲಿಗಲ್ಲಿ ಸುತ್ತಲು ಅನುಕೂಲವಾಗಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ.

ಈ ಸುದ್ದಿಯ ಮೊದಲ ಪ್ಯಾರಾ ಓದಿ ಷಾಕ್ ಆಗಬೇಡಿ. ಇದೇನು ಬೆಂಗಳೂರಿನ ಕಳ್ಳಕದೀಮರನ್ನು ನ್ಯಾನೊ ಕಾರಿನಲ್ಲಿ ಹಿಡಿಯಬಹುದೇ? ಇದೇಂಥ ಮೂರ್ಖ ನಿರ್ಧಾರ ಎಂದು ಕೇಳುತ್ತಿದ್ದೀರಾ? ಎಲ್ಲಾದರೂ ಕಾರಿನ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡರೆ ಎಂಬ ಆತಂಕವೂ ನಿಮಗಿರಬಹುದು.

ನಿಜ ಬೆಂಗಳೂರು ಪೊಲೀಸರಿಗೆ ಪುಣ್ಯಕ್ಕೆ ಇಂತಹ ಐಡಿಯಾ ಹೊಳೆದಿಲ್ಲ. ಆದರೆ ಮಾಯಾನಗರಿ ಮುಂಬೈನ ಪೊಲೀಸರು ಈಗಾಗಲೇ ಈ ಕುರಿತು ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಅಲ್ಲಿನ ಗಸ್ತು ಪೊಲೀಸರಿಗೆ ನ್ಯಾನೊ ಕಾರನ್ನು ನೀಡಿದರೆ ಹೇಗೆ ಅಂತ ಐಡಿಯಾ ಮಾಡಲಾಗಿದೆ. ಇಂತಹ ಐಡಿಯಾ ಕೊಟ್ಟದ್ದು ಯಾರು ಗೊತ್ತಿಲ್ಲ. ಇದರ ಸಾಧಕ ಬಾಧಕಗಳನ್ನು ತಿಳಿಯಲು ಈಗಾಗಲೇ ಒಂದು ನ್ಯಾನೊ ಕಾರಿನಲ್ಲಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ಟಾಟಾ ಮೋಟರ್ಸ್ ನ ಈ ಅಗ್ಗದ ಸಣ್ಣಕಾರಿನಲ್ಲಿ ಹಲವು ಅನುಕೂಲತೆಗಳನ್ನು ಅಲ್ಲಿನ ಪೊಲೀಸರು ಗುರುತಿಸಿದ್ದಾರೆ. ಅಂದರೆ ಇದನ್ನು ಸಂದುಗೊಂದು, ಗಲ್ಲಿಗಳಲ್ಲಿ ಸುಲಭವಾಗಿ ಡ್ರೈವ್ ಮಾಡಬಹುದು. ಜೊತೆಗೆ ಇದರ ದರ ಕೂಡ ಅಗ್ಗ. ಪೊಲೀಸ್ ಇಲಾಖೆಗೆ ಹೆಚ್ಚಿನ ಹೊರೆಯಾಗಲಿಕ್ಕಿಲ್ಲ. ಇತ್ಯಾದಿ ಕಾರಣಗಳಿಂದ ನ್ಯಾನೊ ಕಾರಿನ ಮೇಲೆ ಪೊಲೀಸ್ ಇಲಾಖೆ ಕಣ್ಣುಬಿದ್ದಿದೆ.

ಈ ಸುದ್ದಿಯನ್ನು ಕೇಳಿ ಟಾಟಾ ಮೋಟರ್ಸ್ ತುಸು ಸಂತೋಷ ಪಡಬಹುದು. ಟಾಟಾ ಮೋಟರ್ಸ್ ಈಗಾಗಲೇ ನ್ಯಾನೊ ಮಾರಾಟದಲ್ಲಿ ಸಾಕಷ್ಟು ಹಿನ್ನಡೆ ಅನುಭವಿಸುತ್ತಿದೆ. ಎಲ್ಲಾದರೂ ಮುಂಬೈ ಪೊಲೀಸರು ಗಸ್ತಿಗೆ ನ್ಯಾನೊ ಕಾರು ಬಳಸತೊಡಗಿದರೆ ನ್ಯಾನೊ ಮಾರಾಟ ಗರಿಗೆದರುವುದು ಖಚಿತವಾಗಿದೆ.

ಕೆಲವು ಕಳ್ಳರಿಗೆ, ರೌಡಿಗಳಿಗೆ ಒಟ್ಟಾರೆ ಅಪರಾಧ ಜಗತ್ತಿನವರಿಗೆ ಕೂಡ ಈ ಸುದ್ದಿ ಇಷ್ಟವಾಗುವ ಅಪಾಯವಿದೆ. ಯಾಕೆಂದರೆ ಅಪರಾಧಿಗಳಲ್ಲಿ ವೇಗದ ಕಾರು ಬೈಕುಗಳಿದ್ದರೆ, ಪೊಲೀಸರು ನ್ಯಾನೊ ಕಾರಿನಲ್ಲಿ ಅವರನ್ನು ಹಿಂದಿಕ್ಕಿ ಹಿಡಿಯಬಹುದೇ? ಹೀಗಾಗಿ ಪೊಲೀಸರಿಗೆ ಬುರುಬುರು ಎಂಜಿನ್ ಸದ್ದು ಮಾಡುವ ನ್ಯಾನೊ ಕಾರು ಸೂಕ್ತವಲ್ಲ ಅನ್ನುವ ವಾದವನ್ನೂ ನಮ್ಮ ಆಟೋ ಮಿತ್ರರು ವ್ಯಕ್ತಪಡಿಸಿದ್ದಾರೆ.

ಒಂದು ಕಾಲ್ಪನಿಕ ವರದಿ:
ಮುಂಬೈ ಪೊಲೀಸರು ನ್ಯಾನೊ ಕಾರಿನಲ್ಲಿ ಬ್ಯಾಂಕ್ ಕಳ್ಳರನ್ನು ಬೆನ್ನಟ್ಟುತ್ತಿದ್ದರು. ಆದರೆ ಕಳ್ಳರ ಕಾರಿನ ವೇಗದಲ್ಲಿ ನ್ಯಾನೊ ಕಾರು ಸಾಗದೇ ಇದ್ದರಿಂದ ಕಳ್ಳರು ತಪ್ಪಿಸಿಕೊಂಡಿದ್ದಾರೆ. ಅತ್ಯಂತ ವೇಗದಲ್ಲಿ ನ್ಯಾನೊ ಕಾರನ್ನು ಚಾಲನೆ ಮಾಡಿದ ಕಾರಣ ನ್ಯಾನೊ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನ್ಯಾನೊ ಉರಿದು ಹೋಗಿದೆಯಂತೆ!

Most Read Articles

Kannada
English summary
Mumbai police are considering the Tata Nano to be used as a patrolling vehicle in the crowded bylanes of Mumbai. While a decision regarding the Nano is yet to be taken by the Mumbai police, for now the cops of Mumbai are using a single Tata Nano to evaluate the potential of this car.
Story first published: Wednesday, September 14, 2011, 16:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X