ಮದ್ಯದ ದೊರೆ ವಿಜಯ್ ಮಲ್ಯ ಕಾರುಲೋಕ

Vijay Mallya Car Craze
ವಿಜಯ್ ಮಲ್ಯ ಅಂದ್ರೆ ಕೆಲವರಿಗೆ ಏನೋ ಆಕರ್ಷಣೆ. ಕೂಲ್ ಡ್ರಿಂಕ್ಸ್ ಯಾಕೆ ಯುಬಿ ಓಕೆ ಅನ್ನೋರಿಂದ ಕಿಂಗ್ ಫಿಷರ್ ವಿಮಾನಯಾನಿಗಳವರೆಗೂ ಅವರು ಪರಿಚಿತ. ಕೆಲವು ಮಹಿಳೆಯರು ಮಲ್ಯ ಸ್ನೇಹಕ್ಕೆ ಹಾತೋರೆಯುತ್ತಾರೆ ಅಂತ ಹಿಂದೊಮ್ಮೆ ಪತ್ರಿಕೆಯೊಂದು ವರದಿ ಮಾಡಿತ್ತು.

ವಿಜಯ್ ಮಲ್ಯರಿಗೆ ಇನ್ನೊಂದು ಶೋಕಿಯೆಂದರೆ ಹಾರ್ಸ್ ಪವರಿನ ಕಾರುಗಳು. ಮದ್ಯದ ದೊರೆ ಮಲ್ಯರ ಗ್ಯಾರೇಜಿನಲ್ಲಿ ಎಷ್ಟು ಕಾರುಗಳಿವೆ ಎಂದು ಸುಲಭದಲ್ಲಿ ಲೆಕ್ಕ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಬೆಂಗಳೂರು ಮೂಲದ ವಿಜಯ್ ಮಲ್ಯರ ಬಳಿಯಲ್ಲಿ ಲೆಕ್ಕವಿಲ್ಲದಷ್ಟು ಕಾರುಗಳಿವೆ.

ವಿಜಯ್ ಮಲ್ಯ ಅಂದ್ರೆ ಶ್ರೀಮಂತಿಕೆಗೆ ಇನ್ನೊಂದು ಹೆಸರು. ಅವರಲ್ಲಿರುವುದೆಲ್ಲ ಐಷಾರಾಮಿ ಕಾರುಗಳು. ದರಗಳಂತೂ ಕೋಟಿ ಕೋಟಿ ರುಪಾಯಿ. ಅವರಿಗೆ ಹಳೆಯ ವಿಂಟೇಜ್ ಕಾರುಗಳನ್ನು ಎಷ್ಟು ದುಡ್ಡುಕೊಟ್ಟಾದರೂ ಖರೀದಿಸುವ ಕ್ರೇಝ್ ಇದೆ. ಅವರಲ್ಲಿರುವ ವಿಂಟೇಜ್ ಕಾರುಗಳೇ ಆಕರ್ಷಕ.

ಸನ್ ಬೀಮ್ ವರ್ಲ್ಡ್ ಲ್ಯಾಂಡ್: ಟೈಗರ್ ಹೆಸರಿನಲ್ಲಿ ಜನಪ್ರಿಯವಾಗಿರುವ ಇದು 1926ರ ಕಾರು. ಆ ಸಮಯದಲ್ಲಿ ಇದು ಪ್ರತಿಗಂಟೆಗೆ 150.76 ಕಿ.ಮೀ. ವೇಗದಲ್ಲಿ ಚಲಿಸಿ ದಾಖಲೆ ಬರೆದಿತ್ತು. ಈ ಕಾರಿನ ಹೆಮ್ಮೆಯ ಮಾಲೀಕ ವಿಜಯ್ ಮಲ್ಯ.

ಎನ್ ಸೈನ್ ಫಾರ್ಮುಲಾ ಒನ್: 1977ರಲ್ಲಿ ನಿರ್ಮಿಸಲಾದ ಈ ಎಫ್1 ಕಾರನ್ನು ಫ್ಯಾಟ್ರಿಕ್ ಟೊಂಬೆ ಡ್ರೈವ್ ಮಾಡುತ್ತಿದ್ದರು. ಈ ಕಾರನ್ನು 1980ರಲ್ಲಿ ವಿಜಯ್ ಮಲ್ಯ ಖರೀದಿಸಿದ್ದರು.

ರೋಲ್ಸ್ ರಾಯ್ಸ್ ಸಿಲ್ವರ್ ಘೋಸ್ಟ್: ಕಿಂಗ್ ಫಿಷರ್ ಮಾಲೀಕ ವಿಜಯ್ ಮಲ್ಯರ ಬಳಿಯಲ್ಲಿ ರೋಲ್ಸ್ ರಾಯ್ಸ್ ಕಾರೊಂದು ಇರದಿದ್ದರೆ ಹೇಗೆ? ಇವರ ಬಳಿಯಲ್ಲಿ 1913ರ ಮಾಡಲ್ ಸಿಲ್ವರ್ ಘೋಸ್ಟ್ ಕಾರಿದೆ.

ಆಲ್ಫಾ ರೊಮಿಯೊ:
ಎರಡು ಸೀಟಿನ ಸ್ಪೋರ್ಟ್ಸ್ ಕಾರು ಆಲ್ಫಾ ರೊಮಿಯೊ 12ಸಿ ಕಾರನ್ನು ವಿಜಯ್ ಮಲ್ಯ 1998ರಲ್ಲಿ ಖರೀದಿಸಿದ್ದರು. ಈ ಕಾರು ಆಸ್ಟನ್ ಮಾರ್ಟಿನ್ ಡಿಬಿ3ಎಸ್, ಫೆರಾರಿ ಮೊಂಡೈಲ್, ಟೇಸ್ಟಾ ರೋಸಾ, ಮೊಂಝಾ ಮುಂತಾದ ಶ್ರೇಣಿಯ ಕಾರಾಗಿದೆ.

ವಿಜಯ್ ಮಲ್ಯರ ಬಳಿಯಲ್ಲಿ ಇಷ್ಟೇ ಅಲ್ಲ. ಮೆಕ್ ಲಾರೆನ್ ಎಂ 10 a/b ಎಫ್5000, ಫೆರಾರಿ 275 ಜಿಟಿಬಿ/4, ಜಾಗ್ವಾರ್ ಎಕ್ಸ್ ಜೆಆರ್ 15 ರೇಸ್ ಕಾರು, ಫೋರ್ಷ್ 550 ಸ್ಪೈಡರ್ ಸೇರಿದಂತೆ ಲೆಕ್ಕವಿಲ್ಲದಷ್ಟು ಕಾರುಗಳಿವೆ.

Most Read Articles

Kannada
English summary
Vijay Mallya car Craze: Business tycoon Vijay Mallya owned many Laxury cars. In is collection Sunbeam World land speed record car, Ensign Formula 1, Rolls Royce Silver Ghost, Alfa Romeo, McLaren M10 a/b F5000, Ferrari 275 GTB/4, Jaguar XJR 15 race car, Porsche 550 Spyder cars some examples.
Story first published: Monday, May 7, 2012, 11:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X