ಇನ್ನೊಂದು ವರ್ಷದೊಳಗೆ 6 ನೂತನ ಕಾರು; ಟಾಟಾ ನಂ.2 ಗುರಿ

ಹಬ್ಬದ ಸೀಸನಿನಲ್ಲಿ ನೂತನ ಎಸ್‌ಯುವಿ ಟಾಟಾ ಸಫಾರಿ ಸ್ಟ್ರೋಮ್ ಬಿಡುಗಡೆ ಮಾಡಿರುವ ಟಾಟಾ ಮೋಟಾರ್ಸ್ ಇದೀಗ ಭಾರತೀಯ ಪ್ರಯಾಣಿಕರ ವಾಹನ ಉದ್ಯಮ ಮಾರುಕಟ್ಟೆಯಲ್ಲಿ ನಂ. 2 ಸ್ಥಾನವನ್ನು ಗುರಿಯಾಗಿರಿಸಿಕೊಂಡಿದೆ.

ಈ ಗುರಿ ತಲುಪುವ ನಿಟ್ಟಿನಲ್ಲಿ ನೂತನ ಯೋಜನೆ ಮುಂದಿರಿಸಿರುವ ಟಾಟಾ ಮೋಟಾರ್ಸ್, ಟಾಟಾ ಸ್ಟ್ರೋಮ್ ಸೇರಿದಂತೆ ಇನ್ನೊಂದು ವರ್ಷದೊಳಗೆ ಆರು ನೂತನ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಗುರಿಯರಿಸಿದೆ.ಪ್ರಸ್ತುತ ಟಾಟಾ ಮೋಟಾರ್ಸ್‌ಗೆ ಮಹೀಂದ್ರ ಆಂಡ್ ಮಹೀಂದ್ರ ಮೂರನೇ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನೀಡುತ್ತಿದೆ. ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜುಕಿ ಹಾಗೂ ಹ್ಯುಂಡೈ ಮೋಟಾರ್ಸ್ ಮೊದಲೆರಡು ಸ್ಥಾನಗಳನ್ನು ಆಲಂಕರಿಸಿವೆ.

ಅಕ್ಟೋಬರ್ 17ರಂದು ಬಹುನಿರೀಕ್ಷಿತ ಟಾಟಾ ಸಫಾರಿ ಸ್ಟ್ರೋಮ್ ಎಸ್‌ಯುವಿ ಕಾರು ಬಿಡುಗಡೆಗೊಳಿಸಿದ ಬಳಿಕ ಪ್ರತಿಕ್ರಿಯಿಸಿದ ವ್ಯವಸ್ಥಾಪಕ ನಿರ್ದೇಶಕ ಕಾರ್ಲಿ ಸಿಮ್, ಮುಂದಿನ ಒಂದು ವರ್ಷದ ಅವಧಿಯಲ್ಲಿ ಆರು ನೂತನ ಕಾರುಗಳನ್ನು ರಸ್ತೆಗಿಳಿಸಲಿದ್ದೇವೆ. ಇವೆಲ್ಲವೂ ನೂತನ ಬ್ರಾಂಡ್ ಹಾಗೂ ಮಾದರಿಯ ಮಿಶ್ರಣವಾಗಿರಲಿದೆ ಎಂದಿದ್ದಾರೆ.

ಸಣ್ಣ ಅವಧಿಗೆ ನಂ.2 ಸ್ಥಾನದ ಮೇಲೆ ಕಣ್ಣಾಯಿಸಿದ್ದು, ದೀರ್ಘಾವಧಿಗೆ ಅಗ್ರಸ್ಥಾನ ಪಡೆಯುವುದು ನಮ್ಮ ಗುರಿಯಾಗಿದೆ ಎಂದಿದ್ದಾರೆ. ಟಾಟಾ ಮೋಟಾರ್ಸ್ ಶೇಕಡಾ 70ರಷ್ಟು ಮಾರಾಟವು ಸಣ್ಣ ಕಾರುಗಳಿಂದ ಆಗುತ್ತಿದ್ದು, ಎಸ್‌ಯುವಿ ಸೆಗ್ಮೆಂಟ್‌ಗೆ ಹೆಚ್ಚಿನ ಮಹತ್ವ ನೀಡಬೇಕಾದ ಅಗತ್ಯವಿದೆ ಎಂದಿದ್ದಾರೆ.

Most Read Articles

Kannada
English summary
Tata Motors expressed that they are eyeing no. 2 position in the Indian passenger vehicle market. And to make it possible, there will be 6 new products in India over the next one year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X